Crime: 37 ಕೋಟಿ ರೂ ವಿಮೆ ಹಣಕ್ಕಾಗಿ ಹಾವಿನಿಂದ ಕಚ್ಚಿಸಿಕೊಂಡು ಸತ್ತು ನಾಟಕವಾಡಿದ; ಕೊನೆಗೂ ರಹಸ್ಯ ಬೇಧಿಸಿದ ಪೊಲೀಸರು

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಪೊಲೀಸರು

ಮಹಾರಾಷ್ಟ್ರ ಪೊಲೀಸರು

  • Share this:
    ಮುಂಬೈ (ಅ. 26):  ವಿಮೆಯ ಕೋಟ್ಯಾಂತ ಹಣ ಪಡೆಯುವುದಕ್ಕೆ ವ್ಯಕ್ತಿಯೊಬ್ಬ ಹಾವಿನಿಂದ ಕಚ್ಚಿ ಸಾವನ್ನಪ್ಪಿರುವ ನಾಟಕ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ಮಹಾರಾಷ್ಟ್ರದ ಅಹ್ಮದ​​ನಗರದಲ್ಲಿ (Ahmednagar) ನಡೆದಿದೆ. ಅಮೆರಿಕ ಮೂಲದ ವಿಮಾ ಸಂಸ್ಥೆಯಲ್ಲಿ 5 ಮಿಲಿಯನ್ ಡಾಲರ್ (37.5 ಕೋಟಿ ರೂ.) ಮೌಲ್ಯದ ಜೀವ ವಿಮಾ ಪಾಲಿಸಿಯನ್ನು (Insurance Money)   ಪಡೆಯುವ ಸಲುವಾಗಿ 54 ವರ್ಷದ ವ್ಯಕ್ತಿ ನಿರ್ಗತಿಕನನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈತನ ಕೊಲೆ ಯೋಜನೆ ಕಂಡು ವಿಮಾ ಕಂಪನಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಪ್ರಭಾಕರ್ ಭೀಮಾಜಿ ವಾಘಚೌರೆ ಎಂಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ನಂಬಿಸಲು ನಾಗರ ಹಾವನ್ನು ಬಳಕೆ ಮಾಡಿದ್ದಾನೆ. ಈ ವೇಳೆ ಆ ಹಾವಿನಿಂದ ಅಮಾಯಕನ ಬಲಿ (Snake bite) ಪಡೆದಿದ್ದಾರೆ . ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ \ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ
    ವಾಘಚೌರೆ ಎಂಬ ಆರೋಪಿ ಕಳೆದ 20 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದ,. ಈತನ ಕಳೆದ ಜನವರಿಯಲ್ಲಿ ಭಾರತಕ್ಕೆ ಮರಳಿದ ಬಳಿಕ ಆತನ ಅಹ್ಮದ್‌ನಗರ ಜಿಲ್ಲೆಯ ರಾಜೂರ್ ಗ್ರಾಮದಲ್ಲಿ ನೆಲೆ ನಿಂತ. ಕಳೆದ ಏಪ್ರಿಲ್ 22 ರಂದು ರಾಜೂರ್ ಪೊಲೀಸ್ ಠಾಣೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಿಂದ ವಾಘಚೌರೆ ಸಾವನ್ನಪ್ಪಿದ ಎಂಬ ಮಾಹಿತಿ ಲಭ್ಯವಾಗಿದೆ. ಅಮೆರಿಕ ವಿಮಾ ಹಣ ಕ್ಲೈಮ್​ ಮಾಡುವ ಹಿನ್ನಲೆ ಪೊಲೀಸ್​ ಕಾನ್ಸ್​​ಟೇಬಲ್​ ಒಬ್ಬರು ಆಸ್ಪತ್ರೆಗೆ ಭೇಟಿ ನೀಡಿ ಶವದ ಕುರಿತ ಮಾಹಿತಿ ದಾಖಲಿಸಲು ಮುಂದಾಗಿದ್ದಾರೆ.
    ಈ ವೇಳೆ ವಾಘಚೌರೆ ಅವರ ಸೋದರಳಿಯ ಎಂದು ಪ್ರವೀಣ್, ಮತ್ತೊಬ್ಬ ರಾಜೂರ್ ನಿವಾಸಿ ಹರ್ಷದ್ ಲಹಂಗೆ ಯಾರದ್ದೋ ಶವವನ್ನು ವಾಘಚೌರೆ ಅವರದ್ದು ಎಂದು ಗುರುತಿಸಿದರು.

    ಇದನ್ನು ಓದಿ: Viral: ಉದ್ಯೋಗಿಗಳಿಗೆ 7.5 ಲಕ್ಷ ರೂ, ವಿಮಾನ ಟಿಕೆಟ್​ ಉಡುಗೊರೆ; ಇಂತಹ ಸಿಇಒ ಎಲ್ಲರಿಗೂ ಸಿಗಲ್ಲ

    ವಿಮೆ ಹಣಕ್ಕಾಗಿ ನಾಟಕ
    ಆದರೆ, ಅಸಲಿ ವಿಷಯ ಬಹಿರಂಗವಾಗಿದ್ದು, ವಾಘಚೌರೆ ಸೋದಳಿಯ ಕೋವಿಡ್​ನಿಂದ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದ ಮೇಲೆ. ಯಾವಾಗ ಗಿ ವಾಘಚೌರೆ ಅವರ ಸೋದರಳಿಯ ಪ್ರವೀಣ್ ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ ವರದಿ ಪೊಲೀಸರಿಗೆ ತಿಳಿಯಿತು. ಈ ವೇಳೆ ಈ ತನಿಖೆಗೆ ರೋಚಕ ತಿರುವು ಪಡೆಯಿತು. ಆಗ ಪೊಲೀಸರು ಪೊಲೀಸರು ಆರೋಪಿಯ ಕರೆ ದಾಖಲೆಗಳನ್ನು ಪರಿಶೀಲಿಸಿದರು. ಈ ವೇಳೆ ವಾಘಚೌರೆ ಬದುಕಿದ್ದ ಅಸಲಿ ಸತ್ಯ ಬಹಿರಂಗವಾಗಿದೆ.

    ಅಮಾಯಕನ ಕೊಂದ ಆರೋಪಿಗಳು
    ವಾಘಚೌರೆ ಮತ್ತು ಉಳಿದ ಮೂರು ಆರೋಪಿಗಳಿ ಸೇರಿ ಈ ಸಂಚು ರೂಪಿಸಿದ್ದಾರೆ. ಹಾವಾಡಿಗನಿಂದ ನಾಗರ ಹಾವನ್ನು ಖರೀದಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರು ವಾಘಚೌರೆಯಂತೆಯೇ ಕಾಣುವ ನಿರ್ಗತಿಕ ವ್ಯಕ್ತಿಯನ್ನು ಪತ್ತೆ ಮಾಡಿದ ಅವರು, ಆತನನ್ನು ನಾಗರಹಾವಿನ ಕಚ್ಚಿಸಿ ಕೊಂದಿದ್ದಾರೆ.

    ಇದನ್ನು ಓದಿ: PMASBY: ಪ್ರಧಾನ ಮಂತ್ರಿ ಆತ್ಮನಿರ್ಭರ್ ಸ್ವಸ್ತ್​​ ಭಾರತ್ ಯೋಜನೆಗೆ ಮೋದಿ ಚಾಲನೆ; ಏನಿದು ಯೋಜನೆ!

    ಕಡೆಗೂ ಸಿಕ್ಕಿ ಬಿದ್ದ ಆರೋಪಿಗಳು
    ಇದಾದ ಬಳಿಕ ವಾಘಚೌರೆ ಎಂದು ಸುಳ್ಳು ಹೇಳಿದ ವ್ಯಕ್ತಿ ಈ ಹಣಕ್ಕಾಗಿ ಕ್ಲೈಮ್​ ಮಾಡಿದ್ದು, ಪೊಲೀಸರಿಗೂ ದಿಕ್ಕು ತಪ್ಪಿಸಿದ್ದಾನೆ. ಈ ವೇಳೆ ಈತನ ಜಾಡು ಹಿಡಿದು ಪ್ರಕರಣ ತನಿಖೆ ನಡೆಸಿದಾಗ ಎಲ್ಲಾ ವಿಚಾರಗಳು ಸ್ಪಷ್ಟವಾಗಿದೆ. ನವನಾಥ್ ಯಶವಂತ್ ಆನಾಪ್ ಎಂಬ 50 ವರ್ಷದ ಅನಾಥ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ. ಈ ನಿಜ ತಿಳಿದ ತಕ್ಷಣಕ್ಕೆ ಗ ವಾಘಚೌರೆ ಮತ್ತು ಅವರ ನಾಲ್ವರು ಸಹಚರರನ್ನು ಬಂಧಿಸಲಾಗಿದೆ. ಹಾವಾಡಿಗ ಸೇರಿದಂತೆ ಉಳಿದ ಮೂವರಿಗೂ 35 ಲಕ್ಷ ಹಣ ನೀಡುವುದಾಗಿ ವಾಘಚೌರೆ ಭರವಸೆ ನೀಡಿದ್ದ. ಸದ್ಯ ಆರೋಪಿಗಳನ್ನು ಬಂಧಿಸಿದ್ದು,  ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
    Published by:Seema R
    First published: