Maharashtra Politics: ಹೌದು, ನಮ್ಮದು ಇಡಿ ಸರ್ಕಾರವೇ, ಆದರೆ.. ದೇವೇಂದ್ರ ಫಡ್ನವೀಸ್ ಹೊಸ ವ್ಯಾಖ್ಯಾನ

ವಿರೋಧ ಪಕ್ಷದ ಶಾಸಕರು ಮೊದಲು "ಇಡಿ, ಇಡಿ" ಎಂದು ಕೂಗಿದರು. ಈ ಟೀಕೆಗೆ ಪ್ರತ್ಯುತ್ತರವಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಡಿ ಎಂಬ ಪದಕ್ಕೆ ಹೊಸ ವ್ಯಾಖ್ಯಾನವನ್ನೇ ನಿರೂಪಿಸಿದರು.

ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ

ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ

 • Share this:
  ಮುಂಬೈ: ನಮ್ಮ ವಿರೋಧಿಗಳು ಇದು ಇ.ಡಿ (Enforcement Directorate) ಸರ್ಕಾರ ಎಂದು ಲೇವಡಿ ಮಾಡುತ್ತಾರೆ. ಹೌದು, ಇದು ಇಡಿ ಸರ್ಕಾರವೇ. ಆದರೆ ಏಕನಾಥ್-ದೇವೇಂದ್ರರ (Eknath-Devendra- ED) ಇಡಿ ಸರ್ಕಾರ ಎಂದು  ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರು ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೆಸರು ಮತ್ತು ತಮ್ಮ ಹೆಸರನ್ನು ಬಳಸಿಕೊಂಡು ವ್ಯಾಖ್ಯಾನಿಸಿದ್ದಾರೆ. ಈಮೂಲಕ ಉದ್ಧವ್ ಠಾಕ್ರೆ ಬಣಕ್ಕೆ ತಿರುಗೇಟು ನೀಡಿದ್ದಾರೆ.  ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರವನ್ನು ಕೆಡವಿ ಹೊಸ ಸರ್ಕಾರ ರಚಿಸಲು ಜಾರಿ ನಿರ್ದೇಶನಾಲಯವನ್ನು (ED Government) ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪವನ್ನು ದೇವೇಂದ್ರ ಫಡ್ನವೀಸ್ ಈ ವ್ಯಾಖ್ಯಾನದ ಮೂಲಕ ತಳ್ಳಿಹಾಕಿದರು.

  ಉದ್ಧವ್ ಠಾಕ್ರೆ ವಿರುದ್ಧ ಬಂಡೆದಿದ್ದ ಶಿವಸೇನೆಯ ಶಾಸಕರು ಏಕನಾಥ್ ಶಿಂಧೆ ಅವರನ್ನು ವಿಶ್ವಾಸ ಮತದ ಸಮಯದಲ್ಲಿ ಬೆಂಬಲಿಸಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ಶಾಸಕರು ಮೊದಲು "ಇಡಿ, ಇಡಿ" ಎಂದು ಕೂಗಿದರು. ಈ ಟೀಕೆಗೆ ಪ್ರತ್ಯುತ್ತರವಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಡಿ ಎಂಬ ಪದಕ್ಕೆ ಹೊಸ ವ್ಯಾಖ್ಯಾನವನ್ನೇ ನಿರೂಪಿಸಿದರು.

  ರಾಜಕೀಯ ಬಿಕ್ಕಟ್ಟಿಗೆ ತೆರೆ
  ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇಂದು ವಿಧಾನಸಭೆಯಲ್ಲಿ ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾದರು. ಇದು ಶಿವಸೇನೆಯನ್ನು ವಿಭಜಿಸಿದ ಮತ್ತು ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿದ ಎರಡು ವಾರಗಳ ರಾಜಕೀಯ ಹಗ್ಗಜಗ್ಗಾಟಕ್ಕೆ ತಾರ್ಕಿಕ ತೆರೆ ಬಿದ್ದಂತೆ ಆಗಿದೆ. ಮಹಾರಾಷ್ಟ್ರದಲ್ಲಿ ಎರಡು ವಾರಗಳ ರಾಜಕೀಯ ಬಿಕ್ಕಟ್ಟಿನ ನಂತರ ಏಕನಾಥ್ ಶಿಂಧೆ ಸರ್ಕಾರ ಸೋಮವಾರ ವಿಶ್ವಾಸ ಮತವನ್ನು ಗೆದ್ದು ಬಹುಮತದ ಮೂಲಕ ಮ್ಯಾಜಿಕ್​​ ನಂಬರ್​​ ದಾಟಿದ್ದಾರೆ.

  ಈ ಮಧ್ಯೆ ಏಕನಾಥ ಶಿಂಧೆ ತಂಡದಿಂದ ಪಕ್ಷಕ್ಕೆ ಹೊಸ ವಿಪ್ ಅನ್ನು ಗುರುತಿಸುವ ಹೊಸ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ನಿರ್ಧಾರದ ವಿರುದ್ಧ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಿದೆ. ಉದ್ಧವ್ ಠಾಕ್ರೆ ಗುಂಪಿನ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಹೊಸದಾಗಿ ನೇಮಕಗೊಂಡ ಸ್ಪೀಕರ್‌ಗೆ ವಿಪ್‌ಗಳನ್ನು ಗುರುತಿಸುವ ಅಧಿಕಾರವಿಲ್ಲ, ಈ ಕ್ರಮವು ಸುಪ್ರೀಂ ಕೋರ್ಟ್‌ನ ವಿಚಾರಣೆಯ ಯಥಾಸ್ಥಿತಿಯನ್ನು ಬದಲಾಯಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಆದಿತ್ಯ ಠಾಕ್ರೆ ಸೇರಿದಂತೆ ಶಿವಸೇನೆಯ ಹಲವಾರು ಶಾಸಕರು ವಿಶ್ವಾಸ ಮತದ ನಂತರ ಸದನದಿಂದ ನಿರ್ಗಮಿಸಿದರು.

  ಇದನ್ನೂ ಓದಿ: PM Modi Security Scare: ಪಿಎಂ ಮೋದಿ ಭದ್ರತಾ ಲೋಪ; ಪ್ರಧಾನಿ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನು ಹಾರಾಟ

  ಉಪಮುಖ್ಯಮಂತ್ರಿ ಫಡ್ನವಿಸ್​ ಮಾತು
  ನಂತರ ಸದನದಲ್ಲಿ ಮಾತನಾಡಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಫಡ್ನವಿಸ್, ರಾಜಕೀಯದಲ್ಲಿ ಎದುರಾಳಿಗಳ ಮಾತು ಕೇಳಲು ಎಲ್ಲರೂ ಸಿದ್ಧರಾಗಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಮತ್ತು ಪೋಸ್ಟ್‌ಗಳಿಗಾಗಿ ಜನರನ್ನು ಜೈಲಿಗೆ ಹಾಕುವುದನ್ನು ನಾವು ನೋಡಿದ್ದೇವೆ. ನಮ್ಮ ವಿರುದ್ಧ ಮಾತನಾಡುವವರನ್ನು ಎದುರಿಸಲು ನಾವು ಸಿದ್ಧರಾಗಿರಬೇಕು. ಟೀಕೆಗಳಿಗೆ ನಾವು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎಂದರು.

  ಇದನ್ನೂ ಓದಿ: Service Charge: ಹೋಟೆಲ್​ಗಳಲ್ಲಿ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ಪಡೆದರೆ ಈ ಸಹಾಯವಾಣಿಗೆ ದೂರು ನೀಡಿ

  ‘ಇಡಿ ಸರ್ಕಾರ’
  ಪಕ್ಷ ಹೇಳಿದ್ದರೆ ನಾನು ಮನೆಯಲ್ಲಿ ಕೂರುತ್ತಿದ್ದೆ, ಅದೇ ಪಕ್ಷ ನನ್ನನ್ನು ಸಿಎಂ ಮಾಡಿತು. ಇಂದು ನಾನು ನಿಮಗೆ ಹೇಳುತ್ತೇನೆ, ಈ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಎಂದಿಗೂ ಜಗಳ ನಡೆಯುವುದಿಲ್ಲ, ನಾವು ಸಹಕಾರವನ್ನು ಮುಂದುವರಿಸುತ್ತೇವೆ. ಇದು ‘ಇಡಿ ಸರ್ಕಾರ’ ಎಂದು ಜನರು ಲೇವಡಿ ಮಾಡುತ್ತಾರೆ. ಹೌದು, ಇದು ಏಕನಾಥ್ ದೇವೇಂದ್ರ ಅವರ ಇಡಿ ಸರ್ಕಾರ ಎಂದು ತಿರುಗೇಟು ನೀಡಿದರು. ನಮ್ಮ ಮೈತ್ರಿಕೂಟಕ್ಕೆ ಜನಾದೇಶ ಸಿಕ್ಕಿತ್ತು, ಆದರೆ ನಮ್ಮನ್ನು ಉದ್ದೇಶಪೂರ್ವಕವಾಗಿ ಬಹುಮತದಿಂದ ದೂರವಿಡಲಾಗಿದೆ. ಆದರೆ ಏಕನಾಥ್ ಶಿಂಧೆ ಅವರೊಂದಿಗೆ ನಾವು ಮತ್ತೊಮ್ಮೆ ಶಿವಸೇನೆಯೊಂದಿಗೆ ನಮ್ಮ ಸರ್ಕಾರವನ್ನು ರಚಿಸಿದ್ದೇವೆ. ನಿಜವಾದ ಶಿವಸೈನಿಕರನ್ನು ಸಿಎಂ ಮಾಡಲಾಗಿದೆ. ನನ್ನ ಪಕ್ಷದ ಆಜ್ಞೆಯಂತೆ ನಾನು ಉಪ ಮುಖ್ಯಮಂತ್ರಿಯಾದೆ ಎಂದು ಫಡ್ನವೀಸ್​ ಹೇಳಿದರು.
  Published by:guruganesh bhat
  First published: