• Home
  • »
  • News
  • »
  • national-international
  • »
  • Nirbhaya Fund: ನಿರ್ಭಯಾ ನಿಧಿಯ ಹಣದಿಂದ ಕಾರು ಖರೀದಿ; ರಾಜಕೀಯ ನಾಯಕರಿಂದ ಬಳಕೆ ಆರೋಪ

Nirbhaya Fund: ನಿರ್ಭಯಾ ನಿಧಿಯ ಹಣದಿಂದ ಕಾರು ಖರೀದಿ; ರಾಜಕೀಯ ನಾಯಕರಿಂದ ಬಳಕೆ ಆರೋಪ

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಕಾರುಗಳನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣದ ಶಾಸಕರು ಮತ್ತು ಸಂಸದರಿಗೆ ವೈ-ಪ್ಲಸ್ ಭದ್ರತೆಯನ್ನು ಒದಗಿಸಲು ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. 

  • News18 Kannada
  • 4-MIN READ
  • Last Updated :
  • Maharashtra, India
  • Share this:

    ಮುಂಬೈ: ನಿರ್ಭಯಾ ನಿಧಿಯಡಿ ಖರೀದಿಸಿದ ಕಾರುಗಳನ್ನು ರಾಜಕೀಯ ನಾಯಕರ ಭದ್ರತೆಗೆ ಬಳಸಲಾಗಿದೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಮುಂಬೈ ಪೊಲೀಸರು ನಿರ್ಭಯಾ ನಿಧಿಯಡಿ (Nirbhaya Fund) ಖರೀದಿಸಿದ ಕಾರುಗಳನ್ನು ಏಕನಾಥ್ ಶಿಂಧೆ (Maharashtra CM Eknath Shindhe) ಅವರ ಶಿವಸೇನಾ ಬಣದ ಶಾಸಕರು ಮತ್ತು ಸಂಸದರ ಭದ್ರತೆಗೆ ಬಳಸಲಾಗಿದೆ ಎಂಬ ಆರೋಪ ಮಾಡಲಾಗಿದೆ. ಇದು ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಭಾರೀ ಗದ್ದಲಕ್ಕೆ ಕಾರಣವಾಗಿವೆ.


    ಮಹಿಳೆಯರ ವಿರುದ್ಧದ ಅಪರಾಧಗಳ ವಿರುದ್ಧ ಹೋರಾಡಲು ನಿರ್ಭಯಾ ನಿಧಿಯ ಅಡಿಯಲ್ಲಿ ಈ ವರ್ಷದ ಆರಂಭದಲ್ಲಿ ಪೊಲೀಸರು ಕಾರುಗಳನ್ನು ಖರೀದಿಸಿದ್ದರು. ಆದರೆ ಇದೇ ಕಾರುಗಳನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣದ ಶಾಸಕರು ಮತ್ತು ಸಂಸದರಿಗೆ ವೈ-ಪ್ಲಸ್ ಭದ್ರತೆಯನ್ನು ಒದಗಿಸಲು ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.


    ಆರೋಪ ನಿರಾಕರಿಸಿದ ಮಹಾ ಸಿಎಂ
    ಆದರೆ ಮಹಾರಾಷ್ಟ್ರ ರಾಜ್ಯ ಸಚಿವ ಮಂಗಲ್ ಪ್ರಭಾತ್ ಲೋಧಾ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದಿನ ಮಹಾ ವಿಕಾಸ್ ಅಘಾಡಿ ಒಕ್ಕೂಟವು ಸುಳ್ಳು ಆರೋಪಗಳನ್ನು ಮಾಡುತ್ತಲೇ ಇದೆ ಎಂದು ಸಚಿವ ಮಂಗಲ್ ಪ್ರಭಾತ್ ಲೋಧಾ ಟೀಕೆ ನಡೆಸಿದ್ದಾರೆ.


    ಇದನ್ನೂ ಓದಿ: Raja Pateria: ಸಂವಿಧಾನ ಉಳಿಸಲು ಪ್ರಧಾನಿಯನ್ನು ಕೊಂದುಬಿಡಿ: ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್​ ನಾಯಕನಿಂದ ಸ್ಪಷ್ಟನೆ


    ಈ ವಾಹನಗಳನ್ನು ಖರೀದಿ ಮಾಡಲಾಗಿತ್ತಂತೆ
    ಮುಂಬೈ ಪೊಲೀಸರು ನಿರ್ಭಯಾ ನಿಧಿಯಡಿ 30 ಕೋಟಿ ಹಣದಲ್ಲಿ ಜೂನ್‌ನಲ್ಲಿ 220 ಬೊಲೆರೋಗಳು, 35 ಎರ್ಟಿಗಾಸ್, 313 ಪಲ್ಸರ್ ಮೋಟಾರ್‌ಸೈಕಲ್‌ಗಳು ಮತ್ತು 200 ಆಕ್ಟಿವಾ ದ್ವಿಚಕ್ರ ವಾಹನಗಳನ್ನುಜೂನ್‌ನಲ್ಲಿ ವಾಹನಗಳನ್ನು ಖರೀದಿಸಿದ್ದರು. ನಂತರ ಜುಲೈನಲ್ಲಿ ಎಲ್ಲಾ 97 ಪೊಲೀಸ್ ಠಾಣೆಗಳು, ಸೈಬರ್, ಟ್ರಾಫಿಕ್ ಮತ್ತು ಕರಾವಳಿ ಪೊಲೀಸ್ ಘಟಕಗಳಿಗೆ ಅವುಗಳನ್ನು ವಿತರಿಸಲಾಯಿತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೋರ್ವರು ತಿಳಿಸಿದ್ದಾರೆ.


    ಇದನ್ನೂ ಓದಿ: Bhupendra Patel: ಎರಡನೇ ಬಾರಿ ಭೂಪೇಂದ್ರ ಪಟೇಲ್ ಮುಡಿಗೆ ಗುಜರಾತ್ ಕಿರೀಟ, ಈ ಐವರಿಗೆ ಸಂಪುಟ ಖಾತೆ ಬಹುತೇಕ ಖಚಿತ!


    ಏನಿದು ನಿರ್ಭಯಾ ಫಂಡ್?
    ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸಲು 2013 ರಿಂದ ನಿರ್ಭಯಾ ನಿಧಿಯನ್ನು ಕೇಂದ್ರವು ರಾಜ್ಯ ಸರ್ಕಾರಗಳಿಗೆ ನೀಡುತ್ತಿದೆ. 2012 ರ ಡಿಸೆಂಬರ್‌ನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 23 ವರ್ಷದ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ನಂತರ 2013 ರಲ್ಲಿ ನಿರ್ಭಯಾ ನಿಧಿಯನ್ನು ರಚಿಸುವುದಾಗಿ ಕೇಂದ್ರ ಸರ್ಕಾರವು ಘೋಷಿಸಿತ್ತು. ಇದು ಆರ್ಥಿಕ ವ್ಯವಹಾರಗಳ ಇಲಾಖೆ (DEA), ಹಣಕಾಸು ಸಚಿವಾಲಯದಿಂದ ನಿರ್ವಹಿಸಲ್ಪಡುವ ನಾನ್-ಲ್ಯಾಪ್ಸಬಲ್ ಕಾರ್ಪಸ್ ಫಂಡ್ ಆಗಿದೆ.


    ನಮಗೆ ಮಹಾರಾಷ್ಟ್ರ ಬೇಡ, ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ! 42 'ಮಹಾ' ಹಳ್ಳಿಗಳ ಜನರಿಂದ ಆಗ್ರಹ
    ಬೆಳಗಾವಿ ಗಡಿ ವಿಚಾರದಲ್ಲಿ ಕರ್ನಾಟಕದ ಜೊತೆ ಸದಾ ಕಿರಿಕ್ ಮಾಡುವ ಮಹಾರಾಷ್ಟ್ರ , ಈಗ ಮತ್ತದೇ ಹಳೆ ತಗಾದೆ ತೆಗೆದಿದೆ. ಮತ್ತೊಂದೆಡೆ ಮಹಾರಾಷ್ಟ್ರದ ಎಂಇಎಸ್‌ಸೇರಿದಂತೆ ಕೆಲ ಸಂಘಟನೆಗಳು ಕರ್ನಾಟಕದ ಬಸ್‌  ಮೇಲೆ ಮಸಿ ಬಳಿದು, ಗೂಂಡಾವರ್ತನೆ ತೋರಿವೆ. ಮಹಾರಾಷ್ಟ್ರದ ದೌರ್ಜನ್ಯದ ವಿರುದ್ಧ ಇತ್ತ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಇಂತ ಪರಿಸ್ಥಿತಿಯಲ್ಲೇ ಮಹಾರಾಷ್ಟ್ರಕ್ಕೆ ಅಲ್ಲಿನ ಗ್ರಾಮಸ್ಥರೇ ಶಾಕ್ ಕೊಟ್ಟಿದ್ದಾರೆ. ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ  ಜಿಲ್ಲೆಯ ಜತ್ ತಾಲೂಕಿನ ಸುಮಾರು 42 ಗ್ರಾಮಗಳ ಜನರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. “ನಾವು ಮಹಾರಾಷ್ಟ್ರದಲ್ಲಿ ಇರುವುದಿಲ್ಲ, ನಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿ” ಅಂತ ಪಟ್ಟು ಹಿಡಿದಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: