ಮುಂಬೈ: ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಪತನದತ್ತ (Maharashtra Political Process) ಸಾಗುತ್ತಿದೆ. ಈ ಬೆನ್ನಲ್ಲೇ ನಟಿ ಕಂಗನಾ ರನೌತ್ ಅವರ ವಿಡಿಯೋವೊಂದು ವೈರಲ್ ಆಗುತ್ತಿದೆ. ಅರೇ! ಮಹಾರಾಷ್ಟ್ರದ ಉದ್ಧವ್ ಠಾಕ್ರೆ (Maha CM Uddhav Thackeray) ನೇತೃತ್ವದ ಶಿವಸೇನಾ-ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟದ ಸರ್ಕಾರ ಪತನಕ್ಕೂ ಕಂಗನಾ ರನೌತ್ಗೂ ಎತ್ತಣಿಂದೆತ್ತ ಸಂಬಂಧ ಅನಿಸದಿರದು. ಆದರೆ ನೆಟ್ಟಿಗರು ಕಂಗನಾ ರನೌತ್ ಅವರ (Kangana Ranaut Viral Video) ಹಳೆಯ ವಿಡಿಯೋವನ್ನು ಮತ್ತೆ ವೈರಲ್ ಮಾಡಿದ್ದಾರೆ. ಇಲ್ಲದೆ ಆ ವಿಡಿಯೋ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಧವಾರ ತಮ್ಮ ಅಧಿಕೃತ ನಿವಾಸ ವರ್ಷಾವನ್ನು ತೊರೆದು ತಮ್ಮ ಕುಟುಂಬ ನಿವಾಸ ಮಾತೋಶ್ರೀಗೆ ಮರಳಿದ್ದಾರೆ. ಕೂಡಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಹಳೆಯ ವೀಡಿಯೊ ವೈರಲ್ ಆಗಿದೆ.
ನೆನಪಿಟ್ಟುಕೊಂಡಿರಿ! ವಾರ್ನಿಂಗ್ ನೀಡಿದ್ದ ನಟಿ ವಿಡಿಯೋದಲ್ಲಿ ಕಂಗನಾ, "ಉದ್ಧವ್ ಠಾಕ್ರೆ, ನಿಮಗೆ ಏನನಿಸುತ್ತದೆ? ಫಿಲ್ಮ್ ಮಾಫಿಯಾಗಳೊಂದಿಗೆ ಶಾಮೀಲಾಗಿ ನನ್ನ ಮನೆಯನ್ನು ಕೆಡವುದರ ಮೂಲಕ ನೀವು ನನ್ನ ವಿರುದ್ಧ ಸೇಡು ತೀರಿಸಿಕೊಂಡಿದ್ದೀರಿ? ಇಂದು ನನ್ನ ಮನೆಯನ್ನು ಕೆಡವಲಾಗಿದೆ. ಇದು ನಾಳೆ ನಿಮ್ಮ ಹೆಮ್ಮೆಯನ್ನು ನಾಶಪಡಿಸುತ್ತದೆ. ಇದು ಸಮಯಕ್ಕೆ ಸಂಬಂಧಿಸಿದೆ. ನೆನಪಿರಲಿ “ ಎಂದು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.
ನಿಮ್ಮ ನಾಶವು ಗ್ಯಾರಂಟಿ ಎಂದು ಸಿಡಿಮಿಡಿ "ಯಾರು ಮಹಿಳೆಯನ್ನು ಅವಮಾನಿಸಿದರೂ ಅವನ ಅಥವಾ ಅವಳ ಅವನತಿ ಶೀಘ್ರದಲ್ಲೇ ಸಂಭವಿಸುತ್ತದೆ ಎಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ. ರಾವಣ ಸೀತೆಯನ್ನು ಅವಮಾನಿಸಿದ, ಕೌರವರು ದ್ರೌಪದಿಯನ್ನು ಅವಮಾನಿಸಿದರು. ನಾನು ಆ ಮಹಿಳೆಯರಿಗೆ ಎಲ್ಲಿಯೂ ಹತ್ತಿರವಾಗಿಲ್ಲ ಆದರೆ ನಾನು ಕೂಡ ಒಬ್ಬ ಮಹಿಳೆ. ನಾನು ನನ್ನ ಸಮಗ್ರತೆಯನ್ನು ಕಾಪಾಡಿಕೊಂಡಿದ್ದೇನೆ. ನಾನು ಯಾರಿಗೂ ನೋವು ಮಾಡಿಲ್ಲ ... ನೀವು ಮಹಿಳೆಯನ್ನು ಅಗೌರವಿಸಿದಾಗ, ನಿಮ್ಮ ನಾಶವು ಗ್ಯಾರಂಟಿ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಎಂದು ಕಂಗನಾ ರನೌತ್ ಸಿಡಿಮಿಡಿಗೊಂಡು ಆಕ್ರೋಶ ಹೊರಹಾಕಿದ್ದರು.
ಉದ್ಧವ್ ಠಾಕ್ರೆ ಕುರಿತು ಭವಿಷ್ಯ ಟ್ವಿಟರ್ ಬಳಕೆದಾರರು ಕಂಗನಾ ರಣಾವತ್ ಅವರ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು 2020 ರಲ್ಲಿ ಕಂಗನಾ ಅವರ ಕಚೇರಿಯನ್ನು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನೆಲಸಮಗೊಳಿಸಿತ್ತು. ಈ ಸಂದರ್ಭದಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುರಿತು ಭವಿಷ್ಯ ನುಡಿದಿದ್ದರು.
ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸಮ್ಮಿಶ್ರ (Maharashtra Government Crisis) ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಶಿವಸೇನಾ ನಾಯಕ ಏಕನಾಥ್ ಶಿಂಧೆ (Eknath Shinde) ಅವರ ಬಂಡಾಯದಿಂದ ಅಳಿವಿನ ಅಂಚಿನಲ್ಲಿದೆ. ಅಲ್ಲದೇ ಉದ್ಧವ್ ಠಾಕ್ರೆ ಕಳೆದ ಎರಡೂವರೆ ವರ್ಷಗಳಿಂದ ತಮ್ಮನ್ನು ಮನೆಯೊಳಗೂ ಬಿಟ್ಟುಕೊಂಡಿರಲಿಲ್ಲ ಎಂದು ಏಕನಾಥ್ ಶಿಂಧೆ ಆರೋಪಿಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಪ್ರಿಯಾಂಕಾ ಗಾಂಧಿ ವಾದ್ರಾ ಮುಂಬೈನಿಂದ ಮಾಲ್ಡೀವ್ಸ್ಗೆ ಹಾರಿದ್ದಾರೆ ಎಂದು ಹೇಳಲಾಗಿದೆ.
ರಾಜಕೀಯ ಬಿಕ್ಕಟ್ಟಿನ ಮಧ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ ಮುಂಬೈನಲ್ಲಿ ಕೆಲವು ಗಂಟೆಗಳ ಕಾಲ ನಿಂತು ಪರಿಸ್ಥಿತಿಯನ್ನು ಅವಲೋಕಿಸಲು ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ. ಅವರು ಮುಂಬೈನಲ್ಲಿ ಸ್ವಲ್ಪ ಕಾಲ ಕಳೆದರೂ ಸಹ ಯಾವುದೇ ರಾಜಕೀಯ ನಾಯಕರನ್ನು ಭೇಟಿ ಮಾಡದೆಯೇ ಮಾಲ್ಡೀವ್ಸ್ ವಿಮಾನ ಏರಿದ್ದಾರೆ ಎಂದು ವರದಿಯಾಗಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ