Viral News: ಮೊಸಳೆಗಳನ್ನು ಸಾಕಲು ದುಡ್ಡಿಲ್ಲದೇ ಇವ್ರು ಏನ್​ ಮಾಡ್ತಿದ್ದಾರೆ ಅಂತ ನೀವೇ ನೋಡಿ...

ಹಣ(Money)ದ ಕೊರತೆಯನ್ನು ಅನುಭವಿಸುತ್ತಿರುವ ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್(Madras Crocodile Bank Trust) (ಎಂಸಿಬಿಟಿ) ಕಳೆದ ಕೆಲವು ತಿಂಗಳುಗಳಿಂದ ತನ್ನಲ್ಲಿರುವ ಹೆಚ್ಚುವರಿ ಮೊಸಳೆಗಳನ್ನು ಗುಜರಾತ್‌(Gujart)ನಲ್ಲಿರುವ ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ(Zoological Rescue) ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್ (ಜಿಝಡ್‌ಆರ್‌ಆರ್‌ಸಿ) ಗೆ ಸಾಗಿಸುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಂಬಾ ಹಿಂದೆಯಿಂದಲೂ ಈ ಪ್ರಾಣಿ ಮೃಗಾಲಯಗಳು(Animals Zoo) ಈ ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ತಮ್ಮ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಬೇರೆ ಮೃಗಾಲಯಕ್ಕೆ ಕಳುಹಿಸುವುದು ಮತ್ತು ಬೇರೆ ಮೃಗಾಲಯದಿಂದ ಪ್ರಾಣಿಗಳನ್ನು ತಮ್ಮ ಮೃಗಾಲಯಕ್ಕೆ ತರೆಸಿಕೊಳ್ಳುವುದರ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಇಲ್ಲಿ ಸಹ ಬಹುತೇಕವಾಗಿ ಇಂತಹದೇ ಘಟನೆಯ ಬಗ್ಗೆ ನಾವು ನಿಮಗೆ ಹೇಳಲು ಹೊರಟಿದ್ದೇವೆ, ಆದರೆ ಇಲ್ಲಿ ಸ್ವಲ್ಪ ವಿಭಿನ್ನ ಕಾರಣವಿದೆ. ಹೌದು.. ಹಣ(Money)ದ ಕೊರತೆಯನ್ನು ಅನುಭವಿಸುತ್ತಿರುವ ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್(Madras Crocodile Bank Trust) (ಎಂಸಿಬಿಟಿ) ಕಳೆದ ಕೆಲವು ತಿಂಗಳುಗಳಿಂದ ತನ್ನಲ್ಲಿರುವ ಹೆಚ್ಚುವರಿ ಮೊಸಳೆಗಳನ್ನು ಗುಜರಾತ್‌(Gujart)ನಲ್ಲಿರುವ ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ(Zoological Rescue) ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್ (ಜಿಝಡ್‌ಆರ್‌ಆರ್‌ಸಿ) ಗೆ ಸಾಗಿಸುತ್ತಿದೆ ಅಂತೆ.

ಸಾವಿರ ಮೊಸಳೆಗಳು ಗುಜರಾತ್​ಗೆ ರವಾನೆ!

ಏಕೆ ಈ ಅಧಿಕಾರಿಗಳು ಈ ಹೆಚ್ಚುವರಿ ಮೊಸಳೆಗಳನ್ನು ಗುಜರಾತಿಗೆ ಕಳುಹಿಸುತ್ತಿದ್ದಾರೆ ಎಂದು ನಿಮಗೆ ಪ್ರಶ್ನೆ ಮೂಡಬಹುದು. ಈ ಲೇಖನವನ್ನು ಪೂರ್ತಿಯಾಗಿ ಓದಿ ನಿಮಗೆ ಅರ್ಥವಾಗುತ್ತದೆ. ಒಂದಲ್ಲ, ಎರಡಲ್ಲ ಸುಮಾರು 1,000 ಮಗ್ಗರ್ ಮೊಸಳೆಗಳನ್ನು ಬೇರ್ಪಡಿಸುವ ತನ್ನ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಐದು ದಶಕಗಳಷ್ಟು ಹಳೆಯದಾದ ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್‌ಗೆ ಹೊಸ ರೂಪವೊಂದನ್ನು ನೀಡುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಟ್ರಸ್ಟ್​!

1994ರಲ್ಲಿ ಸಂತಾನೋತ್ಪತ್ತಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದಾಗಿನಿಂದ, ಎಂಸಿಬಿಟಿಗೆ ತಮಿಳುನಾಡು ಅರಣ್ಯ ಇಲಾಖೆಯು ಇನ್ನು ಮುಂದೆ ಮಗ್ಗರ್ ಮೊಸಳೆಗಳನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಹೆಚ್ಚುವರಿಯಾಗಿರುವ ಈ ಮಗ್ಗರ್ ಮೊಸಳೆಗಳ ಸಂಖ್ಯೆಯಲ್ಲಿ ಜಾಸ್ತಿಯಾಗಲು ಶುರುವಾಯಿತು ಮತ್ತು ಇದರ ಸಂಪೂರ್ಣವಾದ ವೆಚ್ಚವನ್ನು ನಿಭಾಯಿಸಲು ಈ ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕಷ್ಟವಾಯಿತು ಮತ್ತು ಈ ಟ್ರಸ್ಟ್ ಆರ್ಥಿಕ ತೊಂದರೆಗೆ ಸಿಲುಕಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸೊಳ್ಳೆಗಳ ವಿರುದ್ಧ ಸಮರ ಸಾರಿದ ವ್ಯಕ್ತಿ! ಪ್ರತಿದಿನ ಏರಿಯಾದಲ್ಲಿ ಏನ್​ ಮಾಡ್ತಾರೆ ಅಂತ ನೀವೇ ನೋಡಿ..

ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿದ ಎಂಸಿಬಿಟಿ ವ್ಯವಸ್ಥಾಪಕ ಟ್ರಸ್ಟಿ ಜೈ ವಿಟೇಕರ್ ಅವರು "ದೀರ್ಘಕಾಲೀನ ಸಮಸ್ಯೆಯನ್ನು ಪರಿಹರಿಸಿದ್ದಕ್ಕಾಗಿ ನಾವು ಜಿಝಡ್ಆರ್‌ಆರ್‌ಸಿಗೆ ತುಂಬಾನೇ ಆಭಾರಿಯಾಗಿದ್ದೇವೆ. ಈ ವರ್ಷದ ಅಂತ್ಯದ ವೇಳೆಗೆ ಎಲ್ಲಾ ಹೆಚ್ಚುವರಿ ಸರೀಸೃಪಗಳನ್ನು ಸ್ಥಳಾಂತರಿಸಲು ನಾವು ಆಶಿಸುತ್ತೇವೆ. ಪ್ರಸ್ತುತ, ಗಂಡು ಮಗ್ಗರ್ ಮೊಸಳೆಗಳನ್ನು ಸಾಗಿಸಲಾಗುತ್ತಿದೆ. ಸಂತಾನೋತ್ಪತ್ತಿಯ ಋತು ಮುಗಿದ ನಂತರ ಮಾತ್ರವೇ ಹೆಣ್ಣು ಮೊಸಳೆಗಳನ್ನು ಕಳುಹಿಸಬಹುದು, ಏಕೆಂದರೆ ಈ ದೀರ್ಘ ಪ್ರಯಾಣವು ಹೆಣ್ಣು ಮೊಸಳೆಗಳ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು" ಎಂದು ಹೇಳಿದ್ದಾರೆ.

ಕ್ರೊಕೊಡೈಲ್ ಬ್ಯಾಂಕ್‌ನ ಪ್ರಸ್ತಾಪಕ್ಕೆ ಅನುಮೋದನೆ

ಪ್ರಸ್ತುತ, ಈ ಕ್ರೊಕೊಡೈಲ್ ಬ್ಯಾಂಕ್‌ನಲ್ಲಿ ಸುಮಾರು 2,000 ಪ್ರಾಣಿಗಳಿದ್ದು, ಅದರಲ್ಲಿ 15 ಜಾತಿಯ ಮೊಸಳೆಗಳು, 15 ಜಾತಿಯ ಹಾವುಗಳು, 8 ಜಾತಿಯ ಆಮೆಗಳು ಮತ್ತು 7 ಜಾತಿಯ ಹಲ್ಲಿಗಳು ಇವೆ. ಕೇಂದ್ರ ಮೃಗಾಲಯ ಪ್ರಾಧಿಕಾರವು 1,000 ಮಗ್ಗರ್ ಮೊಸಳೆಗಳನ್ನು (350 ಗಂಡು ಮತ್ತು 650 ಹೆಣ್ಣುಮೊಸಳೆ) ಜಿಝಡ್ಆರ್‌ಆರ್‌ಸಿಗೆ ವರ್ಗಾಯಿಸುವ ಕ್ರೊಕೊಡೈಲ್ ಬ್ಯಾಂಕ್‌ನ ಪ್ರಸ್ತಾಪವನ್ನು ಅನುಮೋದಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Elizabeth II ನಂತರ ಪ್ರಿನ್ಸ್ ಚಾರ್ಲ್ಸ್ ಪತ್ನಿ ಮುಡಿಗೆ ಕೊಹಿನೂರ್ ಕಿರೀಟ

ಇಡೀ ಪ್ರಕ್ರಿಯೆಯ ಮೇಲೆ ನಿಗಾ

ಈ ಮೊಸಳೆಗಳನ್ನು ಉತ್ತಮವಾಗಿ ನೋಡಿಕೊಳ್ಳಲು ಜಿಝಡ್ಆರ್‌ಆರ್‌ಸಿ ಅತ್ಯುತ್ತಮ ಮೂಲ ಸೌಕರ್ಯಗಳನ್ನು ಹೊಂದಿದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ಶೇಖರ ಕುಮಾರ್ ನೀರಜ್ ಹೇಳಿದರು. "ಕ್ರೊಕೊಡೈಲ್ ಬ್ಯಾಂಕ್ ವಿನಂತಿಸಿಕೊಂಡಾಗ ನಾವು ಟ್ರಾನ್ಸಿಟ್ ಪರ್ಮಿಟ್ ಗಳನ್ನು ನೀಡುತ್ತಿದ್ದೇವೆ. 25 ರಿಂದ 30 ಮೊಸಳೆಗಳನ್ನು ಒಮ್ಮೆ ತಂಡವಾಗಿ ಕಳುಹಿಸಲಾಗುತ್ತಿದೆ ಮತ್ತು ಅರಣ್ಯ ಇಲಾಖೆ ಇಡೀ ಪ್ರಕ್ರಿಯೆಯ ಮೇಲೆ ನಿಗಾ ವಹಿಸುತ್ತಿದೆ" ಎಂದು ತಿಳಿಸಿದರು.
Published by:Vasudeva M
First published: