ರಕ್ಷಾಬಂಧನಕ್ಕೆ ಹುತಾತ್ಮ ಸೈನಿಕನ ಹೆಂಡತಿಗೆ ಸಿಕ್ಕಿತು ಅಚ್ಚರಿಯ​ ಉಡುಗೊರೆ!

ದೆಪಲ್ಪುರದ ಯುವಕರು ಸೇರಿ ಮನೆಯನ್ನು ಕಟ್ಟಿಕೊಟ್ಟಿದ್ದು, ಆ ಮನೆಯನ್ನು ನಿನ್ನೆ ರಾಜು ಬಾಯಿ ಅವರಿಗೆ ಗಿಫ್ಟ್​ ಆಗಿ ನೀಡಿದ್ದಾರೆ. ತನ್ನೂರಿನ ಎಲ್ಲ ಯುವಕರಿಗೂ ರಾಖಿ ಕಟ್ಟಿ ರಾಜು ಬಾಯಿ ಹೊಸ ಮನೆಯೊಳಗೆ ಪ್ರವೇಶಿಸಿದ್ದಾರೆ.

Sushma Chakre | news18
Updated:August 16, 2019, 12:55 PM IST
ರಕ್ಷಾಬಂಧನಕ್ಕೆ ಹುತಾತ್ಮ ಸೈನಿಕನ ಹೆಂಡತಿಗೆ ಸಿಕ್ಕಿತು ಅಚ್ಚರಿಯ​ ಉಡುಗೊರೆ!
ರಾಜು ಬಾಯಿ ಅವರ ಹೊಸಮನೆ
  • News18
  • Last Updated: August 16, 2019, 12:55 PM IST
  • Share this:
ನವದೆಹಲಿ (ಆ. 17): ನಿನ್ನೆಯಷ್ಟೇ ರಕ್ಷಾ ಬಂಧನ ಮುಗಿದಿದೆ. ರಾಖಿ ಕಟ್ಟಿದ ಅಕ್ಕನಿಗೋ, ತಂಗಿಗೋ ಉಡುಗೊರೆ ಕೊಡುವುದು ಪದ್ಧತಿ. ಇದೇರೀತಿ ಮಧ್ಯಪ್ರದೇಶದಲ್ಲೂ ನಿನ್ನೆ ರಕ್ಷಾ ಬಂಧನ ಆಚರಿಸಲಾಗಿದೆ. ತಮಗೆ ರಾಖಿ ಕಟ್ಟಿದ ಹುತಾತ್ಮ ಯೋಧನ ಪತ್ನಿಗೆ ಊರಿನವರು ಸೇರಿ ಸರ್​ಪ್ರೈಸ್​ ಗಿಫ್ಟ್​ ನೀಡಿದ್ದಾರೆ.

1992ರಲ್ಲಿ ದಕ್ಷಿಣ ತ್ರಿಪುರ ಜಿಲ್ಲೆಯ ದಳಪತಿಪುರದಲ್ಲಿ ನಡೆದ ಹಠಾತ್​ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದರು. ಅವರಲ್ಲಿ ಮಧ್ಯಪ್ರದೇಶದ ದೆಪಲ್ಪುರ ಜಿಲ್ಲೆಯ ಪಿರ್ ಪಿಪ್ಲಿಯ ಗ್ರಾಮದ ಹವಾಲ್ದಾರ್ ಮೋಹನ್ ಸಿಂಗ್ ಎಂಬ ಸೈನಿಕ ಕೂಡ ಒಬ್ಬರು. ಅಂದಿನಿಂದ ಮೋಹನ್ ಸಿಂಗ್ ಅವರ ಪತ್ನಿ ರಾಜು ಬಾಯಿ, ಇಬ್ಬರು ಮಕ್ಕಳು ಮುರಿದ ಗುಡಿಸಲಿನಲ್ಲಿಯೇ ಜೀವನ ಸಾಗಿಸುತ್ತಿದ್ದರು. ಸರ್ಕಾರ ಕೂಡ ಅವರಿಗೆ ಯಾವುದೇ ಸೌಲಭ್ಯ ನೀಡಿರಲಿಲ್ಲ. ಸರ್ಕಾರದಿಂದ ಬರುತ್ತಿದ್ದ 700 ರೂ. ಮಾಸಿಕ ವೇತನದಲ್ಲೇ ಅವರು ಜೀವನ ನಡೆಸಬೇಕಾಗಿತ್ತು. ತೀವ್ರ ಬಡತನದ ಜೀವನ ಸಾಗಿಸುತ್ತಿದ್ದ ಹುತಾತ್ಮ ಸೈನಿಕನ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದ ಊರಿನವರು ಅವರಿಗಾಗಿ ಮನೆಯೊಂದನ್ನು ಕಟ್ಟಿಕೊಡಲು ಮುಂದಾದರು.

ಪಿಂಕ್, ನೇರ್​ಕೊಂಡ ಪಾರ್ವೈ ಎಂಬ ಸಿನಿಮಾ ಮತ್ತು ಆಕೆಯ ಮೇಲಿನ ಸಾಮೂಹಿಕ ಅತ್ಯಾಚಾರ; ಇಲ್ಲಿದೆ ಮಹಿಳೆಯೊಬ್ಬಳ ಆರ್ತನಾದದ ಕಥೆ!

ಮೋಹನ್ ಸಿಂಗ್ ಹುತಾತ್ಮರಾಗಿ 3 ದಶಕಗಳಾಗುತ್ತಾ ಬಂದರೂ ಸರ್ಕಾರ ಯಾವುದೇ ರೀತಿಯ ಸಹಾಯ ನೀಡಿದ ಕಾರಣಕ್ಕೆ ಆ ಊರಿನವರು ಸುತ್ತಮುತ್ತಲಿನ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹಿಸಿ ರಾಜು ಬಾಯಿ ಅವರಿಗೆ ಮನೆಯನ್ನು ಕಟ್ಟಿಕೊಡಲು ಮುಂದಾದರು. ಆ ಕನಸು ನಿನ್ನೆ ನನಸಾಗಿದ್ದು, ಮುರುಕಲು ಗುಡಿಸಲಿನಲ್ಲಿದ್ದ ರಾಜು ಬಾಯಿ ಕುಟುಂಬಕ್ಕೆ 11 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್​ ಮನೆ ಕಟ್ಟಿಕೊಟ್ಟಿದ್ದಾರೆ.

ದೆಪಲ್ಪುರದ ಯುವಕರು ಸೇರಿ ಮನೆಯನ್ನು ಕಟ್ಟಿಕೊಟ್ಟಿದ್ದು, ಆ ಮನೆಯನ್ನು ನಿನ್ನೆ ರಾಜು ಬಾಯಿ ಅವರಿಗೆ ಗಿಫ್ಟ್​ ಆಗಿ ನೀಡಿದ್ದಾರೆ. ತನ್ನೂರಿನ ಎಲ್ಲ ಯುವಕರಿಗೂ ರಾಖಿ ಕಟ್ಟಿ ರಾಜು ಬಾಯಿ ಹೊಸ ಮನೆಯೊಳಗೆ ಪ್ರವೇಶಿಸಿದ್ದಾರೆ. ಅಲ್ಲದೆ, ಹುತಾತ್ಮ ಯೋಧ ಮೋಹನ್ ಸಿಂಗ್ ಅವರ ಪ್ರತಿಮೆಯನ್ನು ತಮ್ಮೂರಿನಲ್ಲಿ ನಿರ್ಮಿಸಲು ಆ ಯುವಕರು ನಿರ್ಧರಿಸಿದ್ದಾರೆ. ಸರ್ಕಾರ ಯೋಧನ ಬಲಿದಾನಕ್ಕೆ ಯಾವುದೇ ಗೌರವ ನೀಡದ ಹಿನ್ನೆಲೆಯಲ್ಲಿ ಊರಿನವರೇ ಸೇರಿಕೊಂಡು ಊರಿನ ಮುಖ್ಯರಸ್ತೆಯಲ್ಲಿ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್​ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

 
Loading...

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...