• Home
 • »
 • News
 • »
 • national-international
 • »
 • Bus Accident: ಶಿರಡಿಗೆ ತೆರಳುತ್ತಿದ್ದ ಬಸ್ ನಾಸಿಕ್‌ನಲ್ಲಿ ಭೀಕರ ಅಪಘಾತ, 10 ಪ್ರಯಾಣಿಕರು ಸಾವು, 40 ಮಂದಿಗೆ ಗಾಯ

Bus Accident: ಶಿರಡಿಗೆ ತೆರಳುತ್ತಿದ್ದ ಬಸ್ ನಾಸಿಕ್‌ನಲ್ಲಿ ಭೀಕರ ಅಪಘಾತ, 10 ಪ್ರಯಾಣಿಕರು ಸಾವು, 40 ಮಂದಿಗೆ ಗಾಯ

ಅಪಘಾತಕ್ಕೀಡಾದ ಬಸ್​

ಅಪಘಾತಕ್ಕೀಡಾದ ಬಸ್​

ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ಸಾಯಿಬಾಬಾರವರ ದರ್ಶನಕ್ಕೆ ಶಿರಡಿಗೆ ಹೋಗುತ್ತಿದ್ದರು. ಮೃತರಲ್ಲಿ 7 ಮಹಿಳೆಯರು ಮತ್ತು 3 ಪುರುಷರು ಸೇರಿದ್ದಾರೆ. ಗಾಯಾಳುಗಳನ್ನು ಸಮೀಪದ ಸಾಯಿಬಾಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

 • News18 Kannada
 • 5-MIN READ
 • Last Updated :
 • Maharashtra, India
 • Share this:

ಮಹಾರಾಷ್ಟ್ರ(ಜ.13): ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nasik) ಶುಕ್ರವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ (Accident)ಸಂಭವಿಸಿದೆ. ನಾಸಿಕ್-ಸಿನ್ನಾರ್ ರಸ್ತೆಯಲ್ಲಿ ಖಾಸಗಿ ಲಕ್ಸುರಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು 10 ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಸಿಕ್ಕಿರುವ ಮಾಹಿತಿಯ ಪ್ರಕಾರ ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರು ಸಾಯಿಬಾಬಾರವರ ದರ್ಶನಕ್ಕೆ ಶಿರಡಿಗೆ ಹೋಗುತ್ತಿದ್ದರು. ಮೃತರಲ್ಲಿ 7 ಮಹಿಳೆಯರು ಮತ್ತು 3 ಪುರುಷರು ಸೇರಿದ್ದಾರೆ. ಗಾಯಾಳುಗಳನ್ನು ಸಮೀಪದ ಸಾಯಿಬಾಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.


ಈ ಘಟನೆಯ ವಿಡಿಯೋ ಹೊರಬಿದ್ದಿದ್ದು, ಬಸ್ ಸಂಪೂರ್ಣ ನಜ್ಜುಗುಜ್ಜಾಗಿರುವುದು ಕಂಡು ಬಂದಿದೆ. ಸ್ಥಳದಲ್ಲಿದ್ದ ಸ್ಥಳೀಯರು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ತಲುಪಿದೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ 6 ಮಹಿಳೆಯರು, 2 ಪುರುಷರು ಮತ್ತು 2 ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.


ಇದನ್ನೂ ಓದಿ: Post Office: ಭಾರೀ ಮೊತ್ತದ ಅಪಘಾತ ವಿಮೆ ಪರಿಚಯಿಸಿದ ಅಂಚೆ ಇಲಾಖೆ


ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಬಸ್‌ನಲ್ಲಿದ್ದ ಪ್ರಯಾಣಿಕರು ಮುಂಬೈನ ಅಂಬರನಾಥ್ ನಿವಾಸಿಗಳಾಗಿದ್ದು, ಸಾಯಿಬಾಬಾರವರ ದರ್ಶನಕ್ಕಾಗಿ ಶಿರಡಿಗೆ ಹೋಗುತ್ತಿದ್ದರು. ಸಿನ್ನಾರ್-ಶಿರಡಿ ಹೆದ್ದಾರಿಯ ಪಥೇರ್ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಟ್ರಕ್ ಎರಡೂ ಜಖಂಗೊಂಡಿವೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣಗಳು ಇನ್ನಷ್ಟೇ ತಿಳಿದು ಬರಬೇಕಿದೆ.

Published by:Precilla Olivia Dias
First published: