Maharashtra Politics Crisis: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು; ಇಂದು ವಿಚಾರಣೆ

ಏಕನಾಥ್ ಶಿಂಧೆ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಇಂದು ವಾದ ಮಂಡನೆ ಮಾಡಲಿದ್ದಾರೆ. ಶಿವಸೇನೆ ಪರವಾಗಿ ಹಿರಿಯ ನ್ಯಾಯವಾದಿಗಳಾದ ಕಪಿಲ್ ಸಿಬಲ್ ಮತ್ತು ದೇವದತ್ತ ಕಾಮತ್ ವಕಾಲತ್ತು ವಹಿಸಲಿದ್ದಾರೆ. ಇಂದಿನ ವಿಚಾರಣೆ ಕುತೂಹಲ ಮೂಡಿಸಿದೆ.

ಏಕನಾಥ್ ಶಿಂಧೆ, ಉದ್ಧವ್ ಠಾಕ್ರೆ

ಏಕನಾಥ್ ಶಿಂಧೆ, ಉದ್ಧವ್ ಠಾಕ್ರೆ

  • Share this:
ನವದೆಹಲಿ, ಜೂ.‌ 27: ದಿನದಿಂದ ದಿನಕ್ಕೆ ಕುತೂಹಲ ಘಟ್ಟ ತಲುಪುತ್ತಿರುವ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು (Maharashtra Political Crisis) ಈಗ ಮತ್ತೊಂದು ಮಗ್ಗಲು ಬದಲಿಸಿದೆ. ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಈಗ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದೆ. ಶಿವಸೇನೆಯ ವಿರುದ್ಧ ಬಂಡೆದ್ದು ಸುಮಾರು 50 ಶಾಸಕರೊಂದಿಗೆ ಗೌಹಾಟಿಯಲ್ಲಿ ಠಿಕಾಣಿ ಹೂಡಿರುವ ಏಕನಾಥ್ ಶಿಂಧೆ (Ekanath Shindhe) ಸುಪ್ರೀಂ ಕೋರ್ಟಿನಲ್ಲಿ ಶಿವಸೇನೆ ಪಕ್ಷದ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Chief Minister Uddhav Thackeray) ಹಾಗೂ ಮಹಾರಾಷ್ಟ್ರ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ವಿರುದ್ಧ ಅರ್ಜಿ ಸಲ್ಲಿಸಿದ್ದು ಇಂದು ಮಹತ್ವದ ವಿಚಾರಣೆ ನಡೆಯಲಿದೆ‌.

ಏಕನಾಥ್ ಶಿಂಧೆ ಅರ್ಜಿಯ ಮನವಿ ಏನು?

1) ತಮ್ಮನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಏಕಾಏಕಿ ವಜಾಗೊಳಿಸಲಾಗಿದೆ. ಹೊಸದಾಗಿ ಅಜಯ್ ಚೌಧರಿಯವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಶಾಸಕಾಂಗ ಪಕ್ಷದ ಸಭೆ ಕರೆಯದೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಿರುವುದು ನಿಯಮಾವಳಿಗಳಿಗೆ ವಿರುದ್ಧವಾಗಿದೆ ಆದುದರಿಂದ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ತಡೆಯಾಜ್ಞೆ ನೀಡಿ.

ಇದನ್ನೂ ಓದಿ:  Bypoll: ಪಂಜಾಬ್ ಉಪಚುನಾವಣೆಯಲ್ಲಿ AAPಗೆ ಭಾರೀ ಮುಖಭಂಗ; ಸಿಎಂ ಮಾನ್ ಕ್ಷೇತ್ರದಲ್ಲೇ ಸೋಲು!

2) ಶಿವಸೇನೆ ನಾಯಕತ್ವದ ವಿರುದ್ಧ ಬಂಡೆದ್ದಿರುವ 16 ಶಾಸಕರನ್ನು ಉಚ್ಚಾಟನೆ ಮಾಡುವಂತೆ ಶಿವಸೇನೆ ಅಧ್ಯಕ್ಷರು ಮಹಾರಾಷ್ಟ್ರದ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಅವರಿಗೆ ಮನವಿ ಮಾಡಿದ್ದಾರೆ. ಈ ದುರುದ್ದೇಶ ಪೂರ್ವಕ ಮನವಿ ಆಧರಿಸಿ ಡೆಪ್ಯುಟಿ ಸ್ಪೀಕರ್ 16 ಶಾಸಕರಿಗೆ ಇಂದು ಸಂಜೆಯೊಳಗೆ ಖುದ್ದು ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ನೋಟೀಸ್ ಕೊಟ್ಟಿದ್ದಾರೆ. ಕೂಡಲೇ ಡೆಪ್ಯುಟಿ ಸ್ಪೀಕರ್ ಆದೇಶಕ್ಕೆ ತಡೆಯಾಜ್ಞೆ ನೀಡಿ.

3) ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇರುವ ಶಿವಸೇನೆ, ಕಾಂಗ್ರೆಸ್ ಮತ್ತು NCPಗಳ ಮೈತ್ರಿ ಸರ್ಕಾರ ಈಗ ಬಹುಮತ ಕಳೆದುಕೊಂಡಿದೆ. ಈ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಕೂಡ ಬಹುಮತ ಕಳೆದುಕೊಂಡಿದ್ದಾರೆ. ಸ್ಪೀಕರ್ ರಾಜೀನಾಮೆ ನೀಡಿರುವುದರಿಂದ ಡೆಪ್ಯುಟಿ ಸ್ಪೀಕರ್ ಈಗ ಉಸ್ತುವಾರಿಯಾಗಿದ್ದೂ ಬಂಡಾಯ ಶಾಸಕರಾದ ನಾವು ಡೆಪ್ಯುಟಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಪ್ರಸ್ತಾಪ ಕಳುಹಿಸಿದ್ದೇವೆ. ಆದರೆ ಅವರು ಖುದ್ದಾಗಿ ಬಂದು ಪ್ರಸ್ತಾವನೆ ಸಲ್ಲಿಸಿಲ್ಲ ಎಂಬ ನೆಪ ಹೇಳುತ್ತಿದ್ದಾರೆ. ಕೂಡಲೇ ಡೆಪ್ಯುಟಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸೂಚನೆ ನೀಡಿ.

4) ಮಹಾರಾಷ್ಟ್ರದಲ್ಲಿ ಈಗ ಶಿವಸೇನೆಯ ವಿರುದ್ಧ ಬಂಡಾಯ ಎದ್ದಿರುವ ಶಾಸಕರಿಗೆ ಭದ್ರತೆ ಇಲ್ಲದಂತಾಗಿದೆ. ಹಿಂದೆ ನೀಡಿದ್ದ ಭದ್ರತೆಯನ್ನೂ ಸರ್ಕಾರ ವಾಪಸ್ ಪಡೆದಿದೆ. ಶಾಸಕರಿಗೆ ಭದ್ರತೆ ಒದಗಿಸುವಂತೆ ಕೂಡಲೇ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ.

ಯಾರು ಯಾರ ಪರ?

ಬಂಡಾಯಗಾರರ ಗುಂಪಿನ ಏಕನಾಥ್ ಶಿಂಧೆ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಇಂದು ವಾದ ಮಂಡನೆ ಮಾಡಲಿದ್ದಾರೆ. ಇನ್ನೊಂದೆಡೆ ಶಿವಸೇನೆಯ ಪರವಾಗಿ ಹಿರಿಯ ನ್ಯಾಯವಾದಿಗಳಾದ ಕಪಿಲ್ ಸಿಬಲ್ ಮತ್ತು ದೇವದತ್ತ ಕಾಮತ್ ವಕಾಲತ್ತು ವಹಿಸಲಿದ್ದಾರೆ. ಇಂದಿನ ಸುಪ್ರೀಂ ಕೋರ್ಟ್ ವಿಚಾರಣೆ ಕುತೂಹಲ ಮೂಡಿಸಿದ್ದು ಮಹಾರಾಷ್ಟ್ರ ರಾಜಕಾರಣದ ಮುಂದಿನ ನಡೆಗಳಿಗೆ ಮುನ್ನುಡಿ ಬರೆಯಲಿದೆ.

ಇದನ್ನೂ ಓದಿ:  Maharashtra Crisis: ಶಿವಸೇನೆಯ ಬಂಡಾಯ ಶಾಸಕರಿಗೆ Y-plus CRPF ಭದ್ರತೆ ನೀಡಿದ ಕೇಂದ್ರ ಸರ್ಕಾರ

ಶಿವಸೇನೆಯ ಬಂಡಾಯ ಶಾಸಕರಿಗೆ Y-plus CRPF ಭದ್ರತೆ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ (Maharashtra Political Crisis) ಮಧ್ಯೆ, ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಕೇಂದ್ರವು 15 ಬಂಡಾಯ ಶಿವಸೇನೆ ಶಾಸಕರಿಗೆ (Shiv Sena MLAs ) ಸಿಆರ್‌ಪಿಎಫ್ (CRPF) ಕಮಾಂಡೋಗಳ ವೈ-ಪ್ಲಸ್ (Y-plus) ಭದ್ರತೆಯನ್ನು ವಿಸ್ತರಿಸಿದೆ.

ಶಿವಸೇನೆಯ ಭಿನ್ನಮತೀಯ ನಾಯಕ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ಸರ್ಕಾರವು ಅವರ ಕುಟುಂಬ ಸೇರಿದಂತೆ 38 ಪಕ್ಷದ ಬಂಡಾಯ ಶಾಸಕರ ನಿವಾಸಗಳಿಂದ ಭದ್ರತೆಯನ್ನು ಹಿಂತೆಗೆದುಕೊಂಡಿದೆ ಎಂದು ಆರೋಪಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
Published by:Mahmadrafik K
First published: