ಮುಂಬೈ: ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಸರ್ಕಾರ ಪತನದ ಅಂಚಿನಲ್ಲಿದೆ. ಮೈತ್ರಿಕೂಟದ ಸರ್ಕಾರದ ಭಾಗವಾದ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಗಾಂಧಿ (Priyanka Gandhi ವಿದೇಶ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸಮ್ಮಿಶ್ರ (Maharashtra Government Crisis) ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಶಿವಸೇನಾ ನಾಯಕ ಏಕನಾಥ್ ಶಿಂಧೆ (Eknath Shinde) ಅವರ ಬಂಡಾಯದಿಂದ ಅಳಿವಿನ ಅಂಚಿನಲ್ಲಿದೆ. ಅಲ್ಲದೇ ಉದ್ಧವ್ ಠಾಕ್ರೆ ಕಳೆದ ಎರಡೂವರೆ ವರ್ಷಗಳಿಂದ ತಮ್ಮನ್ನು ಮನೆಯೊಳಗೂ ಬಿಟ್ಟುಕೊಂಡಿರಲಿಲ್ಲ ಎಂದು ಏಕನಾಥ್ ಶಿಂಧೆ ಆರೋಪಿಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಪ್ರಿಯಾಂಕಾ ಗಾಂಧಿ ವಾದ್ರಾ ಮುಂಬೈನಿಂದ ಮಾಲ್ಡೀವ್ಸ್ಗೆ ಹಾರಿದ್ದಾರೆ ಎಂದು ಹೇಳಲಾಗಿದೆ.
ರಾಜಕೀಯ ಬಿಕ್ಕಟ್ಟಿನ ಮಧ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ ಮುಂಬೈನಲ್ಲಿ ಕೆಲವು ಗಂಟೆಗಳ ಕಾಲ ನಿಂತು ಪರಿಸ್ಥಿತಿಯನ್ನು ಅವಲೋಕಿಸಲು ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ. ಅವರು ಮುಂಬೈನಲ್ಲಿ ಸ್ವಲ್ಪ ಕಾಲ ಕಳೆದರೂ ಸಹ ಯಾವುದೇ ರಾಜಕೀಯ ನಾಯಕರನ್ನು ಭೇಟಿ ಮಾಡದೆಯೇ ಮಾಲ್ಡೀವ್ಸ್ ವಿಮಾನ ಏರಿದ್ದಾರೆ ಎಂದು ವರದಿಯಾಗಿದೆ.
ಎರಡೂವರೆ ವರ್ಷಗಳಲ್ಲಿ ಸೌಜನ್ಯ ತೋರಲಿಲ್ಲ
ಕಳೆದ ಎರಡೂವರೆ ವರ್ಷಗಳಲ್ಲಿ ಈ ಸೌಜನ್ಯವನ್ನು ಎಂದಿಗೂ ತೋರಿಸಿಲ್ಲ ಎಂದು ಬಂಡಾಯ ಶಾಸಕ ಸಂಜಯ್ ಶಿರ್ಸಾತ್ ಅವರು ಏಕನಾಥ್ ಶಿಂಧೆ ಹಂಚಿಕೊಂಡ ಪತ್ರದಲ್ಲಿ ಬರೆದಿದ್ದಾರೆ.
ತಮ್ಮ ಶಾಸಕರಿಂದ ಆಗಾಗ್ಗೆ ಪ್ರವೇಶಿಸಲಾಗದ ಆರೋಪ ಎದುರಿಸುತ್ತಿರುವ ಉದ್ಧವ್ ಠಾಕ್ರೆ ಅವರು ನಿನ್ನೆ ಫೇಸ್‌ಬುಕ್ ಲೈವ್‌ಸ್ಟ್ರೀಮ್‌ನಲ್ಲಿ ತಮ್ಮ ಅಧಿಕೃತ ಮುಖ್ಯಮಂತ್ರಿಯ ಮನೆಯಿಂದ ಕುಟುಂಬದ ಮನೆಯಾದ "ಮಾತೋಶ್ರೀ" ಗೆ ಮರಳುತ್ತಿದ್ದೇನೆ ಎಂದು ಹೇಳಿದ್ದರು.
ಮನೆಯ ಹೊರಗೆ ಗೇಟ್ ಬಳಿ ಕಾದಿದ್ದೆವು
2.5 ವರ್ಷಗಳಿಂದ ನಮಗೆ ಮುಖ್ಯಮಂತ್ರಿ ಮನೆಗೆ ಪ್ರವೇಶ ನಿರಾಕರಿಸಲಾಗಿತ್ತು. ನಾವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮನೆಯ ಹೊರಗಿನ ಗೇಟ್‌ಗಳ ಹೊರಗೆ ಗಂಟೆಗಟ್ಟಲೆ ಕಾಯುವಂತೆ ಮಾಡಲಾಗಿತ್ತು ಎಂದು ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಬಂಡಾಯ ಗುಂಪಿನ ಭಾಗವಾಗಿರುವ ಸಂಜಯ್ ಶಿರ್ಸಾತ್ ಬರೆದಿದ್ದಾರೆ.
ರಾಜೀನಾಮೆಗೆ ಸಿದ್ಧ ಎಂದ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದು "ಅತೃಪ್ತ ಶಾಸಕರಲ್ಲಿ ಒಬ್ಬರು ಮುಂದೆ ಬಂದು ಒತ್ತಾಯಿಸಿದರೆ ರಾಜೀನಾಮೆ ನೀಡಲು ಸಿದ್ಧ" ಎಂದು ಹೇಳಿದ್ದಾರೆ. ತಮ್ಮ ಪಕ್ಷದ 30 ಶಾಸಕರು ಬಂಡಾಯವೆದ್ದ ಏಕನಾಥ್ ಶಿಂಧೆಯನ್ನು ತಮ್ಮ ನಾಯಕ ಎಂದು ಘೋಷಿಸಿದ ಬೆನ್ನಲ್ಲೇ ಶಿವಸೇನಾ ಮುಖ್ಯಸ್ಥ ಠಾಕ್ರೆ ನಾನು ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದಾರೆ.
ಇದನ್ನೂ ಓದಿ: Uddhav Thackeray: ನಾನು ರಾಜೀನಾಮೆಗೆ ಸಿದ್ಧ ಎಂದ ಉದ್ಧವ್ ಠಾಕ್ರೆ! 'ಮಹಾ' ರಾಜಕೀಯದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್
“ನಮ್ಮದೇ ಪಕ್ಷದ ಶಾಸಕರು ಸಿಎಂ ಆದರೆ ನನ್ನ ಬೆಂಬಲ”
ನಾನು ಯಾವತ್ತೂ ಅಧಿಕಾರಕ್ಕೆ ಅಂಟಿ ಕೂತುಕೊಂಡಿಲ್ಲ ಎಂದಿರುವ ಉದ್ಧವ್ ಠಾಕ್ರೆ, ಪಕ್ಷದ ಇನ್ನೊಬ್ಬ ಶಾಸಕನನ್ನು ಸಿಎಂ ಮಾಡೋದಕ್ಕೆ ನಾನು ಸಿದ್ಧ ಅಂತ ಸ್ಪಷ್ಟಪಡಿಸಿದ್ದಾರೆ. "ಹಿಂದುತ್ವವು ನಮ್ಮ ಗುರುತಾಗಿದೆ ಮತ್ತು ಶಿವಸೇನೆ ಎಂದಿಗೂ ಹಿಂದೂತ್ವವನ್ನು ಬಿಡುವುದಿಲ್ಲ" ಅಂತ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ: Tower Theft: ಕೊರೋನಾ ಟೈಂನಲ್ಲಿ 600 ಮೊಬೈಲ್ ಟವರ್ ಕಳ್ಳತನ!
ಮಹಾರಾಷ್ಟ್ರ MLC ಚುನಾವಣೆಯಲ್ಲಿ ಅಡ್ಡ ಮತದಾನದ ನಂತರ ಶಾಸಕ ಏಕನಾಥ್ ಶಿಂಧೆ ಅವರು ಸಿಎಂ ವಿರುದ್ಧ ಬಂಡಾಯವೆದ್ದಿದ್ದಾರೆ. ಸುಮಾರು 34ಕ್ಕೂ ಅಧಿಕ ಸ್ವಪಕ್ಷದ ಶಾಸಕರೊಂದಿಗೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೊದಲು ಗುಜರಾತ್‌ನ ಸೂರತ್‌ನ ಹೋಟೆಲ್‌ನಲ್ಲಿ ಇತರ ಶಾಸಕರೊಂದಿಗೆ ತಂಗಿದ್ದರು. ಬಳಿಕ ಅಲ್ಲಿಂದ ಗುವಾಹಟಿ ತಲುಪಿದ್ದಾರೆ. ಇನ್ನು ಬರೀ 34 ಅಲ್ಲ, ರೆಬೆಲ್ ಶಾಸಕರ ತಂಡದಲ್ಲಿ 46 ಶಾಸಕರು ಇದ್ದಾರೆ ಎನ್ನಲಾಗುತ್ತಿದೆ.
ಶಿವಸೇನೆ ಶಾಸಕನಿಂದ ಗಂಭೀರ ಆರೋಪ
ರೆಬೆಲ್ ಶಾಸಕರ ಜೊತೆ ಹೋಗಿದ್ದ ಶಿವಸೇನೆ ಎಂಎಲ್‌ಎ ನಿತಿನ್ ದೇಶಮುಖ್ ಮುಂಬೈಗೆ ವಾಪಸ್ ಬಂದಿದ್ದಾರೆ. ಏಕಾಏಕಿ ಪ್ರತ್ಯಕ್ಷರಾದ ಅವರು ನನಗೆ ಮತ್ತು ಬರುವ ಇಂಜೆಕ್ಷನ್ ನೀಡಿ, ನನ್ನನ್ನು ಏಕನಾಥ್ ಶಿಂಧೆ ಟೀಂ ಕಿಡ್ನಾಪ್ ಮಾಡಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ