Maharashtra: 'ಮಹಾ' ಸಿಎಂ ಆಗಿ ಏಕನಾಥ್​ ಶಿಂಧೆ; ಡಿಸಿಎಂ ಆಗಿ ದೇವೇಂದ್ರ ಫಡ್ನವೀಸ್​ ಪ್ರಮಾಣವಚನ

ಮಹಾರಾಷ್ಟ್ರದ ನೂತನ ಸಿಎಂ ಆಗಿ ಶಿವಸೇನೆಯ ಏಕನಾಥ ಶಿಂಧೆ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ರು. ಇನ್ನು ಬಿಜೆಪಿ ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ  ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ರು

ಏಕನಾಥ ಶಿಂಧೆ, ದೇವೇಂದ್ರ ಫಡ್ನವೀಸ್​

ಏಕನಾಥ ಶಿಂಧೆ, ದೇವೇಂದ್ರ ಫಡ್ನವೀಸ್​

  • Share this:
ಮಹಾರಾಷ್ಟ್ರದ (Maharashtra) ನೂತನ ಸಿಎಂ ಆಗಿ ಶಿವಸೇನೆಯ ಏಕನಾಥ ಶಿಂಧೆ (Eknath Shinde) ದೇವರ ಹೆಸರಲ್ಲಿ ಪ್ರಮಾಣವಚನ (Oath) ಸ್ವೀಕರಿಸಿದ್ರು. ಇನ್ನು ಬಿಜೆಪಿ ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ  ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್  ಪ್ರಮಾಣವಚನ ಸ್ವೀಕರಿಸಿದ್ರು. ಮುಂಬೈನ ರಾಜಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಇಬ್ಬರಿಗೂ ಪ್ರಮಾಣವಚನ ಬೋಧಿಸಿದ್ರು. ಈ ವೇಳೆ ಕಾರ್ಯಕರ್ತರು ಜೈಕಾರ ಹಾಕಿದ್ರು. ಶಿಂಧೆ ಬೆಂಬಲಿಗರು ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

ನಡ್ಡಾ ಮನವಿ ಮೇರೆಗೆ ಫಡ್ನವೀಸ್ ಸರ್ಕಾರ ಸೇರಿದ್ದಾರೆ

ಮಹಾರಾಷ್ಟ್ರ ರಾಜ್ಯದ ಹಿತಾಸಕ್ತಿಯಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮನವಿ ಮೇರೆಗೆ ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿ ಸೇರಲು ನಿರ್ಧರಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸಂಜೆ ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರಿಗೆ ಬಿಜೆಪಿ ನೈತಿಕ ಬೆಂಬಲ ನೀಡುವುದಾಗಿ ಹೇಳಿದ್ದರು.

ಆಟೋ ಓಡಿಸುತ್ತಿದ್ದ ಏಕನಾಥ್​ ಶಿಂಧೆ 

ಏಕನಾಥ ಶಿಂಧೆ ಅವರ ಪೂರ್ಣ ಹೆಸರು ಏಕನಾಥ್ ಸಂಭಾಜಿ ಶಿಂಧೆ. 1964 ರ ಫೆಬ್ರವರಿ 9 ರಂದು ಮಹಾರಾಷ್ಟ್ರದ ಜಾವಳಿ ತಾಲೂಕಿನ ಮರಾಠಾ ಸಮುದಾಯದಲ್ಲಿ ಜನಿಸಿದರು. ಆರ್ಥಿಕ ಸಂಕಷ್ಟದ ಕಾರಣ ಕಾಲೇಜು ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿದ ಏಕನಾಥ್ ಶಿಂಧೆ ಅವರು ಮುಂಬೈನ ಥಾಣೆಯಲ್ಲಿ ಆಟೋ ಓಡಿಸಿ ಜೀವನ ಮಾಡುತ್ತಿದ್ದರು.

ಎಲೆಕ್ಷನ್ ಪಾಲಿಟಿಕ್ಸ್ ಗೆ ಎಂಟ್ರಿ

1966 ರಲ್ಲಿ ಬಾಳಾ ಸಾಹೇಬ್ ಠಾಕ್ರೆ ಅವರಿಂದ ಪ್ರಭಾವಿತರಾಗಿ ಶಿವಸೇನೆ ಸೇರಿದ ಏಕನಾಥ ಶಿಂಧೆ ಅವರು, ಥಾಣೆಯ ನಗರ ಪಾಲಿಕೆಯ ಚುನಾವಣೆಯಲ್ಲಿ 1997 ರಲ್ಲಿ ಗೆದ್ದು ಎಲೆಕ್ಷನ್ ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಟರು.

ಇದನ್ನೂ ಓದಿ: Vice President Election: ಯಾರಾಗಲಿದ್ದಾರೆ ಉಪ ರಾಷ್ಟ್ರಪತಿ? ಚುನಾವಣಾ ದಿನಾಂಕ ನಿಗದಿ

ಮಹಾರಾಷ್ಟ್ರದ ನೂತನ ಸಿಎಂ

ತರುವಾಯ 2004 ರಲ್ಲಿ ಕೊಪ್ರಿ ಪಚ್ಚಖಾಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ವಿಜಯಿಯಾದರು. ಮತ್ತೆ ಶಿಂಧೆ ಹಿಂತಿರುಗಿ ನೋಡಲೆ ಇಲ್ಲ. ಸತತ ನಾಲ್ಕು ಬಾರಿ ಎಂಎಲ್ ಎ ಆಗಿರುವ ಏಕನಾಥ್ ಸಂಭಾಜಿ ಶಿಂಧೆ ಈಗ ಮಹಾರಾಷ್ಟ್ರದ ನೂತನ ಸಿಎಂ ಆಗಿದ್ದಾರೆ.

ಶಿವಸೇನೆಯಿಂದ ಹೊರ ಬಂದಿರುವ 40 ಬಂಡಾಯ ಶಾಸಕರು ಬಿಜೆಪಿ ಜೊತೆ ಸೇರಿ ರಚಿಸುತ್ತಿರುವ ನೂತನ ಸರ್ಕಾರದಲ್ಲಿ ಏಕನಾಥ್ ಶಿಂಧೆ ಸಿಎಂ ಆಗಿದ್ದಾರೆ. ಶಾಸಕರ ಬೆಂಬಲ ಪತ್ರವನ್ನು ಶಿಂಧೆ ಇಂದು ಬಿಜೆಪಿಯ ಫಡ್ನವೀಸ್ ಜೊತೆ ಸೇರಿ ರಾಜ್ಯಪಾಲರಿಗೆ ನೀಡಿದ್ರು, ಸರ್ಕಾರ ರಚಿಸಲು ರಾಜ್ಯಪಾಲರು  ಶಿಂಧೆಗೆ ಆಹ್ವಾನ ನೀಡಿದ್ರು

ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಏನಾಗುತ್ತೆ?

ಅಲ್ಲದೇ ಶಿವಸೇನೆಯ ಬಂಡಾಯ ಏಕನಾಥ್ ಶಿಂಧೆ ನೇತೃತ್ವದ ಶಾಸಕರನ್ನು ಸ್ವಾಗತಿಸಲು ಬಿಜೆಪಿ ಸಿದ್ಧವಾಗಿದೆ ಎನ್ನಲಾಗಿದೆ. ಅಲ್ಲದೇ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಸಹ ಬಿಜೆಪಿ ವಿಲೀನ ಮಾಡಿಕೊಳ್ಳಲಿದೆಯೇ ಎಂಬ ಕುತೂಹಲ ಇದೀಗ ಹುಟ್ಟಿಕೊಂಡಿದೆ.

ಇದನ್ನೂ ಓದಿ: Confidence Vote: ವಿಶ್ವಾಸಮತ ಎಂದರೇನು? ಸರ್ಕಾರದ ಅಳಿವು-ಉಳಿವಿನಲ್ಲಿ ಇದರ ಮಹತ್ವವೇನು?
ಆದಿತ್ಯ ಠಾಕ್ರೆ ಕಟು ಪ್ರತಿಕ್ರಿಯೆ


ಶಿವಸೇನೆಯಲ್ಲಿ ಶಾಸಕರ ಬಂಡಾಯದಿಂದ  ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ಒಂದು ದಿನದ ನಂತರ, ಅವರ ಮಗ ಆದಿತ್ಯ ಠಾಕ್ರೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ಪಕ್ಷದಲ್ಲಿ ದೈತ್ಯಾಕಾರದ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಜನರು" ಇದ್ದಾರೆ ಎಂದು ನನಗೆ ಮತ್ತು ಅವರ ತಂದೆಗೆ ತಿಳಿದಿತ್ತು. ಆದರೆ ಜನರು ತಮ್ಮ ಸ್ವಂತಕ್ಕೆ ಇದನ್ನು ಮಾಡಬಹುದು ಎಂದು ಊಹಿಸಲು ಅಸಾಧ್ಯ ಎಂದು ಹೇಳಿದರು.
Published by:Pavana HS
First published: