Maharashtra HSC 12th Result 2021: ಇಂದು ಮಧ್ಯಾಹ್ನ 2 ಗಂಟೆಗೆ 12ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

mahahsscboard.maharashtra.gov.in, mahresult.nic.in, hscresult.mkcl.org. ಈ ವೆಬ್​ಸೈಟ್​​ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Maharashtra HSC 12th Result 2021: ಮಹಾರಾಷ್ಟ್ರ ಸ್ಟೇಟ್ ಬೋರ್ಡ್​ ಆಫ್​ ಸೆಕೆಂಡರಿ ಆ್ಯಂಡ್ ಹೈಯರ್ ಸೆಕೆಂಡರಿ ಎಜುಕೇಷನ್(MSBSHSE) ಇಂದು ಮಧ್ಯಾಹ್ನ 2 ಗಂಟೆಗೆ 12 ನೇ ತರಗತಿ ಫಲಿತಾಂಶವನ್ನು ಪ್ರಕಟ ಮಾಡಲಿದೆ.  ಬಳಿಕ ಸಂಜೆ 4 ಗಂಟೆಗೆ ಅಧಿಕೃತ ವೆಬ್​ಸೈಟ್​​ನಲ್ಲಿ ವಿದ್ಯಾರ್ಥಿಗಳು ರಿಸಲ್ಟ್​ ಶೀಟ್ ಪಡೆಯಬಹುದಾಗಿದೆ. ಈ ವರ್ಷ ಕೊರೋನಾ ಕಾರಣದಿಂದಾಗಿ ಮಹಾರಾಷ್ಟ್ರ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಗ್ರೇಸ್​ ಮಾರ್ಕ್ಸ್​(ಕೃಪಾಂಕ) ಕೊಟ್ಟು ಪಾಸ್​ ಮಾಡಲು ನಿರ್ಧರಿಸಿದೆ. ಅದರಂತೆ ಇಂದು ಬೋರ್ಡ್​ನ ಅಧಿಕೃತ ವೆಬ್​ಸೈಟ್​​ಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ನೋಡಬಹುದಾಗಿದೆ. mahahsscboard.maharashtra.gov.in, mahresult.nic.in, hscresult.mkcl.org. ಈ ವೆಬ್​ಸೈಟ್​​ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

  ಪ್ರತೀ ಬಾರಿ ಎಸ್​ಎಸ್​ಸಿ (SSC) ರಿಸಲ್ಟ್​ ಘೋಷಣೆ ಮಾಡುವಾಗ ಮಾರ್ಕ್ಸ್​ ಚೆಕ್ ಮಾಡುವ ಲಿಂಕ್​ ಆ ದಿನ ಸಂಜೆವೆರಗೂ ಆ್ಯಕ್ಟೀವ್ ಆಗುತ್ತಿರಲಿಲ್ಲ. ಆದರೆ ಫಲಿತಾಂಶವನ್ನು ಸ್ವಲ್ಪ ಮುಂಚೆಯೇ ಪ್ರಕಟ ಮಾಡುತ್ತಿದ್ದರು. ಈಗ ವೆಬ್​ಸೈಟ್​ ಸ್ವಲ್ಪ ಸುಧಾರಿಸಿದ್ದು, ಅಂತಹ ತೊಂದರೆ ಎದುರಾಗುವುದಿಲ್ಲ ಎಂಬ ನಿರೀಕ್ಷೆ ಇದೆ. ಆದಾಗ್ಯೂ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಕೈಯಲ್ಲೇ ಹಿಡಿದುಕೊಂಡಿದ್ದರೆ ಒಳಿತು. ಯಾರ ಬಳಿ ಅಡ್ಮಿಟ್ ಕಾರ್ಡ್​ ಇಲ್ಲವೋ ಅವರು ತಮ್ಮ ಶಾಲಾ ಮುಖ್ಯಸ್ಥರ ಬಳಿ ರೋಲ್ ನಂಬರ್ ಪಡೆದುಕೊಳ್ಳಿ. ಈ ಬಾರಿ ಪರೀಕ್ಷೆ ನಡೆಸಿಲ್ಲವಾದ್ದರಿಂದ ವಿದ್ಯಾರ್ಥಿಗಳಿಗೆ ಹಾಲ್​ ಟಿಕೆಟ್​ ನೀಡಿಲ್ಲ.

  ಇದನ್ನೂ ಓದಿ:Rape and Murder: ಬಾಲಕಿ ಮೇಲೆ ಅತ್ಯಾಚಾರ, ಕೊಲೆ; ಅಂತ್ಯಸಂಸ್ಕಾರವನ್ನೂ ಮುಗಿಸಿದ ದುಷ್ಕರ್ಮಿಗಳು

  ಮಹಾರಾಷ್ಟ್ರ ಸರ್ಕಾರ ಪರೀಕ್ಷೆ ನಡೆಸದೆ ಸೆಕೆಂಡ್ ಪಿಯು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ಮಾಡುತ್ತಿರುವುದು ಇದೇ ಮೊದಲು. 30:30:30 ಅನುಪಾತದಲ್ಲಿ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲು ರಾಜ್ಯ ನಿರ್ಧರಿಸಿದೆ. ಇದು ಸಿಬಿಎಸ್​​ಇ ಮಾದರಿಯಲ್ಲೇ ಇರುತ್ತದೆ. ವಿದ್ಯಾರ್ಥಿಗಳ 10, 11ನೇ ತರಗತಿ ಅಂಕಗಳೊಂದಿಗೆ 12 ನೇ ತರಗತಿ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

  ಇಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಸುದ್ದಿಗೋಷ್ಠಿಯಲ್ಲಿ 12ನೇ ತರಗತಿ ಫಲಿತಾಂಶವನ್ನು ಪ್ರಕಟ ಮಾಡಲಾಗುತ್ತದೆ. ಬಳಿಕ 4 ಗಂಟೆಗೆ ವಿದ್ಯಾರ್ಥಿಗಳು ಅಧಿಕೃತ ವೆಬ್​ಸೈಟ್​​ನಲ್ಲಿ ತಮ್ಮ ರಿಸಲ್ಟ್ ನೋಡಬಹುದಾಗಿದೆ.

  ಇದನ್ನೂ ಓದಿ:ಕೋವಿಡ್ -19 ಡೆಲ್ಟಾ ಪ್ಲಸ್ ರೂಪಾಂತರದ ವಿರುದ್ಧವೂ ಕೋವ್ಯಾಕ್ಸಿನ್‌ ಪರಿಣಾಮಕಾರಿ; ICMR ಅಧ್ಯಯನ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Latha CG
  First published: