news18-kannada Updated:January 26, 2021, 9:00 PM IST
ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗ ಹಾರಾಡಿದ ಕನ್ನಡ ಧ್ವಜ
ಬೆಳಗಾವಿ(ಜ, 26)- ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕರ್ನಾಟಕ ಗಡಿ ಭಾಗವನ್ನು ಕರ್ನಾಟಕ ಆಕ್ರಮಿತ ಪ್ರದೇಶ ಎನ್ನುವ ಮೂಲಕ ವಿವಾದ ಸೃಷ್ಟಿಸಿದರು. ನಂತರ ಕರ್ನಾಟಕ ಗಡಿಯಲ್ಲಿ ಶಿವಸೇನೆ ಸೇನೆ ಕಾರ್ಯಕರ್ತರು ಪುಂಡಾಟ ಪ್ರದರ್ಶನ ಮಾಡಿದ್ದರು. ಇದೀಗ ಮತ್ತೊಮ್ಮೆ ಗಡಿ ವಿವಾದದ ಕಿಡಿಯನ್ನು ಬೇರೆ ಸ್ವರೂಪದ ಮೂಲಕ ಹೊತ್ತಿಸಲು ಮಹಾರಾಷ್ಟ್ರ ಸಿದ್ಧವಾಗಿದೆ. ನಾಳೆ ಗಡಿ ವಿವಾದ ಒಳಗೊಂಡ ಪುಸ್ತಕ ಬಿಡುಗಡೆ ಆಗಲಿದ್ದು, ಈ ವೇಳೆ ಮಹಾರಾಷ್ಟ್ರದ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಲಿದ್ದಾರೆ. ಬೆಳಗಾವಿ ಗಡಿ ವಿಚಾರದಲ್ಲಿ ಶಿವಸೇನೆ, ಎಂಇಎಸ್ ಕಾಲು ಕೆರೆದು ಜಗಳಕ್ಕೆ ಬರುವುದು ಹೊಸದೆನಲ್ಲ. ಮಹಾರಾಷ್ಟ್ರ ಈ ಮೂಲಕ ತಮ್ಮ ಬೆಳೆ ಬೆಯಿಸಿಕೊಳ್ಳು ನಿರಂತರ ಪ್ರಯತ್ನ ನಡೆಯುತ್ತವೆ. ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿ ಪಿ ಸರ್ಕಾರ ರಚನೆಯಾದ ಬಳಿಕ ವಿವಾದಕ್ಕೆ ತುಪ್ಪ ಸುರಿಯುವ ನಿರಂತರ ಪ್ರಕ್ರಿಯೆಗಳ ನಡೆಯುತ್ತಿವೆ. ಇದೀಗ ಮಹಾರಾಷ್ಟ್ರ ಸರ್ಕಾರ ಗಡಿ ವಿವಾದ ಬಗ್ಗೆ ಲೇಖಕ ಸಂಗ್ರಹ ಮಾಡಿ ಪುಸ್ತಕ ಸಿದ್ಧ ಮಾಡಲಾಗಿದೆ. ಈ ಪುಸ್ತಕವನ್ನು ಜ. 27 ಅಂದರೆ, ನಾಳೆ ಬೆಳಗ್ಗೆ 12ಕ್ಕೆ ಮುಂಬೈ ಸರ್ಕಾರ ಮಂತ್ರಾಲಯದಲ್ಲಿ ಬಿಡುಗಡೆ ಮಾಡಲಿದೆ.
ಮಹಾರಾಷ್ಟ್ರ ಕರ್ನಾಟಕ ಸೀಮಾವಾದ- ಸಂಘರ್ಷ ಆನಿ ಸಂಕಲ್ಪ' ಎನ್ನುವ ಪುಸ್ತಕ ಇದಾಗಿದೆ. ಈ ಸಮಾರಂಭದಲ್ಲಿ ಮಹಾರಾಷ್ಟ್ರ ಎಲ್ಲಾ ಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಲಿದ್ದಾರೆ. ಎನ್ ಸಿ ಪಿ ನಾಯಕ ಶರದ್ ಪವಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಿಎಂ ಉದ್ಧವ್ ಠಾಕ್ರೆ, ವಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್, ಡಿಸಿಎಂ ಅಜಿತ್ ಪವಾರ ಸೇರಿ ಅನೇಕರು ಭಾಗಿಯಾಗಲಿದ್ದಾರೆ. ಈ ಮೂಲಕ ಬೆಳಗಾವಿ ಗಡಿ ವಿಚಾರವಾಗಿ ನಾವೆಲ್ಲ ಒಂದೇ ಎನ್ನುವ ಸಂದೇಶ ನೀಡಲಿದ್ದಾರೆ.
ಇದನ್ನು ಓದಿ: ರಾಜೀನಾಮೆ ನೀಡಲ್ಲ; ನನ್ನ ನಿಗಮದ ಮೇಲೆ ಕಣ್ಣಿಟ್ಟವರಿಂದ ಈ ವದಂತಿ; ರಾಜೂಗೌಡ
ಬೆಳಗಾವಿ ಗಡಿ ವಿವಾದದ ಕೇಸ್ ಸುಪ್ರೀಂ ಅಂಗಳದಲ್ಲಿ ಇದ್ದು. ಈ ಪ್ರಕರಣ ಬಗ್ಗೆ ಮಹಾರಾಷ್ಟ್ರ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಿದೆ. ಇಬ್ಬರು ಸಚಿವರನ್ನು ಗಡಿ ಉಸ್ತುವಾರಿಗಾಗಿ ನೇಮಕ ಮಾಡಲಾಗಿದೆ. ಕಳೆದ 16 ವರ್ಷಗಳಿಂದ ಗಡಿ ವಿವಾದ ಕೇಸ್ ಸುಪ್ರೀಂ ಕೋರ್ಟ್ ನಲ್ಲಿ ಅಡ್ಮಿಟ್ ಆಗಿಲ್ಲ. ವಿವಾದ ಇತ್ಯರ್ಥ ಅಧಿಕಾರ ಸುಪ್ರೀಂ ಕೋರ್ಟ್ ಹಾಗೂ ಸಂಸತ್ತಿಗೆ ಇದೆಯಾ ಎಂಬ ಬಗ್ಗೆ ಮಾತ್ರ ವಾದ ವಿವಾದ ನಡೆದಿದೆ.
ಮಹಾರಾಷ್ಟ್ರ ಶಿವಸೇನೆ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬಳಿಕ ಗಡಿ ವಿವಾದಕ್ಕೆ ಹೆಚ್ಚಿ ಮಹತ್ವ ನೀಡಲಾಗಿದೆ. ಆದರೇ ರಾಜ್ಯ ಸರ್ಕಾರ ಮಾತ್ರ ಈವರೆಗೆ ಗಡಿ ಉಸ್ತುವಾರಿ ಸಚಿವರ ನೇಕಮ ಮಾಡಲ್ಲ. ಗಡಿ ಸಂರಕ್ಷಣಾ ಆಯೋಗದ ಕಚೇರಿ ಬೆಳಗಾವಿ ಶಿಫ್ಟ್ ಮಾಡಬೇಕು. ಕೇವಲ ಮಹಾಜನ್ ವರದಿ ಅಂತಿಮ ಎಂದು ಮಾತ್ರ ನಾಯಕರು ಹೇಳುತ್ತಿದ್ದಾರೆ. ಇದು ಗಡಿ ಕನ್ನಡಿಗರ ಆತಂಕಕ್ಕೆ ಕಾರಣವಾಗಿದ್ದು, ಸರ್ಕಾರ ಶೀಘ್ರದಲ್ಲೇ ಎಚ್ಚರಿಕೆ ಹೆಜ್ಜೆ ಇಡುವ ಬಗ್ಗೆ ಸಭೆ ನಡೆಸಬೇಕು ಎಂದು ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದ್ದಾರೆ.
Published by:
Seema R
First published:
January 26, 2021, 9:00 PM IST