Children Theft: ಮಕ್ಕಳ ಕಳ್ಳರು ಎಂದು ಹಿಗ್ಗಾಮುಗ್ಗಾ ನಾಲ್ವರಿಗೆ ಥಳಿತ; ವಿಡಿಯೋ ವೈರಲ್

ಉತ್ತರ ಪ್ರದೇಶದ ನಾಲ್ವರು ಸಾಧುಗಳು ಕರ್ನಾಟಕದ ವಿಜಯಪುರದಿಂದ ದೇವಸ್ಥಾನದ ಪಟ್ಟಣವಾದ ಪಂಡರಾಪುರಕ್ಕೆ ತೆರಳುತ್ತಿದ್ದಾಗ ಬಾಲಕನೊಬ್ಬನಿಗೆ ದಾರಿ ಕೇಳಿದ್ದಾರೆ. ಅವರು ಮಕ್ಕಳನ್ನು ಅಪಹರಿಸುವ ಗ್ಯಾಂಗ್‌ನವರೇ ಎಂದು ಸ್ಥಳೀಯರು ಶಂಕಿಸಿದ್ದಾರೆ.

ಹಲ್ಲೆ ನಡೆಸಿದ ದೃಶ್ಯ

ಹಲ್ಲೆ ನಡೆಸಿದ ದೃಶ್ಯ

  • Share this:
    ಮುಂಬೈ: ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಆತಂಕದ ಮಾತು ನಮ್ಮ ಹಳ್ಳಿಗಳ ಕಡೆ ಆಗಾಗ ಕೇಳಿಬರುತ್ತಲೇ ಇರುತ್ತದೆ. ಮಕ್ಕಳ ಕಳ್ಳರು (Children Stealing) ಎಂದು ಆರೋಪಿಸಿ ಊರವರೆಲ್ಲ ಹಿಗ್ಗಾಮುಗ್ಗಾ ಥಳಿಸಿದ ಘಟನೆಗಳೂ ವರದಿಯಾಗುತ್ತಲೇ ಇರುತ್ತವೆ. ನಾಲ್ವರು ಸಾಧುಗಳ ಮೇಲೆ ಗುಂಪೊಂದು ಮಕ್ಕಳನ್ನು ಕದಿಯುವವರು ಎಂದು ಶಂಕಿಸಿ ಹಲ್ಲೆ ನಡೆಸಿದ್ದು, ಅದರ ವಿಡಿಯೋ ವೈರಲ್ (Viral Video) ಆಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲವಣ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಆದರೆ ನಾಲ್ವರ ಮೇಲೆ ದಾಳಿಯಾದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

    ನಾವು ಯಾವುದೇ ದೂರು ಅಥವಾ ಔಪಚಾರಿಕ ವರದಿಯನ್ನು ಸ್ವೀಕರಿಸಿಲ್ಲ. ಆದರೆ ವೈರಲ್ ವಿಡಿಯೊಗಳನ್ನು ಪರಿಶೀಲಿಸುತ್ತಿದ್ದೇವೆ. ಅಲ್ಲದೇ ಆ ನಾಲ್ವರು ನಿಜಕ್ಕೂ ಸಾಧುಗಳೇ ಅಥವಾ ಮಕ್ಕಳ ಕಳ್ಳರೇ ಎಂದು ಸತ್ಯವನ್ನು ಪರಿಶೀಲಿಸುತ್ತಿದ್ದೇವೆ. ಈ ಘಟನೆಯ ಕುರಿತು ಖಂಡಿತವಾಗಿಯೂ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಾಂಗ್ಲಿ ಎಸ್​ಪಿ ದೀಕ್ಷಿತ್ ಗೆಡಮ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ.



    ಪಂಡರಾಪುರಕ್ಕೆ ತೆರಳುತ್ತಿದ್ದ ಸಾಧುಗಳು
    ಉತ್ತರ ಪ್ರದೇಶದ ನಾಲ್ವರು ಸಾಧುಗಳು ಕರ್ನಾಟಕದ ವಿಜಯಪುರದಿಂದ ದೇವಸ್ಥಾನದ ಪಟ್ಟಣವಾದ ಪಂಡರಾಪುರಕ್ಕೆ ತೆರಳುತ್ತಿದ್ದಾಗ ಬಾಲಕನೊಬ್ಬನಿಗೆ ದಾರಿ ಕೇಳಿದ್ದಾರೆ. ಅವರು ಮಕ್ಕಳನ್ನು ಅಪಹರಿಸುವ ಗ್ಯಾಂಗ್‌ನವರೇ ಎಂದು ಸ್ಥಳೀಯರು ಶಂಕಿಸಿದ್ದಾರೆ. ತಕ್ಷಣ ಕೋಲುಗಳನ್ನು ಹಿಡಿದುಕೊಂಡು ಆ ನಾಲ್ವರ ಮೇಲೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: Danger School Bus: ಶಾಲಾ ಬಸ್‌ ಒಳಗೆ ಸಿಲುಕಿ ಬಾಲಕಿ ಸಾವು! ಹುಟ್ಟುಹಬ್ಬದ ದಿನವೇ ಉಸಿರು ಚೆಲ್ಲಿದ ಕಂದಮ್ಮ

    ಈ ನಾಲ್ವರು ಸಾಧುಗಳು ಉತ್ತರ ಪ್ರದೇಶದ ಅಖಾಡಾದ ಸದಸ್ಯರು ಎಂದು ಪೊಲೀಸರು ಅಂದಾಜಿಸಿದ್ದಾರೆ.

    ಬಿಜೆಪಿ ಶಾಸಕನಿಂದ ಖಂಡನೆ
    ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಘಟನೆಯನ್ನು ಖಂಡಿಸಿದ್ದಾರೆ. ಮಹಾರಾಷ್ಟ್ರ ರಾಜ್ಯ ಸರ್ಕಾರವು ಸಾಧುಗಳೊಂದಿಗೆ ಇಂತಹ ದುಷ್ಕೃತ್ಯವನ್ನು ಸಹಿಸುವುದಿಲ್ಲ ಅವರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಶಾಸಕ ರಾಮ್ ಕದಮ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: Makkah: ಮೆಕ್ಕಾದಲ್ಲೂ ಹಾರಾಡಿದ ತ್ರಿವರ್ಣ ಧ್ವಜ! ವಿದೇಶಿ ನೆಲದಲ್ಲಿ ಭಾರತೀಯರ ದೇಶಭಕ್ತಿ

    ಪಾಲ್ಘರ್‌ನಲ್ಲಿ ನಡೆದ ಸಾಧುಗಳ ಹತ್ಯೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸರ್ಕಾರವು ಅವರಿಗೆ ಅನ್ಯಾಯವನ್ನು ಮಾಡಿದೆ. ಆದರೆ ಪ್ರಸ್ತುತ ಮಹಾರಾಷ್ಟ್ರ ಸರ್ಕಾರವು ಯಾವುದೇ ಸಾಧುವಿನ ವಿರುದ್ಧ ಯಾವುದೇ ಅನ್ಯಾಯ ಮಾಡಲು ನಾವು ಅವಕಾಶ ನೀಡುವುದಿಲ್ಲ ಅನುಮತಿಸುವುದಿಲ್ಲ ಎಂದು ಬಿಜೆಪಿ ಶಾಸಕ ರಾಮ್ ಕದಮ್ 2020 ರ ಘಟನೆಯನ್ನು ಉಲ್ಲೇಖಿಸಿ ಆಗ್ರಹಿಸಿದ್ದಾರೆ.

    ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಘಟನೆಯನ್ನು ದುರದೃಷ್ಟಕರ ಎಂದು ಕರೆದಿದೆ. ಈ ಹಲ್ಲೆಯು ಸಾಧುಗಳ ಹತ್ಯೆಯ ಯತ್ನ ಎಂದು ಬಣ್ಣಿಸಿರುವ ವಕ್ತಾರ ಆನಂದ್ ದುಬೆ, ಇದು ಹಿಂದೂಗಳೊಂದಿಗೆ ಇದೆಯೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು. ಇಲ್ಲವೇ ಸದ್ಯದ ಸರ್ಕಾರ "ಹಿಂದೂವಾದಿ" ಎಂದು ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಆನಂದ್ ದುಬೆ ಆಗ್ರಹಿಸಿದ್ದಾರೆ.
    Published by:ಗುರುಗಣೇಶ ಡಬ್ಗುಳಿ
    First published: