Mangalsutra: ತಾಳಿ ತೆಗೆದಿಡುವುದು ಗಂಡನಿಗೆ ಮಾನಸಿಕ ಕ್ರೌರ್ಯ; ಮದ್ರಾಸ್ ಹೈಕೋರ್ಟ್

ಗಂಡನಿಂದ ದೂರವಾದ ಪತ್ನಿಯು ತಾಳಿ ತೆಗೆದಿಟ್ರೆ ಅದರಿಂದ ಗಂಡನಿಗೆ ಮಾನಸಿಕ ಹಿಂಸೆ  ನೀಡಿದಂತೆ. ಅದೊಂದು ಕ್ರೌರ್ಯ ಎಂದು ವ್ಯಕ್ತಿಯೊಬ್ಬರಿಗೆ ಡೈವೋರ್ಸ್ ಪಡೆಯಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ತನ್ನ ಪತ್ನಿ ಮಂಗಳಸೂತ್ರವನ್ನು ಧರಿಸುತ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಗೆ ಕೋರ್ಟ್ ಡೈವೋರ್ಸ್ ನೀಡಲು ಅನುಮತಿ ನೀಡಿದೆ.

ಮದ್ರಾಸ್ ಹೈಕೋರ್ಟ್

ಮದ್ರಾಸ್ ಹೈಕೋರ್ಟ್

  • Share this:
ಹಿಂದೂ ಸಂಪ್ರದಾಯದಲ್ಲಿ ತಾಳಿಗೆ ಅದರದ್ದೇ ಆದ ಮಹತ್ವ ಇದೆ. ತಾಳಿಯನ್ನು ಮಂಗಳಸೂತ್ರ (Mangala sutra), ಮಾಂಗಲ್ಯ ಎಂದು ಸಹ ಕರೆಯುತ್ತಾರೆ. ಮದುವೆಯ (Marriage) ಸಮಯದಲ್ಲಿ ವರನ ವಧುವಿಗೆ ಕಟ್ಟುತ್ತಾನೆ. ಅಂದಿನಿಂದ ಆಕೆಯ ವೈವಾಹಿಕ ಜೀವನ ಪ್ರಾರಂಭ ಆಯ್ತು ಎಂದು ಅರ್ಥ. ಸಂಸ್ಕೃತದಲ್ಲಿ ಮಂಗಳ ಎಂದರೆ ಶುಭ, ಸೂತ್ರ ಎಂದರೆ ದಾರ ಎಂದು ಅರ್ಥ. ಇತರೆ ಪುರುಷರು ಸಹ ಮದುವೆಯಾದ ಹೆಣ್ಣಿನ ಮೇಲೆ ಕೆಟ್ಟ ದೃಷ್ಟಿ ಬೀರಬಾರದು ಎಂದು ಸಹ ತಾಳಿಯನ್ನು ಕಟ್ಟಲಾಗುತ್ತದೆ. ಗಂಡನಿಂದ ದೂರವಾದ ಪತ್ನಿಯು ತಾಳಿ ತೆಗೆದಿಟ್ರೆ ಅದರಿಂದ ಗಂಡನಿಗೆ ಮಾನಸಿಕ ಹಿಂಸೆ  ನೀಡಿದಂತೆ. ಅದೊಂದು ಕ್ರೌರ್ಯ (cruelty) ಎಂದು ವ್ಯಕ್ತಿಯೊಬ್ಬರಿಗೆ ಡೈವೋರ್ಸ್ (Divorce) ಪಡೆಯಲು ಮದ್ರಾಸ್ (Madras) ಹೈಕೋರ್ಟ್ (High court) ಅನುಮತಿ ನೀಡಿದೆ. ತನ್ನ ಪತ್ನಿ ಮಂಗಳಸೂತ್ರವನ್ನು ಧರಿಸುತ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಗೆ ಕೋರ್ಟ್ ಡೈವೋರ್ಸ್ ನೀಡಲು ಅನುಮತಿ ನೀಡಿದೆ.

ಈರೋಡ್‍ನ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ಶಿವಕುಮಾರ್ ಅವರ ಪತ್ನಿ 2011ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. 2016 ಜೂನ್ 15ರ ಇವರಿಬ್ಬರಿಗೆ ಸ್ಥಳೀಯ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ನೀಡಲು ನಿರಾಕರಿಸಿತ್ತು.

ಪತಿಯಿಂದ ದೂರ ಇದ್ರೂ ತಾಳಿ ತೆಗೆದ್ರೆ ಪತಿಗೆ ಹಿಂಸೆ!
ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ಶಿವಕುಮಾರ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಎಂ ವೇಲುಮಣಿ ಮತ್ತು ಎಸ್ ಸೌಂಥರ್ ಅವರ ವಿಭಾಗೀಯ ಪೀಠವು ಗಂಡನಿಂದ ದೂರವಾದ ಪತ್ನಿಯು ತಾಳಿ ತೆಗೆದಿಟ್ರೆ ಅದರಿಂದ ಗಂಡನಿಗೆ ಮಾನಸಿಕ ಹಿಂಸೆ ನೀಡಿದಂತೆ. ಅದೊಂದು ಕ್ರೌರ್ಯ ಎಂದು ಎಂದು ಶಿವಕುಮಾರ್‍ಗೆ ಡೈವೋರ್ಸ್ ನೀಡಲು ಒಪ್ಪಿದೆ.

ವಿಚಾರಣೆ ವೇಳೆ ಮಹಿಳೆ ಹೇಳಿದ್ದೇನು?
ಇನ್ನು ಕೋರ್ಟ್‍ನಲ್ಲಿ ಮಹಿಳೆಯನ್ನು ವಿಚಾರಣೆ ನಡೆಸಿದಾಗ ಹೌದು ನಾನು ಮಂಗಳಸೂತ್ರವನ್ನು ತೆಗೆದಿಟ್ಟಿದ್ದೇನೆ. ತಾಳಿಯನ್ನು ಲಾಕರ್​ನಲ್ಲಿ ಇಟ್ಟಿದ್ದೇನೆ. ಕರಿಮಣಿ ಸರ ಮಾತ್ರ ತೆಗೆದಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಆಗ ನ್ಯಾಯಾಧೀಶರು ತಾಳಿಗೆ ಅದರದ್ದೇ ಆದ ಮಹತ್ವ ಇದೆ. ಅದನ್ನು ತೆಗೆದಿಡುವುದು ಸರಿಯಲ್ಲ ಎಂದ ತರಾಟೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ: Transfer Threat: ಜಡ್ಜ್​ಗೆ ವರ್ಗಾವಣೆ ಬೆದರಿಕೆ ಪ್ರಕರಣ! ಸುಪ್ರೀಂನಲ್ಲಿ ಇಂದು ವಿಚಾರಣೆ

ಮಹಿಳೆ ಪರ ವಕೀಲರ ವಾದವೇನಾಗಿತ್ತು?
ವಿವಾಹಿತ ಮಹಿಳೆ ತಾಳಿ ಕೊಟ್ಟಿಕೊಳ್ಳಲೇಬೇಕೆಂಬ ನಿಯಮವಿಲ್ಲ ಎಂದು ಹಿಂದೂ ವಿವಾಹ ಕಾಯ್ದೆಯ 7 ಅನ್ನು ಉಲ್ಲೇಖಿಸಿ ವಾದ ಮಾಡಿದ್ರು. ತಾಳಿ ಹಾಕಿಕೊಳ್ಳುವುದು ಅಥವಾ ತೆಗೆದಿಡುವುದು ವೈವಾಹಿಕ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ರು.

ನ್ಯಾಯಪೀಠ ಹೇಳಿದ್ದೇನು?
ವಕೀಲರು ತಾಳಿ ಕಟ್ಟಿಕೊಳ್ಳುವ ನಿಯಮವಿಲ್ಲ ಎಂದು ವಾದಿಸುತ್ತಿದ್ದಂತೆ, ನ್ಯಾಯಪೀಠವು ಮದುವೆಯ ಸಂದರ್ಭದಲ್ಲಿ ತಾಳಿ ಕಟ್ಟುವುದ ಅಗತ್ಯವಾಗಿದೆ. ಅದರದ್ದೇ ಆದ ಸಂಪ್ರದಾಯವಿದೆ. ಯಾವೊಬ್ಬ ಮಹಿಳೆಯೂ ತಾಳಿಯನ್ನು ಲಾಕರ್‍ನಲ್ಲಿ ಇಡಲ್ಲ. ವೈವಾಹಿಕ ಜೀವನದ ನಿರಂತರತೆಯನ್ನು ಸಂಕೇತಿಸುತ್ತದೆ. ಪತಿ ಮರಣವಾದ ನಂತರವಷ್ಟೇ ಕೆಲವರು ತಾಳಿಯನ್ನು ತೆಗೆದುಹಾಕಲಾಗುತ್ತದೆ. ಹೆಂಡತಿ ಮಾಂಗಲ್ಯವನ್ನು ತೆಗೆಯುವ ಮೂಲಕ ಗಂಡನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ:  Ram Setu: ರಾಷ್ಟ್ರೀಯ ಸ್ಮಾರಕವಾಗಲಿದೆಯೇ ರಾಮಸೇತು? ಜುಲೈ 26ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಗಂಡನಿಗೆ ಬೇರೆಯವಳ ಜೊತೆ ಸಂಬಂಧ ಇದೆ ಎಂದು ಅವಮಾನ
ಪತ್ನಿಯು ಪತಿಯ ಸ್ನೇಹಿತರು, , ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಪೆÇಲೀಸರ ಮುಂದೆ ತನ್ನ ಗಂಡನಿಗೆ ವಿವಾಹೇತರ ಸಂಬಂಧವಿದೆ ಎಂದು ಹೇಳಿದ್ದಾಳೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‍ಗಳ ತೀರ್ಪಿನ ಹಿನ್ನೆಲೆಯಲ್ಲಿ ಹೆಂಡತಿ ಗಂಡನಿಗೆ ಮಾನಸಿಕ ಹಿಂಸೆಯನ್ನು ನೀಡಿದ್ದಾಳೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಲ್ಲದೇ 2011 ರಿಂದ ದೂರ ಇರುವ ಹೆಂಡತಿ ಮತ್ತೆ ತನ್ನ ಪತಿ ಜೊತೆ ಇರುತ್ತೇನೆ ಎಂದು ಹೇಳಿಲ್ಲ. ತಾಳಿ ತೆಗೆದಿಟ್ಟು ಮಾನಸಿಕ ಕ್ರೌರ್ಯ ಉಂಟುಮಾಡಿದ್ದಾಳೆ ಎಂದು ಕೋರ್ಟ್ ಹೇಳಿದೆ.
Published by:Savitha Savitha
First published: