ಕಲ್ಯಾಣ ಮಂಟಪಕ್ಕೆ ತೆರಿಗೆ ವಿನಾಯಿತಿ ಬೇಕೆಂದು ಕೋರಿದ ರಜಿನೀಕಾಂತ್​ಗೆ ಮದ್ರಾಸ್ ಹೈಕೋರ್ಟ್ ತಪರಾಕಿ

ಚೆನ್ನೈ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಕೇಳಿ ನೋಟೀಸ್ ನೀಡಿದ್ದನ್ನು ಪ್ರಶ್ನಿಸಿ ರಜಿನಿಕಾಂತ್ ಹೈಕೋರ್ಟ್ ಮೊರೆ ಹೋಗಿದ್ದರು. ಮಾರ್ಚ್ 24ರಂದು ಲಾಕ್​ಡೌನ್ ಘೋಷಣೆ ಆದಾಗಿನಿಂದ ತಮ್ಮ ಕಲ್ಯಾಣ ಮಂಟಪಕ್ಕೆ ಆದಾಯವೇ ಬಂದಿಲ್ಲ ಎಂಬುದು ಅವರ ವಾದ.

ರಜಿನಿಕಾಂತ್

ರಜಿನಿಕಾಂತ್

 • News18
 • Last Updated :
 • Share this:
  ಚೆನ್ನೈ(ಅ. 14): ಇಲ್ಲಿಯ ಕೋಡಂಬಾಕ್ಕಂನಲ್ಲಿರುವ ತಮ್ಮ ಕಲ್ಯಾಣ ಮಂಟಪಕ್ಕೆ ಚೆನ್ನೈ ಮಹಾನಗರ ಪಾಲಿಕೆ 6.5 ಲಕ್ಷ ಮೊತ್ತದ ಆಸ್ತಿ ತೆರಿಗೆ ವಿಧಿಸಿದ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ ನಟ ರಜಿನೀಕಾಂತ್ ಅವರಿಗೆ ಮದ್ರಾಸ್ ಹೈಕೋರ್ಟ್ ಎಚ್ಚರಿಕೆ ನೀಡಿದೆ. ತೆರಿಗೆ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿವ ತಮ್ಮಿಂದ ಕೋರ್ಟ್ ವೆಚ್ಚವನ್ನು ವಸೂಲಿ ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿತು. ಇದಾದ ಬಳಿಕ ತಲೈವಾ ಪರ ವಕೀಲರು ತಮ್ಮ ಅರ್ಜಿಯನ್ನು ವಾಪಸ್ ತೆಗೆದುಕೊಳ್ಳಲು ಸಮಯಾವಕಾಶ ಕೇಳಿದರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

  ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಲಾಕ್ ಡೌನ್ ಘೋಷಿಸಲಾಗಿತ್ತು. ಆಗಿನಿಂದಲೂ ಶ್ರೀ ರಾಘವೇಂದ್ರ ಕಲ್ಯಾಣ ಮಂಡಪಮ್ ಖಾಲಿ ಉಳಿದಿದೆ. ಯಾವುದೇ ಆದಾಯ ಬಂದಿಲ್ಲ. ಆದರೆ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಆಸ್ತಿ ತೆರಿಗೆ ಪಾವತಿಗೆ ನೋಟೀಸ್ ನೀಡಿದೆ. ಆದಾಯವೇ ಇಲ್ಲದ ಮೇಲೆ ತೆರಿಗೆ ಪಾವತಿ ಹೇಗೆ ಪಾವತಿಸುವುದು ಎಂದು ರಜಿನೀಕಾಂತ್ ಹೈಕೋರ್ಟ್​ನಲ್ಲಿ ದೂರು ದಾಖಲಿಸಿದ್ದರು.

  ಇದನ್ನೂ ಓದಿ: ನೋಟು ಮುಟ್ಟುವಾಗ ಜೋಪಾನ; ಆಸ್ಟ್ರೇಲಿಯಾ ವಿಜ್ಞಾನಿಗಳಿಂದ ವೈರಸ್ ಬಾಂಬ್  ಕಾಲಿವುಡ್ ಸೂಪರ್ ಸ್ಟಾರ್ ರಜಿನೀಕಾಂತ್ ಅವರು ಸದ್ಯದಲ್ಲೇ ತಮ್ಮದೇ ಹೊಸ ರಾಜಕೀಯ ಪಕ್ಷವನ್ನ ಘೋಷಿಸುವ ಸಾಧ್ಯತೆ ಇದೆ. ಇದೇ ವೇಳೆ, ಅವರ ಸಿನಿ ಪ್ರಯಾಣ ಮುಂದುವರಿಯುತ್ತಿದೆ. ಎಆರ್ ಮುರುಗದಾಸ್ ನಿರ್ದೇಶನದ ದರ್ಬಾರ್ ಸಿನಿಮಾ ಫ್ಲಾಪ್ ಆದ ಬಳಿಕ ತಲೈವಾ ಇದೀಗ ಶಿವ ನಿರ್ದೇಶನದ ‘ಅಣ್ಣಾತ್ತ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನಿನ್ನೆ ಬಿಜೆಪಿಗೆ ಸೇರ್ಪಡೆಯಾದ ನಟಿ ಖುಷ್ಬು ಈ ಸಿನಿಮಾದಲ್ಲಿ ನಟಸಿದ್ಧಾರೆ. ಪ್ರಕಾಶ್ ರಾಜ್, ನಯನತಾರಾ, ಕೀರ್ತಿ ಸುರೇಶ್ ಮೊದಲಾದವರ ತಾರಾಗಣ ಈ ಚಿತ್ರದಲ್ಲಿದೆ.
  Published by:Vijayasarthy SN
  First published: