Maharashtra Rains: ಮಹಾರಾಷ್ಟ್ರದಲ್ಲಿ ಮುಂದಿನ 24 ಗಂಟೆ ಗುಡುಗು-ಸಹಿತ ಧಾರಾಕಾರ ಮಳೆ, ರೆಡ್ ಅಲರ್ಟ್​ ಘೋಷಣೆ

Maharashtra Rain Updates: ಮುಂಬೈನಲ್ಲಿ ನಾಳೆ ಅಂದರೆ ಗುರುವಾರ ಯೆಲ್ಲೋ ಅಲರ್ಟ್ ನೀಡಲಾಗಿದೆ. ಶುಕ್ರವಾರದ ಬಳಿಕ ಮಳೆಯ ಪ್ರಮಾಣ ತಗ್ಗಲಿದೆ ಎಂದು ಹೇಳಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸೆಪ್ಟೆಂಬರ್ 9ರವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಮಹಾರಾಷ್ಟ್ರದಲ್ಲಿ ಮಳೆ

ಮಹಾರಾಷ್ಟ್ರದಲ್ಲಿ ಮಳೆ

 • Share this:
  ಮಹಾರಾಷ್ಟ್ರದಲ್ಲಿ(Maharashtra) ಮಳೆರಾಯನ ಅಬ್ಬರ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಹಾರಾಷ್ಟ್ರದ ಉತ್ತರ ಕರಾವಳಿಯಲ್ಲಿ ಯಥೇಚ್ಛ ಮಳೆಯಾಗುತ್ತಿದೆ(Rainfall). ಇಂದು ಕೊಂಕಣ, ಮಧ್ಯ ಮಹಾರಾಷ್ಟ್ರ ಮತ್ತು ವಿದರ್ಭದಲ್ಲಿ ವರುಣನ ಅಬ್ಬರ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮಾಹಿತಿ ನೀಡಿದೆ. ಸದ್ಯ ಮುಂಬೈನಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಆದರೆ ಮುಂದಿನ 24 ಗಂಟೆಗಳಲ್ಲಿ ಮುಂಬೈ(Mumbai) ಹಾಗೂ ಥಾಣೆಯಲ್ಲಿ ಅಧಿಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಇಷ್ಟೇ ಅಲ್ಲದೇ, ರಾಯ್​ಗಢ, ರತ್ನಗಿರಿ, ಸಿಂಧುದರ್ಗ್, ನಾಸಿಕ್, ಪುಣೆ, ಸತಾರಾ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

  ಮುಂದಿನ 24 ಗಂಟೆಗಳಲ್ಲಿ ಮುಂಬೈ ಹಾಗೂ ಅಕ್ಕ-ಪಕ್ಕದ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೆರೆಯ ಪಾಲ್ಗಾರ್​ ನಗರದಲ್ಲಿ ಇಂದು ಮಳೆಯ ಅಬ್ಬರ ಜೋರಾಗಲಿದ್ದು, ರೆಡ್ ಅಲರ್ಟ್​ ಘೋಷಿಸಲಾಗಿದೆ. ಮಹಾರಾಷ್ಟ್ರದ ದಕ್ಷಿಣ ಕೊಂಕಣ ಪ್ರದೇಶದಲ್ಲಿ ಶನಿವಾರದವರೆಗೂ ಅಧಿಕ ಮಳೆಯಾಗಲಿದೆ ಎಂದು ಭಾರತೀಯ ಹಮಾವಾನ ಇಲಾಖೆ ಹೇಳಿದೆ.

  ಮುಂಬೈನಲ್ಲಿ ನಾಳೆ ಅಂದರೆ ಗುರುವಾರ ಯೆಲ್ಲೋ ಅಲರ್ಟ್ ನೀಡಲಾಗಿದೆ. ಶುಕ್ರವಾರದ ಬಳಿಕ ಮಳೆಯ ಪ್ರಮಾಣ ತಗ್ಗಲಿದೆ ಎಂದು ಹೇಳಿದೆ.

  ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸೆಪ್ಟೆಂಬರ್ 9ರವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ಸೆಪ್ಟೆಂಬರ್ 10ರಿಂದ ಗಣೇಶ ಹಬ್ಬ ಪ್ರಾರಂಭವಾಗಲಿದೆ. ಹೀಗಾಗಿ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮಳೆಯ ಪ್ರಮಾಣ ಅಧಿಕವಾಗಿರುವುದರಿಂದ ಗಣೇಶ ಮೂರ್ತಿ ವಿಸರ್ಜಿಸಲು ಕೆರೆ, ನದಿ ಹಾಗೂ ಇನ್ನಿತರೆ ನೀರಿನ ಪ್ರದೇಶಗಳ ಕಡೆ ಹೋಗುವದನ್ನು ಆದಷ್ಟು ಕಡಿಮೆ ಮಾಡುವಂತೆ ಹೇಳಲಾಗಿದೆ.

  ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಮುಂದುವರೆಯಲಿದೆ ವರುಣನ ಆರ್ಭಟ. ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ?

  ಅದೇ ರೀತಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಪ್ರವಾಹ ಆತಂಕ ಇರುವ ನದಿಗಳ ಬಳಿ ಸೇತುವೆ ದಾಟದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಜೊತೆಗೆ ಅಗತ್ಯವಿರುವ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಿಕೊಳ್ಳುವಂತೆ ಹಾಗೂ ಮಳೆಯಿಂದ ಎಲೆಕ್ಟ್ರಿಕ್​ ಮೀಟರ್​ಗಳನ್ನು ಸಂರಕ್ಷಿಸುವಂತೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

  ಜಿಲ್ಲಾ ವಿಕೋಪ ನಿರ್ವಹಣಾ ಇಲಾಖೆ ಹೇಳುವ ಮಾಹಿತಿಯ ಬಗ್ಗೆ ಮಾತ್ರ ಗಮನ ಹರಿಸಿ, ಉಳಿದ ವದಂತಿಗಳ ಬಗ್ಗೆ ಕಿವಿಗೊಡಬೇಡಿ ಎಂದು ಸಾರ್ವಜನಿಕರಿಗೆ ತಿಳಿಸಿದೆ. ನದಿ ತೀರದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಜೊತೆಗೆ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಮುನ್ನ ತಗ್ಗು ಪ್ರದೇಶದ ಜನರೂ ಸಹ ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದು ಹೇಳಿದೆ.

  ಭಾರೀ ಮಳೆ ಹಿನ್ನೆಲೆ, ನದಿಯ ಒಳಹರಿವು ಹೆಚ್ಚಾಗಿದ್ದರಿಂದ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿರುವ ಮಜಲ್ಗಾನ್​ ಜಲಾಶಯದ 10 ಗೇಟ್​ಗಳನ್ನು ಸೋಮವಾತ ತೆರೆಯಲಾಗಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ನೀರನ್ನು ಹೊರ ಬಿಡಲಾಗಿದೆ. ಸಿಂದಫಾನ ನದಿಗೆ ಮಜಲ್ಗಾನ್ ಅಣೆಕಟ್ಟೆಯನ್ನು ಕಟ್ಟಲಾಗಿದೆ.

  ಇನ್ನು, ಮಹಾರಾಷ್ಟ್ರ ಮಾತ್ರವಲ್ಲದೇ, ಉತ್ತರಾಖಂಡ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಲ್ಲೂ ಮಳೆಯ ಅಬ್ಬರ ಹೆಚ್ಚಾಗಿದೆ. ಉತ್ತರಾಖಂಡದಲ್ಲಿ ಆಗಾಗ್ಗೆ ಭೂ ಕುಸಿತಗಳು ಸಂಭವಿಸುತ್ತಿದ್ದು, ಅನೇಕ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿದ್ದವು. ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಡೆಹ್ರಾಡೂನ್​ ಮತ್ತು ರಿಷಿಕೇಶ್ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.

  ಇದನ್ನೂ ಓದಿ:Gold Price Today: ಗೌರಿ ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ; ಬೆಲೆ ಇಳಿಕೆಯಾಗಿದೆ ನೋಡಿ..!

  ಕರ್ನಾಟಕದಲ್ಲಿಯೂ ಸೆಪ್ಟೆಂಬರ್​ನಲ್ಲಿ ಉತ್ತಮ ಮಳೆಯಾಗುತ್ತಿದೆ. ರಾಜ್ಯದ ಕರಾವಳಿ, ಮಲೆನಾಡು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಇನ್ನೂ 4 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದೂ ಸಹ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಈ ಜಿಲ್ಲೆಗಳಲ್ಲಿ ಆರೆಂಜ್ ‌ಅಲರ್ಟ್‌ ಘೋಷಿಸಿದೆ. ರಾಜ್ಯದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
  Published by:Latha CG
  First published: