HOME » NEWS » National-international » MADRAS HC REJECTS PLEA TO REOPEN STERLITE COPPER PLANT IN TAMIL NADU SNVS

ತಮಿಳುನಾಡಿನ ಸ್ಟೆರ್​ಲೈಟ್ ಕಾಪರ್ ಘಟಕ ಪುನಾರಂಭಕ್ಕೆ ಮದ್ರಾಸ್ ಹೈಕೋರ್ಟ್ ನಕಾರ

ಎರಡು ವರ್ಷದ ಹಿಂದೆ ಪರಿಸರ ಮಾಲಿನ್ಯ ಮಾಡುತ್ತಿದೆ ಎಂಬ ಆರೋಪದ ಮೇಲೆ ಪ್ರತಿಭಟನೆ ಮಾಡುತ್ತಿದ್ದ ಜನರ ಮೇಲೆ ನಡೆದ ಗೋಲಿಬಾರ್​ನಲ್ಲಿ 13 ಮಂದಿ ಸಾವನ್ನಪ್ಪಿದ್ದರು. ಆಗಿನಿಂದ ಮುಚ್ಚಿಸಲಾಗಿದ್ದ ಸ್ಟೆರ್​ಲೈಟ್ ಕಾಪರ್ ಕಾರ್ಖಾನೆಯನ್ನು ತೆರೆಯಲು ಈವರೆಗೆ ಅನುಮತಿ ಸಿಕ್ಕಿಲ್ಲ.


Updated:August 18, 2020, 3:37 PM IST
ತಮಿಳುನಾಡಿನ ಸ್ಟೆರ್​ಲೈಟ್ ಕಾಪರ್ ಘಟಕ ಪುನಾರಂಭಕ್ಕೆ ಮದ್ರಾಸ್ ಹೈಕೋರ್ಟ್ ನಕಾರ
ಸ್ಟೆರ್​ಲೈಟ್ ಕಾಪರ್
  • Share this:
ಚೆನ್ನೈ(ಆ. 18): ತೂತ್ತುಕ್ಕುಡಿ ಜಿಲ್ಲೆಯಲ್ಲಿರುವ ಸ್ಟೆರ್​ಲೈಟ್ ತಾಮ್ರ ಉತ್ಪಾದನಾ ಘಟಕದ ಪುನಾರಂಭಕ್ಕೆ ನಡೆದ ಪ್ರಯತ್ನ ಮತ್ತೆ ವಿಫಲವಾಗಿದೆ. ವೇದಾಂತ ಗ್ರೂಪ್ ಸಂಸ್ಥೆ ತನ್ನ ಮಾಲಿಕತ್ವದ ಈ ಘಟಕವನ್ನು ಮತ್ತೆ ಪ್ರಾರಂಭಿಸಲು ಸಲ್ಲಿಸಿದ್ದ ಅರ್ಜಿಗಳನ್ನ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತು. ತಮಿಳುನಾಡಿನ ಪ್ರಮುಖ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ಧಾರೆ. ಆದರೆ, ಸ್ಟೆರ್​ಲೈಟ್​ನ ಮಾಲೀಕ ಸಂಸ್ಥೆ ವೇದಾಂತ ಗ್ರೂಪ್ ತಾನು ಕಾನೂನಾತ್ಮಕ ಹೋರಾಟ ಮುಂದುವರಿಸುವುದಾಗಿ ಹೇಳಿದೆ.

“ಸ್ಟೆರ್​ಲೈಟ್ ಕಾಪರ್ ಘಟಕದ ಉದ್ಯೋಗಿಗಳು, ಹಾಗೂ ಇದರ ಜೊತೆ ಭಾಗಿಯಾಗಿರುವ ಸಾವಿರಾರು ಸಣ್ಯ ಉದ್ಯಮಗಳಿಗೆ ಹೈಕೋರ್ಟ್ ತೀರ್ಪು ಆಘಾತ ತಂದಿದೆ. ನಮ್ಮ ಘಟಕದಲ್ಲಿ ಸುರಕ್ಷತೆ ಮತ್ತು ಪರಿಸರಸ್ನೇಹಿ ಕ್ರಮಗಳನ್ನ ಕೈಗೊಂಡಿದ್ದೇವೆ. ಆದರೆ, ಕೆಲ ಪಕ್ಷಗಳು ನಮ್ಮ ವಿರುದ್ಧ ಅರ್ಧಸತ್ಯಗಳನ್ನ ಮಾತ್ರ ಹೇಳುತ್ತಿರುವುದುಬೇಸರ ತಂದಿದೆ” ಎಂದು ಸ್ಟೆರ್​ಲೈಟ್ ಕಾಪರ್ ಸಂಸ್ಥೆಯ ಸಿಇಒ ಪಂಕಜ್ ಕುಮಾರ್ ಹೇಳಿದ್ದಾರೆ.

ಎರಡು ವರ್ಷಗಳಿಂದಲೂ ಸ್ಟೆರ್​ಲೈಟ್ ಘಟಕ ಮುಚ್ಚಿದೆ. ತಾಮ್ರ ಉತ್ಪಾದನೆ ಆಗುವ ಈ ಕಾರ್ಖಾನೆಯಿಂದ ಪರಿಸರಕ್ಕ ಹಾನಿಯಾಗುತ್ತಿದೆ ಎಂದು ಸ್ಥಳೀಯ ಜನರು 2018ರಲ್ಲಿ ತೂತ್ತುಕ್ಕುಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಗೋಲಿಬಾರ್ ಮಾಇದ್ದರು. ಆಗ 13 ಮಂದಿ ಸಾವನ್ನಪ್ಪಿ ರಾಷ್ಟ್ರಾದ್ಯಂತ ದೊಡ್ಡ ಸುದ್ದಿಯಾಯಿತು. ಹೊಸದಾಗಿ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾಗಿದ್ದ ಎಡಪ್ಪಾಡಿ ಪಳನಿಸ್ವಾಮಿ ಅವರು ಸ್ಟೆರ್​ಲೈಟ್ ಘಟಕವನ್ನು ಮುಚ್ಚಿಸಿದರು. ಆದರೆ, ಅದನ್ನು ಮತ್ತೆ ಪ್ರಾರಂಭಿಸಲು ನಡೆಯುತ್ತಿರುವ ನಿರಂತರ ಪ್ರಯತ್ನಗಳು ವಿಫಲವಾಗುತ್ತಿವೆ.

ಇದನ್ನೂ ಓದಿ: ಗೋವಾದ ರಾಜ್ಯಪಾಲ ಸತ್ಯಪಾಲ್​ ಮಲಿಕ್ ಮೇಘಾಲಯಕ್ಕೆ ವರ್ಗಾವಣೆ

ಅನಿಲ್ ಅಗರ್ವಾಲ್ ಸಂಸ್ಥಾಪಿತ ವೇದಾಂತ ಗ್ರೂಪ್​ನ ಒಡೆತನದ ಸ್ಟೆರ್​ಲೈಟ್ ಕಾಪರ್ ಘಟಕದಲ್ಲಿ ತಾಮ್ರದ ಉತ್ಪಾದನೆ ನಡೆಯುತ್ತಿದೆ. ಆದರೆ, ಚೀನಾದಿಂದ ತಾಮ್ರ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇರುವಾಗ ತಮ್ಮ ಘಟಕವನ್ನು ಬಂದ್ ಮಾಡಿರುವುದರ ಬಗ್ಗೆ ಸ್ಟೆರ್​ಲೈಟ್ ಕಾಪರ್​ನ ಸಿಇಒ ಪಂಕಜ್ ಕುಮಾರ್ ಅಚ್ಚರಿ ವ್ಯಕ್ತಪಡಿಸುತ್ತಾರೆ.

Youtube Video


“ತಾಮ್ರದ ಆಮದಿಗಾಗಿ ನೆರೆಯ ದೇಶಗಳೊಂದಿಗೆ ಅವಲಂಬಿತವಾದ ಪರಿಸ್ಥಿತಿ ಇರುವಾಗ ಕೆಲ ಶಕ್ತಿಗಳು ನಮ್ಮ ದೇಶದ ತಾಮ್ರ ಉತ್ಪಾದನಾ ಶಕ್ತಿಯನ್ನು ಅದುಮಲು ಸಂಚು ರೂಪಿಸಿವೆ. ನಮ್ಮ ಘಟಕದಿಂದ ಪರಿಸರ ಮಾಲಿನ್ಯವಾದ ಬಗ್ಗೆ ಯಾವುದೇ ಅಧಿಕೃತ ಆರೋಪ ಬಂದಿಲ್ಲ. ಆದ್ದರಿಂದ ನಮಗೆ ನ್ಯಾಯ ಸಿಗಲು ಎಲ್ಲಾ ರೀತಿಯ ಕಾನೂನು ಮಾರ್ಗಗಳನ್ನ ಅನುಸರಿಸುತ್ತೇವೆ” ಎಂದು ಸಿಇಒ ಪಂಕಜ್ ಕುಮಾರ್ ತಿಳಿಸಿದ್ಧಾರೆ.ಇದನ್ನೂ ಓದಿ: Terrorists Encounter: ಜಮ್ಮು ಕಾಶ್ಮೀರದಲ್ಲಿ ಎಲ್​ಇಟಿ ಕಮಾಂಡರ್ ಸೇರಿ ಮೂವರು ಉಗ್ರರ ಎನ್​ಕೌಂಟರ್

ಮದ್ರಾಸ್ ಹೈಕೋರ್ಟ್ ಇದೇ ಮಾರ್ಚ್ ತಿಂಗಳಲ್ಲೀ ಈ ಪ್ರಕರಣದಲ್ಲಿ ತೀರ್ಪು ನೀಡಬೇಕಿತ್ತು. ಆದರೆ, ಲಾಕ್​ಡೌನ್ ಕಾರಣದಿಂದ ಮುಂದೂಡಿಕೆ ಆಗಿ ಇವತ್ತು ತೀರ್ಪು ಬಂದಿದೆ. ಈಗ ವೇದಾಂತ ಸಂಸ್ಥೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ನಿರೀಕ್ಷೆ ಇದೆ.
First published: August 18, 2020, 3:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories