• Home
  • »
  • News
  • »
  • national-international
  • »
  • Vande Mataram: ಹೆಲೋ ಬದಲಿಗೆ ವಂದೇ ಮಾತರಂ ಹೇಳಿ; ಸರ್ಕಾರದ ಖಡಕ್ ಆದೇಶ

Vande Mataram: ಹೆಲೋ ಬದಲಿಗೆ ವಂದೇ ಮಾತರಂ ಹೇಳಿ; ಸರ್ಕಾರದ ಖಡಕ್ ಆದೇಶ

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಈ ಆದೇಶವು ಸರ್ಕಾರಿ, ಅರೆಸರ್ಕಾರಿ, ಸ್ಥಳೀಯ ನಾಗರಿಕ ಸಂಸ್ಥೆಗಳು, ಅನುದಾನಿತ ಶಾಲೆಗಳು, ಕಾಲೇಜುಗಳು ಇತ್ಯಾದಿಗಳಿಗೆ ಅನ್ವಯಿಸುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

  • Share this:

ಮುಂಬೈ: ಸರ್ಕಾರಿ ನೌಕರರು ಇನ್ಮೇಲೆ ಫೋನ್‌ನಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಮತ್ತು ‘ವಂದೇ ಮಾತರಂ’ ನೊಂದಿಗೆ (Vande Mataram) ಮಾತನ್ನು ಆರಂಭಿಸಬೇಕು ಎಂದು ಮಹಾರಾಷ್ಟ್ರದ ಸರ್ಕಾರ (Maharashtra Government) ಆದೇಶಿಸಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಹಾತ್ಮಾ ಗಾಂಧಿಯವರ ಜನ್ಮದಿನವಾದ (Gandhi Jayanti 2022) ಅಕ್ಟೋಬರ್ 2 ರಂದು ಜಾರಿಗೆ ಬರಲಿರುವ ಬದಲಾವಣೆಯ ಕುರಿತು ಮಹಾರಾಷ್ಟ್ರ ಸಾಮಾನ್ಯ ಆಡಳಿತ ಇಲಾಖೆ ಶನಿವಾರ ಸುತ್ತೋಲೆ ಹೊರಡಿಸಿದೆ. ಈ ಆದೇಶವು ಸರ್ಕಾರಿ, ಅರೆಸರ್ಕಾರಿ, ಸ್ಥಳೀಯ ನಾಗರಿಕ ಸಂಸ್ಥೆಗಳು, ಅನುದಾನಿತ ಶಾಲೆಗಳು, ಕಾಲೇಜುಗಳು ಇತ್ಯಾದಿಗಳಿಗೆ ಅನ್ವಯಿಸುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.


ಈವರೆಗೆ ಒಬ್ಬರಿಗೊಬ್ಬರು ಶುಭಾಶಯ ಕೋರಲು ಯಾವುದೇ ಸರ್ಕಾರಿ ನಿಯಮಗಳಿರಲಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಸುತ್ತೋಲೆಯಲ್ಲಿ, ಯಾವುದೇ ಅರ್ಥವಿಲ್ಲದ ಮತ್ತು ಯಾವುದೇ ಭಾವನೆಯನ್ನು ಪ್ರಚೋದಿಸದ 'ಹಲೋ' ಪದವನ್ನು ಕೇವಲ ಔಪಚಾರಿಕವಾಗಿ ಬಳಸಲಾಗುತ್ತದೆ. 'ವಂದೇ ಮಾತರಂ' ಹೇಳುವುದು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಮತ್ತು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು  ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Football Match: ಫುಟ್​ಬಾಲ್ ಪಂದ್ಯದಿಂದ 127 ಜನರು ದುರ್ಮರಣ; 180 ಜನರಿಗೆ ಗಾಯ


ರಾಷ್ಟ್ರದ ಕುರಿತು ಹೆಮ್ಮೆ ತರಿಸುತ್ತದೆ
"ವಂದೇ ಮಾತರಂ" ಎಂದು ಹೇಳುವುದು ರಾಷ್ಟ್ರದ ಕುರಿತು ಹೆಮ್ಮೆಯನ್ನು ಉಂಟುಮಾಡುತ್ತದೆ ಎಂದು ಸುತ್ತೋಲೆ ಹೇಳಿದೆ. ಆದರೂ, 'ವಂದೇ ಮಾತರಂ' ಮೂಲಕವೇ ಮಾತು ಶುರುಮಾಡಬೇಕೆಂಬುದು ಕಡ್ಡಾಯವಲ್ಲ ಎಂದು ಸಹ ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Gandhi Jayanti 2022: ಮಹಾತ್ಮಾ ಗಾಂಧಿ ಜನ್ಮದಿನ; ಪಿಎಂ ಮೋದಿ ಸೇರಿ ಹಲವರಿಂದ ಸ್ಮರಣೆ


ಮಹಾರಾಷ್ಟ್ರದ ಸಚಿವ ಸುಧೀರ್ ಮುಂಗಂತಿವಾರ್ ಅವರು ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಹೆಲೊ ಬದಲಿಗೆ ವಂದೇ ಮಾತರಂ ಬಳಸುವ ಕುರಿತು ಪ್ರಸ್ತಾಪಿಸಿದ್ದರು. ಅಲ್ಲದೇ ರಾಷ್ಟ್ರೀಯತೆಯನ್ನು ಪ್ರತಿಬಿಂಬಿಸುವ ಯಾವುದೇ ಸಮಾನ ಪದವನ್ನು ಬಳಸಬಹುದು ಎಂದು ಸಹ ಮಹಾರಾಷ್ಟ್ರದ ಸಚಿವ ಸುಧೀರ್ ಮುಂಗಂತಿವಾರ್ ಸೂಚಿಸಿದ್ದರು.


ವಂದೇ ಮಾತರಂ ಆದೇಶದ ವಿರುದ್ಧ ಶುರುವಾಯಿತು ವಿವಾದ
ಬಾಳಾ ಠಾಕ್ರೆಯವರ ಕಾಲದಿಂದಲೂ ರಾಜ್ಯವು ಯಾವಾಗಲೂ 'ಜೈ ಮಹಾರಾಷ್ಟ್ರ' ಶುಭಾಶಯಗಳನ್ನು ಹೊಂದಿತ್ತು ಮುಸ್ಲಿಮರನ್ನು ಧ್ರುವೀಕರಣಗೊಳಿಸಲು 'ವಂದೇ ಮಾತರಂ' ಎಂಬ ಈ ಹೊಸ ಅಭಿಯಾನವನ್ನು ಪರಿಚಯಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಭಾನುವಾರ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ. 


ಜೈ ಮಹಾರಾಷ್ಟ್ರ ಅನ್ನೋದು ಪಾಪವೇ?
“ನಾನು ಬಾಳಾ ಠಾಕ್ರೆ ಅವರನ್ನು ಒಮ್ಮೆ ಅಥವಾ ಎರಡು ಬಾರಿ ಭೇಟಿಯಾಗಿದ್ದೆ. ಅವರು ಯಾವಾಗಲೂ ‘ಜೈ ಮಹಾರಾಷ್ಟ್ರ’ ಎಂದು ಹೇಳುತ್ತಿದ್ದರು. ಸಿಎಂ ಶಿಂಧೆ ಕೂಡ ‘ಜೈ ಮಹಾರಾಷ್ಟ್ರ’ ಎನ್ನುತ್ತಿದ್ದರು. ಮಹಾರಾಷ್ಟ್ರದಲ್ಲಿ 'ಜೈ ಮಹಾರಾಷ್ಟ್ರ' ಬಿಟ್ಟು 'ವಂದೇ ಮಾತರಂ' ಎಂಬ ಆದೇಶವನ್ನು ಹೊರಡಿಸಿದರೆ ಸಿಎಂ ಏಕನಾಥ ಶಿಂಧೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಒತ್ತಡದಲ್ಲಿದೆ ಎಂದು ಸೂಚಿಸುತ್ತದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಟೀಕಿಸಿದ್ದಾರೆ. ಅಲ್ಲದೇ  ಮಹಾರಾಷ್ಟ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ 'ಜೈ ಮಹಾರಾಷ್ಟ್ರ' ಎಂದು ಹೇಳುವುದು ಪಾಪವೇ ಎಂದು ಸಹ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಪ್ರರ್ಶನಿಸಿದ್ದಾರೆ.


ಗಾಂಧಿಗೆ ನಮಿಸಿದ ಪ್ರಧಾನಿ ಮೋದಿ
ಮಹಾತ್ಮ ಗಾಂಧೀಜಿಯವರ 153 ನೇ ಜನ್ಮದಿನದಂದು (Gandhi Jayanti 2022) ಪ್ರಧಾನಿ ನರೇಂದ್ರ ಮೋದಿ ಅವರು (PM Narendra Modi) ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿದರು. ದೆಹಲಿಯ ರಾಜ್‌ಘಾಟ್‌ಗೆ ಆಗಮಿಸಿ ನಮನ ಸಲ್ಲಿಸಿದ ಅವರು "ಗಾಂಧಿಜಯಂತಿಯಂದು ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ. ಈ ಗಾಂಧಿ ಜಯಂತಿಯು ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಭಾರತವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ನಾವು ಯಾವಾಗಲೂ ಬಾಪು ಅವರ ಆದರ್ಶಗಳನ್ನು ಪಾಲಿಸುತ್ತೇವೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸಿ ಸಾರ್ವಜನಿಕರು ಮಹಾತ್ಮಾ ಗಾಂಧಿ ಅವರಿಗೆ ಗೌರವ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು