• Home
  • »
  • News
  • »
  • national-international
  • »
  • Court Order: ತಲೆ ತಲಾಂತರದಿಂದ ಪೂಜಿಸಿದ ಈ ವಿಗ್ರಹ ಹಿಂದೂ ದೇವರಲ್ಲ! ಹೈಕೋರ್ಟ್​ನಿಂದ ಖಡಕ್ ಆದೇಶ

Court Order: ತಲೆ ತಲಾಂತರದಿಂದ ಪೂಜಿಸಿದ ಈ ವಿಗ್ರಹ ಹಿಂದೂ ದೇವರಲ್ಲ! ಹೈಕೋರ್ಟ್​ನಿಂದ ಖಡಕ್ ಆದೇಶ

ಇದೇ ಆ ದೇವಸ್ಥಾನ!

ಇದೇ ಆ ದೇವಸ್ಥಾನ!

ತಲೈವೆಟ್ಟಿ ಮುನಿಯಪ್ಪನ್ ದೇವಾಲಯದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪೂಜೆ, ಆಚರಣೆಗಳನ್ನು ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಆದೇಶ ಪ್ರಕಟಿಸಿದೆ. 

  • News18 Kannada
  • Last Updated :
  • Tamil Nadu, India
  • Share this:

    ಇಷ್ಟು ದಿನ ದೇವರು ಅಂತ ಆರಾಧಿಸಿದ್ದು ನಾವು ಆರಾಧಿಸಿದ ದೇವರೇ ಅಲ್ಲ ಎಂದು ತಿಳಿದರೆ! ಅಬ್ಬಾ! ಯಾರಿಗೇ ಆಗಲಿ, ಒಮ್ಮೆ ಶಾಕ್ ಆಗೋದು ಖಂಡಿತ. ಇಂತಹುದೇ ಒಂದು ಅತಿ ವಿಚಿತ್ರ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ (Tamil Nadu) ಸೇಲಂ ಜಿಲ್ಲೆಯ ಪೆರಿಯೇರಿ ಗ್ರಾಮದಲ್ಲಿರುವ ದೇವಾಲಯವೊಂದರಲ್ಲಿ ಆರಾಧಿಸುತ್ತಿದ್ದ ತಲೈವೆಟ್ಟಿ ಮುನಿಯಪ್ಪನ್ ದೇವರು (Thalaivetti Muniyappan Temple) ಇದೀಗ ಬುದ್ಧ ಎಂದು ಸಾಬೀತಾಗಿದೆ. ಈ ದೇವಾಲಯದಲ್ಲಿ ಬುದ್ಧನ ಶಿಲ್ಪವಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಗೆ (Archaeological Department) ಮದ್ರಾಸ್ ಹೈಕೋರ್ಟ್ (Madras High Court) ಖಡಕ್ ಆದೇಶ ನೀಡಿದೆ.


    ತಲೈವೆಟ್ಟಿ ಮುನಿಯಪ್ಪನ್ ದೇವಾಲಯದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪೂಜೆ, ಆಚರಣೆಗಳನ್ನು ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಆದೇಶ ಪ್ರಕಟಿಸಿದೆ.  ಅಲ್ಲದೇ ದೇವಾಲಯದ ಪ್ರಾಂಗಣದಲ್ಲಿ ಬುದ್ಧನ ಶಿಲ್ಪ ಇರುವ ಕುರಿತು ಬೋರ್ಡ್ ಹಾಕಲು ಸಹ​ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಮದ್ರಾಸ್ ಹೈಕೋರ್ಟ್​ ನಿರ್ದೇಶನ ನೀಡಿದೆ.


    2011ರಲ್ಲಿಯೇ ದಾಖಲಾಗಿತ್ತು ಪ್ರಕರಣ
    ಇದಕ್ಕೂ ಮುನ್ನ ಇಡೀ ಊರಿನ ಜನರು ದೇವಾಲಯದಲ್ಲಿರುವ ದೇವರನ್ನು ತಲವೆಟ್ಟಿ ಮುನಿಯಪ್ಪನ್ ಎಂದು ಪೂಜಿಸುತ್ತಿದ್ದರು. 2011ರಲ್ಲಿ ಸೇಲಂನ ಪಿ. ರಂಗನಾಥನ್ ಮತ್ತು ಬುದ್ಧ ಟ್ರಸ್ಟ್‌ನವರು ತಲವೆಟ್ಟಿ ಮುನಿಯಪ್ಪನ್ ದೇವಾಲಯವನ್ನು ಬೌದ್ಧರ ಕ್ಷೇತ್ರವೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಈ ಕುರಿತು 2017 ರಲ್ಲಿ ನ್ಯಾಯಾಲಯ ಪುರಾತತ್ವ ಇಲಾಖೆಗೆ ತನಿಖೆ ಕೈಗೊಳ್ಳುವಂತೆ ಸೂಚನೆ ನೀಡಿತ್ತು.


    ಇದನ್ನೂ ಓದಿ: Cyclone Mandous: ಮಾಂಡೌಸ್ ಎಫೆಕ್ಟ್​: ತಮಿಳುನಾಡು, ಚೆನ್ನೈ, ಪುದುಚೇರಿಯಲ್ಲಿ ಭಾರೀ ಮಳೆ?


    ನ್ಯಾಯಾಲಯದ ಸೂಚನೆ ಆಧರಿಸಿ ಪುರಾತತ್ತ್ವ ಶಾಸ್ತ್ರ ಇಲಾಖೆ ತಲವೆಟ್ಟಿ ಮುನಿಯಪ್ಪನ್ ದೇಗುಲದ ಕುರಿತು ನಡೆಸಿದ ತನಿಖೆಯಲ್ಲಿ ಅದು ಬೌದ್ಧ ದೇಗುಲವೆಂಬ ಅಂಶ ಹೊರಬಿದ್ದಿದೆ.


    ಪುರಾತತ್ತ್ವ ಇಲಾಖೆಯ ಕಂಡುಕೊಂಡಿದ್ದೇನು?
    ತಲವೆಟ್ಟಿ ಮುನಿಯಪ್ಪನ್ ದೇವಸ್ಥಾನದ ಕುರಿತು ಸಮಗ್ರ ಸಂಶೋಧನೆ ನಡೆಸಿದ ಪುರಾತತ್ತ್ವ ಇಲಾಖೆ ದೇಗುಲದಲ್ಲಿರುವ ದೇವರ ಮೂರ್ತಿಯು ಬುದ್ಧನ ಮೂರ್ತಿಯ ಲಕ್ಷಣಗಳನ್ನು ಹೋಲುತ್ತದೆ ಎಂದುನ್ಯಾಯಾಲಯಕ್ಕೆ ವರದಿ ನೀಡಿದೆ.


    ವಿಗ್ರಹದ ಮೂರ್ತಿ ಮೇಲಿತ್ತು ಈ ಚಿಹ್ನೆಗಳು
    ದೇವರ ಮೂರ್ತಿಯು ಕಮಲದ ಮೇಲೆ ಕುಳಿತು ಅರ್ಧಪದ್ಮಾಸನ ಮುದ್ರೆಯಲ್ಲಿದೆ. ಅಲ್ಲದೇ, ಇತರೆಡೆ ಬುದ್ಧನ ಮೂರ್ತಿಗಳಿಗೆ ಇರುವಂತೆ ಗುಂಗುರು ಕೂದಲನ್ನು ಹೊಂದಿದೆ. ಹೀಗಾಗಿ ಮೂರ್ತಿಯ ಎಲ್ಲ ಲಕ್ಷಣಗಳನ್ನೂ ಆಧರಿಸಿ ಅದು ತಲವೆಟ್ಟಿ ಮುನಿಯಪ್ಪನ್ ದೇವರಲ್ಲ, ಬದಲಿಗೆ, ಬುದ್ಧನ ವಿಗ್ರಹ ಎಂದು ಪುರಾತತ್ತ್ವ ಇಲಾಖೆ ವರದಿ ನೀಡಿದೆ.


    ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಪೂಜೆ, ಆಚರಣೆ ನಡೆಸಲು ನಿರ್ಬಂಧ
    ಈ ವರದಿಯನ್ನು ಆಧರಿಸಿದ ನ್ಯಾಯಾಲಯ ಇನ್ಮೇಲೆ ತಲವೆಟ್ಟಿ ಮುನಿಯಪ್ಪನ್ ದೇವರು ಎಂದು ಪೂಜಿಸುವಂತಿಲ್ಲ. ಈ ದೇವಸ್ಥಾನದಲ್ಲಿರುವ ದೇವರನ್ನು ಬುದ್ಧನ ವಿಗ್ರಹ ಎಂದೇ ಪೂಜಿಸಬಹುದು ಎಂದು ತೀರ್ಪಿತ್ತಿದೆ. ಜೊತೆಗೆ ದೇಗುಲದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಪೂಜೆ, ಆಚರಣೆಗಳನ್ನು ನಡೆಸದಿರುವಂತೆ ನಿರ್ದೇಶನ ನೀಡಿದೆ.


    ಇದನ್ನೂ ಓದಿ: Himachal Pradesh: ಗುಜರಾತ್​ MLAಗಳಿಗಿಂತ ಹೆಚ್ಚು ವೇತನ, ಭತ್ಯೆ ಪಡೆಯುತ್ತಾರೆ ಹಿಮಾಚಲ ಪ್ರದೇಶ ಶಾಸಕರು, ಕಾರಣ ಹೀಗಿದೆ


    ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಯಂತಹ ಮಸೀದಿ-ಮಂದಿರ ವಿವಾದಗಳಿಗೆ ಈ ಪ್ರಕರಣದ ಹೋಲಿಕೆ ಮಾಡಿ ಹಲವು ರೀತಿಯ ಚರ್ಚೆ ಆರಂಭವಾಗಿದೆ. ತಲವೆಟ್ಟಿ ಮುನಿಯಪ್ಪನ್ ದೇವಸ್ಥಾನದ ಕುರಿತು ಕೋರ್ಟ್ ನೀಡಿದ ತೀರ್ಪು ಈ ಪ್ರಕರಣಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಚರ್ಚೆಗಳೂ ಶುರುವಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು