Maharashtra Politics: ಏಕನಾಥ ಶಿಂಧೆ ಮಹಾರಾಷ್ಟ್ರ ಹೊಸ ಸಿಎಂ! ಅಚ್ಚರಿಯ ಘೋಷಣೆ ಮಾಡಿದ ದೇವೇಂದ್ರ ಫಡ್ನವೀಸ್

 ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸರ್ಕಾರದ ಭಾಗವಾಗಲಿರುವುದು ಸಹ ಖಚಿತಗೊಂಡಿದೆ.

ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ

ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ

  • Share this:
    ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ (Maharashtra Next CM) ಶಿವಸೇನೆ ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಏಕನಾಥ್ ಶಿಂಧೆ (Eknath Shindhe) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಘೋಷಿಸಿದ್ದಾರೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ (Devendra Fadnavis) ಮಹಾರಾಷ್ಟ್ರ ಸರ್ಕಾರದ ಭಾಗವಾಗಲಿರುವುದು ಸಹ ಖಚಿತಗೊಂಡಿದೆ.  ಬಿಜೆಪಿ- ಶಿವಸೇನೆಯ ಬಂಡಾಯ ಶಾಸಕರ ಬೆಂಬಲದೊಂದಿಗೆ ಇಂದೇ (ಜೂನ್ 30) ಏಕನಾಥ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿ (Maharashtra Next CM) ಆಗಿ ಪದಗ್ರಹಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

    ಇಂದು ಸಂಜೆ 7:30ಕ್ಕೆ ನಡೆಯಲಿರುವ ಅಧಿಕಾರ ಪದಗ್ರಹಣ ಸಮಾರಂಭದಲ್ಲೇ ಏಕನಾಥ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.

    ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಏನಾಗುತ್ತೆ?
    ಅಲ್ಲದೇ ಶಿವಸೇನೆಯ ಬಂಡಾಯ ಏಕನಾಥ್ ಶಿಂಧೆ ನೇತೃತ್ವದ ಶಾಸಕರನ್ನು ಸ್ವಾಗತಿಸಲು ಬಿಜೆಪಿ ಸಿದ್ಧವಾಗಿದೆ ಎನ್ನಲಾಗಿದೆ. ಅಲ್ಲದೇ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಸಹ ಬಿಜೆಪಿ ವಿಲೀನ ಮಾಡಿಕೊಳ್ಳಲಿದೆಯೇ ಎಂಬ ಕುತೂಹಲ ಇದೀಗ ಹುಟ್ಟಿಕೊಂಡಿದೆ.

    ಆದಿತ್ಯ ಠಾಕ್ರೆ ಕಟು ಪ್ರತಿಕ್ರಿಯೆ
    ಶಿವಸೇನೆಯಲ್ಲಿ ಶಾಸಕರ ಬಂಡಾಯದಿಂದ  ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ಒಂದು ದಿನದ ನಂತರ, ಅವರ ಮಗ ಆದಿತ್ಯ ಠಾಕ್ರೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ಪಕ್ಷದಲ್ಲಿ ದೈತ್ಯಾಕಾರದ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಜನರು" ಇದ್ದಾರೆ ಎಂದು ನನಗೆ ಮತ್ತು ಅವರ ತಂದೆಗೆ ತಿಳಿದಿತ್ತು. ಆದರೆ ಜನರು ತಮ್ಮ ಸ್ವಂತಕ್ಕೆ ಇದನ್ನು ಮಾಡಬಹುದು ಎಂದು ಊಹಿಸಲು ಅಸಾಧ್ಯ ಎಂದು ಹೇಳಿದರು.

    ಪಕ್ಷವೆಂಬ ಕುಟುಂಬ
    ಕೆಲವರು ತಮ್ಮ ಸ್ವಂತ ಪಕ್ಷಕ್ಕೆ ಮತ್ತು ತಮ್ಮ ಸ್ವಂತ ಕುಟುಂಬಕ್ಕೆ ಹೀಗೆ ಮಾಡುತ್ತಾರೆ ಎಂದು ಊಹಿಸಲು ಅಸಾಧ್ಯವಾಗಿದೆ. ಇಷ್ಟು ಚೆನ್ನಾಗಿ ಕೆಲಸ ಮಾಡುತ್ತಿರುವ ಪಕ್ಷವನ್ನು ಮತ್ತು ಎಲ್ಲರನ್ನೂ ನಮ್ಮದೇ ಕುಟುಂಬವೆಂದು ಪರಿಗಣಿಸಿದರೂ ಅವರು ಕುಟುಂಬದ ವಿರುದ್ಧ ಹೇಗೆ ಹೋಗುತ್ತಾರೆ? ಎಂದು ಆದಿತ್ಯ ಠಾಕ್ರೆ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: Eknath Shinde: ಚಾಲಕನಾಗಿದ್ದ ಶಿಂಧೆ ಇಷ್ಟು ಪ್ರಭಾವಶಾಲಿಯಾಗಿದ್ದು ಹೇಗೆ? ಮಹಾ ಪಾಲಿಟಿಕ್ಸ್​ನಲ್ಲಿ ಬಿರುಗಾಳಿ

    ಬಂಡುಕೋರರು ಠಾಕ್ರೆಗ ಕುಟುಂಬಕ್ಕೆ ದ್ರೋಹ ಮಾಡಿಲ್ಲ.  ಅವರ ಬಗ್ಗೆ ಇನ್ನೂ ಪ್ರೀತಿ ಮತ್ತು ಗೌರವವಿದೆ. ಶಿವಸೇನೆಯಲ್ಲಿ ಯಾರೂ ಠಾಕ್ರೆ ಕುಟುಂಬದ ವಿರುದ್ಧ ಇಲ್ಲ ಎಂದು ಆದಿತ್ಯಾ ಠಾಕ್ರೆ ತಿಳಿಸಿದ್ದಾರೆ.

    ಪಕ್ಷದಲ್ಲಿ ಉದ್ಧವ್ ಠಾಕ್ರೆ ಅಲ್ಪಸಂಖ್ಯಾತರಿರುವುದರಿಂದ ಈಗ ಬಂಡಾಯ ಬಣ ಶಿವಸೇನೆಯಾಗಿದೆ ಎಂದು ಅವರು ಪ್ರತಿಪಾದಿಸಿದರು. "ನಿಜವಾದ ಶಿವಸೇನೆ ಯಾರು ಎಂಬುದು ಪ್ರಶ್ನೆಯಲ್ಲ, ನಮಗೆ ಕಾನೂನು ಬಹುಮತವಿದೆ ಮತ್ತು ಹೀಗಾಗಿ ನಮ್ಮದು ಶಾಸಕಾಂಗ ಪಕ್ಷ" ಎಂದು ಅವರು ಹೇಳಿದರು.

    ಶಿವಸೇನೆ ಶಾಸಕರಿಂದ 51 ಲಕ್ಷ ಪರಿಹಾರ
    ಮಹಾರಾಷ್ಟ್ರದ ಬಂಡಾಯ ಶಿವಸೇನೆ ಶಾಸಕರು ಅಸ್ಸಾಂನ ಪ್ರವಾಹ ಪರಿಹಾರಕ್ಕಾಗಿ 51 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.  ಹಿರಿಯ ಸಚಿವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶಾಸಕರು ತಮ್ಮ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಶಾಸಕರು ಮೊದಲು ಜೂನ್ 22 ರಂದು ಗುವಾಹಟಿಗೆ ಬಂದಿದ್ದರು. ನಂತರ ಗುಜರಾತ್‌ನ ಸೂರತ್‌ನಿಂದ ಹಲವಾರು ಬ್ಯಾಚ್‌ಗಳಲ್ಲಿ ಚಾರ್ಟರ್ಡ್ ವಿಮಾನಗಳಲ್ಲಿ ಬಂದಿದ್ದರು.

    ಇದನ್ನೂ ಓದಿ: Confidence Vote: ವಿಶ್ವಾಸಮತ ಎಂದರೇನು? ಸರ್ಕಾರದ ಅಳಿವು-ಉಳಿವಿನಲ್ಲಿ ಇದರ ಮಹತ್ವವೇನು?

    ಅಸ್ಸಾಂನ ಕೆಲವು ಭಾಗಗಳು ಭೀಕರ ಪ್ರವಾಹದಿಂದ ತತ್ತರಿಸುತ್ತಿರುವಾಗಲೂ ಶಿವಸೇನಾ ಭಿನ್ನಮತೀಯರು ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂಬ ಟೀಕೆಗಳ ನಡುವೆ ಅಸ್ಸಾಂ ಪ್ರವಾಹ ನಿಯಂತ್ರಣ ಮತ್ತು ಪರಿಹಾರಕ್ಕೆಂದು ಅವರು ಹಣ ನೀಡಿದ್ದಾರೆ.  ಇಲ್ಲಿನ ಜನರ ಕಷ್ಟವನ್ನು ನಾವು ನಿರ್ಲಕ್ಷಿಸುವಂತಿಲ್ಲ ಎಂದು ಬಂಡಾಯ ಶಾಸಕರ ವಕ್ತಾರರು ತಿಳಿಸಿದ್ದಾರೆ.
    Published by:guruganesh bhat
    First published: