• Home
 • »
 • News
 • »
 • national-international
 • »
 • Maharashtra: ಹಣೆಗೆ ಬೊಟ್ಟು ಇಡದ ಮಹಿಳಾ ಪತ್ರಕರ್ತೆ ಬಳಿ ಮಾತನಾಡಲು ನಿರಾಕರಿಸಿದ ಸಂಭಾಜಿ ಭಿಡೆ

Maharashtra: ಹಣೆಗೆ ಬೊಟ್ಟು ಇಡದ ಮಹಿಳಾ ಪತ್ರಕರ್ತೆ ಬಳಿ ಮಾತನಾಡಲು ನಿರಾಕರಿಸಿದ ಸಂಭಾಜಿ ಭಿಡೆ

ಸಂಭಾಜಿ ಭಿಡೆ

ಸಂಭಾಜಿ ಭಿಡೆ

ಸಂಭಾಜಿ ಭಿಡೆ ಅವರು ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಹಲವು ಬಾರಿ ವಿವಾದಕ್ಕೀಡಾಗಿದ್ದರು. ಒಮ್ಮೆ ಅವರು ತನ್ನ ತೋಟದಿಂದ ಮಾವಿನ ಹಣ್ಣುಗಳನ್ನು ತಿನ್ನುವುದರಿಂದ ದಂಪತಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಿದ್ದರು. ಸದ್ಯ ಬೊಟ್ಟು ಹಾಕದ ಪತ್ರಕರ್ತೆಯ ಜೊತೆ ಮಾತನಾಡದ ಕಾರಣಕ್ಕೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ ಅವರಿಗೆ ನೋಟಿಸ್ ನೀಡಿದೆ.

ಮುಂದೆ ಓದಿ ...
 • News18 Kannada
 • Last Updated :
 • Mumbai, India
 • Share this:

  ಮುಂಬೈ(ನ.03): ಬಲಪಂಥೀಯ ನಾಯಕ ಸಂಭಾಜಿ ಭಿಡೆ (Sambhaji Bhide) ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಮಹಿಳಾ ಪತ್ರಕರ್ತೆಯೊಬ್ಬರು (Journalist) ಬೊಟ್ಟು ಹಾಕದ ಕಾರಣ ಮಾತನಾಡಲು ನಿರಾಕರಿಸಿದ್ದಾರೆ. ತಮ್ಮ ಹೇಳಿಕೆಗಳ ಬಗ್ಗೆ ಆಗಾಗ್ಗೆ ವಿವಾದಕ್ಕೀಡಾಗುವ ಸಂಭಾಜಿ ಭಿಡೆ, ಮಹಿಳೆಯರು ಭಾರತಮಾತೆ ಇದ್ದಂತೆ, ಇಂತಹ ಪರಿಸ್ಥಿತಿಯಲ್ಲಿ ಬೊಟ್ಟು ಇಡದೆ ವಿಧವೆಯಂತೆ (Widow) ಕಾಣಬಾರದು ಎಂದಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆದ ನಂತರ, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ಅದನ್ನು ಗಂಭೀರವಾಗಿ ಪರಿಗಣಿಸಿದೆ. ಮಹಿಳಾ ಆಯೋಗ ಸಂಭಾಜಿ ಭಿಡೆ ಅವರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿದೆ. ಇದೇ ವೇಳೆ ಮಹಿಳಾ ಪತ್ರಕರ್ತೆ ಬೊಟ್ಟು ಇಡಬೇಕೋ ಬೇಡವೋ ಎನ್ನುವುದು ನನ್ನ ಆಯ್ಕೆ, ಯಾಕೆಂದರೆ ತಾನು ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದೇನೆ ಎಂದು ಹೇಳಿದ್ದಾರೆ.


  ಇದನ್ನೂ ಓದಿ:  Viral News: ಗಂಡನ ಜೀವ ಉಳಿಸೋಕೆ 70ರಲ್ಲೂ ತನ್ನ ಕಿಡ್ನಿ ದಾನ ಮಾಡಿದ ಹೆಂಡ್ತಿ! ಇಂಥ ಪತ್ನಿ ಎಷ್ಟು ಜನಕ್ಕೆ ಸಿಗ್ತಾರೆ ಹೇಳಿ


  ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಲು ಸಂಭಾಜಿ ಭಿಡೆ ಬುಧವಾರ ಮಂತ್ರಾಲಯ ತಲುಪಿದ್ದರು. ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಸಂಭಾಜಿ ಭಿಡೆ ಟಿವಿ ಚಾನೆಲ್‌ನ ಮಹಿಳಾ ಪತ್ರಕರ್ತರಿಗೆ ನೀವು ಮೊದಲು ಬೊಟ್ಟು ಹಾಕಿ ಬನ್ನಿ ಮತ್ತು ನಂತರ ನನ್ನ ಹೇಳಿಕೆಯನ್ನು ತೆಗೆದುಕೊಳ್ಳಿ ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಈ ಮೂಲಕ ಪತ್ರಕರ್ತೆಯ ಜತೆ ಮಾತನಾಡಲು ನಿರಾಕರಿಸಿದರು.


  ಮಹಿಳೆಯರು ಭಾರತ ಮಾತೆಯಿದ್ದಂತೆ


  ಸಂಭಾಜಿ ಭಿಡೆ ಅಲಿಯಾಸ್ ಗುರೂಜಿ ಮಾತನಾಡಿ, ಮಹಿಳೆಯರು ಭಾರತ ಮಾತೆಯಿದ್ದಂತೆ, ಇಂತಹ ಪರಿಸ್ಥಿತಿಯಲ್ಲಿ ಬೊಟ್ಟು ಧರಿಸದೆ ವಿಧವೆಯಂತೆ ಕಾಣಬಾರದು ಎಂದಿದ್ದಾರೆ. ಇದು ಗಮನಕ್ಕೆ ಬರುತ್ತಿದ್ದಂತೆಯೇ ರಾಜ್ಯ ಮಹಿಳಾ ಆಯೋಗ ಸಂಭಾಜಿ ಭಿಡೆ ಅವರಿಗೆ ನೋಟಿಸ್ ಕಳುಹಿಸಿದೆ. ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಂಕರ್ ಅವರು ನೋಟೀಸ್‌ನಲ್ಲಿ, “ಮಹಿಳಾ ಪತ್ರಕರ್ತೆಯ ಹಣೆಗೆ ಬೊಟ್ಟು ಹಾಕದ ಕಾರಣ ಅವರೊಂದಿಗೆ ಮಾತನಾಡಲು ನಿರಾಕರಿಸಿದ್ದೀರಿ. ಮಹಿಳೆ ತನ್ನ ಕೆಲಸದ ಗುಣಮಟ್ಟದಿಂದ ಗುರುತಿಸಲ್ಪಡುತ್ತಾಳೆ. ನಿಮ್ಮ ಹೇಳಿಕೆ ಮಹಿಳೆಯ ಗೌರವ ಮತ್ತು ಸಾಮಾಜಿಕ ಪ್ರತಿಷ್ಠೆಯನ್ನು ಕುಗ್ಗಿಸುವಂತಿದೆ ಎಂದಿದೆ.


  ನಾನು ಪ್ರಜಾಪ್ರಭುತ್ವ ದೇಶದಲ್ಲಿ ವಾಸಿಸುತ್ತಿದ್ದೇನೆ


  ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಂಕರ್ ಅವರು ಕಳುಹಿಸಿರುವ ನೋಟಿಸ್‌ನಲ್ಲಿ, ಈ ಹೇಳಿಕೆ ಕುರಿತು ಸಂಭಾಜಿ ಭಿಡೆ ಅವರಿಂದ ಸ್ಪಷ್ಟನೆ ಕೇಳಲಾಗಿದೆ. ಹೀಗಿರುವಾಗಲೇ ಪತ್ರಕರ್ತೆ ಟ್ವೀಟ್ ಮಾಡಿ, 'ನಾನು ಬೊಟ್ಟು ಇಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವುದು ನನ್ನ ಹಕ್ಕು. ನಾನು ಪ್ರಜಾಪ್ರಭುತ್ವ ದೇಶದಲ್ಲಿ ವಾಸಿಸುತ್ತಿದ್ದೇನೆ ಎಂದಿದ್ದಾರೆ.


  ಇದನ್ನೂ ಓದಿ:  Arshabh Behera: ಫಾರೆವರ್ ಸ್ಟಾರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ ಹೆಸರು ದಾಖಲಿಸಿದ 7 ವರ್ಷದ ಬಾಲಕ


  ಸಂಭಾಜಿ ಭಿಡೆ ತಮ್ಮ ಹೇಳಿಕೆಗಳಿಂದಾಗಿ ಈ ಹಿಂದೆ ಹಲವು ಬಾರಿ ವಿವಾದಕ್ಕೆ ಒಳಗಾಗಿದ್ದರು. ಒಮ್ಮೆ ಅವರು ತನ್ನ ತೋಟದ ಮಾವಿನ ಹಣ್ಣುಗಳನ್ನು ತಿನ್ನುವುದರಿಂದ ದಂಪತಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಎಂದಿದ್ದರು. ಸಂಭಾಜಿ ಭಿಡೆ ಆರ್‌ಎಸ್‌ಎಸ್ ಪ್ರಚಾರಕರಾಗಿದ್ದರು. ನಂತರ ಅವರು ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನ್ ಎಂಬ ತಮ್ಮದೇ ಆದ ಪ್ರತ್ಯೇಕ ಸಂಘಟನೆಯನ್ನು ಸ್ಥಾಪಿಸಿದರು. ಭೀಮಾ-ಕೋರೆಗಾಂವ್ ಹಿಂಸಾಚಾರದಲ್ಲೂ ಅವರ ಹೆಸರು ಕಾಣಿಸಿಕೊಂಡಿದೆ.

  Published by:Precilla Olivia Dias
  First published: