Viral Video: ಲೈಕ್ಸ್‌ಗಾಗಿ ನಡುರಸ್ತೆಯಲ್ಲೇ ಯುವತಿ-ಯುವಕ ಸ್ನಾನ! ನೆಟ್ಟಿಗರಿಂದ ತರಾಟೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧರಾಗುವುದಕ್ಕೆ ಕೆಲವರು ಅಡುಗೆ ಮಾಡುವುದು, ವಿಚಿತ್ರ ಆಹಾರ ಸೇವೆನೆ, ವಿಚಿತ್ರ ಉಡುಪು ಧರಿಸುವುದು, ಕೆಲವು ಅಪಾಯಕಾರಿ ಸ್ಟಂಟ್​ಗಳನ್ನು ಮಾಡುತ್ತಾರೆ.

  • Share this:

ಮುಂಬೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ (Video) ಮಾಡಿ ಫೇಮಸ್ ಆಗುವ ಹುಚ್ಚು ಯುವ ಪೀಳೆಗೆಯಲ್ಲಿ ಹೆಚ್ಚಾಗುತ್ತಿದೆ. ಕೆಲವರು ಈ ವೇದಿಕೆಯನ್ನು ಸದ್ಭಳಕೆ ಮಾಡಿಕೊಂಡರೆ, ಕೆಲವರು ನಾನಾ ಅವತಾರ ತೋರಿಸಿ ಜನರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಅಂತೆಯೇ ಇಲ್ಲೊಂದು ಜೋಡಿ ಟ್ರಾಫಿಕ್ ಸಿಗ್ನಲ್​ (Traffic Signal) ವೇಳೆ ಸ್ಕೂಟರ್​ ಮೇಲೆ ಕುಳಿತು ಇಬ್ಬರು ಸ್ನಾನ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral) ಆಗಿದ್ದು, ಪರ ವಿರೋಧ ಚರ್ಚೆಯಾಗುತ್ತಿದೆ.


ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧರಾಗುವುದಕ್ಕೆ ಕೆಲವರು ಅಡುಗೆ ಮಾಡುವುದು, ವಿಚಿತ್ರ ಆಹಾರ ಸೇವೆನೆ, ವಿಚಿತ್ರ ಉಡುಪು ಧರಿಸುವುದು, ಕೆಲವು ಅಪಾಯಕಾರಿ ಸ್ಟಂಟ್​ಗಳನ್ನು ಮಾಡುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ಯುವಕ-ಯುವತಿ ನಡುರಸ್ತೆಯಲ್ಲೇ ಸ್ಕೂಟರ್ ಮೇಲೆ ಕುಳಿತು ಸ್ನಾನ ಮಾಡಿದ ವಿಡಿಯೋ ಇಂಟರ್​ನೆಟ್​ನಲ್ಲಿ ಸದ್ದು ಮಾಡುತ್ತಿದೆ.


ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್


ಥಾಣೆಯಲ್ಲಿ ನಡೆದಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆ ಜೋಡಿ ವಿರುದ್ಧ ಅಗತ್ಯ ಕ್ರಮಕ್ಕಾಗಿ ಪೊಲೀಸರು ವಿಡಿಯೋವನ್ನು ಸಂಚಾರ ಇಲಾಖೆಯೊಂದಿಗೆ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‌ನಗರದ ಟ್ರಾಫಿಕ್ ಸಿಗ್ನಲ್‌ನಲ್ಲಿ ಸ್ಕೂಟರ್‌ ಮೇಲೆ ಪುರುಷ ಮತ್ತು ಮಹಿಳೆ ಕುಳಿತಿರುವುದನ್ನು ಕಾಣಬಹುದು. ಮಹಿಳೆ ಹಸಿರು ಬಕೆಟ್ ಅನ್ನು ಹೊತ್ತುಕೊಂಡು ಕೆಂಪು ಚೊಂಬಿನಲ್ಲಿ ತಾನು ನೀರನ್ನು ಸುರಿದುಕೊಳ್ಳುತ್ತಾ, ಸ್ಕೂಟರ್ ಚಲಾಯಿಸುತ್ತಿರುವ ಯುವಕನ ಮೇಲೂ ನೀರನ್ನು ಸುರಿಯುತ್ತಿರುವುದನ್ನ ಕಾಣಬಹುದು. ಸಿಗ್ನಲ್​ನಲ್ಲಿ ನಿಂತಿದ್ದ ಕೆಲವರು ಈ ಜೋಡಿಯನ್ನು ನೋಡಿ ಮುಜುಗರ ಪಟ್ಟರೆ, ಕೆಲವರು ಮನರಂಜನೆಯಾಗಿ ಸ್ವೀಕರಿಸಿ ಎಂಜಾಯ್ ಮಾಡಿದ್ದಾರೆ.


ಇದನ್ನೂ ಓದಿ:  Husband and Wife: ಮದ್ವೆಯಾಗಿ 3 ತಿಂಗಳಾದ್ರೂ ಫಸ್ಟ್‌ನೈಟ್‌ಗೆ ಒಪ್ಪುತ್ತಿಲ್ಲ ಗಂಡ! ನೊಂದ ಪತ್ನಿ ಮಾಡಿದ್ದೇನು ಗೊತ್ತಾ?


ಕ್ರಮ ಕೈಗೊಳ್ಳಲು ಆಗ್ರಹ


ಈ ವಿಡಿಯೋವನ್ನು ವಿ ಡಿಸರ್ವ್​ ಬೆಟರ್ ಗವರ್ನ್​ಮೆಂಟ್ ಎಂಬ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಮಹಾರಾಷ್ಟ್ರ ಡಿಜಿಪಿ ಹಾಗೂ ಥಾಣಾ ಪೊಲೀಸ್ ಟ್ವಿಟರ್​ ಖಾತೆಯನ್ನು ಟ್ಯಾಗ್ ಮಾಡಲಾಗಿದೆ. " ಮನರಂಜನೆಯ ಹೆಸರಿನಲ್ಲಿ ಇಂತಹ ಅಸಂಬದ್ಧತೆಗೆ ಅವಕಾಶವಿದೆಯೇ? ಈ ಅಲಭ್ಯ ಘಟನೆ ಉಲ್ಲಾಸನಗರದ ಮುಖ್ಯ ಸಿಗ್ನಲ್‌ನಲ್ಲಿ ನಡೆದಿದೆ. ಇವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಸಾರ್ವಜನಿಕವಾಗಿ ಇತರರು ಅಸಭ್ಯವಾಗಿ ವರ್ತಿಸುವುದನ್ನು ತಡೆಯಬೇಕೆಂದು ಪೋಸ್ಟ್​ನಲ್ಲಿ ಮನವಿ ಮಾಡಲಾಗಿದೆ.ಕ್ಷಮೆಯಾಚಿಸಿದ ಯೂಟ್ಯೂಬರ್​


ವೀಡಿಯೋದಲ್ಲಿರುವ ವ್ಯಕ್ತಿ ಮುಂಬೈನ ಯೂಟ್ಯೂಬರ್ ಆದರ್ಶ್ ಶುಕ್ಲಾ ಎಂದು ತಿಳಿದುಬಂದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಕ್ಷಮೆಯಾಚಿಸಿದ್ದಾರೆ. ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ಮುಂಬೈ ಪೊಲೀಸರಿಗೆ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಕ್ಷಮೆ ಯಾಚಿಸಿದ್ದಾರೆ.


" ನಾನು ಸ್ನಾನ ಮಾಡುತ್ತಾ ಆಕ್ಟಿವಾ ಚಾಲನೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದರೆ, ನಾನು ಹಾಗೆ ಮಾಡುವಾಗ ಹೆಲ್ಮೆಟ್ ಧರಿಸಿರಲಿಲ್ಲ ಮತ್ತು ಅದು ನನ್ನ ದೊಡ್ಡ ತಪ್ಪು" ಎಂದು ಅವರು ತಿಳಿಸಿದ್ದಾರೆ. ಇದೇ ತನ್ನ ಅನುಯಾಯಿಗಳು ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಲು ಮನವಿ ಮಾಡಿದ್ದಾರೆ. ಜೊತೆಗೆ ನಿಯಮ ಪಾಲಿಸದಿದ್ದಕ್ಕಾಗಿ ದಂಡವನ್ನು ಪಾವತಿಸುವುದಾಗಿ ಶುಕ್ಲಾ ಹೇಳಿದ್ದಾರೆ.


ಇದನ್ನೂ ಓದಿ: Bribe: ಈ ಮಹಿಳಾ ಅಧಿಕಾರಿ ಮನೆಯಲ್ಲಿ ಹಣದ್ದೇ ರಾಶಿ! ಲಂಚ ಪಡೆಯುವಾಗಲೇ ರೆಡ್‌ ಹ್ಯಾಂಡಾಗಿ ಅರೆಸ್ಟ್


ತಪ್ಪು ಮಾಹಿತಿ ಹರಡದಂತೆ ಮನವಿ


" ಇದೇ ವೇಳೆ ಈ ತಪ್ಪಿಗೆ ನನ್ನನ್ನು ಬಂಧಿಸಲಾಗುತ್ತದೆ ಎಂದು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ದಯವಿಟ್ಟು ಈ ರೀತಿಯ ತಪ್ಪು ಮಾಹಿತಿ ಹರಡಬೇಡಿ. ನಾನು ತಪ್ಪು ಮಾಡಿದ್ದೇನೆ ಮತ್ತು ಅದಕ್ಕಾಗಿ ದಂಡವನ್ನು ಪಾವತಿಸುತ್ತೇನೆ " ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೇಳಿದ್ದಾರೆ.

First published: