Maharashtra Politics: ದೇವೇಂದ್ರ ಫಡ್ನವೀಸ್, ಏಕನಾಥ ಶಿಂಧೆಗೆ ಮಹಾರಾಷ್ಟ್ರ ಸರ್ಕಾರದ ಹೊಣೆ

ದೇವೇಂದ್ರ ಫಡ್ನವೀಸ್

ದೇವೇಂದ್ರ ಫಡ್ನವೀಸ್

ಅಲ್ಲದೇ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಸಹ ಬಿಜೆಪಿ ವಿಲೀನ ಮಾಡಿಕೊಳ್ಳಲಿದೆಯೇ ಎಂಬ ಕುತೂಹಲ ಇದೀಗ ಹುಟ್ಟಿಕೊಂಡಿದೆ.

  • Share this:

ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ (Devendra Fadnavis) ಮಹಾರಾಷ್ಟ್ರ ಮುಖ್ಯಮಂತ್ರಿ ಆಗುವ ಕುರಿತು ವರದಿಯಾಗಿದೆ.  ಶಿವಸೇನೆಯ ಬಂಡಾಯ ಶಾಸಕರ ಬೆಂಬಲದೊಂದಿಗೆ ಇಂದೇ (ಜೂನ್ 30) ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿ (Maharashtra Next CM) ಆಗಿ ಪದಗ್ರಹಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಶಿವಸೇನೆ ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಹಿರಿಯ ನಾಯಕ ಏಕನಾಥ ಶಿಂಧೆ (Eknath Shindhe) ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಲಿರುವುದು ಸಹ ಸ್ಪಷ್ಟಗೊಂಡಿದೆ ಎಂದು ವರದಿಯಾಗಿದೆ. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ ಶಿಂಧೆ ಇಂದು ಭೇಟಿಯಾಗಲಿದ್ದಾರೆ. ಈಮೂಲಕ ಮಹಾರಾಷ್ಟ್ರ ಸರ್ಕಾರದ ರಾಜಕೀಯ ಬೆಳವಣಿಗೆಗೆ ( (Maharashtra Politics Updates) ಒಂದು ಹಂತಕ್ಕೆ ತಲುಪಲಿದೆ. 


ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಏನಾಗುತ್ತೆ?
ಅಲ್ಲದೇ ಶಿವಸೇನೆಯ ಬಂಡಾಯ ಏಕನಾಥ್ ಶಿಂಧೆ ನೇತೃತ್ವದ ಶಾಸಕರನ್ನು ಸ್ವಾಗತಿಸಲು ಬಿಜೆಪಿ ಸಿದ್ಧವಾಗಿದೆ ಎನ್ನಲಾಗಿದೆ. ಅಲ್ಲದೇ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಸಹ ಬಿಜೆಪಿ ವಿಲೀನ ಮಾಡಿಕೊಳ್ಳಲಿದೆಯೇ ಎಂಬ ಕುತೂಹಲ ಇದೀಗ ಹುಟ್ಟಿಕೊಂಡಿದೆ.


ಆದಿತ್ಯ ಠಾಕ್ರೆ ಕಟು ಪ್ರತಿಕ್ರಿಯೆ
ಶಿವಸೇನೆಯಲ್ಲಿ ಶಾಸಕರ ಬಂಡಾಯದಿಂದ  ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ಒಂದು ದಿನದ ನಂತರ, ಅವರ ಮಗ ಆದಿತ್ಯ ಠಾಕ್ರೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ಪಕ್ಷದಲ್ಲಿ ದೈತ್ಯಾಕಾರದ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಜನರು" ಇದ್ದಾರೆ ಎಂದು ನನಗೆ ಮತ್ತು ಅವರ ತಂದೆಗೆ ತಿಳಿದಿತ್ತು. ಆದರೆ ಜನರು ತಮ್ಮ ಸ್ವಂತಕ್ಕೆ ಇದನ್ನು ಮಾಡಬಹುದು ಎಂದು ಊಹಿಸಲು ಅಸಾಧ್ಯ ಎಂದು ಹೇಳಿದರು.


ಪಕ್ಷವೆಂಬ ಕುಟುಂಬ
ಕೆಲವರು ತಮ್ಮ ಸ್ವಂತ ಪಕ್ಷಕ್ಕೆ ಮತ್ತು ತಮ್ಮ ಸ್ವಂತ ಕುಟುಂಬಕ್ಕೆ ಹೀಗೆ ಮಾಡುತ್ತಾರೆ ಎಂದು ಊಹಿಸಲು ಅಸಾಧ್ಯವಾಗಿದೆ. ಇಷ್ಟು ಚೆನ್ನಾಗಿ ಕೆಲಸ ಮಾಡುತ್ತಿರುವ ಪಕ್ಷವನ್ನು ಮತ್ತು ಎಲ್ಲರನ್ನೂ ನಮ್ಮದೇ ಕುಟುಂಬವೆಂದು ಪರಿಗಣಿಸಿದರೂ ಅವರು ಕುಟುಂಬದ ವಿರುದ್ಧ ಹೇಗೆ ಹೋಗುತ್ತಾರೆ? ಎಂದು ಆದಿತ್ಯ ಠಾಕ್ರೆ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: Confidence Vote: ವಿಶ್ವಾಸಮತ ಎಂದರೇನು? ಸರ್ಕಾರದ ಅಳಿವು-ಉಳಿವಿನಲ್ಲಿ ಇದರ ಮಹತ್ವವೇನು?


ಬಂಡುಕೋರರು ಠಾಕ್ರೆಗ ಕುಟುಂಬಕ್ಕೆ ದ್ರೋಹ ಮಾಡಿಲ್ಲ.  ಅವರ ಬಗ್ಗೆ ಇನ್ನೂ ಪ್ರೀತಿ ಮತ್ತು ಗೌರವವಿದೆ. ಶಿವಸೇನೆಯಲ್ಲಿ ಯಾರೂ ಠಾಕ್ರೆ ಕುಟುಂಬದ ವಿರುದ್ಧ ಇಲ್ಲ ಎಂದು ಆದಿತ್ಯಾ ಠಾಕ್ರೆ ತಿಳಿಸಿದ್ದಾರೆ.


ಇದನ್ನೂ ಓದಿ: Vice President Election: ಯಾರಾಗಲಿದ್ದಾರೆ ಉಪ ರಾಷ್ಟ್ರಪತಿ? ಚುನಾವಣಾ ದಿನಾಂಕ ನಿಗದಿ


ಪಕ್ಷದಲ್ಲಿ ಉದ್ಧವ್ ಠಾಕ್ರೆ ಅಲ್ಪಸಂಖ್ಯಾತರಿರುವುದರಿಂದ ಈಗ ಬಂಡಾಯ ಬಣ ಶಿವಸೇನೆಯಾಗಿದೆ ಎಂದು ಅವರು ಪ್ರತಿಪಾದಿಸಿದರು. "ನಿಜವಾದ ಶಿವಸೇನೆ ಯಾರು ಎಂಬುದು ಪ್ರಶ್ನೆಯಲ್ಲ, ನಮಗೆ ಕಾನೂನು ಬಹುಮತವಿದೆ ಮತ್ತು ಹೀಗಾಗಿ ನಮ್ಮದು ಶಾಸಕಾಂಗ ಪಕ್ಷ" ಎಂದು ಅವರು ಹೇಳಿದರು.

top videos
    First published: