• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • ರೈಲಿನಲ್ಲಿ ಹೆಂಡತಿ ಮಗುವಿಗೆ ಸೀಟು ಕೇಳಿದ್ದೇ ತಪ್ಪಾಗೋಯ್ತಾ?; ಸಾಯೋ ಹಾಗೆ ಥಳಿಸಿದ ಕ್ರೂರಿಗಳು

ರೈಲಿನಲ್ಲಿ ಹೆಂಡತಿ ಮಗುವಿಗೆ ಸೀಟು ಕೇಳಿದ್ದೇ ತಪ್ಪಾಗೋಯ್ತಾ?; ಸಾಯೋ ಹಾಗೆ ಥಳಿಸಿದ ಕ್ರೂರಿಗಳು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈ ಜಗಳ ಅತಿರೇಕಕ್ಕೆ ತಿರುಗಿ ಮಹಿಳೆಯರು ಹಾಗೂ ಗಂಡಸರು ಸಾಗರ್​ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಸಾಗರ್ ಹೆಂಡತಿ ಜ್ಯೋತಿ ತನ್ನ ಗಂಡನನ್ನು ಕಾಪಾಡುವಂತೆ ಅಲ್ಲಿದ್ದವರ ಬಳಿ ಸಹಾಯ ಕೇಳಿದ್ದಾಳೆ. ಆದರೆ ಯಾರೊಬ್ಬರೂ ಸಹ ಸಾಗರ್​ನನ್ನು ರಕ್ಷಿಸಲು ಮುಂದೆ ಬರಲಿಲ್ಲ.

 • Share this:

  ಪುಣೆ(ಫೆ.14): ರೈಲು, ಬಸ್​ಗಳಲ್ಲಿ ಸೀಟು ಹಿಡಿಯೋಕೆ ಹರಸಾಹಸ ಮಾಡಬೇಕು. ಅದರಲ್ಲೂ ತುಂಬಾ ಜನರು ಹತ್ತುವ ರೈಲುಗಳಲ್ಲಿ ಸೀಟು ಸಿಗೋದು ಕಷ್ಟವೇ ಸರಿ. ಈ ಜನ ಸಂದಣಿಯಲ್ಲಿ ಗರ್ಭಿಣಿಯರು, ಮಕ್ಕಳು ಬಂದರಂತೂ ಅವರ ಕಥೆ ಮುಗಿದಂತೆ. ಮುಂಬೈ-ಲಾಥೂರ್​-ಬೀದರ್​​ ರೈಲಿನಲ್ಲಿ ಸೀಟಿಗಾಗಿ ಜಗಳ ನಡೆದು ಅದು ಕೊಲೆಯಲ್ಲಿ ಅಂತ್ಯ ಕಂಡಿದೆ.


  ರೈಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮಗುವಿಗೆ ಸೀಟು ಕೇಳಿದ್ದ. ಅದು ಅಲ್ಲಿನ ಪ್ರಯಾಣಿಕರಿಗೆ ತಪ್ಪಾಗಿ ಕಾಣಿಸಿತೋ ಏನೋ ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿದ್ದಾರೆ. ಇಂತಹ ಕೃತ್ಯ ಮುಂಬೈ ರೈಲಿನಲ್ಲಿ ನಡೆದಿದೆ.


  ಸಾಗರ್​ ಮಾರ್ಕಂಡ್ ಬುಧವಾರ ರಾತ್ರಿ​ ತನ್ನ ಹೆಂಡತಿ ಜ್ಯೋತಿ ಮತ್ತು 2 ವರ್ಷದ ಮಗುವಿನ ಜೊತೆ ಮುಂಬೈ-ಲಾಥುರ್-ಬೀದರ್​ ಎಕ್ಸ್​ಪ್ರೆಸ್​​ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ. ರೈಲು ಜನರಿಂದ ತುಂಬಿ ತುಳುಕುತ್ತಿತ್ತು. ಆದ ಕಾರಣ ಅವರಿಗೆ ಸೀಟು ಸಿಕ್ಕಿರಲಿಲ್ಲ. ಸಾಗರ್​ ತನ್ನ ಹೆಂಡತಿ ಮಗುವನ್ನು ಕೂರಿಸಲು ಅಲ್ಲಿ ಕುಳಿತಿದ್ದ ಮಹಿಳೆಯರ ಬಳಿ ಸೀಟು ಕೇಳಿದ್ದಾನೆ. ಆದರೆ ಸೀಟು ಬಿಡಲೊಪ್ಪದ ಮಹಿಳೆಯರು ಸಾಗರ್ ಜೊತೆ ಜಗಳಕ್ಕಿಳಿದಿದ್ದಾರೆ.


  ಟ್ರಂಪ್ ಭಾರತದ ಭೇಟಿ, ವ್ಯಾಪಾರ ವೃದ್ಧಿಗೆ ಮಾತುಕತೆ; ದೇಶದ ಡೈರಿ ಉತ್ಪನ್ನಗಳಿಗೆ ತೆರೆಯಲಿದೆಯೇ ಅಮೆರಿಕ ಬಾಗಿಲು?


  ಈ ಜಗಳ ಅತಿರೇಕಕ್ಕೆ ತಿರುಗಿ ಮಹಿಳೆಯರು ಹಾಗೂ ಗಂಡಸರು ಸಾಗರ್​ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಸಾಗರ್ ಹೆಂಡತಿ ಜ್ಯೋತಿ ತನ್ನ ಗಂಡನನ್ನು ಕಾಪಾಡುವಂತೆ ಅಲ್ಲಿದ್ದವರ ಬಳಿ ಸಹಾಯ ಕೇಳಿದ್ದಾಳೆ. ಆದರೆ ಯಾರೊಬ್ಬರೂ ಸಹ ಸಾಗರ್​ನನ್ನು ರಕ್ಷಿಸಲು ಮುಂದೆ ಬರಲಿಲ್ಲ.


  ಡಾಂಟ್​ ಸ್ಟೇಷನ್​ ಬಳಿ ರೈಲು ನಿಲ್ಲಿಸಿದಾಗ ಜ್ಯೋತಿ ರೈಲ್ವೆ ಪೊಲೀಸರ ಸಹಾಯ ಪಡೆದು, ಕೂಡಲೇ ಪಕ್ಕದ ಆಸ್ಪತ್ರೆಗೆ ಸಾಗರ್​ನನ್ನು ರವಾನಿಸಿದ್ದಾರೆ. ತುಂಬಾ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇನ್ನು, ಸಾಯುವ ಹಾಗೆ ಥಳಿಸಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.


  ಆನಂದ್​ ಸಿಂಗ್​ಗೆ ಅರಣ್ಯ ಇಲಾಖೆ ನೀಡಿದ್ದು ಕಳ್ಳನ ಕೈಯಲ್ಲಿ ಕೀಲಿ ಕೊಟ್ಟಂತಾಗಿದೆ; ಹೆಚ್ ಎಂ ರೇವಣ್ಣ

  Published by:Latha CG
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು