• Home
  • »
  • News
  • »
  • national-international
  • »
  • Eknath Shinde: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಬೆದರಿಕೆ ಕರೆ: ಪೊಲೀಸರಿಂದ ತೀವ್ರ ತನಿಖೆ

Eknath Shinde: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಬೆದರಿಕೆ ಕರೆ: ಪೊಲೀಸರಿಂದ ತೀವ್ರ ತನಿಖೆ

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ನೀರಿನ ಬಾಟಲಿಗೆ ಹೆಚ್ಚಿನ ಶುಲ್ಕ ವಿಧಿಸಿದ ಹಿನ್ನೆಲೆ ಹೋಟೆಲ್ ಮಾಲೀಕನಿಗೆ ಬುದ್ಧಿ ಕಲಿಸಲು ಈ ರೀತಿ ಕರೆ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • Share this:

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ (Maharshtra CM Eknath Shinde) ಹಾಕಲಾದ ಜೀವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಪ್ರತಿಕ್ರಿಯಿಸಿದ್ದಾರೆ. ಏಕನಾಥ್ ಶಿಂಧೆ ಅವರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣದಡಿ ಮುಂಬೈನ (Mumbai) ಘಾಟ್‌ಕೋಪರ್‌ನ 36 ವರ್ಷದ ವ್ಯಕ್ತಿಯೋರ್ವನನ್ನು ಈಗಾಗ್ಲೇ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.  ಮಾಧ್ಯಮದವರೊಂದಿಗೆ ಮಾತನಾಡಿದ ದೇವೇಂದ್ರ ಫಡ್ನವೀಸ್ , ಮುಖ್ಯಮಂತ್ರಿ ವಿರುದ್ಧ ಹಾಕಲಾದ ಬೆದರಿಕೆಯ ಬಗ್ಗೆ ರಾಜ್ಯ ಗೃಹ ಇಲಾಖೆಗೆ ತಿಳಿದು ಬಂದಿದೆ. ಹೀಗಾಗಿ ಮುಖ್ಯಮಂತ್ರಿಗಳ ಭದ್ರತೆ ಮತ್ತಿತರ ವಿಚಾರಗಳ ಬಗ್ಗೆ ಸಂಪೂರ್ಣ ಗಮನ ಹರಿಸುತ್ತಿದ್ದೇವೆ. ಜೀವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.


ಮುಖ್ಯಮಂತ್ರಿಗೆ ಫುಲ್‌ ಸೆಕ್ಯುರಿಟಿ
ಭಾನುವಾರ ಮುಖ್ಯಮಂತ್ರಿಗೆ ಬೆದರಿಕೆಯೊಡ್ಡಿದ ವ್ಯಕ್ತಿಯನ್ನು ಪೊಲೀಸ್‌ ಇಲಾಖೆ ಅರೆಸ್ಟ್‌ ಮಾಡಿದೆ. ಮುಖ್ಯಮಂತ್ರಿಗಳಿಗೆ ಭದ್ರತೆ ನೀಡುವುದು ಬಹಳ ಮುಖ್ಯವಾಗಿದೆ. ನಮ್ಮ ಗಮನವು ಅದರ ಮೇಲಿದೆ" ಎಂದು ರಾಜ್ಯ ಗೃಹ ಸಚಿವಾಲಯದ ಖಾತೆಯನ್ನು ಸಹ ನಿರ್ವಹಿಸುತ್ತಿರುವ ಫಡ್ನವೀಸ್ ಹೇಳಿದ್ದಾರೆ. ಘಟನೆಯ ನಂತರ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ‘ವರ್ಷ’ದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.


ಆರೋಪಿ ಬಂಧನ, ಕೇಸ್‌ ದಾಖಲು
ಬಂಧಿತ ಆರೋಪಿಯ ಬಗ್ಗೆ ಉಪಮುಖ್ಯಮಂತ್ರಿಗಳು ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಪುಣೆ ಜಿಲ್ಲೆಯ ಲೋನಾವಾಲಾ ಹೋಟೆಲ್‍ನಲ್ಲಿ ಏಕನಾಥ್ ಶಿಂಧೆ ಅವರನ್ನು ಕೊಲ್ಲಲು ಸಂಚು ಮಾಡಿರುವುದಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ವ್ಯಕ್ತಿಯ ವಿರುದ್ಧ ನಾನ್-ಕಾಗ್ನೈಸಬಲ್ (ಎನ್‍ಸಿ) ಪ್ರಕರಣವನ್ನು ಪುಣೆ ಪೊಲೀಸರು ದಾಖಲಿಸಿದ್ದಾರೆ. ಅವರು ಪುಣೆ ಜಿಲ್ಲೆಯ ಲೋನಾವಾಲಾದ ಹೋಟೆಲ್‌ನಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ - 112 ಅನ್ನು ಡಯಲ್ ಮಾಡಿ ಮುಖ್ಯಮಂತ್ರಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಕರೆ ಮಾಡಿ ಹೇಳಿದ್ದರು.


ಇದನ್ನೂ ಓದಿ:Maharashtra: ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣಕ್ಕೆ ಹೊಸ ಹೆಸರು, ಚಿಹ್ನೆ ಕೊಟ್ಟ ಚುನಾವಣಾ ಆಯೋಗ!


ತನಿಖೆಯಿಂದ ಹೊರಹೊಮ್ಮಿದ ವಿವರಗಳಲ್ಲಿ, ಆರೋಪಿ ಅವಿನಾಶ್ ವಾಘಮಾರೆ ಅವರು ಕರೆ ಮಾಡಿದಾಗ ಕುಡಿದಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ನೀರಿನ ಬಾಟಲಿಗೆ ಹೆಚ್ಚಿನ ಶುಲ್ಕ ವಿಧಿಸಿದ ಹಿನ್ನೆಲೆ ಹೋಟೆಲ್ ಮಾಲೀಕನಿಗೆ ಬುದ್ಧಿ ಕಲಿಸಲು ಈ ರೀತಿ ಕರೆ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ಪುಣೆ ಗ್ರಾಮಾಂತರದ ಎಸ್‌ಪಿ ಅಭಿನವ್ ದೇಶ್‌ಮುಖ್ , “ಆರೋಪಿ ಆದಷ್ಟು ಬೇಗ ಹೋಟೆಲ್‌ಗೆ ಭೇಟಿ ನೀಡುವಂತೆ ಪೊಲೀಸರನ್ನು ಕೇಳಿಕೊಂಡನು ಮತ್ತು ಕರೆ ಮಾಡಿದ ನಂತರ ಬಸ್ ಹತ್ತಿ ಹೊರಟು ಹೋಗಿದ್ದಾನೆ. ನಾವು ಅವರು ಪ್ರಯಾಣಿಸುತ್ತಿದ್ದ ಬಸ್ ಅನ್ನು ಪತ್ತೆಹಚ್ಚಿದ್ದೇವೆ ಮತ್ತು ಪುಣೆ ಬಳಿಯ ಖೇಡ್ ಶಿವಪುರದಿಂದ ಬಂಧಿಸಿದ್ದೇವೆ. ವಿಚಾರಣೆ ವೇಳೆ ಹೋಟೆಲ್ ಮಾಲೀಕರಿಗೆ ಪಾಠ ಕಲಿಸಲು ವಾಘಮಾರೆ ನೆಪಮಾತ್ರಕ್ಕೆ ಕರೆ ಮಾಡಿರುವುದು ಬೆಳಕಿಗೆ ಬಂದಿದೆ. ವಾಘಮ್ರೆ ವಿರುದ್ಧ 177 ಸೆಕ್ಷನ್‌ಗಳ ಅಡಿಯಲ್ಲಿ (ಸುಳ್ಳು ಮಾಹಿತಿ ಒದಗಿಸುವುದು) ಗುರುತಿಸಲಾಗದ ಅಪರಾಧವನ್ನು ದಾಖಲಿಸಲಾಗಿದೆ" ಎಂದು ತಿಳಿಸಿದರು.


ಇದನ್ನೂ ಓದಿ: Khosta-2: ಮತ್ತೆ ವೈರಸ್​ ಆತಂಕ, ಲಸಿಕೆಗೂ ಜಗ್ಗಲ್ಲ ಕೊರೋನಾದ ಹೊಸ ರೂಪಾಂತರ!


ಈ ಬೆದರಿಕೆಗೆ ಜಗ್ಗಲ್ಲ - ಏಕನಾಥ್‌ ಶಿಂಧೆ
ಆದರೆ ತಮಗೆ ಜೀವ ಬೆದರಿಕೆ ಪತ್ರ ಬಂದಿರುವ ಬಗ್ಗೆ ತಲೆಕೆಡಿಸಿಕೊಳ್ಳದ ಸಿಎಂ ಏಕನಾಥ್‌ ಶಿಂಧೆ, ನಾನು ಇದಕ್ಕೆಲ್ಲಾ ಗಮನ ಕೊಡುವುದಿಲ್ಲ ಎಂದು ಹೇಳಿದ್ದಾರೆ. ನಮ್ಮ ಗೃಹ ಸಚಿವಾಲಯ ಹಾಗೂ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರು ಈ ಸನ್ನಿವೇಶ ನಿಭಾಯಿಸಲು ಸಮರ್ಥರಿದ್ದಾರೆ. ನನಗೆ ಅವರ ಮೇಲೆ ಪೂರ್ಣ ವಿಶ್ವಾಸವಿದೆ ಎಂದು ಶಿಂಧೆ ಸ್ಪಷ್ಟಪಡಿಸಿದ್ದಾರೆ. ಇಂತಹ ಬೆದರಿಕೆ ಕರೆಗಳಿಂದ ನನ್ನನ್ನು ಹೆದರಿಸಲು ಆಗುವುದಿಲ್ಲ ಮತ್ತು ನಾನು ಮಹಾರಾಷ್ಟ್ರದ ಜನರ ಸೇವೆಯನ್ನು ಧೈರ್ಯದಿಂದ ಮುಂದುವರಿಸುತ್ತೇನೆ ಎಂದರು.

Published by:ಗುರುಗಣೇಶ ಡಬ್ಗುಳಿ
First published: