ಪಾಕಿಸ್ತಾನದಲ್ಲಿದ್ದ ಪ್ರೇಯಸಿಯನ್ನು ನೋಡಲು ಗಡಿ ದಾಟುವ ಯತ್ನ; ಮಹಾರಾಷ್ಟ್ರದ ಯುವಕ ಬಂಧನ

ಗಡಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದ ಜಿಶಾನ್

ಗಡಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದ ಜಿಶಾನ್

ಜಿಶಾನ್​ ತನ್ನ ಪ್ರೇಯಸಿ ಜೊತೆ ಇರಲು ಪಾಕಿಸ್ತಾನಕ್ಕೆ ಹೋಗಬೇಕೆಂದು ಇಚ್ಛಿಸಿದ್ದ. ಜೊತೆಗೆ ಗೂಗಲ್ ಮ್ಯಾಪ್ ಬಳಸಿಕೊಂಡು ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ್ದ. ಆಗ ಗಡಿ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.

 • Share this:

  ನವದೆಹಲಿ(ಜು.17): ಮಹಾರಾಷ್ಟ್ರದ ಯುವಕನೊಬ್ಬ ಪಾಕಿಸ್ತಾನದಲ್ಲಿರುವ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿ ಗಡಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾನೆ.


  20 ವರ್ಷದ ಸಿದ್ದಿಕಿ ಮೊಹಮ್ಮದ್ ಜಿಶಾನ್​ ಪಾಕಿಸ್ತಾನದ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಆತ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಗೂಗಲ್​ ಮ್ಯಾಪ್​ ಮೂಲಕ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯನ್ನು ದಾಟಲು ಯತ್ನಿಸಿದ್ದಾನೆ. ಈ ವೇಳೆ ಗಡಿ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.


  ಜಿಶಾನ್​ನ್ನು ವಿಚಾರಿಸಿದಾಗ, ಆತ ಕುಚ್​​ನ ರನ್ನ್​ ಮೂಲಕ ಪಾಕಿಸ್ತಾನಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ಆತ ಪಾಕಿಸ್ತಾನದ ಸಮ್ರಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿಯು ಪಾಕಿಸ್ತಾನದ ಕರಾಚಿಯ ಶಾಹ್​ ಫೈಸನಲ್​ ನಗರದ ನಿವಾಸಿ. ಸಮ್ರಾ ಸಾಮಾಜಿಕ ಜಾಲತಾಣದ ಮೂಲಕ ಜಿಶಾನ್​ಗೆ ಪರಿಚಯವಾಗಿದ್ದಳು. ಇಬ್ಬರೂ ಸಹ ಫೇಸ್​ಬುಕ್ ಮತ್ತು ವಾಟ್ಸ್ಯಾಪ್​ನಲ್ಲಿ ಸಂಪರ್ಕದಲ್ಲಿದ್ದರು.


  ವಯಸ್ಸಾದ ತಾಯಿ ಮೇಲೆ ಮಗನ ಕ್ರೌರ್ಯ ವರ್ತನೆ; ಮನಬಂದಂತೆ ಥಳಿಸಿ ಎತ್ತಿ ಬಿಸಾಡಿದ ಕ್ರೂರಿ


  ಜಿಶಾನ್​ ತನ್ನ ಪ್ರೇಯಸಿ ಜೊತೆ ಇರಲು ಪಾಕಿಸ್ತಾನಕ್ಕೆ ಹೋಗಬೇಕೆಂದು ಇಚ್ಛಿಸಿದ್ದ. ಜೊತೆಗೆ ಗೂಗಲ್ ಮ್ಯಾಪ್ ಬಳಸಿಕೊಂಡು ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ್ದ. ಆಗ ಗಡಿ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.


  ಜಿಶಾನ್​ ಪೋಷಕರು ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ ಬಳಿಕ ಮಹಾರಾಷ್ಟ್ರ ಪೊಲೀಸರು ಆತನ ವಿವರಗಳನ್ನು ಗುಜರಾತ್​ ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ನಂತರ ಜಿಶಾನ್​ನ್ನು ಗಡಿ ದಾಟದಂತೆ ತಡೆಯಲಾಯಿತು.


  ಗುಜರಾತ್​ನ ಕಚ್​ ಜಿಲ್ಲೆಯ ಬಾಲಸರ್ ಪೊಲೀಸ್​ ಠಾಣೆಯ ಅಧಿಕಾರಿಗಳು ಗಡಿ ಭದ್ರತಾ ಸಿಬ್ಬಂದಿಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

  Published by:Latha CG
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು