• Home
  • »
  • News
  • »
  • national-international
  • »
  • Shocking: ಇತರ ವಿದ್ಯಾರ್ಥಿಗಳ ಮುಂದೆ ಬಾಲಕಿಯ ಯುನಿಫಾರ್ಮ್ ಕಳಚಿಸಿದ ಶಿಕ್ಷಕ

Shocking: ಇತರ ವಿದ್ಯಾರ್ಥಿಗಳ ಮುಂದೆ ಬಾಲಕಿಯ ಯುನಿಫಾರ್ಮ್ ಕಳಚಿಸಿದ ಶಿಕ್ಷಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿತ್ರದಲ್ಲಿ 5 ನೇ ತರಗತಿ ವಿದ್ಯಾರ್ಥಿಯು ತನ್ನ ಒಳ ಉಡುಪುಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾಳೆ. ಶಿಕ್ಷಕ ಶ್ರವಣ್ ಕುಮಾರ್ ತ್ರಿಪಾಠಿ ಆಕೆಯ ಬಟ್ಟೆಯನ್ನು  ತೊಳೆಯುತ್ತಿರುವುದನ್ನು ಕಾಣಬಹುದಾಗಿದೆ.

  • Share this:

ಭೋಪಾಲ್:  10 ವರ್ಷದ ಬುಡಕಟ್ಟು ವಿದ್ಯಾರ್ಥಿನಿಯನ್ನು ಇತರ ವಿದ್ಯಾರ್ಥಿಗಳ ಮುಂದೆ ಸಮವಸ್ತ್ರವನ್ನು ತೆಗೆಯುವಂತೆ ಹೇಳಿದ ಆರೋಪದ ಮೇಲೆ ಮಧ್ಯಪ್ರದೇಶದ (Madhya Pradesh School Teacher) ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ವಿದ್ಯಾರ್ಥಿನಿಯ ಸಮವಸ್ತ್ರ (Student Uniform) ಕೊಳಕಾಗಿತ್ತು ಎಂದು ಶಿಕ್ಷಕ ಬಟ್ಟೆಯನ್ನು ಕಳಚಲು ಹೇಳಿದ್ದ ಎಂದು ಆರೋಪ ಕೇಳಿಬಂದಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಶುಕ್ರವಾರ ಶಹದೋಲ್ ಜಿಲ್ಲೆಯ ಬರಾ ಕಾಲಾ ಗ್ರಾಮದಲ್ಲಿ ನಡೆದ ಘಟನೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Photos) ಆಗುತ್ತಿವೆ. 


ಚಿತ್ರದಲ್ಲಿ 5 ನೇ ತರಗತಿ ವಿದ್ಯಾರ್ಥಿಯು ತನ್ನ ಒಳ ಉಡುಪುಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾಳೆ. ಶಿಕ್ಷಕ ಶ್ರವಣ್ ಕುಮಾರ್ ತ್ರಿಪಾಠಿ ಆಕೆಯ ಬಟ್ಟೆಯನ್ನು  ತೊಳೆಯುತ್ತಿರುವುದನ್ನು ಕಾಣಬಹುದಾಗಿದೆ.


ಎರಡು ಗಂಟೆಗಳ ಕಾಲ ಹಾಗೇ ಕುಳಿತ ವಿದ್ಯಾರ್ಥಿನಿ
ಬಟ್ಟೆ ಒಣಗುವವರೆಗೆ ವಿದ್ಯಾರ್ಥಿನಿ ಸುಮಾರು ಎರಡು ಗಂಟೆಗಳ ಕಾಲ ಆ ಸ್ಥಿತಿಯಲ್ಲಿ ಕುಳಿತುಕೊಳ್ಳಬೇಕಾಯಿತು ಎಂದು ಕೆಲವು ಗ್ರಾಮಸ್ಥರು ಹೇಳಿದ್ದಾರೆ.


ಇದನ್ನೂ ಓದಿ: Maharashtra: SSC, HSC ಪರೀಕ್ಷೆಗಳ ಟೈಮ್ ಟೇಬಲ್​ಗಳನ್ನು ಮನೆಯಲ್ಲಿಯೇ ಕೂತು ನೋಡಿ, ಯಾವ ವೆಬ್​ಸೈಟ್​ನಲ್ಲಿ ಲಭ್ಯವಿದೆ?


ವಾಟ್ಸ್​ಆ್ಯಪ್​ ಗ್ರೂಪ್‌ನಲ್ಲಿ ಹಂಚಿಕೊಂಡ ಶಿಕ್ಷಕ
ಗ್ರಾಮದ ಬುಡಕಟ್ಟು ವ್ಯವಹಾರಗಳ ಇಲಾಖೆಯಿಂದ ನಡೆಸಲ್ಪಡುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ತ್ರಿಪಾಠಿ ಇಲಾಖೆಯ ವಾಟ್ಸ್​ಆ್ಯಪ್​ ಗ್ರೂಪ್‌ನಲ್ಲಿ ಘಟನೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರ ನಂತರ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Xi Jinping: ಗೃಹ ಬಂಧನಲ್ಲಿ ಚೀನಾ ಅಧ್ಯಕ್ಷ ಜಿನ್‌ಪಿಂಗ್?


ಬುಡಕಟ್ಟು ಕಲ್ಯಾಣ ಇಲಾಖೆಯ ಸಹಾಯಕ ಆಯುಕ್ತ ಆನಂದ್ ರೈ ಸಿನ್ಹಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು ಘಟನೆಯ ಚಿತ್ರಗಳ ಬಗ್ಗೆ ತಿಳಿದ ನಂತರ ತ್ರಿಪಾಠಿಯನ್ನು ಶನಿವಾರ ಅಮಾನತುಗೊಳಿಸಲಾಗಿದೆ ಎಂದು ಪಿಟಿಐಗೆ ತಿಳಿಸಿದರು.


ಉದ್ಯೋಗಗಳ ಹೆಸರಿನಲ್ಲಿ ಯುವಕರಿಗೆ ವಂಚನೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸೆಪ್ಟೆಂಬರ್ 24 ರಂದು ಐಟಿ ಉದ್ಯಮದಲ್ಲಿ ಕೌಶಲ್ಯಪೂರ್ಣ ಯುವಕರನ್ನು ಗುರಿಯಾಗಿಸುವ "ನಕಲಿ ಉದ್ಯೋಗ ಜಾಲದ" ವಿರುದ್ಧ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಪ್ರಕಟಣೆಯ ಪ್ರಕಾರ ದುಬೈ (Dubai) ಹಾಗೂ ಭಾರತ (India) ಮೂಲದ ಏಜೆಂಟರು ಸಾಮಾಜಿಕ ಮಾಧ್ಯಮ ಜಾಹೀರಾತುಗಳನ್ನು ಬಳಸಿಕೊಂಡು ಥಾಯ್ಲೆಂಡ್‌ನಲ್ಲಿ ಲಾಭದಾಯಕ ಡೇಟಾ ಎಂಟ್ರಿ ಉದ್ಯೋಗಗಳ ಹೆಸರಿನಲ್ಲಿ ಉದ್ಯೋಗಾಂಕ್ಷಿಗಳನ್ನು (job seeker) ವಂಚಿಸುತ್ತಿದ್ದಾರೆ ಎಂದು ಸೂಚಿಸಿದೆ. MEA ತಿಳಿಸಿರುವಂತೆ ಉದ್ಯೋಗಾಂಕ್ಷಿಗಳನ್ನು ಅಕ್ರಮವಾಗಿ ವಿವಿಧ ದೇಶಗಳಿಗೆ ರವಾನಿಸಲಾಗುತ್ತಿದ್ದು ಹೆಚ್ಚಾಗಿ ಮ್ಯಾನ್ಮಾರ್‌ಗೆ (Myanmar) ಕರೆದೊಯ್ಯಲಾಗಿದೆ ಎಂಬುದು ವರದಿಯಾಗಿದೆ. ಉದ್ಯೋಗದ ಹೆಸರಿನಲ್ಲಿ ಬಲಿಪಶುಗಳನ್ನು ಬಂಧಿಸಿ ಹಿಂಸಾತ್ಮಕವಾಗಿ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದೆ.


ಇದನ್ನೂ ಓದಿ: Xi Jinping: ಗೃಹ ಬಂಧನಲ್ಲಿ ಚೀನಾ ಅಧ್ಯಕ್ಷ ಜಿನ್‌ಪಿಂಗ್?


ಹಗರಣದಲ್ಲಿ ಐಟಿ ಸಂಸ್ಥೆಗಳೇ ಪ್ರಧಾನವಾಗಿವೆ
ಸಚಿವಾಲಯವು ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಿರುವಂತೆ ಸಂಶಯಾತ್ಮಕ ಐಟಿ ಸಂಸ್ಥೆಗಳು ಈ ಜಾಲದಲ್ಲಿರುವಂತೆ ತೋರುತ್ತಿದ್ದು ಕಾಲ್ ಸೆಂಟರ್ ಹಗರಣ ಮತ್ತು ಕ್ರಿಪ್ಟೋಕರೆನ್ಸಿ ವಂಚನೆಯು ಈ ನಕಲಿ ಉದ್ಯೋಗ ಜಾಲವನ್ನು ನಡೆಸುತ್ತಿದ್ದು ಥೈಲ್ಯಾಂಡ್‌ನಲ್ಲಿ ಡಿಜಿಟಲ್ ಸೇಲ್ಸ್ ಹಾಗೂ ಮಾರ್ಕೆಂಟ್ ಅಧಿಕಾರಿಗಳ ಹುದ್ದೆಗಾಗಿ ಭಾರತೀಯ ಯುವಕರನ್ನು ಆಕರ್ಷಿಸಿ ಉನ್ನತ ಸಂಬಳದ ಆದಾಯದ ಆಮಿಷವನ್ನೊಡ್ಡುತ್ತಿದೆ. ಇಂತಹ ನಕಲಿ ಉದ್ಯೋಗ ನಿದರ್ಶನಗಳನ್ನು ಇತ್ತೀಚೆಗೆ ಬ್ಯಾಂಕಾಕ್ ಮತ್ತು ಮ್ಯಾನ್ಮಾರ್‌ನಲ್ಲಿರುವ ಸಚಿವಾಲಯದ ಗಮನಕ್ಕೆ ತರಲಾಗಿದೆ.


ಇದನ್ನೂ ಓದಿ: Monsoon: ಮುಂಗಾರು ವ್ಯತ್ಯಯದಿಂದ ಬೆಳೆ ಹಾನಿ; ಆಹಾರ ಭದ್ರತೆಯ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದ ತಜ್ಞರು


ಐಟಿ ಕೌಶಲ್ಯವನ್ನರಿತ ಯುವಜನರೇ ಹೆಚ್ಚು ಟಾರ್ಗೆಟ್
ಈ ಜಾಲಕ್ಕೆ ಹೆಚ್ಚಾಗಿ ಸಿಲುಕಿಕೊಳ್ಳುತ್ತಿರುವ ಐಟಿ ಕೌಶಲ್ಯವನ್ನರಿತ ಯುವಕರಾಗಿದ್ದು ಸಾಮಾಜಿಕ ಮಾಧ್ಯಮ ಅಂತೆಯೇ ದುಬೈ ಹಾಗೂ ಭಾರತೀಯ ಮೂಲದ ಏಜೆಂಟ್‌ಗಳಿಂದ ಸಂಪರ್ಕಗೊಳ್ಳುತ್ತಾರೆ ಎಂದು ಪ್ರಕಟಣೆ ಉಲ್ಲೇಖಿಸಿದೆ.

Published by:ಗುರುಗಣೇಶ ಡಬ್ಗುಳಿ
First published: