ಸದ್ಯದಲ್ಲೇ ಚೆನ್ನೈಗೆ ಆಗಮಿಸಲಿರುವ ಮೋದಿ-ಚೀನಾ ಅಧ್ಯಕ್ಷ; ಬ್ಯಾನರ್ ಮೂಲಕ ಗಣ್ಯರ ಸ್ವಾಗತಕ್ಕೆ​ ಅವಕಾಶ ನೀಡಿದ ಮದ್ರಾಸ್​​ ಹೈಕೋರ್ಟ್​

ಈ ಪ್ರಕರಣ ಇಡೀ ರಾಷ್ಟ್ರವನ್ನೇ ಕೆರಳಿಸಿತ್ತು. ರಸ್ತೆಯಲ್ಲಿ ಬ್ಯಾನರ್ ಕಟ್ಟುವ ಮೂಲಕ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ರಾಜಕೀಯ ನಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

news18
Updated:October 3, 2019, 3:53 PM IST
ಸದ್ಯದಲ್ಲೇ ಚೆನ್ನೈಗೆ ಆಗಮಿಸಲಿರುವ ಮೋದಿ-ಚೀನಾ ಅಧ್ಯಕ್ಷ; ಬ್ಯಾನರ್ ಮೂಲಕ ಗಣ್ಯರ ಸ್ವಾಗತಕ್ಕೆ​ ಅವಕಾಶ ನೀಡಿದ ಮದ್ರಾಸ್​​ ಹೈಕೋರ್ಟ್​
ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
  • News18
  • Last Updated: October 3, 2019, 3:53 PM IST
  • Share this:
ನವದೆಹಲಿ(ಅ.03): ಚೆನ್ನೈ ಏರ್ಪೋರ್ಟ್​​​ನಿಂದ ಮಾಮಲ್ಲಪುರಂವರೆಗೂ ಬ್ಯಾನರ್ ಹಾಗೂ ಹೋಲ್ಡಿಂಗ್ಸ್​ ಕಟ್ಟಲು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್​​​ ಹೈಕೋರ್ಟ್​​ ಅನುಮತಿ ನೀಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು, ಸದ್ಯದಲ್ಲೇ ಚೆನ್ನೈಗೆ ಆಗಮಿಸಲಿದ್ದಾರೆ. ಉಭಯ ದೇಶಗಳ ನಡುವೆ ಅಕ್ಟೋಬರ್​​​ 11 ಮತ್ತು 12ರಂದು ಮಹತ್ವದ ಮಾತುಕತೆ ನಡೆಯಲಿದೆ. ಈ ಮಾತುಕತೆಯೂ ಜಾಗತಿಕ ಪ್ರವಾಸಿ ತಾಣ ಮಾಮಲ್ಲಪುರಂದಲ್ಲಿ ನಡೆಯಲಿದ್ದು, ಗಣ್ಯರನ್ನು ಸ್ವಾಗತಿಸಲು ಈ ಪ್ರದೇಶದ 60 ಕಿಲೋ ಮೀಟರ್​​ ಸುತ್ತಮುತ್ತ ಮಾತ್ರ ಬ್ಯಾನರ್​​​ ಕಟ್ಟಲು ಮದ್ರಾಸ್​​ ಹೈಕೋರ್ಟ್​​ ಅನುಮತಿ ನೀಡಿದೆ.

ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆಗಾಗಿ ಚೆನ್ನೈ ಏರ್ಪೋರ್ಟ್​ಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಬ್ಯಾನರ್​​ ಕಟ್ಟಲು ಮುಂದಾಗಿತ್ತು. ಆಡಳಿತರೂಢ ಎಐಎಡಿಎಂಕೆ ಕಾನೂನು ಗಾಳಿಗೆ ತೂರಿ ಬ್ಯಾನರ್​​​ ಮತ್ತು ಹೋಲ್ಡಿಂಗ್ಸ್​​ ಕಟ್ಟಲು ಮುಂದಾಗಿದೆ ಎಂದು ಆರೋಪಿಸಿ ಸ್ಟಾಲಿನ್​​​ ನೇತೃತ್ವದ ಡಿಎಂಕೆ ಮದ್ರಾಸ್​​ ಹೈಕೋರ್ಟ್​ ಮೆಟ್ಟಿಲೇರಿತು.

ಇಂದು ಡಿಎಂಕೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್​​ ಹೈಕೋರ್ಟ್​ ತಮಿಳುನಾಡು ಸರ್ಕಾರಕ್ಕೆ ಬ್ಯಾನರ್​​ ಮೂಲಕ ಗಣ್ಯರನ್ನು ಸ್ವಾಗತಿಸಲು ಅನುಮತಿ ನೀಡಿದೆ. ಚೆನ್ನೈನ ಏರ್ಪೋರ್ಟ್​ನಿಂದ ಮಾಮಲ್ಲಪುರಂವರೆಗೂ ಮಾತ್ರ ಬ್ಯಾನರ್​​ಗೆ ಅವಕಾಶ ನೀಡಲಾಗಿದೆ.

ಈ ಹಿಂದೆ ಸೆಪ್ಟೆಂಬರ್.12 ರಂದು ಕಾಲೇಜಿನಿಂದ ಮನೆಗೆ ಸ್ಕೂಟರ್​​ನಲ್ಲಿ ಹೊರಟಿದ್ದ ಯುವತಿ ಶುಭಶ್ರೀ ಮೇಲೆ ರಸ್ತೆಯ ನಡುವೆ ಕಟ್ಟಿದ್ದ ರಾಜಕೀಯ ಬ್ಯಾನರ್ ಒಂದು ಹರಿದು ಬಿದ್ದಿತ್ತು. ಇದರಿಂದ ಸ್ಕೂಟರ್ ನಿಯಂತ್ರಣ ತಪ್ಪಿ ಶುಭಶ್ರೀ ರಸ್ತೆಯ ಮೇಲೆ ಬಿದ್ದಳು. ಈ ವೇಳೆ ಹಿಂದಿನಿಂದ ಬಂದ ಟ್ಯಾಂಕರ್ ಲಾರಿ ಆಕೆಯ ಮೇಲೆ ಹರಿದ ಪರಿಣಾಮ ಶುಭಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಳು.

ಇದನ್ನೂ ಓದಿ: ಬ್ಯಾನರ್​ಗೆ ವಿದ್ಯಾರ್ಥಿನಿ ಬಲಿ ಪ್ರಕರಣ; 13 ದಿನ ಕಳೆದರೂ ಆರೋಪಿಯನ್ನೇಕೆ ಬಂಧಿಸಿಲ್ಲ?; ಮದ್ರಾಸ್ ಹೈಕೋರ್ಟ್​ ತರಾಟೆ!

ಈ ಪ್ರಕರಣ ಇಡೀ ರಾಷ್ಟ್ರವನ್ನೇ ಕೆರಳಿಸಿತ್ತು. ರಸ್ತೆಯಲ್ಲಿ ಬ್ಯಾನರ್ ಕಟ್ಟುವ ಮೂಲಕ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ರಾಜಕೀಯ ನಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕಠಿಣ ಶಿಕ್ಷೆ ವಿಧಿಸಬೇಕು ಎಂದು ದೇಶದಾದ್ಯಂತ ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೇ ನಡೆಸಿದ್ದರು. ಈ ನಡುವೆ ತಮಿಳುನಾಡು ಚಿತ್ರರಂಗ ಸಹ ಈ ಘಟನೆಯನ್ನು ಕಂಡಿಸಿ ವಿದ್ಯಾರ್ಥಿನಿ ಪರ ವಹಿಸಿತ್ತು.

ರಾಜಕೀಯ ಬ್ಯಾನರ್ ಕಟ್ಟುವ ಮೂಲಕ 23 ವರ್ಷದ ಟೆಕ್ಕಿ ಶುಭಶ್ರೀ ಸಾವಿಗೆ ಕಾರಣವಾದ ಆಡಳಿತರೂಢ ಎಡಿಎಂಕೆ ಪಕ್ಷದ ಕಾರ್ಪೋರೇಟರ್ ಸಿ. ಜಯಗೋಪಾಲ್​​ರನ್ನು ಬಂಧನಕ್ಕೆ ಮದ್ರಾಸ್​​ ಹೈಕೋರ್ಟ್​ ಆದೇಶ ನೀಡಿತ್ತು. ಅಲ್ಲದೇ ರಸ್ತೆಗಳಲ್ಲಿ ಬ್ಯಾನರ್ ಹಾಗೂ ಹೋಲ್ಡಿಂಗ್ಸ್​ಗಳನ್ನು ಕಟ್ಟುವ ಪ್ರವೃತ್ತಿಯನ್ನು ಈ ಹಿಂದೆಯೇ ನಿಷೇಧಿಸಿದ್ದೇವೆ. ಇನ್ಮುಂದೆ ರಾಜಕೀಯ ಪಕ್ಷಗಳು ಸೇರಿದಂತೆ ಯಾರೇ ಆಗಲೀ ಇಂತಹ ಕೆಲಸಕ್ಕೆ ಮುಂದಾಗುವವರ ವಿರುದ್ಧ ನ್ಯಾಯಾಲಯ ಕಠಿಣ ಕ್ರಮ ಜರುಗಿಸಲಿದೆ ಎಂದು ಮದ್ರಾಸ್ ಹೈಕೋರ್ಟ್ ಎಚ್ಚರಿಕೆ ನೀಡಿತ್ತು.--------
First published:October 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ