Maharashtra Politics Crisis: ಬಂಡಾಯ ಶಾಸಕರು ಸುಪ್ರೀಂ ಮೆಟ್ಟಿಲೇರಿದ ಬೆನ್ನಲ್ಲೇ ಠಾಕ್ರೆಗೆ ಮತ್ತೊಂದು ಶಾಕ್!

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಮಹಾರಾಷ್ಟ್ರದ ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಸಚಿವ ಉದಯ್ ಸಮಂತ್,  ಗುವಾಹಟಿಯಲ್ಲಿ ಬಂಡಾಯ ಗುಂಪನ್ನು ಸೇರಿಕೊಂಡಿದ್ದಾರೆ.

ಬಂಡಾಯ ಶಾಸಕರ ಗುಂಪು

ಬಂಡಾಯ ಶಾಸಕರ ಗುಂಪು

  • Share this:
ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಪ್ರಕ್ಷುಬ್ಧತೆ (Maharashtra Politics Crisis) ತೀವ್ರಗೊಂಡಿದ್ದು, ಶಿವಸೇನೆ (  Shiv Sena) ಬಂಡಾಯ ಸಚಿವ ಏಕನಾಥ್ ಶಿಂಧೆ (Eknath Shinde) ಸೇರಿದಂತೆ 15 ಶಾಸಕರಿಗೆ ನೀಡಿದ್ದ ಅನರ್ಹಗೊಳಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ (Supreme Court) ಮೆಟ್ಟಿಲೇರಿದ್ದಾರೆ. ಈ ಮಧ್ಯೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಮಹಾರಾಷ್ಟ್ರದ ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಸಚಿವ ಉದಯ್ ಸಮಂತ್,  ಗುವಾಹಟಿಯಲ್ಲಿ ಬಂಡಾಯ ಗುಂಪನ್ನು ಸೇರಿಕೊಂಡಿದ್ದಾರೆ. ಆ ಮೂಲಕ ಬಂಡಾಯ ಬಣಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ. ಶಿಂಧೆ ಅವರು ಈಗ 9 ಮಂತ್ರಿಗಳ ಬೆಂಬಲವನ್ನು ಹೊಂದಿದ್ದಾರೆ, ರಾಜ್ಯ ವಿಧಾನಸಭೆಯಲ್ಲಿ ಉಳಿದಿರುವ ಉದ್ಧವ್ ಠಾಕ್ರೆ ಗುಂಪಲ್ಲಿ ಪುತ್ರ ಆದಿತ್ಯ ಠಾಕ್ರೆ ಒಬ್ಬರೇ ಇದ್ದಾರೆ. (ಇತರ ಇಬ್ಬರು ಠಾಕ್ರೆ ನಿಷ್ಠರಾದ ಅನಿಲ್ ಪರಬ್ ಮತ್ತು ಸುಭಾಷ್ ದೇಸಾಯಿ ಅವರು ವಿಧಾನ ಪರಿಷತ್ತಿನ ಸದಸ್ಯರು)

ತಿರುಗೇಟು ನೀಡಲು ಠಾಕ್ರೆ ನಿಷ್ಠರ ಪ್ಲಾನ್​

ಬಂಡಾಯ ಬಣವು ಮುಂಬೈನ ಶಿವಸೇನಾ ಶಾಸಕ ಅಜಯ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸುವುದನ್ನು ಮತ್ತು ಉಪಸಭಾಪತಿ ನರಹರಿ ಝಿರ್ವಾಲ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿರುವುದನ್ನು ಪ್ರಶ್ನಿಸಿದೆ. ಮತ್ತೊಂದೆಡೆ,  ಠಾಕ್ರೆಯವರ ನಿಷ್ಠಾವಂತರು ಕೂಡ ಸಂಸದ ಅರವಿಂದ್ ಸಾವಂತ್ ಅವರೊಂದಿಗೆ ಬಂಡಾಯಗಾರರನ್ನು ಎದುರಿಸಲು ಸಜ್ಜಾಗಿದ್ದಾರೆ. ಪಕ್ಷವು ಈಗಾಗಲೇ 16 ಬಂಡಾಯ ಶಾಸಕರಿಗೆ ನೋಟಿಸ್ ನೀಡುವ ಮೂಲಕ ಅನರ್ಹಗೊಳಿಸಲು ಕಾನೂನು ಕ್ರಮವನ್ನು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Maharashtra Politics Crisis: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು; ಇಂದು ವಿಚಾರಣೆ

ಶಾಸಕರನ್ನು ಅನರ್ಹಗೊಳಿಸಿರುವುದು ಏಕೆ?

ಶಿವಸೇನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್‌ನ ತ್ರಿಪಕ್ಷೀಯ ಮಹಾ ವಿಕಾಸ್ ಅಘಾಡಿ ಸರ್ಕಾರದ ವಕೀಲರಾದ ವಕೀಲ ದೇವದತ್ತ್ ಕಾಮತ್, ಶಿವಸೇನೆಯು 16 ಶಾಸಕರ ವಿರುದ್ಧ ಸಂವಿಧಾನದ 10 ನೇ ಶೆಡ್ಯೂಲ್ ಪ್ಯಾರಾ 2 (1) (ಎ) ಅಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಿದೆ ಎಂದು ಹೇಳಿದರು. ಸದಸ್ಯರು ಸದನದ ಹೊರಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೂ ಕೂಡ ಅವರು ಅನರ್ಹಗೊಳ್ಳುವ ಹಲವಾರು ಉದಾಹರಣೆಗಳಿವೆ ಎಂದು ಅವರು ಹೇಳಿದರು. "ಶಿವಸೇನೆಯು ಹಲವಾರು ಸಭೆಗಳನ್ನು ಕರೆದಿದೆ, ಆದರೆ ಬಂಡಾಯ ಶಾಸಕರು ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ. ಬೇರೆ ರಾಜ್ಯಕ್ಕೆ ಹೋಗುವ ಅವರ ಕ್ರಮ, MVA ಸರ್ಕಾರದ ವಿರುದ್ಧ ಪತ್ರಗಳನ್ನು ಬರೆಯುವುದು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕಾನೂನು ಕ್ರಮಕ್ಕೆ ಹೊಣೆಗಾರರನ್ನಾಗಿ ಮಾಡುತ್ತದೆ. ಹೀಗಾಗಿ ಅನರ್ಹತೆಗೆ ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಕಾಮತ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: Maharashtra Crisis: ಶಿವಸೇನೆಯ ಬಂಡಾಯ ಶಾಸಕರಿಗೆ Y-plus CRPF ಭದ್ರತೆ ನೀಡಿದ ಕೇಂದ್ರ ಸರ್ಕಾರ

ಒಟ್ಟು 55 ಸೇನಾ ಶಾಸಕರ ಪೈಕಿ ಮೂರನೇ ಎರಡರಷ್ಟು ಶಾಸಕರು ತಮ್ಮೊಂದಿಗೆ ಇದ್ದಾರೆ ಎಂಬ ಕಾರಣಕ್ಕಾಗಿ ಬಂಡಾಯ ಶಾಸಕರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಹಕ್ಕುಗಳನ್ನು ಅವರು ತಮ್ಮ ಗುಂಪನ್ನು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳಿಸಿದರೆ ಮಾತ್ರ ಅನ್ವಯಿಸುತ್ತದೆ ಎಂದು ಅವರು ಹೇಳಿದರು. ಈಗಾಗಲೇ ಪಕ್ಷ ವಿರೋಧಿ ಕೃತ್ಯ ಎಸಗಿರುವುದರಿಂದ ಮತ್ತು ಇನ್ನೂ ವಿಲೀನವಾಗದ ಕಾರಣ, ಅವರು ಅನರ್ಹತೆಯನ್ನು ಎದುರಿಸುತ್ತಾರೆ ಎಂದು ವಕೀಲರು ಹೇಳಿದರು.

ಧೈರ್ಯ ಇಲ್ಲ ಅವರಿಗೆ ಎಂದು ಅಬ್ಬರಿಸಿದ ಆದಿತ್ಯ

ಬಂಡುಕೋರರ ವಿರುದ್ಧ ವಾಗ್ದಾಳಿ ನಡೆಸಿದ ಆದಿತ್ಯ ಠಾಕ್ರೆ, ಬಂಡಾಯಕಾರರ ಧೈರ್ಯದ ಕೊರತೆಯಿದೆ ಎಂದು ಹೇಳಿದರು. ಕಲಿನಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಆದಿತ್ಯ “ಅವರು ನಿಜವಾಗಿಯೂ ಕಟ್ಟಾ ಶಿವಸೈನಿಕರಾಗಿದ್ದರೆ, ಶಿಂಧೆ ಮತ್ತು ಇತರರು ಥಾಣೆ ಅಥವಾ ಮಹಾರಾಷ್ಟ್ರದಲ್ಲಿ ಎಲ್ಲಿಯಾದರೂ ತಮ್ಮ ದಂಗೆಯನ್ನು ನಡೆಸಬಹುದಿತ್ತು. ನೆನಪಿಡಿ, ಮುಂಬೈ ವಿಮಾನ ನಿಲ್ದಾಣದಿಂದ ವಿಧಾನ ಭವನಕ್ಕೆ ಹೋಗುವ ರಸ್ತೆ, ರಾಜ್ಯ ಶಾಸಕಾಂಗ ಸಂಕೀರ್ಣ, ವರ್ಲಿ [Mr. ಆದಿತ್ಯ ಕ್ಷೇತ್ರ]’’ ಎಂದು ಎಚ್ಚರಿಸಿದರು.
Published by:Kavya V
First published: