ಮಹಾರಾಷ್ಟ್ರ-ಕಂಗನಾ ರನೌತ್‌ ಜಟಾಪಟಿ; ಗೃಹ ಸಚಿವ ಅನಿಲ್‌ ದೇಶ್‌ಮುಖ್‌ಗೆ ಬೆದರಿಕೆ ಕರೆಗಳು!

ಪ್ರಸ್ತುತ ನಟಿ ಕಂಗನಾ ರನೌತ್‌ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದು, ಹಿಮಾಚಲ ಪ್ರದೇಶದಿಂದ ಸಚಿವರಿಗೆ ಮಂಗಳವಾರ ಐದು ಅಥವಾ ಅದಕ್ಕಿಂತ ಹೆಚ್ಚು ಕರೆಗಳು ಬಂದಿವೆ. ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಅವರಿಗೆ ಇನ್ನೂ ಎರಡು ಬೆದರಿಕೆ ಕರೆಗಳು ಬಂದಿವೆ" ಎಂದು ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.

ಗೃಹ ಸಚಿವ ಅನಿಲ್‌ ದೇಶ್‌ಮುಖ್‌.

ಗೃಹ ಸಚಿವ ಅನಿಲ್‌ ದೇಶ್‌ಮುಖ್‌.

  • News18
  • Last Updated :
  • Share this:
ಮುಂಬೈ (ಸೆಪ್ಟೆಂಬರ್‌ 09); ಬಾಲಿವುಡ್ ನಟಿ ಕಂಗನಾ ರನೌತ್ ಅವರ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ನಿಲುವಿನ ಬಗ್ಗೆ ಆರೋಪಿಸಿ ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಸಚಿವ ಅನಿಲ್ ದೇಶ್ಮುಖ್ ಅವರಿಗೆ ಮಂಗಳವಾರ ಮತ್ತು ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಹಿಮಾಚಲ ಪ್ರದೇಶ ಮತ್ತು ದೇಶದ ಬೇರೆ ಬೇರೆ ಸ್ಥಳಗಳಿಂದ ಕರೆಗಳು ಆಗಮಿಸಿದ್ದು ಈ ಕರೆಗಳಲ್ಲಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ನಂಬಿಕಾರ್ಹ ಮೂಲಗಳು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿವೆ. ಹೀಗೆ ಕರೆ ಮಾಡಿದವರು ನಟಿಗೆ ಸಂಬಂಧಿಸಿದ ವಿವಾದದಲ್ಲಿ ಗೃಹ ಸಚಿವರು ತಲೆಹಾಕದಂತೆಯೂ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ನಟ ಸುಶಾಂತ್ ಸಾವಿನ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಆರೋಪಿಸಿದ್ದ ನಟಿ ಕಂಗನಾ ರನೌತ್ ಇತ್ತೀಚೆಗೆ ಟ್ವಿಟರ್‌ನಲ್ಲಿ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹೋಲಿಸಿ ಸುದ್ದಿಯಾಗಿದ್ದರು. ನಟಿಯ ಟ್ವೀಟ್‌ಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್, “ತಮಗೆ ಮುಂಬೈನಲ್ಲಿ ರಕ್ಷಣೆ ಇಲ್ಲ, ಇದು ಬದುಕಲು ಸುರಕ್ಷಿತ ಜಾಗವಲ್ಲ ಎಂಬ ಸಂಶಯ ನಿಮಗಿದ್ದರೆ ನಿಮಗೆ ಇಲ್ಲಿ ನೆಲೆಸುವ ಹಕ್ಕಿಲ್ಲ” ಎಂದು ತಿರುಗೇಟು ನೀಡಿದ್ದರು.

ಇದರ ಬೆನ್ನಿಗೆ ನಟಿ ಕಂಗನಾ ರನೌತ್ ಸಹ ಸಚಿವರ ವಿರುದ್ಧ ಕಿಡಿಕಾರಿದ್ದರು. "ನಾನು ಮಹಾರಾಷ್ಟ್ರಕ್ಕೆ ಬರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ವಿಮಾನ ನಿಲ್ದಾಣ ಬರುತ್ತಿದ್ದಂತೆ ನಿಮಗೆ ಮಾಹಿತಿ ನೀಡುತ್ತೇನೆ. ನನ್ನನ್ನು ಹೇಗೆ ತಡೆಯುತ್ತೀರಿ ಎಂಬುದನ್ನು ನೋಡುತ್ತೇನೆ" ಎಂದು ಸವಾಲು ಹಾಕಿದ್ದರು.

ಪ್ರಸ್ತುತ ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದು, ಹಿಮಾಚಲ ಪ್ರದೇಶದಿಂದ ಸಚಿವರಿಗೆ ಮಂಗಳವಾರ ಐದು ಅಥವಾ ಅದಕ್ಕಿಂತ ಹೆಚ್ಚು ಕರೆಗಳು ಬಂದಿವೆ. ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಅವರಿಗೆ ಇನ್ನೂ ಎರಡು ಬೆದರಿಕೆ ಕರೆಗಳು ಬಂದಿವೆ" ಎಂದು ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.

ಇದನ್ನೂ ಓದಿ : Fact Check: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಯಿತೇ? ವೈರಲ್ ವಿಡಿಯೋ ಅಸಲಿಯತ್ತೇನು?

ಕರೆ ಮಾಡಿದವರಲ್ಲಿ ಒಬ್ಬರು ತಮ್ಮನ್ನು ಮೃತ್ಯುಂಜಯ್ ಗರ್ಗ್ ಎಂದು ಗುರುತಿಸಿಕೊಂಡಿದ್ದು, ನಟಿಯನ್ನು ಒಳಗೊಂಡ ವಿವಾದದಲ್ಲಿ ತಾವು ಭಾಗಿಯಾಗದಂತೆ ಸಚಿವರಿಗೆ ಎಚ್ಚರಿಕೆ ನೀಡಿದ್ದಾನೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಈ ಹಿಂದೆಯು ದೇಶ್‌ಮುಖ್‌ ಅವರಿಗೆ ಈ ರೀತಿಯ ಬೆದರಿಕೆ ಕರೆಗಳು ಬಂದಿದ್ದು, ಅನಾಮಧೇಯ ವ್ಯಕ್ತಿಯೊಬ್ಬ ಅವರ ನಾಗ್ಪುರ ಕಚೇರಿಗೆ ಫೋನ್ ಮಾಡಿ ತನಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಅವರಿಗೂ ಬೆದರಿಕೆ ಹಾಕಿದ್ದಾನೆ ಎಂದು ಸ್ವತಃ ಸಚಿವರು ಸೋಮವಾರ ತಿಳಿಸಿದ್ದರು.
Published by:MAshok Kumar
First published: