ಮಹಾರಾಷ್ಟ್ರದಲ್ಲಿ ಸ್ಪೀಕರ್ ಹುದ್ದೆ ಬದಲು 13 ಸಚಿವ ಸ್ಥಾನದ ಮೇಲೆ ಕಾಂಗ್ರೆಸ್ ಕಣ್ಣು

ಅಶೋಕ್ ಚವಾಣ್, ವರ್ಷಾ ಗಾಯಕ್ವಾಡ್, ಅಮಿತ್ ಪಟೇಲ್, ವಿಜಯ್ ನಾಮದೇವರಾವ್ ವಾದೆಟ್ಟಿವರ್, ಯಶೋಮತಿ ಠಾಕೂರ್, ನಾನಾ ಪಟೋಲೆ, ಅಮಿತ್ ದೇಶಮುಖ್, ಬಂಟಿ ಪಾಟೀಲ್, ವಿಶ್ವಜಿತ್ ಕದಮ್ ಅವರು ಸಂಪುಟ ದರ್ಜೆಯ ಖಾತೆಗಳಿರುವ ಮಂತ್ರಿಗಿರಿ ಪಡೆಯಲಿದ್ದಾರೆನ್ನಲಾಗಿದೆ.

Vijayasarthy SN | news18
Updated:November 27, 2019, 1:08 PM IST
ಮಹಾರಾಷ್ಟ್ರದಲ್ಲಿ ಸ್ಪೀಕರ್ ಹುದ್ದೆ ಬದಲು 13 ಸಚಿವ ಸ್ಥಾನದ ಮೇಲೆ ಕಾಂಗ್ರೆಸ್ ಕಣ್ಣು
ಶರದ್ ಪವಾರ್- ಸೋನಿಯಾ ಗಾಂಧಿ
  • News18
  • Last Updated: November 27, 2019, 1:08 PM IST
  • Share this:
ಮುಂಬೈ(ನ. 27): ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಎನ್​ಸಿಪಿ ಜೊತೆ ಸೇರಿ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಸರ್ಕಾರ ರಚಿಸಿರುವ ಕಾಂಗ್ರೆಸ್ ಪಕ್ಷ ಸಂಪುಟದಲ್ಲಿ ಹೆಚ್ಚೆಚ್ಚು ಸ್ಥಾನಗಳನ್ನು ಗಿಟ್ಟಿಸುವ ಪ್ರಯತ್ನ ನಡೆಸಿದೆ. ಮೂರು ಪಕ್ಷಗಳಿಗೆ ಎಷ್ಟೆಷ್ಟು ಮಂತ್ರಿ ಸ್ಥಾನ ಸಿಗುತ್ತದೆ ಎಂಬುದು ಇನ್ನೆರಡು ದಿನದಲ್ಲಿ ನಿರ್ಧಾರವಾಗಲಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಬಾಳಾಸಾಹೇಬ್ ಥೋರಾತ್ ಹೇಳಿದ್ದಾರೆ. ಸ್ಪೀಕರ್ ಸ್ಥಾನಕ್ಕಾಗಿ ಮೂರೂ ಪಕ್ಷಗಳು ಪೈಪೋಟಿ ನಡೆಸಿವೆ.

ಕೆಲ ಮೂಲಗಳ ಪ್ರಕಾರ, ಸ್ಪೀಕರ್ ಸ್ಥಾನಕ್ಕೆ ಪ್ರಯತ್ನ ನಡೆಸದಿರಲು ನಿರ್ಧರಿಸಿದೆ. 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಸ್ಪೀಕರ್ ಸ್ಥಾನದ ಬದಲು 13 ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಶಿವಸೇನಾ ಜೊತೆ ಮೈತ್ರಿಗೆ ರಾಹುಲ್ ಗಾಂಧಿ ಅಸಮಾಧಾನ? ಪ್ರಮಾಣವಚನ ಸಮಾರಂಭಕ್ಕೆ ಗೈರು ಸಾಧ್ಯತೆ

ಕಾಂಗ್ರೆಸ್​ನ ಸಂಭಾವ್ಯ ಮಂತ್ರಿಗಳು:

ಅಶೋಕ್ ಚವಾಣ್, ವರ್ಷಾ ಗಾಯಕ್ವಾಡ್, ಅಮಿತ್ ಪಟೇಲ್, ವಿಜಯ್ ನಾಮದೇವರಾವ್ ವಾದೆಟ್ಟಿವರ್, ಯಶೋಮತಿ ಠಾಕೂರ್, ನಾನಾ ಪಟೋಲೆ, ಅಮಿತ್ ದೇಶಮುಖ್, ಬಂಟಿ ಪಾಟೀಲ್, ವಿಶ್ವಜಿತ್ ಕದಮ್ ಅವರು ಸಂಪುಟ ದರ್ಜೆಯ ಖಾತೆಗಳಿರುವ ಮಂತ್ರಿಗಿರಿ ಪಡೆಯಲಿದ್ದಾರೆ. ಈ ಒಂಬತ್ತು ಮಂದಿಯ ಜೊತೆಗೆ ಇತರ ನಾಲ್ವರು ಕಾಂಗ್ರೆಸ್ಸಿಗರು ರಾಜ್ಯ ದರ್ಜೆಯ ಖಾತೆಯಿರುವ ಸಚಿವ ಸ್ಥಾನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಆಗಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತ್ರ ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ನಾಳೆ ಅಥವಾ ನಾಳಿದ್ದು ಸಚಿವ ಸ್ಥಾನಗಳ ಘೋಷಣೆಯಾಗಲಿದೆ. ನಾಳೆಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್ ಗಾಂಧಿ ಗೈರಾಗಬಹುದೆಂಬ ಸುದ್ದಿ ಹರಿದಾಡುತ್ತಿವೆದೆಯಾದರೂ ಹಿರಿಯ ಕಾಂಗ್ರೆಸ್ ನಾಯಕರು ಅವರ ಮನವೊಲಿಸುವ ನಿರೀಕ್ಷೆ ಇದೆ. ರಾಹುಲ್ ಗಾಂಧಿ ಅನುಪಸ್ಥಿತಿ ಇದ್ದರೆ ಮಹಾ ವಿಕಾಸ್ ಆಘಾಡಿ ಮೈತ್ರಿ ಸರ್ಕಾರದ ಸುಭದ್ರತೆ ಬಗ್ಗೆ ತಪ್ಪು ಸಂದೇಶ ರವಾನೆಯಾಗಬಹುದು ಎಂಬುದು ಕಾಂಗ್ರೆಸ್ಸಿಗರ ಆತಂಕ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 27, 2019, 1:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading