Maharashtra Politics: ಕೊಟ್ಟ ಮಾತಿಗೆ ತಪ್ಪಿದ ಅಮಿತ್ ಶಾ; ಉದ್ಧವ್ ಠಾಕ್ರೆ ಆರೋಪ

ಉದ್ಧವ್ ಠಾಕ್ರೆ

ಉದ್ಧವ್ ಠಾಕ್ರೆ

2019 ರಲ್ಲಿ ಬಿಜೆಪಿಯೊಂದಿಗಿನ ತಮ್ಮ ಪಕ್ಷದ 25 ವರ್ಷಗಳ ಮೈತ್ರಿಯನ್ನು ಕೊನೆಗೊಳಿಸಿದ ಕಾರಣವನ್ನು ಉಲ್ಲೇಖಿಸಿ ಉದ್ಧವ್ ಠಾಕ್ರೆ  ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

  • Share this:

ಮುಂಬೈ: ಅಮಿತ್ ಶಾ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರೆ ಮಹಾರಾಷ್ಟ್ರದಲ್ಲಿ ಈಗ ಬಿಜೆಪಿ ಮುಖ್ಯಮಂತ್ರಿ ಇರುತ್ತಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ನಿರ್ಗಮಿಸಿದ ನಂತರ ಮೊದಲ ಬಾರಿಗೆ ಮಾತನಾಡಿರುವ ಉದ್ಧವ್ ಠಾಕ್ರೆ (Uddhav Thackeray) ಶಿವಸೇನೆಯಿಂದ ಬಂಡಾಯ ಎದ್ದು ಹೊರಬಂದ ಏಕನಾಥ್ ಶಿಂಧೆ ಅವರೊಂದಿಗೆ ಹೊಸ ಸರ್ಕಾರವನ್ನು(Maharashtra CM Eknath Shinde)  ರಚಿಸಿರುವ ಬಿಜೆಪಿಯನ್ನು ಇಂದು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಅಧಿಕಾರಕ್ಕಾಗಿ ನನ್ನ ಬೆನ್ನಿಗೆ ಚೂರಿ ಹಾಕಿದೆ. ಶಿವಸೇನೆ-ಬಿಜೆಪಿ ಮೈತ್ರಿಯ 2.5 ವರ್ಷಗಳ ಅವಧಿಯಲ್ಲಿ ಶಿವಸೇನೆ ಮುಖ್ಯಮಂತ್ರಿಯಾಗಿರಬೇಕೆಂದು ನಾನು ಅಮಿತ್ ಶಾಗೆ (Amit Shah) ಮೊದಲೇ ಹೇಳಿದ್ದೆ. ಅವರು ಆ ಮಾತನ್ನು ಮೊದಲೇ  ನಡೆಸಿಕೊಟ್ಟಿದ್ದರೆ ಮಹಾ ವಿಕಾಸ್ ಅಘಾಡಿ (Maha Vikas Aghadi)  ನಿರ್ಮಾಣ  ಆಗುತ್ತಿರಲಿಲ್ಲ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹರಿಹಾಯ್ದಿದ್ದಾರೆ.


2019 ರಲ್ಲಿ ಬಿಜೆಪಿಯೊಂದಿಗಿನ ತಮ್ಮ ಪಕ್ಷದ 25 ವರ್ಷಗಳ ಮೈತ್ರಿಯನ್ನು ಕೊನೆಗೊಳಿಸಿದ ಕಾರಣವನ್ನು ಉಲ್ಲೇಖಿಸಿ ಉದ್ಧವ್ ಠಾಕ್ರೆ  ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.


ಬಿಜೆಪಿ ವಿರುದ್ಧ ಆರೋಪಗಳ ಮಳೆ
ಎರಡು ಪಕ್ಷಗಳು ಐದು ವರ್ಷಗಳ ಅಧಿಕಾರದ ಅವಧಿಯನ್ನು ವಿಭಜಿಸಿ ಸರದಿ ಪ್ರಕಾರ ಮುಖ್ಯಮಂತ್ರಿ ಸ್ಥಾನ ನೀಡುವ ಭರವಸೆಯನ್ನು ಬಿಜೆಪಿ, ವಿಶೇಷವಾಗಿ ಅಮಿತ್ ಶಾ ಅವರು ತಿರಸ್ಕರಿಸಿದ್ದರು. ಅವರು ಅಂದು ಈ ಭರವಸೆಯನ್ನು ಒಪ್ಪಿದ್ದರೆ ಇಂದು ಬಿಜೆಪಿ ಅಧಿಕಾರದಲ್ಲಿ ಇರುತ್ತಿತ್ತು ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.


ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಸಹಕಾರಕ್ಕೆ ಏನು ಕಾರಣ?
ಬಿಜೆಪಿಯೊಂದಿಗೆ ಬೇರ್ಪಟ್ಟ ನಂತರ ಸರ್ಕಾರವನ್ನು ರಚಿಸಲು ಮತ್ತು ಬಿಜೆಪಿಯನ್ನು ಅಧಿಕಾರ ಹಿಡಿಯದಂತೆ ಮಾಡಲು ಸೈದ್ಧಾಂತಿಕವಾಗಿ ವಿರುದ್ಧ ಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಸಹಕರಿಸಿದ್ದನ್ನು ಸಹ ಇದೇ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಒಪ್ಪಿಕೊಂಡಿದ್ದಾರೆ.


ಇದನ್ನೂ ಓದಿ: Maharashtra Politics: ಏಕನಾಥ ಶಿಂಧೆ ಮಹಾರಾಷ್ಟ್ರ ಹೊಸ ಸಿಎಂ! ಅಚ್ಚರಿಯ ಘೋಷಣೆ ಮಾಡಿದ ದೇವೇಂದ್ರ ಫಡ್ನವೀಸ್


ಆಗ ಶಿವಸೇನೆ ಅಧಿಕೃತವಾಗಿ ನಿಮ್ಮ ಜೊತೆಗಿತ್ತು
ಹೊಸ ಸರ್ಕಾರ ರಚನೆಯಾದ ರೀತಿ ಮತ್ತು ಶಿವಸೇನೆ ಕಾರ್ಯಕರ್ತ ಎಂದು ಕರೆಸಿಕೊಳ್ಳುವವರನ್ನು ಸಿಎಂ ಮಾಡಿದ ರೀತಿಯನ್ನು ತಪ್ಪಿಸಬಹುದಿತ್ತು. ಇದೇ ವಿಚಾರವನ್ನು ಅಮಿತ್ ಶಾ ಅವರಿಗೂ ಪ್ರಸ್ತಾಪಿಸಿದ್ದೆ. ಇವೆಲ್ಲವನ್ನೂ ಗೌರವಯುತವಾಗಿ ಮಾಡಬಹುದಿತ್ತು. ಆ ಸಮಯದಲ್ಲಿ ಶಿವಸೇನೆ ಅಧಿಕೃತವಾಗಿ ನಿಮ್ಮೊಂದಿಗಿತ್ತು. ಆದರೆ ನೀವು ಆಗ ಆ ಮಾತನ್ನು ನಡೆಸಿಕೊಡಲಿಲ್ಲ ಎಂದು ಮಹಾರಾಷ್ಟ್ರದ ನಿರ್ಗಮಿತ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದ್ದಾರೆ.


ಇದನ್ನೂ ಓದಿ: Eknath Shinde: ಚಾಲಕನಾಗಿದ್ದ ಶಿಂಧೆ ಇಷ್ಟು ಪ್ರಭಾವಶಾಲಿಯಾಗಿದ್ದು ಹೇಗೆ? ಮಹಾ ಪಾಲಿಟಿಕ್ಸ್​ನಲ್ಲಿ ಬಿರುಗಾಳಿ


ನಾವು ಅಭಿವೃದ್ಧಿಯನ್ನು ನಿಲ್ಲಿಸಿಲ್ಲ. ಮುಂಬೈನ ಪರಿಸರದೊಂದಿಗೆ ಆಟವಾಡದಂತೆ ನಾನು ಅವರನ್ನು ಅಂದರೆ ಏಕನಾಥ ಶಿಂಧೆ ಅವರ ಹೊಸ ಸರ್ಕಾರದ ಬಳಿ ಕೈಮುಗಿದು ವಿನಂತಿಸುತ್ತೇನೆ. ನಿಮಗೆ ಮುಂಬೈ ಮೇಲೆ ಇರುವ ಕೋಪವನ್ನು ಹೊರಹಾಕಬೇಡಿ ಎಂದುಉದ್ಧವ್ ಠಾಕ್ರೆ ವ್ಯಂಗ್ಯದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಆದಿತ್ಯ ಠಾಕ್ರೆ ಕಟು ಪ್ರತಿಕ್ರಿಯೆ
ಶಿವಸೇನೆಯಲ್ಲಿ ಶಾಸಕರ ಬಂಡಾಯದಿಂದ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ಒಂದು ದಿನದ ನಂತರ, ಅವರ ಮಗ ಆದಿತ್ಯ ಠಾಕ್ರೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ಪಕ್ಷದಲ್ಲಿ ದೈತ್ಯಾಕಾರದ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಜನರು" ಇದ್ದಾರೆ ಎಂದು ನನಗೆ ಮತ್ತು ಅವರ ತಂದೆಗೆ ತಿಳಿದಿತ್ತು. ಆದರೆ ಜನರು ತಮ್ಮ ಸ್ವಂತಕ್ಕೆ ಇದನ್ನು ಮಾಡಬಹುದು ಎಂದು ಊಹಿಸಲು ಅಸಾಧ್ಯ ಎಂದು ಹೇಳಿದರು.


ಪಕ್ಷವೆಂಬ ಕುಟುಂಬ
ಕೆಲವರು ತಮ್ಮ ಸ್ವಂತ ಪಕ್ಷಕ್ಕೆ ಮತ್ತು ತಮ್ಮ ಸ್ವಂತ ಕುಟುಂಬಕ್ಕೆ ಹೀಗೆ ಮಾಡುತ್ತಾರೆ ಎಂದು ಊಹಿಸಲು ಅಸಾಧ್ಯವಾಗಿದೆ. ಇಷ್ಟು ಚೆನ್ನಾಗಿ ಕೆಲಸ ಮಾಡುತ್ತಿರುವ ಪಕ್ಷವನ್ನು ಮತ್ತು ಎಲ್ಲರನ್ನೂ ನಮ್ಮದೇ ಕುಟುಂಬವೆಂದು ಪರಿಗಣಿಸಿದರೂ ಅವರು ಕುಟುಂಬದ ವಿರುದ್ಧ ಹೇಗೆ ಹೋಗುತ್ತಾರೆ? ಎಂದು ಆದಿತ್ಯ ಠಾಕ್ರೆ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

First published: