ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಹೊಸಗಾಳಿ ಬೀಸಿದೆ. ಮರಾಠಾ ಸಮುದಾಯದ (Maratha Community) ಪರವಾದ ಸಂಭಾಜಿ ಬ್ರಿಗೇಡ್ (Sambhaji Brigade) ಶುಕ್ರವಾರ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದೊಂದಿಗೆ ಮೈತ್ರಿ (Shiv Sena-Sambhaji Brigade Alliance) ಘೋಷಿಸಿದೆ. ಶಿವಸೇವೆ ಮತ್ತು ಸಂಭಾಜಿ ಬ್ರಿಗೇಡ್ ನಡುವಿನ ಮೈತ್ರಿಯನ್ನು ಚುನಾವಣಾ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿಕೊಂಡಿಲ್ಲ. ಪ್ರಾದೇಶಿಕ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಈ ಮೈತ್ರಿಯನ್ನು ರಚಿಸಿದ್ದೇವೆ ಎಂದು ಮುಂಬೈನಲ್ಲಿ ಉದ್ಧವ್ ಠಾಕ್ರೆ (Uddhav Thackeray) ಹೇಳಿದ್ದಾರೆ. ಈ ಮೈತ್ರಿಯಿಂದಾಗಿ ಮಹಾರಾಷ್ಟ್ರ ರಾಜಕೀಯದಲ್ಲಿ ಏನೆಲ್ಲ ಬದಲಾವಣೆಗಳು ಘಟಿಸಲಿವೆ ಎಂದು ಕಾದುನೋಡಬೇಕಿದೆ.
ಏಕನಾಥ್ ಶಿಂಧೆ ಅವರ ಬಂಡಾಯ ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡ ಪರಿಣಾಮ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷ ತತ್ತರಿಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.
ಸಂವಿಧಾನ, ಪ್ರಾದೇಶಿಕ ಹೆಮ್ಮೆ ಎತ್ತಿಹಿಡಿಯುವೆವು
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸಂಭಾಜಿ ಬ್ರಿಗೇಡ್‌ನೊಂದಿಗಿನ ಮೈತ್ರಿ ಸೈದ್ಧಾಂತಿಕವಾಗಿದೆ. ಸಂವಿಧಾನ ಮತ್ತು ಪ್ರಾದೇಶಿಕ ಹೆಮ್ಮೆಯನ್ನು ಎತ್ತಿಹಿಡಿಯಲು ಮುನ್ನುಡಿಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ಆರ್‌ಎಸ್‌ಎಸ್ ವಿರುದ್ಧ ಟೀಕಾ ಪ್ರಹಾರ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ತನ್ನ ಸಿದ್ಧಾಂತಕ್ಕೆ ಬದ್ಧವಾಗಿಲ್ಲ ಎಂದು ಬಿಜೆಪಿಯನ್ನು ಕಟುವಾಗಿ ಟೀಕಿಸಿ ಉದ್ಧವ್ ಠಾಕ್ರೆ, ಸಂಭಾಜಿ ಬ್ರಿಗೇಡ್ ಸಿದ್ಧಾಂತಕ್ಕಾಗಿ ಹೋರಾಡುವ ಜನರನ್ನು ಒಳಗೊಂಡಿದೆ ಎಂದು ಶ್ಲಾಘಿಸಿದ್ದಾರೆ.
ಬಿಜೆಪಿಯಲ್ಲೂ ಹೊಸ ಗಾಳಿ
ಮಹಾರಾಷ್ಟ್ರದಲ್ಲಿ ಬಿಜೆಪಿಯಲ್ಲಿ ಭಾರೀ ಬದಲಾವಣೆಯ ಗಾಳಿ ಬೀಸುತ್ತಿದೆ. ಏಕನಾಥ ಶಿಂಧೆ ಅವರ ಜೊತೆಗೂಡಿ ಹೊಸ ಸರ್ಕಾರ ರಚಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಘಟಕಕ್ಕೆ ಹೊಸ ಅಧ್ಯಕ್ಷರನ್ನೂ ಸಹ ಬಿಜೆಪಿ (Maharashtra BJP) ನೇಮಿಸಿದೆ. ಮಾಜಿ ಇಂಧನ ಸಚಿವ ಮತ್ತು ಒಬಿಸಿ ನಾಯಕ ಚಂದ್ರಶೇಖರ್ ಬವಾನ್‌ಕುಲೆ ಅವರನ್ನು ಮಹಾರಾಷ್ಟ್ರ ಬಿಜೆಪಿ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಮಾಜಿ ಶಾಲಾ ಶಿಕ್ಷಣ ಸಚಿವ ಮತ್ತು ಮರಾಠ ನಾಯಕ ಆಶಿಶ್ ಶೆಲಾರ್ ಮುಂಬೈ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಬವಾಂಕುಲೆ ಮತ್ತು ಶೇಲಾರ್ ಇಬ್ಬರೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಆಪ್ತರು.
ಇದನ್ನೂ ಓದಿ: Shocking News: ಮಹಿಳೆಯ ಮೂಗಿನಲ್ಲಿ ಬೆಚ್ಚಗೆ ಮಲಗಿದ್ದ 150 ನೊಣಗಳ ಮರಿಗಳು! ವೈದ್ಯರಿಗೇ ಶಾಕ್
2019 ರ ವಿಧಾನಸಭಾ ಚುನಾವಣೆಯಲ್ಲಿ ಬವಾನ್‌ಕುಲೆ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೆ ಅವರು ಜೂನ್ 20 ರಂದು ರಾಜ್ಯ ಪರಿಷತ್ತಿಗೆ ಆಯ್ಕೆಯಾಗಿದ್ದರು. ಈ ಹಿಂದೆ ಮುಂಬೈ ಬಿಜೆಪಿ ಮುಖ್ಯಸ್ಥರಾಗಿದ್ದ ಶೇಲಾರ್ ಪ್ರಕರಣದಲ್ಲಿ ಸಚಿವ ಸ್ಥಾನವನ್ನು ನಿರಾಕರಿಸಲಾಗಿತ್ತು.
ಮುಂಬೈ ಆಳಲು ಬಿಜೆಪಿ ಚಿಂತನೆ
ಆದರೆ ಅವರಿಗೆ ಇದೀಗ ಹೊಸ ಜವಾಬ್ದಾರಿ ನೀಡಲಾಗಿದೆ. ಬಿಜೆಪಿಯು ಏಕನಾಥ ಶಿಂಧೆ ಬಣದೊಂದಿಗೆ ಕೈಜೋಡಿಸಿ ಬೃಹನ್ಮುಂಬೈ ಚುನಾವಣೆಗಳನ್ನು ಗೆಲ್ಲಲು ಮತ್ತು ಸುಮಾರು ಮೂರು ದಶಕಗಳ ಕಾಲ ಭಾರತದ ಶ್ರೀಮಂತ ನಾಗರಿಕ ಸಂಸ್ಥೆಯನ್ನು ಆಳಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಸೋಲಿಸಲು ಮಿಷನ್ 2022 ಅನ್ನು ಪ್ರಾರಂಭಿಸಿದೆ.
ಅರುಣ್ ಸಿಂಗ್ ಘೋಷಣೆ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಬವಾನ್‌ಕುಲೆ ಮತ್ತು ಶೆಲಾರ್ ನೇಮಕದ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: Ghulam Nabi Azad Resigns: ರಾಹುಲ್ ಗಾಂಧಿಯಿಂದಲೇ ಕಾಂಗ್ರೆಸ್ ಹಾಳಾಯ್ತು; ಗುಡ್ ಬೈ ಹೇಳಿದ ಹಿರಿಯ ನಾಯಕ
ಬಿಜೆಪಿ ಮಾಸ್ಟರ್ ಪ್ಲಾನ್ ಏನು?
ಬವಾನ್‌ಕುಲೆ ಅವರು ವಿದರ್ಭ ಮೂಲದ ನಾಯಕರಾಗಿದ್ದು ಬಿಜೆಪಿಯು ದುರ್ಬಲಗೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ಲಾಭವನ್ನು ಪಡೆದುಕೊಂಡು ಈ ಅವಧಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ನಗರ ಮತ್ತು ಗ್ರಾಮೀಣ ಸಂಸ್ಥೆಗಳಲ್ಲಿ 27% OBC ಕೋಟಾವನ್ನು ಸುಪ್ರೀಂ ಕೋರ್ಟ್ ಮರುಸ್ಥಾಪಿಸಿದ ಕೆಲವು ದಿನಗಳ ನಂತರ ಬವಾಂಕುಲೆ ಅವರ ನೇಮಕಾತಿ ನಡೆದಿದೆ. 14 ಮುನ್ಸಿಪಲ್ ಕಾರ್ಪೊರೇಶನ್‌ಗಳು, 25 ಜಿಲ್ಲಾ ಪರಿಷತ್ತು ಮತ್ತು ಒಂದೆರಡು ನಗರ ಸ್ಥಳೀಯ ಸಂಸ್ಥೆಗಳಿಗೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ OBC ಗಳಿಗೆ ಮೀಸಲಾತಿಯೊಂದಿಗೆ ಚುನಾವಣೆಗಳು ನಡೆಯಲಿವೆ. ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಅವಧಿಯಲ್ಲಿ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಕೋಟಾವನ್ನು ಮರುಸ್ಥಾಪಿಸಲು ಒತ್ತಾಯಿಸುವಲ್ಲಿ ಫಡ್ನವಿಸ್ ಮತ್ತು ಇತರ ಪಕ್ಷದ ನಾಯಕರೊಂದಿಗೆ ಬವಾನ್‌ಕುಲೆ ಮುಂಚೂಣಿಯಲ್ಲಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ