Tamil Language: ತಮಿಳು ಭಾಷೆ ದೇವರ ಭಾಷೆ ಎಂದ ಮದ್ರಾಸ್​ ಹೈ ಕೋರ್ಟ್​​

ಜನರು ಮಾತನಾಡುವ ಪ್ರತಿಯೊಂದು ಭಾಷೆಯೂ ದೇವರ ಭಾಷೆಯೇ ಎಂದು ಕೂಡ ಇದೇ ವೇಳೆ ಪೀಠ ತಿಳಿಸಿದೆ. 

ಮದ್ರಾಸ್ ಹೈಕೋರ್ಟ್

ಮದ್ರಾಸ್ ಹೈಕೋರ್ಟ್

  • Share this:
    ತಮಿಳು (Tamil ) ಭಾಷೆ ದೇವರ ಭಾಷೆ (Language of Gods) ಎಂದು ಮದ್ರಾಸ್​ ಹೈ ಕೋರ್ಟ್ (Madras High Court)​ ಕೊಂಡಾಡಿದೆ. ದೇಶದಾದ್ಯಂತ ದೇವಾಲಯಗಳಲ್ಲಿ ಅಜ್ವರರು ಮತ್ತು ನಾಯನ್ಮಾರ್‌, ಅರುಣಗಿರಿನಾಥರಂತ ಸಂತರು ರಚಿಸಿದ ತಮಿಳು ಸ್ತೋತ್ರಗಳನ್ನು ಪಠಿಸಬೇಕು ಎಂದು ತಿಳಿಸಿದೆ. ನ್ಯಾಯಮೂರ್ತಿ ಎನ್ ಕಿರುಬಾಕರನ್ ಮತ್ತು ನ್ಯಾಯಮೂರ್ತಿ ಬಿ ಪುಗಲೆಂಧಿ ಅವರ ಪೀಠ ಇತ್ತೀಚೆಗೆ ತಮಿಳು ಭಾಷೆ ಕುರಿತು ತಿಳಿಸಿದೆ. ತಮ್ಮ ಆದೇಶದಲ್ಲಿ, ತಮಿಳು ದೇವ ಭಾಷೆಯಾಗಿದೆ. ಆದರೆ, ಇತ್ತೀಚೆಗೆ ಸಂಸ್ಕೃತವನ್ನು ದೇವಭಾಷೆ ಎಂದು ನಂಬುವಂತೆ ಮಾಡಲಾಗಿದೆ ಎಂದಿದ್ದಾರೆ. ವಿವಿಧ ದೇಶಗಳಲ್ಲಿ ಮತ್ತು ಧರ್ಮಗಳಲ್ಲಿ, ವಿಭಿನ್ನ ರೀತಿಯ ನಂಬಿಕೆಗಳು ಅಸ್ತಿತ್ವದಲ್ಲಿದ್ದವು. ಆದರೆ, ಅವರು ಅಲಲಿನ ಸಂಸ್ಕೃತಿ ಮತ್ತು ಧರ್ಮಕ್ಕೆ ಅನುಗುಣವಾಗಿ ಬದಲಾಗಿವೆ.

    ಸ್ಥಳೀಯ ಭಾಷೆಗಳನ್ನು ಮಾತ್ರ ಸ್ವರ್ಗದ ಭಾಷೆಯಾಗಿ ಬಳಕೆ ಮಾಡಲಾಗಿದೆ. ಆದರೂ, ನಮ್ಮ ದೇಶದಲ್ಲಿ ಸಂಸ್ಕೃತವನ್ನು ದೇವರ ಭಾಷೆ ಎಂದು ನಂಬುವಂತೆ ಮಾಡಲಾಗಿದೆ. ಜೊತೆಗೆ ಸಂಸ್ಕೃತಕ್ಕೆ ಯಾವುದೇ ಭಾಷೆ ಸಮ ಅಲ್ಲ ಎನ್ನಲಾಗಿದೆ. ಸಂಸ್ಕೃತವು ಅಗಾಧ ಪ್ರಾಚೀನ ಸಾಹಿತ್ಯ ಹೊಂದಿರುವ ಭಾಷೆ ಎಂಬುದರಲ್ಲಿ ಸಂದೇಹವಿಲ್ಲ. ಭಕ್ತರಲ್ಲಿ ಸಂಸ್ಕೃತದಲ್ಲಿ ವೇದಗಳನ್ನು ಹೇಳಿದರೆ ಮಾತ್ರ ಅದು ದೇವರಿಗೆ ತಲುಪುತ್ತದೆ ಎಂಬ ನಂಬಿಕೆ ಹರಡಲಾಗಿದೆ ಎಂದು ಪೀಠ ತಿಳಿಸಿದೆ.

    ಕರೂರು ಜಿಲ್ಲೆಯ ದೇವಸ್ಥಾನವನ್ನು ಪ್ರತಿಷ್ಠಾಪಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸುವಾಗ ಪೀಠ ಈ ಕುರಿತು ತಿಳಿಸಿದೆ. ತಮಿಳು ಪ್ರಪಂಚದ ಪ್ರಾಚೀನ ಭಾಷೆಗಳಲ್ಲಿ ಒಂದು ಮಾತ್ರವಲ್ಲದೇ ದೇವರ ಭಾಷೆ ಕೂಡ ಆಗಿದೆ. ಶಿವ ನೃತ್ಯ ಮಾಡುವಾಗ ಬಿದ್ದ ಡಮರುಗದಿಂದ ತಮಿಳು ಭಾಷೆ ಹುಟ್ಟಿತು ಎಂದು ನಂಬಲಾಗಿದೆ. ಇನ್ನೊಂದು ನಂಬಿಕೆ ಪ್ರಕಾರ ಮುರುಗ ದೇವರು ತಮಿಳು ಭಾಷೆಯನ್ನು ರಚಿಸಿದರು ಎನ್ನಲಾಗಿದೆ.
    ಪುರಾಣದ ಪ್ರಕಾರ, ಶಿವನು ಮೊದಲ ತಮಿಳು ಸಂಗಮದ ಅಧ್ಯಕ್ಷತೆ ವಹಿಸಿದ್ದನು. ತಮಿಳು ಕವಿಗಳ ಜ್ಞಾನವನ್ನು ಪರೀಕ್ಷಿಸಲು ಭಗವಾನ್ ಶಿವನು 'ತಿರುವಿಲಯದಲ್ ನುಡಿಸಿದನೆಂಬ ನಂಬಿಕೆ ಇದೆ. ಈ ಮೂಲಕ ತಮಿಳು ಭಾಷೆ ದೇವರೊಂದಿಗೆ ಸಂಪರ್ಕ ಹೊಂದಿದೆ ಎಂಬ ಅರ್ಥವನ್ನು ಇದು ಹೊಂದಿದೆ. ದೇವರೊಂದಿಗೆ ಸಂಪರ್ಕ ಹೊಂದಿರುವ ಹಿನ್ನಲೆ ತಮಿಳು ದೈವಿಕ ಭಾಷೆಯಾಗಿದೆ. ಕುಡಾಮುಝಕು ಪ್ರದರ್ಶಿಸುವಾಗ ಈ ದೈವ ಭಾಷೆ ಬಳಸಬೇಕಾಗುತತದೆ ಎಂದು ನ್ಯಾಯಾಲಯ ತಿಳಿಸಿದೆ.

    ಜನರು ಮಾತನಾಡುವ ಪ್ರತಿಯೊಂದು ಭಾಷೆಯೂ ದೇವರ ಭಾಷೆಯೇ ಎಂದು ಕೂಡ ಇದೇ ವೇಳೆ ಪೀಠ ತಿಳಿಸಿದೆ.

    ಇದನ್ನು ಓದಿ: Oscar Fernandes: ಕಾಂಗ್ರೆಸ್​ ಹಿರಿಯ ನಾಯಕ ಆಸ್ಕರ್​ ಫರ್ನಾಂಡಿಸ್​ ಇನ್ನಿಲ್ಲ

    ಮನುಷ್ಯನು ಭಾಷೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಭಾಷೆಗಳು ಶತಮಾನಗಳಿಂದ ಅಸ್ತಿತ್ವದಲ್ಲಿವೆ. ಒಂದು ತಲೆಮಾರಿನಿಂದ ಇನ್ನೊಂದು ಪೀಳಿಗೆಗೆ ವರ್ಗಾವಣೆಯಾಗುತ್ತವೆ. ಅಸ್ತಿತ್ವದಲ್ಲಿರುವ ಭಾಷೆಯಲ್ಲಿ ಮಾತ್ರ ಸುಧಾರಣೆ ಸಾಧ್ಯ. ಯಾವುದೇ ಭಾಷೆಯ ಸೃಷ್ಟಿಸಲು ಸಾಧ್ಯವಿಲ್ಲ.

    ಅರ್ಜಿದಾರರು ದೇವಸ್ಥಾನಗಳಲ್ಲಿ ಕುಡುಮುಝಕು ಪ್ರದರ್ಶನದ ವೇಳೆ ತಮಿಳು ಪದ್ಯಗಳನ್ನು ಹಾಡಲು ಅವಕಾಶ ಕೇಳುತ್ತಾರೆ. ಆದರೆ, ದೇವಸ್ಥಾನಕ್ಕೆ ಮಾತ್ರವಲ್ಲದೆ ದೇಶದಾದ್ಯಂತ, ಎಲ್ಲಾ ದೇವಾಲಯಗಳಲ್ಲೂ ತಮಿಳು ತಿರುಮುರೈ ಮತ್ತು ಪತಿನಾಥರು, ಅರುಣಗಿರಿನಾಥರ್ ಇತ್ಯಾದಿಗಳ ಹೊರತಾಗಿ ಆಳ್ವಾರ್ಗಲ್ ಮತ್ತು ನಾಯನ್ಮಾರ್ಗಲ್ ಮುಂತಾದ ಸಂತರು ರಚಿಸಿದ ಇತರ ಸ್ತೋತ್ರಗಳನ್ನು ಪಠಿಸುವ ಮೂಲಕ ಪವಿತ್ರಗೊಳಿಸಬೇಕು ಎಂದರು

    ತಮಿಳುನಾಡಿನ ಎರಡು ಪ್ರಮುಖ ಪ್ರಾದೇಶಿಕ ಪಕ್ಷವಾದ ಡಿಎಂಕೆ ಮತ್ತು ಎಐಎಡಿಎಂಕೆ ಕೂಡ 1967 ರಿಂದ ರಾಜ್ಯವನ್ನು ಆಳುತ್ತಿರುವ ನೀತಿ ನಿರೂಪಕರು ಕೂಡ ಎಲ್ಲಾ ಕ್ಷೇತ್ರಗಳಲ್ಲಿ ತಮಿಳನ್ನು ಬಳಸಲು ಆಸಕ್ತಿ ಹೊಂದಿದ್ದಾರೆ ಎಂದು ನ್ಯಾಯಲಯ ಉಲ್ಲೇಖಿಸಿದೆ.
    Published by:Seema R
    First published: