Bridge Collapse: 559 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆ ಕುಸಿತ!

ಮುಂದಿನ ಎರಡು ತಿಂಗಳಲ್ಲಿ ವರದಿಯನ್ನು ಸಲ್ಲಿಸಲು ಕೇಳಲಾಗಿದೆ. ಇದಲ್ಲದೆ ದೆಹಲಿ ಮೂಲದ ಗುತ್ತಿಗೆದಾರ ಮತ್ತು ಜೈಪುರ ಮೂಲದ ಕನ್ಸಲ್ಟೆಂಟ್ ಎಂಜಿನಿಯರಿಂಗ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.

ಕುಸಿದ ಸೇತುವೆ

ಕುಸಿದ ಸೇತುವೆ

 • Share this:
  ಭೋಪಾಲ್: ಭಾರೀ ಮಳೆಯಿಂದ ದೇಶದ ವಿವಿಧ ಭಾಗಗಳಲ್ಲಿ ಉಂಟಾಗುತ್ತಿರುವ ಸಮಸ್ಯೆ ಇನ್ನೂ ನಿಂತಿಲ್ಲ.  ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಧ್ಯಪ್ರದೇಶದ ಹಲವಾರು ಭಾಗಗಳಲ್ಲಿ (Madhya Pradesh Rains) ಪ್ರವಾಹದಂತಹ ಪರಿಸ್ಥಿತಿಗಳಿಗೆ ಕಾರಣವಾಗಿದೆ. ಪ್ರತಿಕೂಲ ಹವಾಮಾನದ ನಡುವೆ  ಮಧ್ಯಪ್ರದೇಶ  ರಾಜಧಾನಿ ಭೋಪಾಲ್ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಭೋಪಾಲ್​ನಲ್ಲಿ (Madhya Pradesh Bhopal) ಭಾರೀ ಮಳೆಯಿಂದ ಸೇತುವೆಗಳು (Bridge Collapse) ಒಂದರ ನಂತರ ಒಂದರಂತೆ ಕುಸಿದ ಘಟನೆ ವರದಿಯಾಗಿದೆ. ಈ ದುರ್ಘಟನೆಗಳ ನಂತರ ಐಐಟಿ ರೂರ್ಕಿ ಸಂಸ್ಥೆಗೆ ಕುಸಿತಕ್ಕೆ ಒಳಗಾದ ಕಲಿಯಾಸೊಟ್ ಸೇತುವೆಯ (ಭೋಪಾಲ್-ಜಬಲ್‌ಪುರ) ಮೂಲಸೌಕರ್ಯವನ್ನು ವಿನ್ಯಾಸಗೊಳಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ.

  ಮುಂದಿನ ಎರಡು ತಿಂಗಳಲ್ಲಿ ವರದಿಯನ್ನು ಸಲ್ಲಿಸಲು ಕೇಳಲಾಗಿದೆ. ಇದಲ್ಲದೆ ದೆಹಲಿ ಮೂಲದ ಗುತ್ತಿಗೆದಾರ ಮತ್ತು ಜೈಪುರ ಮೂಲದ ಕನ್ಸಲ್ಟೆಂಟ್ ಎಂಜಿನಿಯರಿಂಗ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಮಧ್ಯಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಈ ಎರಡು ಸಂಸ್ಥೆಗಳು ಮಾಡಿದ ಕೆಲಸವನ್ನು ಲೆಕ್ಕಪರಿಶೋಧನೆ ಮಾಡಲಾಗುತ್ತದೆ.  ವಿವಿಧ ಪ್ರದೇಶಗಳಲ್ಲಿ ಸಂಗ್ರಹವಾಗಿತ್ತು ಭಾರೀ ನೀರು
  ಕೋರ್ ಸಿಟಿಯೊಳಗಿನ ತಗ್ಗು ಪ್ರದೇಶಗಳಾದ ಹಮೀಡಿಯಾ ರಸ್ತೆ, ಭೋಪಾಲ್ ಟಾಕೀಸ್, ಸೆಂಟ್ರಲ್ ಲೈಬ್ರರಿ, ಇತ್ವಾರ, ಬುಧ್ವರಾ, ಪೊಲೀಸ್ ಕಂಟ್ರೋಲ್ ರೂಮ್, ಜ್ಯೋತಿ ಟಾಕೀಸ್ ಸ್ಕ್ವೇರ್, ವ್ಯಾಪಂ ಸ್ಕ್ವೇರ್ ಮತ್ತು ಅಡ್ಮಿನಿಸ್ಟ್ರೇಟಿವ್ ಅಕಾಡೆಮಿ ಈ ಪ್ರದೇಶಗಳಲ್ಲಿ  ಶನಿವಾರದವರೆಗೆ ಮೊಣಕಾಲು ಆಳದ ಪ್ರವಾಹದಿಂದ ಭಾರೀ ಪ್ರಮಾಣದಲ್ಲಿ ಜಲಾವೃತವಾಗಿತ್ತು. ಆದರೆ ಇದೀಗ ಕೆಲವು ಪ್ರದೇಶಗಳಿಂದ ನೀರು ಕಡಿಮೆಯಾಗಿದೆ.

  ಇದನ್ನೂ ಓದಿ: Nirmala Sitharaman: ಭಾರತೀಯರು ಸ್ವಿಸ್ ಬ್ಯಾಂಕ್​ಗಳಲ್ಲಿ ಇಟ್ಟಿರುವ ಹಣದ ಬಗ್ಗೆ ಮಾಹಿತಿಯಿಲ್ಲ; ನಿರ್ಮಲಾ ಸೀತಾರಾಮನ್

  ದುರಂತದ ಪರಿಸ್ಥಿತಿಯ ಹೊರತಾಗಿಯೂ, ಭೋಪಾಲ್ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪರಿಹಾರ ಮತ್ತು ಪುನರ್ವಸತಿ ಕುರಿತು ತೀವ್ರ ಲಕ್ಷ್ಯ ವಹಿಸಿಲ್ಲ ಎನ್ನಲಾಗಿದೆ. ಏಕೆಂದರೆ ಪ್ರವಾಹ ಮತ್ತು ಮಳೆ-ಆಧಾರಿತ ಹಾನಿಯ ದಿನದಲ್ಲಿ ಕೇವಲ ಮೂರು ದೂರುಗಳನ್ನು ಸ್ವೀಕರಿಸಲಾಗಿದೆ.

  ಇದನ್ನೂ ಓದಿ: Neeraj Chopra Injury: ಕಾಮನ್​ವೆಲ್ತ್ ಗೇಮ್ಸ್​ನಿಂದ ನೀರಜ್ ಚೋಪ್ರಾ ಹೊರಕ್ಕೆ, ಏನು ಕಾರಣ?

  ಭೋಪಾಲ್ ನಿವಾಸಿಗಳನ್ನು ಹೊರತುಪಡಿಸಿ ಮಧ್ಯಪ್ರದೇಶ ರಾಜ್ಯದಾದ್ಯಂತ ರೈತರು ಅನಿಯಮಿತ ಮಳೆಯಿಂದಾಗಿ ಒತ್ತಡ ಮತ್ತು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಭಾರೀ ಮಳೆಯಿಂದ ಸಮತಟ್ಟಾದ ಗದ್ದೆಗಳು ಕೆಸರುಮಯವಾಗಿದ್ದು, ಜೋಳ, ಸೋಯಾಬೀನ್ ಮುಂತಾದ ಬೆಳೆಗಳು ಹಾನಿಗೊಳಗಾಗಿದ್ದರೆ, ಗುಡ್ಡಗಾಡು ಪ್ರದೇಶಗಳಲ್ಲಿನ ಸಸಿಗಳು ಮಣ್ಣಿನ ಸವಕಳಿಯಿಂದ ನಾಶವಾಗಿವೆ. ಭತ್ತದ ಬೇಸಾಯಕ್ಕಾಗಿ ನಿರ್ಮಿಸಿದ ಕಟ್ಟೆಗಳು ಈಗ ಒಡೆದಿವೆ.

  ಸ್ವಂತ ಅಪ್ಪನನ್ನೇ ಕೊಲ್ಲಲು ಫೇಸ್​ಬುಕ್​ನಲ್ಲಿ ಹಂತಕರನ್ನು ಬುಕ್ ಮಾಡಿ ಮಗ!
  ಸಾಮಾಜಿಕ ಜಾಲತಾಣಗಳಿಂದ ಏನೇನೆಲ್ಲ ಆಗ್ತಿದೆ. ಎಷ್ಟು ಉಪಯೋಗ ಇದೆಯೋ ಅಷ್ಟೇ ಅಪಾಯವೂ ಇದೆ ಎಂಬುದು ಆಗಾಗ ಸಾಬೀತಾಗುತ್ತಲೆ ಇದೆ. ಇತ್ತೀಚಿಗಂತೂ ಉಪಯೋಗಕ್ಕಿಂತ ದುರುಪಯೋಗ ಮಾಡಿಕೊಳ್ತಿರುವವರ ಸಂಖ್ಯೆಯೇ ಹೆಚ್ಚಾಗ್ತಿದೆ. ಮಧ್ಯಪ್ರದೇಶದ ವ್ಯಕ್ತಿಯೊಬ್ಬ ತನ್ನ ಅಪ್ಪನನ್ನೇ ಕೊಲೆ ಮಾಡಿಸಲು ಫೇಸ್‌ಬುಕ್ ಮೂಲಕ ಕೊಲೆಗಾರನನ್ನು ನೇಮಿಸಿಕೊಂಡ ಕರಾಳ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಹಣಕ್ಕಾಗಿ ತನ್ನ 59 ವರ್ಷದ ತಂದೆಯನ್ನು ಕೊಲೆ ಮಾಡಿಸಿರುವ ವ್ಯಕ್ತಿಗೆ ಕೊಲೆ ಮಾಡೋಕೆ ಜನ ಸಿಕ್ಕಿದ್ದು ಫೇಸ್​ಬುಕ್​ನಿಂದ (Facebook) ಎಂಬುದನ್ನು ತಿಳಿದು ಸ್ವತಃ ಪೊಲೀಸರು ಶಾಕ್ (Shocking News) ಆಗಿದ್ದಾರೆ. ಫೇಸ್​ಬುಕ್ ಬಳಸಿ ಸ್ವತಃ ಅಪ್ಪನನ್ನೇ ಕೊಲೆಗೈದ ಈ ಘಟನೆಗೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

  ಮಧ್ಯಪ್ರದೇಶದ ಪಿಚ್ಚೋರ್​​ನಲ್ಲೇ ಈ ಭಯಾನಕ ಘಟನೆ ನಡೆದಿರುವುದು. ಜುಲೈ 21 ರ ಮಧ್ಯರಾತ್ರಿ ಜಿಲ್ಲಾ ಕೇಂದ್ರದಿಂದ 75 ಕಿಮೀ ದೂರದಲ್ಲಿರುವ ಪಿಚೋರ್ ಪಟ್ಟಣದ ತನ್ನ ಮನೆಯ ಕೋಣೆಯಲ್ಲಿ ಮಲಗಿದ್ದಾಗ ಮಹೇಶ್ ಗುಪ್ತಾ ಎಂಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ಸಿಂಗ್ ಚಂದೇಲ್ ತಿಳಿಸಿದ್ದಾರೆ. ಆದರೆ ಈ ಬಂಧನ ಪ್ರಕ್ರಿಯೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.
  Published by:guruganesh bhat
  First published: