Maharashtra: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ Uddhav Thackeray ಈ ವರ್ಷ ತಮ್ಮ ದಸರಾ ಭಾಷಣದಲ್ಲಿ ಅಂತಿಮವಾಗಿ ಆರ್ಯನ್ ಖಾನ್ ಪ್ರಕರಣದ ಕುರಿತು ಮೌನ ಮುರಿದರು. ಠಾಕ್ರೆ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (NCB)ವನ್ನು ಅದರ ಹೆಸರನ್ನು ತೆಗೆದುಕೊಳ್ಳದೆ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಎನ್ಸಿಬಿ ಸಣ್ಣ ಪ್ರಮಾಣದ ಡ್ರಗ್ಅನ್ನು ಮಾತ್ರ ನೆಪ ಮಾತ್ರಕ್ಕೆ ವಶಪಡಿಸಿಕೊಂಡಿದ್ದಾರೆ, ಆದರೆ ಮಹಾರಾಷ್ಟ್ರ ಪೊಲೀಸರು ಮುಂಡ್ರಾದಲ್ಲಿ ಮಾದಕ ವಸ್ತುಗಳ ಸಾಗಣೆಯ ಸಮಯದಲ್ಲಿ 150 ಕೋಟಿ ರೂಪಾಯಿ ಮೌಲ್ಯದ ಡ್ರಗ್ ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
"ಅವರುಗಳಿಗೆ ಆಸಕ್ತಿಯಿರುವುದು ಸೆಲೆಬ್ರಿಟಿಗಳನ್ನು ಹಿಡಿಯುವುದು, ಅವರ ಚಿತ್ರಗಳನ್ನು ಕ್ಲಿಕ್ ಮಾಡುವುದು ಮತ್ತು ಸ್ವಲ್ಪ ಸೌಂಡ್ ಮಾಡುವುದು ಅಷ್ಟೇ ಬೇಕಾಗಿರುವುದು" ಇದೇ ಉದ್ದೇಶ ಇಟ್ಟುಕೊಂಡು ಖಾನ್ ಅವರನ್ನು ಬಂಧಿಸಲಾಗಿದೆ ಎಂದು ವ್ಯಂಗ್ಯವಾಡಿದರು.
"ಮಹಾರಾಷ್ಟ್ರವು ಮಾದಕ ವಸ್ತುಗಳ ರಾಜಧಾನಿಯಾಗಿ ಮಾರ್ಪಟ್ಟಿದೆ ಎಂದು ಅವರುಗಳು ಸೇರಿಕೊಂಡು ಕತೆ ಕಟ್ಟುತ್ತಿದ್ದಾರೆ. ಆದರೆ ಮುಂದ್ರಾದಲ್ಲಿ ಕೋಟ್ಯಂತರ ಮಾದಕ ದ್ರವ್ಯ ಸಾಗಾಟ ನಡೆಯುತ್ತಿದೆ. ಈ ಕೇಂದ್ರದ ಏಜೆನ್ಸಿಗಳು ಚಿಟಿಕೆ ಗಾಂಜಾವನ್ನು ವಶ ಪಡಿಸಿಕೊಂಡು ನಾಟಕವಾಡುತ್ತಿದೆ. ಮಹಾರಾಷ್ಟ್ರ ಪೊಲೀಸರು 150 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಠಾಕ್ರೆ ಹೇಳಿದರು.
ಇದು ಮಹಾರಾಷ್ಟ್ರದ ಹೆಸರನ್ನು ಕೆಡಿಸುವ ಮತ್ತು ಭಾರತದ ಹೆಬ್ಬಾಗಿಲನ್ನು ಮಾದಕ ವಸ್ತುಗಳ ಕೇಂದ್ರವಾಗಿ ಚಿತ್ರಿಸುವ ಸಂಚು ಎಂದು ಮುಖ್ಯಮಂತ್ರಿ ಹೇಳಿದರು. ಇಂತಹ ಮಾದಕದ್ರವ್ಯ ಪ್ರಕರಣಗಳು ಮಹಾರಾಷ್ಟ್ರ ಸಮರ್ಥವಾಗಿ ಎದುರಿಸುತ್ತದೆ. "ನಾವು ಅನವಶ್ಯಕವಾಗಿ ಗುರಿಯಾಗುತ್ತಿದ್ದೇವೆ, ಅತ್ಯಾಚಾರಗಳು ನಡೆಯುವ ಉತ್ತರ ಪ್ರದೇಶದಂತಹ ಸ್ಥಳಗಳನ್ನು ಏಕೆ ಟೀಕಿಸುವುದಿಲ್ಲ?"
Also read: Sonia Gandhi Reinstates Her Role| ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೋನಿಯಾ ಗಾಂಧಿಯೇ ಫುಲ್ ಟೈಮ್ ಅಧ್ಯಕ್ಷೆ; CWC ಸಭೆಯಲ್ಲಿ ತೀರ್ಮಾನ!
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ದುರದೃಷ್ಟಕರ ಸಾವಿನಿಂದ ಹಲವಾರು ಸೆಲೆಬ್ರಿಟಿಗಳು ಮಾದಕ ದ್ರವ್ಯ ಸೇವನೆ ಮತ್ತು ವ್ಯವಹಾರಕ್ಕಾಗಿ ಎನ್ಸಿಬಿಯ ಪಟ್ಟಿಯಲ್ಲಿ ಇದ್ದಾರೆ. ಎನ್ಸಿಬಿ ಈ ಹಿಂದೆ ನಟಿಯ ಗೆಳತಿ ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದು ಮಾತ್ರವಲ್ಲದೆ ಬಾಲಿವುಡ್ನ ಕೆಲವು ದೊಡ್ಡ ಹೆಸರುಗಳಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಅವರನ್ನು ವಿಚಾರಣೆಗೆ ಕರೆಸಿಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ