• Home
  • »
  • News
  • »
  • national-international
  • »
  • Crime News: 25 ವರ್ಷ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿದ ವೈಟ್ ಕಾಲರ್ ಕ್ರಿಮಿನಲ್ ಕೊನೆಗೂ ಅರೆಸ್ಟ್

Crime News: 25 ವರ್ಷ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿದ ವೈಟ್ ಕಾಲರ್ ಕ್ರಿಮಿನಲ್ ಕೊನೆಗೂ ಅರೆಸ್ಟ್

ಪೊಲೀಸ್ ( ಸಾಂದರ್ಭಿಕ ಚಿತ್ರ)

ಪೊಲೀಸ್ ( ಸಾಂದರ್ಭಿಕ ಚಿತ್ರ)

1998 ರಲ್ಲಿ ಧೋಲಾಕಿಯಾ ಎಂಬ ಈ ವ್ಯಕ್ತಿಗೆ  44 ವರ್ಷ ವಯಸ್ಸಾಗಿದ್ದಾಗ ಮೊದಲ ಪ್ರಕರಣ ದಾಖಲಾಗಿತ್ತು. ಆಗ ಅವರ ವಿರುದ್ಧ  ಫೋರ್ಜರಿ ಮತ್ತು ವಂಚನೆ ಆರೋಪದಡಿ ಸಂಸ್ಥೆಯ ಮಾಲೀಕರೊಬ್ಬರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

  • Share this:

ಮುಂಬೈ:  ಈ ವ್ಯಕ್ತಿ ಬರೋಬ್ಬರಿ 25 ವರ್ಷಗಳ ಕಾಲ ಪೊಲೀಸರಿಂದ ತಲೆಮರೆಸಿಕೊಂಡಿದ್ದ! ತನ್ನ ನಿಜವಾದ ಹೆಸರು ಮತ್ತು ಗುರುತನ್ನು (Absconding Man) ಒಂದಲ್ಲ ಎರಡಲ್ಲ ಒಟ್ಟು 25 ವರ್ಷಗಳ ಕಾಲ ಮರೆಮಾಚಿಕೊಂಡಿದ್ದ. ಆದರೆ ಕೊನೆಗೂ ಪೊಲೀಸರು 'ವೈಟ್ ಕಾಲರ್' ಕ್ರಿಮಿನಲ್ (White-Collar Criminal) ಎಂದು ಉಲ್ಲೇಖಿಸಲಾದ 66 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ಬ್ಯಾಂಕ್ ಚೆಕ್ ಮತ್ತು ವಂಚನೆ ಆರೋಪದ ಮೇಲೆ ಪೊಲೀಸರು (Maharashtra Police) ಇಷ್ಟು ವರ್ಷ ಹುಡುಕುತ್ತಿದ್ದ ಈ ಆರೋಪಿಯ ಹೆಸರು ಜನಕ್ ಧೋಲಾಕಿಯಾ ಎಂದು  ಪೊಲೀಸರು ತಿಳಿಸಿದ್ದಾರೆ.


ಮುಂಬೈನ ಆರ್‌ಎಕೆ ಮಾರ್ಗ ಪೊಲೀಸರ ಪ್ರಕಾರ ಈತನ ವಿರುದ್ಧ ಮುಂಬೈ, ಪುಣೆ, ಗುಜರಾತ್ ಮತ್ತು ನಾಂದೇಡ್‌ನಲ್ಲಿ 1985 ರಿಂದ 19 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಆದರೆ ಯಾವುದೇ ಪ್ರಕರಣದಲ್ಲೂ ಈವರೆಗೆ ಈ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.


44 ನೇ ವಯಸ್ಸಲ್ಲಿ ಕೇಸ್ ದಾಖಲಾಗಿತ್ತು
1998 ರಲ್ಲಿ ಧೋಲಾಕಿಯಾ ಎಂಬ ಈ ವ್ಯಕ್ತಿಗೆ  44 ವರ್ಷ ವಯಸ್ಸಾಗಿದ್ದಾಗ ಮೊದಲ ಪ್ರಕರಣ ದಾಖಲಾಗಿತ್ತು. ಆಗ ಅವರ ವಿರುದ್ಧ  ಫೋರ್ಜರಿ ಮತ್ತು ವಂಚನೆ ಆರೋಪದಡಿ ಸಂಸ್ಥೆಯ ಮಾಲೀಕರೊಬ್ಬರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.


ಮೊದಲ ಪ್ರಕರಣದಲ್ಲೇ 50 ಸಾವಿರ ವಂಚನೆ
ಪ್ರಕರಣದ ದೂರುದಾರರು ಒಬ್ಬ ಕೆ.ಎಸ್ ಪಿಳ್ಳೈ, ಅವರು ದಾದರ್ ಪ್ರದೇಶದಲ್ಲಿ ಕಂಪನಿಯ ಮಾಲೀಕರಾಗಿದ್ದರು.  ಧೋಲಾಕಿಯಾ  50 ಸಾವಿರ ರೂಪಾಯಿಯ ಬೋಗಸ್ ಚೆಕ್ ನೀಡಿ ಕೆ.ಎಸ್ ಪಿಳ್ಳೈ ಅವರಿಗೆ ವಂಚನೆ ಎಸಗಿದ್ದ. ಸಂತ್ರಸ್ತ ಕೆ.ಎಸ್ ಪಿಳ್ಳೈ ತಾನು ವಂಚನೆಗೊಳಗಾಗಿರುವುದನ್ನು ಅರಿತು ಧೋಲಾಕಿಯಾ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಅಷ್ಟರಲ್ಲಿ ಆರೋಪಿ ಧೋಲಾಕಿಯಾ ತಲೆಮರೆಸಿಕೊಂಡಿದ್ದ.


ತಲೆಮರೆಸಿಕೊಂಡಿದ್ದ ಚಾಲಾಕಿ
ಆ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ ಜಾಮೀನಿನ ಮೇಲೆ ಹೊರಬಂದಿದ್ದ ಈ ಖತರ್ನಾಕ್ ಆರೋಪಿ.  ನಂತರದ ತನ್ನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಸಮನ್ಸ್ ಬಂದಾಗಲೆಲ್ಲಾ ಕಣ್ತಪ್ಪಿಸಿಕೊಂಡಿದ್ದ. ಕೊನೆಗೆ ನ್ಯಾಯಾಲಯ ಧೋಲಾಕಿಯಾ ಪರಾರಿಯಾಗಿದ್ದಾರೆಂದು ನಿರ್ಣಯಿಸಿತ್ತು.


ಆಪರೇಷನ್ ಆಲ್ ಔಟ್ ಶುರುವಾಯ್ತು ನೋಡಿ!
ಆದರೆ 2022ರ ಕೊನೆಯ ವಾರದಲ್ಲಿ ಮುಂಬೈ ಪೊಲೀಸರು 'ಆಪರೇಷನ್ ಆಲ್ ಔಟ್' ಅನ್ನು ಪ್ರಾರಂಭಿಸಿದರು. ತಲೆಮರೆಸಿಕೊಂಡಿರುವ ಎಲ್ಲಾ ಆರೋಪಿಗಳನ್ನು ಬಂಧಿಸಲು ಪೊಲೀಸ್ ಠಾಣೆಗಳಿಗೆ ತಿಳಿಸಲಾಯಿತು.


ಏಳು ಅಧಿಕಾರಿಗಳ ತಂಡ  ಧೋಲಾಕಿಯಾ ಪ್ರಕರಣವನ್ನು ಪುನಃ ತೆರೆದು ತನಿಖೆಯನ್ನು ಪ್ರಾರಂಭಿಸಿತು. ಪಿಐ ನಾರಾಯಣ ಕದಂ, ಪಿಐ ಸುರೇಶ್ ಕಡಗಲ್, ಪಿಐ ರವೀಂದ್ರ ಸಾಬಳೆ, ಪಿಐ ಬಾಳಾಸಾಹೇಬ್ ದಳವಿ, ಪಿಐ ವಿದ್ಯಾ ಯಾದವ್, ಪಿಐ ಸುಶಾಂತ್ ಬಂಕರ್ ಧೋಲಾಕಿಯಾರನ್ನು ಹುಡುಕಲು ನಿರತರಾದರು. ಇದರ ನೇತೃತ್ವವನ್ನು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಲಂಖೆಡೆ ವಹಿಸಿದ್ದರು.


ಇದನ್ನೂ ಓದಿ: Madhya Pradesh: ದೇವಸ್ಥಾನದ ಗೋಪುರಕ್ಕೆ ಡಿಕ್ಕಿ ಹೊಡೆದು ಲಘು ವಿಮಾನ ಪತನ, ಓರ್ವ ಪೈಲಟ್​ ಸಾವು!


ಆತನ ಕ್ರಿಮಿನಲ್ ಇತಿಹಾಸ, ಪುರಾವೆಗಳ ಹಿಂದಿನ ತುಣುಕುಗಳು ಮತ್ತು ಮಾಹಿತಿದಾರರನ್ನು ಬಳಸಿಕೊಂಡು - ಪೊಲೀಸರು ಆರೋಪಿಗಳಿಗಾಗಿ ಹುಡುಕಲಾರಂಭಿಸಿದರು.


ಇದನ್ನೂ ಓದಿ: XBB.1.5: ವಿಶ್ವಕ್ಕೆ ಕೊರೊನಾ ಹೊಸ ಅಲೆಯ ಕಂಟಕ, ಇದೆಷ್ಟು ಅಪಾಯಕಾರಿ? WHO ವರದಿ ಹೀಗಿದೆ!


ಬಾಂದ್ರಾ, ಖಾರ್, ಕೊಲಾಬಾ, ಅಂಧೇರಿ, ಧಾರವಿ ಮತ್ತು ಮುಲುಂಡ್ ಸೇರಿದಂತೆ ಮುಂಬೈನ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ 19 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಮೂರು ಪ್ರಕರಣಗಳು ಗುಜರಾತ್‌ನಲ್ಲಿದ್ದರೆ, ಐದು ಪ್ರಕರಣಗಳು ಪುಣೆಯಲ್ಲಿ ಮತ್ತು ಎರಡು ಪ್ರಕರಣಗಳು ನಾಂದೇಡ್ ಜಿಲ್ಲೆಯಲ್ಲಿದ್ದವು. ಕೊನೆಗೂ ಅಪರಿಚಿತ ಮನೆಯೊಂದರಲ್ಲಿ ಧೋಲಾಕಿಯಾರನ್ನು ಈ ಪೊಲೀಸ್ ತಂಡ ಪತ್ತೆಹಚ್ಚಿದೆ. ಅಂತೂ 25 ವರ್ಷ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಆರೋಪಿ ಕಂಬಿಹಿಂದೆ ಸೇರಿದ್ದಾನೆ.

Published by:ಗುರುಗಣೇಶ ಡಬ್ಗುಳಿ
First published: