ಮದ್ಯಪಾನ (Liquor Bottles) ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಅದೆಷ್ಟೋ ಮಂದಿ ಮದ್ಯಕ್ಕೆ ದಾಸರಾಗಿರುತ್ತಾರೆ. ಕೆಲವರಂತು ಮದ್ಯಪಾನವನ್ನೇ ಕಾಫಿ, ಟೀ ಮಾಡಿಕೊಂಡು ಬಿಟ್ಟಿರುತ್ತಾರೆ. ದೇಶದಲ್ಲಿ ಅಕ್ರಮವಾಗಿ ನಡೆಯುವ ಮದ್ಯ ಸಾಗಣೆಯನ್ನು ತಡೆಗಟ್ಟಲು ಸರ್ಕಾರ (Government) ನಾನಾ ತರಹ ಪ್ರಯತ್ನಗಳನ್ನು ನಡೆಸುತ್ತಿದೆ. ಹೀಗಿದ್ದರೂ ಜನರು ಮಾತ್ರ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸುತ್ತಿಲ್ಲ. ದಿನಗಳೆದಂತೆ ಹೊಸ ಮಾರ್ಗಗಳ ಮೂಲಕ ತಲುಪಿಸಬೇಕಾದವರಿಗೆ ಮದ್ಯವನ್ನು ತಲುಪಿಸುತ್ತಿದ್ದಾರೆ. ಇದೀಗ ಮಹಿಳೆಯೊಬ್ಬಳು (Women) ಅಕ್ರಮವಾಗಿ ಮದ್ಯ (Illegal Liquor) ಮಾರಾಟ ಮಾಡಲು ಮದ್ಯವನ್ನು ದೇವರ ಮನೆಯಲ್ಲಿ ಬಚ್ಚಿಡುತ್ತಿದ್ದ ಪ್ರಕರಣ ಮಹಾರಾಷ್ಟ್ರದಲ್ಲಿ (Maharashtra) ಬೆಳಕಿಗೆ ಬಂದಿದೆ.
ದೇವರ ಮನೆಯಲ್ಲಿ ಮದ್ಯ ಬಚ್ಚಿಟ್ಟಿದ್ದ ಮಹಿಳೆ
ಹೌದು, ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಮನೆಯ ದೇವರ ಮನೆಯ ಕೆಳಗೆ ಬಚ್ಚಿಟ್ಟಿದ್ದ ಹಲವಾರು ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಪೊಲೀಸರು ಮನೆ ಮೇಲೆ ದಾಳಿ ನಡೆಸಿದಾಗ ಮದ್ಯದ ಬಾಟಲಿಗಳು ಸಿಗದೇ ಇರಲೆಂದು ದೇವರ ಮನೆಯ ಕೆಳಗಿದ್ದ ಟೊಳ್ಳಾದ ಕಂಪಾರ್ಟ್ಮೆಂಟ್ನಲ್ಲಿ ಬಾಟಲಿಗಳನ್ನು ಬಚ್ಚಿಟ್ಟಿದ್ದಳು.
ಪ್ರತಿ ಬಾರಿ ಪರಿಶೀಲನೆ ಬಳಿಕ ಬರಿಗೈಯಲ್ಲಿ ವಾಪಸ್ ಆಗುತ್ತಿದ್ದ ಪೊಲೀಸ್
ವಾರ್ಧಾದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹೀಗಿದ್ದರೂ ಮಹಿಳೆ ಮದ್ಯ ಮಾರಾಟ ಮಾಡುತ್ತಿದ್ದಾಳೆ ಎಂದು ದೂರುಗಳು ಬರುತ್ತಿದ್ದ ಹಿನ್ನೆಲೆ ಪೊಲೀಸರು ಹಲವಾರು ಬಾರಿ ಮಹಿಳೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಪ್ರತಿ ಬಾರಿ ಏನು ಸಿಗದೇ ಖಾಲಿ ಕೈನಲ್ಲಿ ಹಿಂದಿರುಗುತ್ತಿದ್ದರು.
ದೇವರ ಮನೆಯಲ್ಲಿದ್ದ ಹಲವು ಮದ್ಯದ ಬಾಟಲಿಗಳು ಪೊಲೀಸರ ವಶಕ್ಕೆ
ಆದರೀಗ ಮಹಿಳೆ ದೇವರ ಮನೆಯಲ್ಲಿ ಮದ್ಯವನ್ನು ಸಂಗ್ರಹಿಸಿಡುತ್ತಿದ್ದಳು ಎಂಬ ಮಹತ್ವದ ಸುಳಿವು ಸಿಕ್ಕ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತೆರಳಿ ಮಹಿಳೆ ಮನೆಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ದೇವರ ಮನೆಯಲ್ಲಿದ್ದ ಹಲವು ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕೊರೊನಾ ಸಮಯದಲ್ಲಿ ಸೇಲ್ ಆಗಿತ್ತು ನಿರೀಕ್ಷೆಗೂ ಮೀರಿದ್ದ ಮದ್ಯ
ಕೊರೊನಾ ಸಮಯದಲ್ಲಿಯೂ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿತ್ತು . ಮದ್ಯ ವ್ಯಾಪಾರ ವಹಿವಾಟಿನಲ್ಲಿ ನಿರೀಕ್ಷೆಗೂ ಮೀರಿ ಹಣದ ಹೊಳೆ ಹರಿದು ಬಂದಿತ್ತು. ದೇಶದಲ್ಲಿ ಲಾಕ್ಡೌನ್ ಘೋಷಿಸುತ್ತಿದ್ದಂತೆಯೇ ಜನ ಬಾರ್ಗಳ ಮುಂದೆ ಮದ್ಯ ಖರೀದಿಗೆ ಮುಗಿಬಿದ್ದಿದ್ದರು. ಗಂಡಸರಷ್ಟೇ ಅಲ್ಲದೇ ಮಹಿಳೆಯರು ಕೂಡ ನಾ ಮುಂದು ತಾ ಮುಂದು ಎಂದು ಮದ್ಯ ಖರೀದಿಗೆ ಕ್ಯೂ ನಿಂತಿದ್ದರು.
ಇದನ್ನೂ ಓದಿ: Alcohol: ದೇಶದ ಈ ರಾಜ್ಯದ ಜನರು ಹೆಚ್ಚು ಮದ್ಯ ಸೇವಿಸ್ತಾರೆ! ಕರ್ನಾಟಕದ ಸ್ಥಾನವೆಷ್ಟು?
ಮದ್ಯ ಸೇವಿಸಿದವರನ್ನು ಕಂಡು ಹಿಡಿಯುವುದು ಹೇಗೆ ಗೊತ್ತಾ?
ಸಾಮಾನ್ಯವಾಗಿ ಮದ್ಯಪಾನ ಸೇವನೆಯ ಅನುಭವ ಎಲ್ಲರಿಗೂ ಇರುವುದಿಲ್ಲ. ಆದರೆ ಮದ್ಯಪಾನ ಸೇವಿಸಿದವರನ್ನ ನೋಡಿದರೆ ಗೊತ್ತಾಗುತ್ತದೆ ಅವರು ಕುಡಿದಿದ್ದಾರೆ ಅಂತ. ಕುಡಿದ ಬಳಿಕ ಅವರಲ್ಲಾಗುವ ಬದಲಾವಣೆ, ಧ್ವನಿಯಲ್ಲಾಗುವ ವ್ಯತ್ಯಾಸ, ನಡೆಯಲು ಸಹ ಕಷ್ಟ ಪಡುತ್ತಾರೆ. ತಮ್ಮ ದೇಹದ ಮೇಲೆ ಸ್ಥಿಮಿತವನ್ನೇ ಕಳೆದುಕೊಂಡಿರುತ್ತಾರೆ. ಒಬ್ಬ ವ್ಯಕ್ತಿ ಮದ್ಯಪಾನ ಮಾಡಿದಾಗ ಸ್ವಲ್ಪ ಹೊತ್ತಿನವರೆಗೆ ಏನೂ ಆಗುವುದಿಲ್ಲ. ಆದರೆ ಕೆಲ ಹೊತ್ತಿನ ಬಳಿಕ ಈ ಎಲ್ಲಾ ವ್ಯತ್ಯಾಸ ಉಂಟಾಗುತ್ತದೆ. ಈ ಎಲ್ಲ ತಿಳಿದಿದ್ದರೂ ಜನ ಕುಡಿಯುವ ಚಟವನ್ನು ದೂರ ಮಾಡಿಕೊಂಡಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ