Maxi Cabs: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಭಾರೀ ಲಾಸ್; ಕಾರಣ ಮ್ಯಾಕ್ಸಿ ಕ್ಯಾಬ್!

ಇಂದು ಬಹುತೇಕ ರಾಜ್ಯಗಳಲ್ಲಿ ಈ ಮ್ಯಾಕ್ಸಿ ಕ್ಯಾಬ್ ಗಳ ಹಾವಳಿ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ತಮ್ಮ ಆದಾಯಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ ಅಂತ ಹೇಳುತ್ತಿದ್ದಾರೆ. ಮ್ಯಾಕ್ಸಿ ಕ್ಯಾಬ್ ಗಳು ಪ್ರಯಾಣಿಕರನ್ನು ಕರೆದೊಯ್ದು ಬಸ್ ಗಳಲ್ಲಿ ಪ್ರಯಾಣಿಸುವಂತಹ ಜನರ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡುತ್ತಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ಈ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (State Road Transport Corporation) ಸೇರಿದ ಬಸ್ ಗಳ ವ್ಯವಸ್ಥೆ ಇಲ್ಲದೆ ಇರುವಾಗ ಜನರು ಹೆಚ್ಚು ಪ್ರಯಾಣಿಸುವುದು ಈ ಮ್ಯಾಕ್ಸಿ ಕ್ಯಾಬ್ (Maxi Cabs) ಮತ್ತು ಆಟೋರಿಕ್ಷಾದಲ್ಲಿ (Auto Rickshaw) ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಂದು ಬಹುತೇಕ ರಾಜ್ಯಗಳಲ್ಲಿ ಈ ಮ್ಯಾಕ್ಸಿ ಕ್ಯಾಬ್​ಗಳ ಹಾವಳಿ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ತಮ್ಮ ಆದಾಯಕ್ಕೆ (Income) ದೊಡ್ಡ ಹೊಡೆತ ಬೀಳುತ್ತಿದೆ ಅಂತ ಹೇಳುತ್ತಿದ್ದಾರೆ. ಮ್ಯಾಕ್ಸಿ ಕ್ಯಾಬ್ ಗಳು ಪ್ರಯಾಣಿಕರನ್ನು (Traveler) ಕರೆದೊಯ್ದು ಬಸ್ ಗಳಲ್ಲಿ ಪ್ರಯಾಣಿಸುವಂತಹ ಜನರ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡುತ್ತಿವೆ.

ಆದಾಯ ಗಳಿಸಲು ಹೆಣಗಾಡುತ್ತಿರುವ ಎಂಎಸ್ಆರ್‌ಟಿಸಿ
ಈಗಾಗಲೇ ಆದಾಯ ಗಳಿಸಲು ಹೆಣಗಾಡುತ್ತಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್ಆರ್‌ಟಿಸಿ)ಮೇಲೆ ಹೊಡೆತ ನೀಡಿದೆ ಎಂದು ಎಸ್ ಟಿ ಮಾರ್ಗಗಳಲ್ಲಿ ಸಣ್ಣ ಪ್ರಯಾಣಿಕ ವ್ಯಾನ್ ಗಳನ್ನು ಕಾನೂನುಬದ್ಧಗೊಳಿಸುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ಹೊಂದಿರುವ ಯೂನಿಯನ್ ನಾಯಕರು ಹೇಳಿದರು.

ಜುಲೈ 18 ರಂದು ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿ ಮ್ಯಾಕ್ಸಿ ಕ್ಯಾಬ್ ಗಳನ್ನು ಸಕ್ರಮಗೊಳಿಸಲು ಸರ್ಕಾರ ನೇಮಿಸಿದ ಸಮಿತಿಯನ್ನು ಭೇಟಿಯಾದಾಗ ಯೂನಿಯನ್ ನಾಯಕರು ತಮ್ಮ ಆಕ್ಷೇಪಣೆಗಳನ್ನು ಎತ್ತಿದರು. ಮ್ಯಾಕ್ಸಿ ಕ್ಯಾಬ್ ಗಳು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದೊಂದಿಗೆ ನೇರ ಸ್ಪರ್ಧೆಯಲ್ಲಿವೆ ಎಂದು ಅವರು ಹೇಳಿದರು.

ಎಂಎಸ್ಆರ್‌ಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲು ಕಾರಣ 
ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಎಂಎಸ್ಆರ್‌ಟಿಸಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯು ಕಡಿಮೆಯಾಗಿದೆ ಎಂದು ಮಹಾರಾಷ್ಟ್ರ ಎಸ್‌ ಟಿ ಕರ್ಮಚಾರಿ ಕಾಂಗ್ರೆಸ್ ನಾಯಕ ಶ್ರೀರಂಗ್ ಬಾರ್ಗೆ ಹೇಳಿದರು. "ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಮೊದಲು, ಎಂಎಸ್ಆರ್‌ಟಿಸಿ ದಿನಕ್ಕೆ ಸುಮಾರು 58 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುತ್ತಿತ್ತು, ಇದು 22 ಕೋಟಿ ರೂಪಾಯಿಯ ಆದಾಯ ತರುತ್ತಿತ್ತು. ಈಗ, ಆ ಅಂಕಿ ಅಂಶ 25 ಲಕ್ಷ ಪ್ರಯಾಣಿಕರಿಗೆ ಇಳಿದಿದೆ ಮತ್ತು ಆದಾಯ ಸಹ 16 ಕೋಟಿ ರೂಪಾಯಿಗೆ ಇಳಿದಿದೆ. ಕೋವಿಡ್ ಸಾಂಕ್ರಾಮಿಕ ರೋಗ ಮತ್ತು ಮುಷ್ಕರಗಳೆರಡೂ ಈ ಆದಾಯದ ಭಾರಿ ಕುಸಿತಕ್ಕೆ ಕಾರಣವಾಗಿವೆ" ಎಂದು ಅವರು ಹೇಳಿದರು.

ಇದನ್ನೂ ಓದಿ:  Heart Warming Video: ಮಳೆಯಲ್ಲಿ ಪುಟ್ಟ ತಂಗಿಯನ್ನು ಬೆನ್ನ ಮೇಲೆ ಹೊತ್ತು ಸಾಗಿದ ಬಾಲಕ - ವಿಡಿಯೋ ನೋಡಿ

ಮ್ಯಾಕ್ಸಿ ಕ್ಯಾಬ್ ಗಳು ಎಂಎಸ್ಆರ್‌ಟಿಸಿಗೆ ನೇರ ಸ್ಪರ್ಧೆಯಾಗಿದೆ, ಏಕೆಂದರೆ ಅವು ಎಸ್ ಟಿ ಮಾರ್ಗಗಳಲ್ಲಿ ಚಲಿಸುತ್ತವೆ, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ನಿರ್ಬಂಧಗಳಿಲ್ಲದೆ ಡಿಪೋಗಳ ಹತ್ತಿರ ಕರೆದೊಯ್ಯುತ್ತವೆ. ಇದೆಲ್ಲವೂ ಕಾನೂನು ಬಾಹಿರವಾಗಿದ್ದು ಮತ್ತು ಅನೇಕ ವರ್ಷಗಳಿಂದ ನಡೆಯುತ್ತಿದೆ, ಮ್ಯಾಕ್ಸಿ ಕ್ಯಾಬ್ ಗಳ ವಿರುದ್ಧ ಯಾರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇವುಗಳನ್ನು ಕ್ರಮಬದ್ಧಗೊಳಿಸಿದ ನಂತರ ಅವುಗಳನ್ನು ನಿಯಂತ್ರಿಸಲು ಯಾರೂ ಇಲ್ಲದೆ ಮತ್ತಷ್ಟು ತೊಂದರೆ ಉಂಟಾಗುತ್ತದೆ" ಎಂದು ಬಾರ್ಗೆ ಹೇಳಿದರು.

ಸಾರ್ವಜನಿಕ ಸಾರಿಗೆಯಾಗಿ ಮ್ಯಾಕ್ಸಿ ಕ್ಯಾಬ್ ಗಳು
ಮ್ಯಾಕ್ಸಿ ಕ್ಯಾಬ್ ಗಳು 10 ರಿಂದ 12 ಆಸನಗಳನ್ನು ಹೊಂದಿರುವ ಮಿನಿ ಬಸ್ ಗಳಾಗಿವೆ, ಇವು ಹೆಚ್ಚಾಗಿ ಚಿಕ್ಕ ಪುಟ್ಟ ನಗರಗಳು ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ಶಟಲ್ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತವೆ. ಅಧಿಕೃತವಾಗಿ ಅನುಮತಿಸದಿದ್ದರೂ, ಈ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳು ನಿಯಮಿತವಾಗಿ ಸಂಚರಿಸುತ್ತವೆ.

ಮ್ಯಾಕ್ಸಿ ಕ್ಯಾಬ್ ಗಳಿಗೆ ಯಾವ ಮಾರ್ಗಗಳನ್ನು ನೀಡಬೇಕು ಎಂಬುದು ಗಮನ ಹರಿಸಬೇಕಾದ ಅಂಶವಾಗಿದೆ ಎಂದು ಸಮಿತಿಯ ಇನ್ನೊಬ್ಬ ಸದಸ್ಯ ಹೇಳಿದರು. ಅಸ್ತಿತ್ವದಲ್ಲಿರುವ ಎಂಎಸ್ಆರ್‌ಟಿಸಿ ಮಾರ್ಗಗಳಲ್ಲಿ ಅವರಿಗೆ ಅನುಮತಿ ನೀಡಬಾರದು ಮತ್ತು ಅವರ ಆದಾಯವನ್ನು ಕಸಿದು ಕೊಳ್ಳಬಾರದು ಎಂದು ಸದಸ್ಯರು ಹೇಳಿದರು.

ಇದನ್ನೂ ಓದಿ:  Tamilisai Soundarajan: ವಿಮಾನದಲ್ಲಿ IPS ಅಧಿಕಾರಿಯ ಪ್ರಾಣ ಉಳಿಸಿದ ಗವರ್ನರ್ ತಮಿಳಿಸೈ ಸೌಂದರರಾಜನ್

12 ಆಸನಗಳ ಮ್ಯಾಕ್ಸಿ ಕ್ಯಾಬ್ ಗಳನ್ನು ಸಾರ್ವಜನಿಕ ಸಾರಿಗೆಯಾಗಿ ಅನುಮತಿಸುವ ಪ್ರಸ್ತಾಪವನ್ನು ರೂಪಿಸಲು ರಾಜ್ಯ ಸರ್ಕಾರವು ಮೇ ತಿಂಗಳಲ್ಲಿ ಸಮಿತಿಯನ್ನು ರಚಿಸಿತು. ಪ್ರಯಾಣ ದರ ರಚನೆ, ಪರವಾನಗಿಗಳು ಮತ್ತು ಎಂಎಸ್ಆರ್‌ಟಿಸಿ ಬಸ್ ಮಾರ್ಗಗಳ ಮೇಲೆ ಅದರ ಪರಿಣಾಮವನ್ನು ತಿಳಿಸಲು ಅದು ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಿತು. ಈ ಸಮಿತಿಯಲ್ಲಿ ರಾಜ್ಯ ಸಾರಿಗೆ ಆಯುಕ್ತ ಅವಿನಾಶ್ ಧಾಕ್ನೆ, ಆರ್‌ಟಿಒ ಅಧಿಕಾರಿಗಳು ಮತ್ತು ಎಂಎಸ್ಆರ್‌ಟಿಸಿ ಎಂ ಡಿ ಶೇಖರ್ ಚನ್ನೆ ಇದ್ದಾರೆ.
Published by:Ashwini Prabhu
First published: