Eknath Shinde: ಜುಲೈ 4ರಂದು ಶಿಂಧೆ ಸರ್ಕಾರಕ್ಕೆ ಮಹಾ ಪರೀಕ್ಷೆ! 12ರಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ ಜುಲೈ 4 ಅಂದರೆ ಇದೇ ಬರುವ ಸೋಮವಾರದಂದು ತಮ್ಮ ನೂತನ ಸರ್ಕಾರದ ಬಹುಮತ ಸಾಬೀತು ಮಾಡಬೇಕಿದೆ. ಏಕನಾಥ್ ಶಿಂಧೆ ತಮ್ಮ ಕಡೆ 39 ಶಾಸಕರ ಬೆಂಬಲವಿದ್ದು, ನಮ್ಮದೇ ನಿಜವಾದ ಶಿವಸೇನೆ ಅಂತ ಹೇಳಿಕೊಂಡಿದ್ದರು.

ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ

ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ

  • Share this:
ಮಹಾರಾಷ್ಟ್ರ: ನೂತನ ಸಿಎಂ (New CM) ಏಕನಾಥ್ ಶಿಂಧೆ (Eknath Shindhe) ಪ್ರಾರಂಭದಲ್ಲಿಯೇ ಮಹಾ ಅಗ್ನಿಪರೀಕ್ಷೆ ಎದುರಿಸಬೇಕಿದೆ. ಜುಲೈ 4 ಅಂದರೆ ಇದೇ ಬರುವ ಸೋಮವಾರದಂದು ಏಕನಾಥ್ ಶಿಂಧೆ ತಮ್ಮ ಸರ್ಕಾರದ ಬಹುಮತ ಸಾಬೀತು (Majority Prove) ಮಾಡಬೇಕಿದೆ. ಶಿವಸೇನೆ (Shiv Sena), ಎನ್‌ಸಿಪಿ (NCP) ಹಾಗೂ ಕಾಂಗ್ರೆಸ್ (Congress) ಮೈತ್ರಿ ಸರ್ಕಾರವನ್ನು (Alliance Government) ಬೀಳಿಸಿದ್ದ ಶಿವಸೇನೆ ಬಂಡಾಯ ಶಾಸಕರು (Rebel MLA’s) ಬಿಜೆಪಿ (BJP) ಜೊತೆ ಸೇರಿ ಮತ್ತೊಂದು ಹೊಸ ಮೈತ್ರಿ ಸರ್ಕಾರ ರಚಿಸಿದ್ದರು. ಶಿವಸೇನೆಯ ರೆಬೆಲ್ ಶಾಸಕರ ಬಣದ ನಾಯಕ ಏಕನಾಥ್ ಶಿಂಧೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರೆ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ (Devendra Fadnavis) ಉಪ ಮುಖ್ಯಮಂತ್ರಿಯಾಗಿ (DCM) ಜೂನ್ 30ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಏಕನಾಥ್ ಶಿಂಧೆ ಬಹುಮತ ಸಾಬೀತುಪಡಿಸಬೇಕಿದ್ದು, ಇಂದು ಮತ್ತು ನಾಳೆ ಭಾನುವಾರ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ (Assembly session) ನಿಗದಿಯಾಗಿತ್ತು. ಆದರೆ ಇಂದು ನೂತನ ಸ್ಪೀಕರ್ (Speaker) ಹುದ್ದೆಗೆ ನಾಮಪತ್ರ (Nomination) ಸಲ್ಲಿಕೆಯಾಗಲಿದ್ದು, ಸ್ಪೀಕರ್ ಆಯ್ಕೆಯ ಬಳಿಕ ನಾಳೆ, ನಾಡಿದ್ದು ವಿಶೇಷ ಅಧಿವೇಶನ ನಡೆಯಲಿದೆ. ಹೀಗಾಗಿ ಸೋಮವಾರ, ಜುಲೈ 4ರಂದು ಏಕನಾಥ್ ಶಿಂಧೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಾಗಿದೆ.

ಸೋಮವಾರ ಏಕನಾಥ್ ಶಿಂಧೆಗೆ ‘ಮಹಾ’ ಅಗ್ನಿಪರೀಕ್ಷೆ

ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ ಜುಲೈ 4 ಅಂದರೆ ಇದೇ ಬರುವ ಸೋಮವಾರದಂದು ತಮ್ಮ ನೂತನ ಸರ್ಕಾರದ ಬಹುಮತ ಸಾಬೀತು ಮಾಡಬೇಕಿದೆ. ಏಕನಾಥ್ ಶಿಂಧೆ ತಮ್ಮ ಕಡೆ 39 ಶಾಸಕರ ಬೆಂಬಲವಿದ್ದು, ನಮ್ಮದೇ ನಿಜವಾದ ಶಿವಸೇನೆ ಅಂತ ಹೇಳಿಕೊಂಡಿದ್ದರು. ಇದೀಗ ಅವರ ಬಳಿ ಎಷ್ಟು ಶಾಸರರ ಬಲವಿದೆ ಎನ್ನುವುದು ಸೋಮವಾರ ಗೊತ್ತಾಗಲಿದೆ. ಸೋಮವಾರದ ಮತದಾನದಲ್ಲಿ ಅದು ದೃಢಪಟ್ಟರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಬಿಜೆಪಿ ಮೈತ್ರಿ ಸರ್ಕಾರ ಸುರಕ್ಷಿತವಾಗಿರಲಿದೆ.

ನಾಳೆ, ನಾಡಿದ್ದು ಮಹಾರಾಷ್ಟ್ರ ವಿಧಾನಸಭೆ ವಿಶೇಷ ಅಧಿವೇಶನ

ಮೊದಲು ಇಂದು ಮತ್ತು ನಾಳೆ ಅಂದರೆ ಶನಿವಾರ ಮತ್ತು ಭಾನುವಾರ ಮಹಾರಾಷ್ಟ್ರ ವಿಶೇಷ ಅಧಿವೇಶನ ನಿಗದಿಯಾಗಿತ್ತು. ಕಾಂಗ್ರೆಸ್ ಪಕ್ಷದ ನಾನಾ ಪಟೋಲೆ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದಲೂ ಆ ಸ್ಥಾನ ತೆರವಾಗಿದೆ.

ಇದನ್ನೂ ಓದಿ: Confidence Vote: ವಿಶ್ವಾಸಮತ ಎಂದರೇನು? ಸರ್ಕಾರದ ಅಳಿವು-ಉಳಿವಿನಲ್ಲಿ ಇದರ ಮಹತ್ವವೇನು?

ಹೊಸ ಸ್ಪೀಕರ್ ಆಯ್ಕೆ ಬಳಿಕ ವಿಶ್ವಾಸಮತ ಯಾಚನೆ

ಹೀಗಾಗಿ  ಹೊಸದಾಗಿ ಸ್ಪೀಕರ್ ಆಯ್ಕೆ ನಡೆಯಬೇಕಿದ್ದು, ಬಿಜೆಪಿ ಶಾಸಕ ರಾಹುಲ್ ನರ್ವೇಕರ್ ವಿಧಾನಸಭಾ ಸ್ಪೀಕರ್ ಸ್ಥಾನಕ್ಕಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಒಂದು ವೇಳೆ ಈ ಸ್ಥಾನಕ್ಕೆ ಚುನಾವಣೆ ಅಗತ್ಯವಾದರೆ ಎರಡು ದಿನಗಳ ವಿಶೇಷ ಅಧಿವೇಶನ ಆರಂಭವಾಗುವ ಮೊದಲ ದಿನ, ಅಂದರೆ ಜುಲೈ 3 ರಂದು ಚುನಾವಣೆ ನಡೆಯಲಿದೆ. ಹೀಗಾಗಿ ಸ್ಪೀಕರ್ ಆಯ್ಕೆ ಬಳಿಕವೇ ಏಕನಾಥ್ ಶಿಂಧೆ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ಇದನ್ನೂ ಓದಿ: Explained: ಶಿವಸೇನೆ ಪಕ್ಷ ಹುಟ್ಟಿದ್ದೇಗೆ? ಇಲ್ಲಿದೆ ಇತಿಹಾಸದ ಕುತೂಹಲಕರ ವಿವರ

"ಕೊಟ್ಟ ಮಾತಿಗೆ ತಪ್ಪಿದ ಅಮಿತ್ ಶಾ" ಅಂತ ಉದ್ಧವ್ ಠಾಕ್ರೆ ಕಿಡಿ

ಶಿವಸೇನೆ-ಬಿಜೆಪಿ ಹೊಸ ಮೈತ್ರಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. ಬಿಜೆಪಿ ಅಧಿಕಾರಕ್ಕಾಗಿ ನನ್ನ ಬೆನ್ನಿಗೆ ಚೂರಿ ಹಾಕಿದೆ. ಶಿವಸೇನೆ-ಬಿಜೆಪಿ ಮೈತ್ರಿಯ 2.5 ವರ್ಷಗಳ ಅವಧಿಯಲ್ಲಿ ಶಿವಸೇನೆ ಶಾಸಕರೇ ಮುಖ್ಯಮಂತ್ರಿ ಆಗಿರಬೇಕೆಂದು ನಾನು ಅಮಿತ್ ಶಾಗೆ ಮೊದಲೇ ಹೇಳಿದ್ದೆ. ಅವರು ಆ ಮಾತನ್ನು ಮೊದಲೇ  ನಡೆಸಿಕೊಟ್ಟಿದ್ದರೆ ಮಹಾ ವಿಕಾಸ್ ಅಘಾಡಿ ನಿರ್ಮಾಣ  ಆಗುತ್ತಿರಲಿಲ್ಲ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹರಿಹಾಯ್ದಿದ್ದಾರೆ.
Published by:Annappa Achari
First published: