Maharashtra Political Crisis: ಮಹಾರಾಷ್ಟ್ರದ ಔರಂಗಾಬಾದ್ ಆಗಲಿದೆಯೇ ಸಂಭಾಜಿನಗರ?
ಶಿವಸೇನೆ ಹಿಂದುತ್ವದ ತನ್ನ ಮೂಲ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುತ್ತಿದೆ ಎಂದು ಆರೋಪ ಶಿವಸೇನೆಯ ಮೇಲೆ ಕೇಳಿಬರುತ್ತಿದೆ. ಈ ಆರೋಪದ ಬೆನ್ನಲ್ಲೇ ಔರಂಗಾಬಾದ್ ನಗರವನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡುವ ಒತ್ತಾಯ ಕೇಳಿಬಂದಿದೆ.
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ತೀವ್ರತರದ ಬೆಳವಣಿಗೆಗಳು (Maharashtra Political Crisis) ನಡೆಯುತ್ತಿರುವ ಹೊತ್ತಲ್ಲೇ ನಗರದ ಹೆಸರು ಬದಲಾವಣೆ ಮತ್ತೆ ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ (CM Uddhav Thackeray) ಸರ್ಕಾರ ಇನ್ನೇನು ಬೀಳಲಿದೆ ಎಂಬ ಸ್ಥಿತಿಯಲ್ಲಿರುವಾಗಲೇ ರಾಜ್ಯದ ಪ್ರಮುಖ ನಗರವೊಂದರ ಹೆಸರು ಬದಲಾವಣೆ ಮಾಡುವ ಒತ್ತಾಯ ಕೇಳಿಬಂದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ಮಂಗಳವಾರ ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಾರಿಗೆ ಸಚಿವ ಅನಿಲ್ ಪರಬ್ ಔರಂಗಾಬಾದ್ (Aurangabad) ನಗರವನ್ನು ಸಂಭಾಜಿನಗರ (Sambhaji Nagar) ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆಯ ಸಾರಿಗೆ ಸಚಿವ ಅನಿಲ್ ಪರಬ್, ಮಧ್ಯ ಮಹಾರಾಷ್ಟ್ರದ ಔರಂಗಾಬಾದ್ ನಗರವನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡಾಯ ಶಿವಸೇನೆ ಸಚಿವರ ಖಾತೆಗಳನ್ನು ಸಿಎಂ ಉದ್ಧವ್ ಠಾಕ್ರೆ ಹಿಂಪಡೆದ ಒಂದು ದಿನದ ನಂತರ ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯದಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ಈ ಆಗ್ರಹ ಕೇಳಿಬಂದಿದೆ.
ಶಿವಸೇನೆಯ ಮೇಲೆ ಕೇಳಿಬಂದಿತ್ತು ಆರೋಪ ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಪ್ರಸ್ತಾವನೆಯನ್ನು ತರಲಾಗುವುದು ಎಂದು ಠಾಕ್ರೆ ಅವರ ಆಪ್ತ ಸಹಾಯಕ ಪರಬ್ ತಿಳಿಸಿದ್ದಾರೆ. ಶಿವಸೇನೆ ಹಿಂದುತ್ವದ ತನ್ನ ಮೂಲ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುತ್ತಿದೆ ಎಂದು ಆರೋಪ ಶಿವಸೇನೆಯ ಮೇಲೆ ಕೇಳಿಬರುತ್ತಿದೆ. ಈ ಆರೋಪದ ಬೆನ್ನಲ್ಲೇ ಔರಂಗಾಬಾದ್ ನಗರವನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡುವ ಒತ್ತಾಯ ಕೇಳಿಬಂದಿದೆ.
ಪ್ರಮುಖ ನಗರವಾಗಿದ್ದ ಔರಂಗಾಬಾದ್ ಮೊಘಲ್ ಆಡಳಿತದಲ್ಲಿ ಔರಂಗಜೇಬ್ ಇಂದಿನ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಔರಂಗಾಬಾದ್ ನಗರವನ್ನು ಸ್ಥಾಪಿಸಿದ್ದ. ಶಿವಸೇನೆಯು ಗೌರವಿಸುವ ಛತ್ರಪತಿ ಸಂಭಾಜಿಯವರನ್ನು ಗಲ್ಲಿಗೇರಿಸುವಂತೆಯೂ ಆದೇಶ ನೀಡಲಾಗಿತ್ತು. 1980 ರ ದಶಕದ ಉತ್ತರಾರ್ಧದಲ್ಲಿ, ಔರಂಗಾಬಾದ್ ಮುಂಬೈ-ಥಾಣೆ ಬೆಲ್ಟ್ನ ಹೊರಗಿನ ಮೊದಲ ಪ್ರಮುಖ ನಗರಗಳಲ್ಲಿ ಒಂದಾಗಿತ್ತು ಎಂದು ಹೇಳಲಾಗಿದೆ.
ಮುಂಬೈಗೆ ವಾಪಸ್ ಆಗಲಿದ್ದಾರೆ ಶಿವಸೇನೆಯ ಬಂಡಾಯ ಶಾಸಕರು ಅಂದಹಾಗೆ ಇಂದು (ಜೂನ್ 29) ಗುವಾಹಟಿಯಿಂದ ಶಿವಸೇನೆಯ ಎಲ್ಲಾ ಬಂಡಾಯ ಶಿವಸೇನೆ ಶಾಸಕರನ್ನು ಗೋವಾಕ್ಕೆ ಕರೆದೊಯ್ಯಲು ಸ್ಪೈಸ್ಜೆಟ್ ವಿಮಾನವು ಗುವಾಹಟಿಗೆ ತೆರಳುತ್ತಿದೆ. ಈ ಹಿಂದೆ ಸ್ಪೈಸ್ಜೆಟ್ ವಿಮಾನವು ವಿಶೇಷ ಚಾರ್ಟರ್ ವಿಮಾನದ ಮೂಲಕ ಅವರನ್ನು ಸೂರತ್ನಿಂದ ಗುವಾಹಟಿಗೆ ಕರೆದೊಯ್ದಿತ್ತು.
ಶಿವಸೇನೆ ಶಾಸಕರಿಂದ 51 ಲಕ್ಷ ಪರಿಹಾರ ಮಹಾರಾಷ್ಟ್ರದ ಬಂಡಾಯ ಶಿವಸೇನೆ ಶಾಸಕರು ಅಸ್ಸಾಂನ ಪ್ರವಾಹ ಪರಿಹಾರಕ್ಕಾಗಿ 51 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಹಿರಿಯ ಸಚಿವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶಾಸಕರು ತಮ್ಮ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಶಾಸಕರು ಮೊದಲು ಜೂನ್ 22 ರಂದು ಗುವಾಹಟಿಗೆ ಬಂದಿದ್ದರು. ನಂತರ ಗುಜರಾತ್ನ ಸೂರತ್ನಿಂದ ಹಲವಾರು ಬ್ಯಾಚ್ಗಳಲ್ಲಿ ಚಾರ್ಟರ್ಡ್ ವಿಮಾನಗಳಲ್ಲಿ ಬಂದಿದ್ದರು.
ಅಸ್ಸಾಂನ ಕೆಲವು ಭಾಗಗಳು ಭೀಕರ ಪ್ರವಾಹದಿಂದ ತತ್ತರಿಸುತ್ತಿರುವಾಗಲೂ ಶಿವಸೇನಾ ಭಿನ್ನಮತೀಯರು ಗುವಾಹಟಿಯ ಐಷಾರಾಮಿ ಹೋಟೆಲ್ನಲ್ಲಿ ತಂಗಿದ್ದಾರೆ ಎಂಬ ಟೀಕೆಗಳ ನಡುವೆ ಅಸ್ಸಾಂ ಪ್ರವಾಹ ನಿಯಂತ್ರಣ ಮತ್ತು ಪರಿಹಾರಕ್ಕೆಂದು ಅವರು ಹಣ ನೀಡಿದ್ದಾರೆ. ಇಲ್ಲಿನ ಜನರ ಕಷ್ಟವನ್ನು ನಾವು ನಿರ್ಲಕ್ಷಿಸುವಂತಿಲ್ಲ ಎಂದು ಬಂಡಾಯ ಶಾಸಕರ ವಕ್ತಾರರು ತಿಳಿಸಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ