ಭೋಪಾಲ್ (ಜು. 18): ಸಿನಿಮಾ ನಟ-ನಟಿಯರು , ರಾಜಕಾರಣಿಗಳು ,ಪ್ರಮುಖ ವ್ಯಕ್ತಿ ಕಂಡೊಡನೇ ಸಾಕು ಜನರು ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಇದರಿಂದ ಅವರಿಗೆ ಕೆಲವೊಮ್ಮೆ ಸಾಕಷ್ಟು ಕಿರಿಕಿರಿಯಾಗಿ ಇರುಸು ಮುರುಸಾಗುತ್ತದೆ. ಬಂದ ಅಭಿಮಾನಿಗಳನ್ನು ನಿರಾಕರಿಸುವಂತಿಲ್ಲ. ಸೆಲ್ಫಿಗೆ ಪೋಸು ಕೊಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ. ಇಂತಹ ಸನ್ನಿವೇಶವನ್ನು ತಪ್ಪಿಸಲು ಮಧ್ಯಪ್ರದೇಶದ ಮಹಿಳಾ ಸಚಿವರೊಬ್ಬರು ಹೊಸ ಮಾರ್ಗ ಕಂಡು ಕೊಂಡಿದ್ದಾರೆ. ಈ ಸಚಿವರ ಜೊತೆ ಇನ್ಮುಂದೆ ಸೆಲ್ಫಿ ಪಡೆಯಬೇಕು ಎಂದರೆ ಅವರು ನೂರು ರೂಪಾಯಿ ಪಾವತಿಸಿ ಅವರೊಟ್ಟಿಗೆ ಕ್ಯಾಮರಾಕ್ಕೆ ಫೋಸ್ ಕೊಡಬಹುದಂತೆ.
ಉಷಾ ಠಾಕೂರ್ ಈ ಘೋಷಣೆ ಹೊರಡಿಸಿದ ಸಚಿವರು. ಸಚಿವರ ಈ ಮಾತು ಕೇಳಿ ರಾಜ್ಯದ ಜನರು ಕೊಂಚ ಗಲಬಿಲಿಗೆ ಒಳಗಾದರಂತೆ. ಈ ಕುರಿತು ಮಾಧ್ಯಮಕ್ಕೆ ಮಾತನಾಡಿರುವ ಸಚಿವರು. ತಮ್ಮ ಬೆಂಬಲಿಗರು ತಮ್ಮೊಟ್ಟಿಗೆ ಅತಿ ಹೆಚ್ಚು ಮುಗಿ ಬೀಳುತ್ತಾರೆ. ಅವರ ಕ್ಯಾಮೆರಾಗೆ ಸುಮ್ಮನೆ ಪೋಸ್ ನೀಡುವ ಬದಲು ಈ ರೀತಿ ಹಣ ಪಡೆಯುವ ಮಾರ್ಗ ಒಳೆಯಿತು. ಈ ರೀತಿ ಬಂದ ಹಣವನ್ನು ತಮ್ಮ ಪಕ್ಷದ ಕಾರ್ಯಕ್ಕಾಗಿ ಬಳಸಿಕೊಳ್ಳುತ್ತೇನೆ ಎಂದಿದ್ದಾರೆ.
ಜನರು, ಬೆಂಬಲಿಗರೊಂದಿಗೆ ಸೆಲ್ಫಿಗಾಗಿ ತುಂಬಾ ಸಮಯ ವ್ಯರ್ಥವಾಗುತ್ತಿದೆ. ಇದರಿಂದ ನನಗೂ ಅನೇಕ ಬಾರಿ ಕೆಲ ಕಾರ್ಯಕ್ರಮಕ್ಕೆ ತಡವಾಗಿದೆ. ಇದೇ ಕಾರಣದಿಂದ ತಮ್ಮ ಜೊತೆ ಸೆಲ್ಫೆ ಪಡೆಯ ಬೇಕು ಎಂದವರು ಇನ್ಮುಂದೆ ಕಡ್ಡಾಯವಾಗಿ 100 ರೂ ಪಾವತಿ ಮಾಡಬೇಕು. ಈ ಹಣವನ್ನು ಪಕ್ಷದ ಸ್ಥಳೀಯ ಘಟಕಗಳ ಅಭಿವೃದ್ಧಿಗೆ ಮೀಸಲಿಡಲಾಗುವುದು ಎಂದಿದ್ದಾರೆ.
ಇದನ್ನು ಓದಿ: ಮಂಕು ಬೂದಿ ಎರಚಿ ಹಣ ಲಪಟಾಯಿಸಿದ ಸಾಧುಗಳು; ಗ್ರಾಮ ಪಂಚಾಯತ್ ಸದಸ್ಯ ಮೋಸ ಹೋದ ಕಥೆಯೇ ವಿಚಿತ್ರ
ಇನ್ನು ತಮ್ಮ ಈ ಕಾರ್ಯ ಯಶಸ್ವಿಯಾಗುತ್ತದಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ಸೆಲ್ಫಿ ಪಡೆಯಲೇ ಬೇಕು ಎನ್ನುವವರು ಹಣ ಪಾವತಿ ಮಾಡಿಯೇ ಮಾಡುತ್ತಾರೆ ಎನ್ನುತ್ತಾರೆ.
ಇಷ್ಟೇ ಅಲ್ಲದೇ, ಕಾರ್ಯಕ್ರಮಗಳಲ್ಲಿ ಪುಷ್ಪ ನೀಡುವ ಕುರಿತು ಅವರು ಆಕ್ಷೇಪಿಸಿದ್ದಾರೆ. ಪುಷ್ಪ ಬದಲು ಪುಸ್ತಕವನ್ನು ನನಗೆ ಇನ್ಮುಂದೆ ನೀಡಿ ಎಂದು ವಿನಂತಿಸಿಕೊಂಡಿದ್ದಾರೆ.
ಅನೇಕ ಕಾರ್ಯಕ್ರಮಗಳಲ್ಲಿ ಹೂ ಗುಚ್ಛ ನೀಡಿ ಸ್ವಾಗತಿಸುತ್ತಾರೆ. ಆದರೆ, ಹೂವಿನಲ್ಲಿ ಲಕ್ಷ್ಮಿ ದೇವಿ ವಾಸಿಸುತ್ತಾಳೆ ಎಂಬುದನ್ನು ನಾನು ನಂಬಿದ್ದೇನೆ. ಹೂವು ವಿಷ್ಣುವಿಗೆ ಸೇರಬೇಕು.
ಲಕ್ಷ್ಮಿ ದೇವಿ ಎಲ್ಲಾ ಪಾಪ ಮುಕ್ತರಾಗಿರುವ ವಿಷ್ಣುಗೆ ಮಾತ್ರ ಸೀಮಿತ. ಈ ಹಿನ್ನಲೆ ಹೂವನ್ನು ಸ್ವೀಕರಿಸುವ ಹಕ್ಕು ಯಾರಿಗೂ ಇಲ್ಲ. ಇದರ ಬದಲಾಗಿ ಪುಸ್ತಕ ನೀಡಿ . ಇದನ್ನೇ ಮೋದಿ ಅವರು ಒತ್ತಿ ಹೇಳಿದ್ದಾರೆ. ಈ ಪುಸ್ತಕಗಳನ್ನು ಸಂಗ್ರಹಿಸಿ ಪಕ್ಷದ ಕಚೇರಿಯಲ್ಲಿ ಗ್ರಂಥಾಲಯ ನಿರ್ಮಿಸಬಹುದು ಅಥವಾ ದಾನ ಮಾಡಬಹುದು ಎಂದಿದ್ದಾರೆ
ಮಧ್ಯಪ್ರದೇಶದ ನಾಗರ್ ಮೊಹಾ ಕ್ಷೇತ್ರದ ಬಿಜೆಪಿ ನಾಯಕಿ ಇತ್ತಿಚೇಗೆ ಲಸಿಕೆ ವಿಚಾರದಲ್ಲಿ ಸುದ್ದಿ ಆಗಿದ್ದರು. ಜನರು ಎರಡು ಡೋಸ್ ಲಸಿಕೆಯನ್ನು ಪಡೆದ ಬಳಿಕಗ ಪಿಎಂ ಕೇರ್ಸ್ ನಿಧಿಗೆ 500 ದೇಣಿಗೆ ನೀಡಬೇಕು ಎಂದಿದ್ದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ