HOME » NEWS » National-international » MAHARASHTRA GOVT THINKS OF MAKING LAW TO REINTRODUCE BALLOT PAPERS IN ELECTIONS SNVS

ಚುನಾವಣೆಯಲ್ಲಿ ಬ್ಯಾಲಟ್ ಪೇಪರ್​ಗೆ ಮಹಾ ಯತ್ನ; ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ

ಚುನಾವಣೆಯಲ್ಲಿ ಮತಪತ್ರ ಬಳಸುವ ಅವಕಾಶ ನೀಡುವ ಕಾನೂನು ರೂಪಿಸಲು ಮಹಾರಾಷ್ಟ್ರ ಸರ್ಕಾರ ಯೋಜಿಸಿದೆ. ಮುಂಬರುವ ರಾಜ್ಯ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದೆ.

news18
Updated:February 3, 2021, 12:55 PM IST
ಚುನಾವಣೆಯಲ್ಲಿ ಬ್ಯಾಲಟ್ ಪೇಪರ್​ಗೆ ಮಹಾ ಯತ್ನ; ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
  • News18
  • Last Updated: February 3, 2021, 12:55 PM IST
  • Share this:
ಮುಂಬೈ(ಫೆ. 03): ಇವಿಎಂ ಮತಯಂತ್ರದ ಬಗ್ಗೆ ಅಪಸ್ವರ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಚುನಾವಣೆಯಲ್ಲಿ ಬ್ಯಾಲಟ್ ಪೇಪರ್ (ಮತಪತ್ರ) ಬಳಕೆಯ ವ್ಯವಸ್ಥೆಯ ತರಲು ಮುಂದಡಿ ಇಟ್ಟಿದೆ. ಈ ಸಂಬಂಧ ಮಸೂದೆ ರೂಪಿಸಲು ಸಿದ್ಧತೆ ನಡೆದಿದೆ. ಮುಂದಿನ ತಿಂಗಳು ಪ್ರಾರಂಭವಾಗಲಿರುವ ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ನಾನಾ ಪಟೋಲೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬ್ಯಾಲೆಟ್ ಪೇಪರ್ ಚುನಾವಣೆಗೆ ಮಸೂದೆ ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ. ಈ ಕಾಯ್ದೆ ಜಾರಿಗೆ ಬಂದರೆ ಎವಿಎಂ ಜೊತೆ ಬ್ಯಾಲಟ್ ಪೇಪರ್​ನಿಂದಲೂ ಚುನಾವಣೆ ನಡೆಸುವ ಮೊದಲ ರಾಜ್ಯ ಮಹಾರಾಷ್ಟ್ರ ಎನಿಸಲಿದೆ.

ಚುನಾವಣೆಯಲ್ಲಿ ಮತಪತ್ರ ಬಳಕೆಯ ಮಸೂದೆಗೆ ಅನುಮೋದನೆ ಸಿಕ್ಕ ನಂತರ ಮಹಾರಾಷ್ಟ್ರದಲ್ಲಿ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಾತ್ರ ಬ್ಯಾಲಟ್ ಪೇಪರ್​ಗಳನ್ನ ಬಳಸುವ ಅವಕಾಶ ಇರುತ್ತದೆ. ಲೋಕಸಭಾ ಚುನಾವಣೆ ಇವಿಎಂನಲ್ಲಿ ನಡೆಯುತ್ತದೆ.

ಇದನ್ನೂ ಓದಿ: ತೇಜಸ್ ಯುದ್ಧವಿಮಾನ ಖರೀದಿಗೆ ಹೆಚ್ಎಎಲ್ ಜೊತೆ 48,000 ಕೋಟಿ ರೂ ಒಪ್ಪಂದಕ್ಕೆ ಸಹಿ

ಮಹಾರಾಷ್ಟ್ರ ಸರ್ಕಾರದ ಈ ನಡೆ ರಾಜಕೀಯವಾಗಿ ಮಹತ್ವವಾಗಿದೆ. ಬಿಜೆಪಿ ವಿರುದ್ಧ ಎಲ್ಲಾ ರೀತಿಯ ಅಸ್ತ್ರಗಳನ್ನ ಬಿಡುತ್ತಲೇ ಇರುವ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಆಘಾಡಿ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಇದು ಪ್ರಬಲ ಅಸ್ತ್ರವಾಗಿದೆ. ಶಿವಸೇನೆಗೆ ಇದು ಬಿಜೆಪಿಗೆ ಸೆಡ್ಡು ಹೊಡೆಯುವ ಮತ್ತೊಂದು ಅವಕಾಶವಾಗಿದೆ. ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಈ ಮೂರೂ ಪಕ್ಷಗಳು ಇವಿಎಂ ವಿರುದ್ಧ ಮೊದಲಿಂದಲೂ ಅಪಸ್ವರ ಎತ್ತುತ್ತಾ ಬ್ಯಾಲಟ್ ಪರ ಬ್ಯಾಟ್ ಬೀಸುತ್ತಲೇ ಬಂದಿವೆ. ಹೀಗಾಗಿ, ಈ ಹೊಸ ಕಾನೂನು ರೂಪಿಸಲು ಪ್ರಯತ್ನವಾಗುತ್ತಿದೆ.

ಪಂಚಾಯಿತಿ ಚುನಾವಣೆಗಳಲ್ಲಿ ಕೆಲ ಸಂದರ್ಭದಲ್ಲಿ ಬ್ಯಾಲಟ್ ಪೇಪರ್ ಬಳಕೆ ಮಾಡಲಾಗುತ್ತದೆ. ಆದರೆ, ದಶಕಗಳ ಹಿಂದೆ ಎವಿಎಂ ಮತಯಂತ್ರ ಬಂದ ಬಳಿಕ ಎಲ್ಲಾ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಎವಿಎಂ ಮೂಲಕವೇ ನಡೆದಿವೆ. ಮತಪತ್ರ ಬಳಸುವುದೋ ಮತ ಯಂತ್ರ ಬಳಸುವುದೋ ಎಂಬುದನ್ನು ನಿರ್ಧರಿಸುವ ಕಾನೂನು ರೂಪಿಸುವ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ಸಂವಿಧಾನದ ಆರ್ಟಿಕಲ್ 328 ನೀಡುತ್ತದೆ.

ಇದನ್ನೂ ಓದಿ: ಭಾರತದೊಂದಿಗಿನ ಬಂದರು ಅಭಿವೃದ್ಧಿ ಒಪ್ಪಂದ ರದ್ದುಗೊಳಿಸಿ ಶಾಕ್ ಕೊಟ್ಟ ಶ್ರೀಲಂಕಾ

ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರುವ ಹಾಗೂ ಮತಪತ್ರಗಳ ಪಾರದರ್ಶಕತೆ ಬಗ್ಗೆ ನಂಬಿಕೆ ಇರುವ ಜನರಿಗೆ ಮಹಾರಾಷ್ಟ್ರ ಸರ್ಕಾರದ ಈ ನಡೆ ಸಂತಸ ತರಲಿದೆ ಎಂದು ಮಹಾ ಸ್ಪೀಕರ್ ನಾನಾ ಪಟೋಲೆ ಹೇಳಿದ್ದಾರೆ.
Published by: Vijayasarthy SN
First published: February 3, 2021, 12:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories