HOME » NEWS » National-international » MAHARASHTRA CONGRESS SUSPEND SANJAY JHA FOR ANTI PARTY ACTIVITIES AND BREACH OF DISCIPLINE SNVS

ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್​ನಿಂದ ಸಂಜಯ್ ಝಾ ಉಚ್ಛಾಟನೆ

ಸಂಜಯ್ ಝಾ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಕಟುಟೀಕೆ ಮಾಡಿ ಅವರು ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದರು. ರಾಜಸ್ಥಾನದಲ್ಲಿ ಮುಖ್ಯಮಂತ್ರಿ ವಿರುದ್ಧ ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ಬಗ್ಗೆಯೂ ಅವರು ಅನುಕಂಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನ ಅಮಾನತುಗೊಳಿಸಲಾಗಿದೆ.

news18-kannada
Updated:July 15, 2020, 8:06 AM IST
ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್​ನಿಂದ ಸಂಜಯ್ ಝಾ ಉಚ್ಛಾಟನೆ
ಸಂಜಯ್ ಝಾ
  • Share this:
ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ಕಟು ಟೀಕೆ ಮಾಡುತ್ತಾ ಬಂದಿರುವ ಮಾಜಿ ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಅವರನ್ನ ಕಾಂಗ್ರೆಸ್​ನಿಂದ ಅಮಾನತು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಾಗೂ ಶಿಸ್ತು ನಿಯಮ ಉಲ್ಲಂಘನೆ ಕಾರಣಕ್ಕೆ ಮಹಾರಾಷ್ಟ್ರದ ಸಂಜಯ್ ಝಾ ಅವರನ್ನ ಉಚ್ಛಾಟಿಸಲಾಗಿದೆ. ಮಹಾರಾಷ್ಟ್ರ ಘಟಕದ ಕಾಂಗ್ರೆಸ್ ಪಕ್ಷ ನಿನ್ನೆ ಮಂಗಳವಾರ ಈ ಶಿಸ್ತಿನ ಕ್ರಮ ಕೈಗೊಂಡಿರುವುದನ್ನ ಟ್ವೀಟ್ ಮಾಡಿದೆ.ಮಾರ್ಚ್ ತಿಂಗಳಲ್ಲಿ ಸಂಜಯ್ ಝಾ ಅವರು ಪಕ್ಷದ ಬಗ್ಗೆ ಕಟು ಟೀಕೆ ಮಾಡಿ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದರು. “ಕಾಂಗ್ರೆಸ್ ಪಕ್ಷ ಅತಿ ಆಲಸ್ಯತನ ತೋರುತ್ತಿದೆ. ಪಕ್ಷ ಅಪ್ರಸ್ತುತ ಎನಿಸುವ ಸ್ಥಿತಿ ತಲುಪುತ್ತಿದ್ದರೂ ಕಾಂಗ್ರೆಸ್ ಪಕ್ಷದ ಉದಾಸೀನತೆ ಬಹಳ ಆಶ್ಚರ್ಯ ತರುತ್ತಿದೆ…. ನಾನು ಇದ್ದದ್ದನ್ನ ಇದ್ದ ಹಾಗೆ ಹೇಳುತ್ತೇನೆ. ಪಕ್ಷಕ್ಕೆ ಪುನಶ್ಚೇತನ ಕೊಡುವ ಯಾವ ಗಂಭೀರ ಪ್ರಯತ್ನವೂ ಆಗುತ್ತಿಲ್ಲ….” ಎಂದು ಅವರು ಮಾರ್ಚ್ 3ರಂದು ಬರೆದ ಟೈಮ್ಸ್ ಆಫ್ ಇಂಡಿಯಾಗೆ ಬರೆದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದರು.ಅದಾದ ಬಳಿಕ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಳೆದ ತಿಂಗಳು ಸಂಜಯ್ ಝಾ ಅವರನ್ನ ಪಕ್ಷದ ವಕ್ತಾರ ಸ್ಥಾನದಿಂದ ಕಿತ್ತುಹಾಕಿದ್ದರು.

ಇದನ್ನೂ ಓದಿ: ಕಿಸಾನ್ ಕ್ರೆಡಿಟ್ ಕಾರ್ಡ್​ ಬಳಕೆದಾರರೇ ಎಚ್ಚರ!; ಗಡುವಿನೊಳಗೆ ಸಾಲ ತೀರಿಸದಿದ್ದರೆ ಶೇ. 3ರಷ್ಟು ಬಡ್ಡಿ ಹೆಚ್ಚಳ

ಕೆಲ ದಿನಗಳ ಹಿಂದೆ ಸಂಜಯ್ ಝಾ ಅವರು ಮಹಾರಾಷ್ಟ್ರ ಘಟಕದ ಆಲ್ ಇಂಡಿಯಾ ಪ್ರೊಫೆಷನಲ್ಸ್ ಕಾಂಗ್ರೆಸ್​ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನನ್ನ ರಾಜಕೀಯ ಅಭಿಪ್ರಾಯಗಳು ನನ್ನ ಸ್ಥಾನಮಾನಕ್ಕೆ ಸಂಬದ್ಧವಾಗಿಲ್ಲ ಎಂದು ಅವರು ಕಾರಣ ನೀಡಿದ್ದರು.

ನಿನ್ನೆ ರಾಜಸ್ಥಾನದಲ್ಲಿ ಸಂಚಲನ ಮೂಡಿಸಿದ್ದ ಸಚಿನ್ ಪೈಲಟ್ ಅವರನ್ನ ಸಮರ್ಥಿಸಿಕೊಂಡಿದ್ದರು. ಸಚಿನ್ ಪೈಲಟ್ ಅವರನ್ನ ಉಪಮುಖ್ಯಮಂತ್ರಿ ಸ್ಥಾನದಿಂದ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದಕ್ಕೆ ಮರುಗಿದ್ದರು. ಬಹಳ ಪರಿಶ್ರಮ ವಹಿಸಿ ಪಕ್ಷವನ್ನು ಕಟ್ಟಿದವರಿಗೆ ಈ ಗತಿ ಬಂತಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಸಂಜಯ್ ಝಾ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತುಗೊಳಿಸುವ ನಿರ್ಧಾರ ಅನಿರೀಕ್ಷಿತವಿರಲಿಲ್ಲ.
Published by: Vijayasarthy SN
First published: July 15, 2020, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories