Viral News: ನದಿಯಲ್ಲಿ ಬಿದ್ದ ಮಹಿಳೆ 16 ಕಿಮೀ ತೇಲಿದಳು! ಬಚಾವಾದದ್ದೇ ರೋಚಕ!

ನದಿಯ ದಡವನ್ನು ತಲುಪುವ ಮೊದಲು ನೀರಿನ ಪ್ರವಾಹ ಹೆಚ್ಚಾಗಿ ಮೋಟಾರು ದೋಣಿ ಮತ್ತೆ ಪಲ್ಟಿ ಹೊಡೆದಿತ್ತು. ಮಹಿಳೆ ಸೇರಿ ರಕ್ಷಣಾ ಕಾರ್ಯಾಚರಣೆಯ ಎಲ್ಲರೂ ನದಿಗೆ ಬಿದ್ದರು. ರಕ್ಷಣಾ ಸಿಬ್ಬಂದಿ ಹೇಗೊ ಪಾರಾದರು..ಆದರೆ ಮಹಿಳೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇದೊಂದು ಭಯಂಕರ ರೋಚಕ ಸುದ್ದಿ!  ನದಿಯಲ್ಲಿ ಬಿದ್ದ ಮಹಿಳೆಯೋರ್ವಳು ಇಡೀ ರಾತ್ರಿ ನದಿಯಲ್ಲೇ ಕಳೆದು ಹಾಗೂ ಹೀಗೂ ಮಾಡಿ ಬಚಾವಾದ ಕಥೆ. 35 ವರ್ಷದ ಮಹಿಳೆಯೋರ್ವಳು ಆಗಸ್ಟ್ 11 ರಂದು ರಾತ್ರಿ 8 ಗಂಟೆಗೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಬೆಟ್ವಾ ನದಿಗೆ (Woman Falls In River) ಬಿದ್ದಿದ್ದಾಳೆ. ಆಕೆಯನ್ನು ಆಗಸ್ಟ್ 12 ರಂದು ಬೆಳಿಗ್ಗೆ 6 ಗಂಟೆಗೆ ಸುಮಾರು 20 ಕಿಲೋಮೀಟರ್ ಕೆಳಗೆ ರಕ್ಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಯೂ ಒಂದು ಹಂತದಲ್ಲಿ ವಿಫಲವಾಗಿ ಮಹಿಳೆ ಮತ್ತೆ ನದಿಯಲ್ಲೆ ತೇಲಿಕೊಂಡು ಹೋಗಿದ್ದಾಳೆ.  ಸತತ 16 ಕಿಮೀ ಮರದ ದಿಣ್ಣೆ ಹಿಡಿದು ತೇಲಿ ಮತ್ತೆ ಬಚಾವಾಗಿದ್ದಾಳೆ! ಮಧ್ಯ ಪ್ರದೇಶದ (Madhya Pradesh)  ಖಜುರಿಯಾ ಗ್ರಾಮದ ತನ್ನ ಮನೆಯಿಂದ ಪಡಾರಿಯಾ ಗ್ರಾಮದಲ್ಲಿರುವ ತನ್ನ ತಾಯಿಯ ಮನೆಗೆ ಪ್ರಯಾಣಿಸುತ್ತಿದ್ದ ಸೋನಮ್ ಡಾಂಗಿ ಎಂಬ ಮಹಿಳೆಯೇ ನದಿಗೆ ಬಿದ್ದವರು.

  ವಿದಿಶಾದ ಪೊಲೀಸರ ಪ್ರಕಾರ ಬರಿಘಾಟ್ ಸೇತುವೆಯ ಮೇಲೆ ಈ ಮಹಿಳೆ ಓಡಿಸುತ್ತಿದ್ದ ಮೋಟಾರ್‌ಸೈಕಲ್ ಜಾರಿ ನದಿಗೆ ಬಿದ್ದಿದ್ದಾಳೆ. ನದಿಯಲ್ಲಿ ಆಕೆ ಕೊಚ್ಚಿಕೊಂಡು ಹೋಗಿದ್ದಾಳೆ ಎಂದು ವಿದಿಶಾದ ಜಿಲ್ಲಾಧಿಕಾರಿ ಉಮಾಶಂಕರ್ ಭಾರ್ಗವ ಸಹ ಹೇಳಿಕೆ ನೀಡಿದ್ದಾರೆ.

  ಶುರುವಾಯ್ತು ಶೋಧ ಕಾರ್ಯಾಚರಣೆ
  ಈ ಸುದ್ದಿ ತಿಳಿದ ಸ್ಥಳೀಯ ಆಡಳಿತವು ಸೋನಮ್ ಡಾಂಗಿಗಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಸುಮಾರು 4 ಕಿಮೀ ದೂರದಲ್ಲಿರುವ ಗಂಜ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಕಬ್ಬಿಣದ ಸರಳುಗಳ ನಡುವೆ ಸುಮಾರು ಮೂರು ಗಂಟೆಗಳ ನಂತರ ನದಿಗೆ ಬಿದ್ದ ಮಹಿಳೆ  ಸಿಕ್ಕಿಹಾಕಿಕೊಂಡಿರುವುದು ಪತ್ತೆಯಾಗಿದೆ.

  ಕಾರ್ಯಾಚರಣೆ ಯಶಸ್ವಿಯಾಗುತ್ತಿತ್ತು..
  ರಕ್ಷಣಾ ತಂಡವು ಸುಮಾರು ತಡರಾತ್ರಿ 2 ಗಂಟೆಗೆ ಸ್ಥಳಕ್ಕೆ ತಲುಪಿತು. ಅಷ್ಟೊತ್ತಿಗಾಗಲೇ ಸೋನಮ್ ಡಾಂಗಿ ಕಬ್ಬಿಣದ ಕಂಬ ಏರಲು ಯಶಸ್ವಿಯಾಗಿದ್ದಳು. ಬೆಟ್ವಾ ನದಿಯಲ್ಲಿ ವಿಪರೀತ ನೀರು ಹರಿದಿದ್ದರಿಂದ ರಕ್ಷಣಾ ಕಾರ್ಯಾಚರಣೆ ಮತ್ತೆ ಎರಡೂವರೆ ಗಂಟೆ ತಡವಾಯಿತು. ಮುಂಜಾನೆ 4.30 ರ ಸುಮಾರಿಗೆ ದೋಣಿ ಮತ್ತು ಐವರು ಗೃಹ ರಕ್ಷಕ ದಳದ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿ ಲೈಫ್ ಜಾಕೆಟ್ ಧರಿಸುವಂತೆ ಮಾಡಿದರು ಎಂದು ವಿದಿಶಾದ ಜಿಲ್ಲಾಧಿಕಾರಿ ಉಮಾಶಂಕರ್ ಭಾರ್ಗವ ಅವರು ತಿಳಿಸಿದ್ದಾರೆ.

  ಇದನ್ನೂ ಓದಿ: UK PM Race: ಬ್ರಿಟನ್​ ಪಿಎಂ ರೇಸ್​ನಲ್ಲಿ ಹಿಂದೆಬಿದ್ದ ರಿಷಿ ಸುನಕ್, ಲಿಜ್ ಟ್ರಸ್ ಗೆಲ್ಲುವ ಸಾಧ್ಯತೆ ಅಧಿಕ!

  ಮತ್ತೆ ನದಿಗೆ ಬಿದ್ದಳು ಮಹಿಳೆ
  ಆದರೂ ಆಕೆಯನ್ನು ನದಿಯ ದಡಕ್ಕೆ ಕರೆದೊಯ್ಯುತ್ತಿದ್ದಾಗ ದೋಣಿ ಮಗುಚಿ ಬಿದ್ದಿದೆ ಎಂದು ಭಾರ್ಗವ ಹೇಳಿದ್ದಾರೆ. ಅವರ ಪ್ರಕಾರ, ಅವರು ನದಿಯ ದಡವನ್ನು ತಲುಪುವ ಮೊದಲು ನೀರಿನ ಪ್ರವಾಹ ಹೆಚ್ಚಾಗಿ ಮೋಟಾರು ದೋಣಿ ಮತ್ತೆ ಪಲ್ಟಿ ಹೊಡೆದಿತ್ತು. ಮಹಿಳೆ ಸೇರಿ ರಕ್ಷಣಾ ಕಾರ್ಯಾಚರಣೆಯ ಎಲ್ಲರೂ ನದಿಗೆ ಬಿದ್ದರು. ರಕ್ಷಣಾ ಸಿಬ್ಬಂದಿ ಹೇಗೊ ಪಾರಾದರು..ಆದರೆ ಮಹಿಳೆ?

  ಇದನ್ನೂ ಓದಿ: PM Modi: ಪ್ರಧಾನಿ ಮೋದಿ ಎಷ್ಟು ಆಸ್ತಿ ಹೊಂದಿದ್ದಾರೆ? ಅವರ ಬಳಿಯಿರುವ ಹಣವೆಷ್ಟು? ಮಾಹಿತಿ ಬಿಡುಗಡೆ

  ಮಹಿಳೆ ಮತ್ತೆ ನದಿಯಲ್ಲಿ ತೇಲಿಕೊಂಡು ಹೋದರು. ಆದರೆ ಅವರ ಕೈಗೆ ಒಂದು ಮರದ ದಿಮ್ಮಿ ಸಿಕ್ಕಿತ್ತು. ಅದನ್ನು ಹಿಡಿದೇ ಬರೋಬ್ಬರಿ 16 ಕಿಮೀ ದೂರ ಅವರು ಸಾಗಿದರು. ನಂತರ ನದಿಯಲ್ಲಿ ತೇಲಿಹೋಗುತ್ತಿದ್ದ ಸೋನಮ್ ಡೋಂಗಿ ಅವರನ್ನು ಸ್ಥಳೀಯರು ಕಮಡು ಪಾರುಮಾಡಿದರು ಎಂದು ವರದಿಯಾಗಿದೆ. ಹಾಗೂ ಹೀಗೂ ಮಾಡಿ ಸೋನಮ್ ಡಾಂಗಿ ಬಚಾವಾದರು ಎಂದು ಮಾಹಿತಿ ತಿಳಿದುಬಂದಿದೆ. 
  Published by:guruganesh bhat
  First published: