ಮಹಾರಾಷ್ಟ್ರ ಸರ್ಕಾರದ ಖಾತೆ ಹಂಚಿಕೆ: ಮೈತ್ರಿಪಕ್ಷಗಳಿಗೆ ಸಮ ಪ್ರಾಶಸ್ತ್ಯ; ಶಿವಸೇನಾಗೆ ಗೃಹ; ಎನ್​ಸಿಪಿಗೆ ಹಣಕಾಸು; ಕಾಂಗ್ರೆಸ್​ಗೆ ಪಿಡಬ್ಲ್ಯೂಡಿ, ಕಂದಾಯ

ನವೆಂಬರ್ 28ರಂದು ಉದ್ಧವ್ ಠಾಕ್ರೆ ಸಿಎಂ ಆದ ದಿನದಂದೇ ಮೂರೂ ಪಕ್ಷಗಳಿಂದ ತಲಾ ಇಬ್ಬರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇವತ್ತು ಆರೂ ಸಚಿವರಿಗೂ ಖಾತೆ ಹಂಚಿಕೆ ಮಾಡಲಾಗಿದೆ.

Vijayasarthy SN | news18
Updated:December 12, 2019, 6:58 PM IST
ಮಹಾರಾಷ್ಟ್ರ ಸರ್ಕಾರದ ಖಾತೆ ಹಂಚಿಕೆ: ಮೈತ್ರಿಪಕ್ಷಗಳಿಗೆ ಸಮ ಪ್ರಾಶಸ್ತ್ಯ; ಶಿವಸೇನಾಗೆ ಗೃಹ; ಎನ್​ಸಿಪಿಗೆ ಹಣಕಾಸು; ಕಾಂಗ್ರೆಸ್​ಗೆ ಪಿಡಬ್ಲ್ಯೂಡಿ, ಕಂದಾಯ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ
  • News18
  • Last Updated: December 12, 2019, 6:58 PM IST
  • Share this:
ಮುಂಬೈ(ಡಿ. 12): ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗಿ ಎರಡು ವಾರಗಳ ಬಳಿಕ ಈಗ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಮೂರೂ ಪಕ್ಷಗಳ ಆರು ಸಚಿವರಿಗೂ ಖಾತೆ ಹಂಚಿಕೆಯಲ್ಲಿ ಹೆಚ್ಚೂಕಡಿಮೆ ಸಮ ಪ್ರಾಶಸ್ತ್ಯ ಸಿಕ್ಕಿದೆ. ಆದರೆ, ಅಚ್ಚರಿ ಎಂಬಂತೆ ಯಾವುದೇ ಉಪಮುಖ್ಯಮಂತ್ರಿ ಹುದ್ದೆ ರಚನೆಯಾಗಿಲ್ಲ.

ಸರ್ಕಾರದಲ್ಲಿ ಸಿಎಂ ನಂತರ ಅತ್ಯಂತ ಪ್ರಮುಖ ಸ್ಥಾನವಾಗಿರುವ ಗೃಹ ಖಾತೆಯನ್ನು ಶಿವಸೇನಾಗೇ ಬಿಟ್ಟುಕೊಡಲಾಗಿದೆ. ಎನ್​ಸಿಪಿ ಪಕ್ಷವು ಡಿಸಿಎಂ ಮತ್ತು ಗೃಹ ಖಾತೆ ಮೇಲೆ ಕಣ್ಣಿಟ್ಟಿತ್ತು. ಎರಡೂ ಕೂಡ ಆ ಪಕ್ಷಕ್ಕೆ ಸಿಕ್ಕಿಲ್ಲದಿರುವುದು ಹಲವರ ಹುಬ್ಬೇರಿಸಿದೆ.

ನವೆಂಬರ್ 28ರಂದು ಉದ್ಧವ್ ಠಾಕ್ರೆ ಸಿಎಂ ಆದ ದಿನದಂದೇ ಮೂರೂ ಪಕ್ಷಗಳಿಂದ ತಲಾ ಇಬ್ಬರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇವತ್ತು ಆರೂ ಸಚಿವರಿಗೂ ಖಾತೆ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: ಆರ್ಥಿಕತೆ ಮೇಲೆ ಮತ್ತೆ ಎರಡು ಪೆಟ್ಟು; ಗ್ರಾಹಕ ಹಣದುಬ್ಬರ ಶೇ.5.54 ಹೆಚ್ಚಳ, -3.8ಕ್ಕೆ ಕುಸಿದ ಕೈಗಾರಿಕಾ ಉತ್ಪನ್ನ

ಶಿವಸೇನಾಗೆ ಸಿಕ್ಕ ಖಾತೆಗಳು:
1) ಏಕನಾಥ್ ಶಿಂಧೆ: ಗೃಹ, ನಗರಾಭಿವೃದ್ಧಿ, ಅರಣ್ಯ, ಪರಿಸರ, ಜಲ ಪೂರೈಕೆ, ಜಲ ಸಂರಕ್ಷಣೆ, ಪ್ರವಾಸೋದ್ಯಮ, ಸರ್ಕಾರಿ ಉದ್ದಿಮೆ, ಸಂಸದೀಯ ವ್ಯವಹಾರಗಳ ಖಾತೆ.
2) ಸುಭಾಷ್ ದೇಸಾಯಿ: ಕೈಗಾರಿಕೆ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಕ್ರೀಡೆ ಮತ್ತು ಯುವಜನ ಕಲ್ಯಾಣ, ತೋಟಗಾರಿಕೆ, ಸಾರಿಗೆ, ಮರಾಠಿ ಮತ್ತು ಸಾಂಸ್ಕೃತಿಕ ವ್ಯವಹಾರ, ಬಂದರು ಖಾತೆ.ಎನ್​ಸಿಪಿಗೆ ಸಿಕ್ಕ ಖಾತೆಗಳು:
1) ಜಯಂತ್ ಪಾಟೀಲ್: ಹಣಕಾಸು ಮತ್ತು ಯೋಜನೆ, ಗೃಹ, ಸಾರ್ವಜನಿಕ ಆರೋಗ್ಯ, ಸಹಕಾರ, ಆಹಾರ ಮತ್ತು ನಾಗರಿಕ ಪೂರೈಕೆ, ಕಾರ್ಮಿಕ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಖಾತೆ.
2) ಛಗನ್ ಭುಜಬಲ್: ನೀರಾವರಿ, ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ, ಅಬಕಾರಿ, ಕೌಶಲ್ಯಾಭಿವೃದ್ಧಿ, ಆಹಾರ ಮತ್ತು ಔಷಧ ಆಡಳಿತ ಖಾತೆ.

ಇದನ್ನೂ ಓದಿ: ಏರ್​ಇಂಡಿಯಾ ಸಂಸ್ಥೆಯ ಶೇ.100ರಷ್ಟು ಷೇರುಗಳನ್ನು ಮಾರಲು ಸರ್ಕಾರ ನಿರ್ಧಾರ; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಕಾಂಗ್ರೆಸ್​ಗೆ ಸಿಕ್ಕ ಖಾತೆಗಳು:
1) ಬಾಳಾಸಾಹೇಬ್ ಥೋರಟ್: ಕಂದಾಯ, ಇಂಧನ, ವೈದ್ಯಕೀಯ ಶಿಕ್ಷಣ, ಶಾಲಾ ಶಿಕ್ಷಣ, ಪಶುಸಂಗೋಪನೆ, ಮೀನುಗಾರಿಕೆ ಖಾತೆ.
2) ನಿತಿನ್ ರಾವತ್: ಲೋಕೋಪಯೋಗಿ(ಪಿಡಬ್ಲ್ಯೂಡಿ), ಬುಡಕಟ್ಟು ವ್ಯವಹಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜವಳಿ, ಪುವರ್ವಸತಿ, ಓಬಿಸಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ.

ಇನ್ನುಳಿದ ಖಾತೆಗಳೆಲ್ಲವೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಳಿಯೇ ಇರಲಿವೆ. ಡಿ. 26ರಂದು ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಖಾತೆ ಹಂಚಿಕೆ ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಡಿ. 21ರ ನಂತರ ಸಂಪುಟ ವಿಸ್ತರಣೆಯಾಗಲಿದ್ದು, ಮತ್ತೊಮ್ಮೆ ಖಾತೆ ಮರುಹಂಚಿಕೆಯಾಗುವ ನಿರೀಕ್ಷೆ ಇದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: December 12, 2019, 6:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading