ಭೋಪಾಲ್(ಜ. 19): ತನ್ನ ಹೆಂಡತಿ ಮೇಲೆ ಅತ್ಯಾಚಾರ ಎಸಗಿದ ಕಿರಾತಕರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಅವರನ್ನು ಬಾಂಬ್ ಸ್ಪೋಟಿಸಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದಲ್ಲಿ (MadyaPradesh) ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಈ ಪ್ರಕರಣ ಸಂಬಂಧ 32 ವರ್ಷದ ವ್ಯಕ್ತಿಯನ್ನು ಬಂದಿಸಲಾಗಿದೆ. ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ 32 ವರ್ಷದ ಆರೋಪಿ ವ್ಯಕ್ತಿಯನ್ನು ಸ್ಪೋಟಕ (Explosion) ಬಳಸಿ ಹತ್ಯೆ ಮಾಡಿದ್ದಾನೆ. ತನ್ನ ಹೆಂಡತಿ ಮೇಲೆ ನಡೆದ ಅತ್ಯಾಚಾರ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಹತ್ಯೆ ಸಂಚು ನಡೆಸಿರುವುದಾಗಿ ಆತ ತಿಳಿಸಿದ್ದಾನೆ ಎಂಬ ಮಾಹಿತಿ ಪೊಲೀಸರು ನೀಡಿದ್ದಾರೆ.
ಪತ್ನಿ ಮೇಲಿನ ಅತ್ಯಾಚಾರಕ್ಕೆ ಪ್ರತೀಕಾರ
ಬಂಧಿತ ವ್ಯಕ್ತಿ ತನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಿರುವ ಶಂಕಿತ ವ್ಯಕ್ತಿಯ ಕೊಲ್ಲಲು ಈ ಸಂಚು ರೂಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಈ ಅತ್ಯಾಚಾರ ಪ್ರಕರಣ ಸಂಬಂಧದಲ್ಲಿ ಭನ್ವರ್ ಲಾಲ್ ಮತ್ತು ದಿನೇಶ್ ಎಂಬ ಆರೋಪಿಗಳನ್ನು ಕೂಡ ಇದೇ ವೇಳೆ ಪೊಲೀಸರು ಬಂಧಿಸಿದ್ದಾರೆ.
ತನಿಖೆ ವೇಳೆ ಅಸಲಿ ವಿಷಯ ಬಹಿರಂಗ
ಜನವರಿ 4 ರಂದು ಗ್ರಾಮದ ಲಾಲ್ ಸಿಂಗ್ ಅವರು ಸಾವನ್ನಪ್ಪಿದ್ದರು. ತಮ್ಮ ಕೃಷಿ ಭೂಮಿಯಲ್ಲಿನ ಕೊಳವೆ ಬಾವಿಯ ಬಳಿ ಸಂಭವಿಸಿದ ಸ್ಫೋಟದಲ್ಲಿ ಅವರು ಸಾವನ್ನಪ್ಪಿದರು. ಜೆಲಾಟಿನ್ ರಾಡ್ ಮತ್ತು ಡಿಟೋನೇಟರ್ನಿಂದ ಸ್ಫೋಟ ಸಂಭವಿಸಿದೆ ಎಂದು ವಿಧಿವಿಜ್ಞಾನ ತಜ್ಞರು ತಿಳಿಸಿದ್ದಾರೆ.
ವಿಫಲಯತ್ನದ ಬಳಿಕ ಯಶಸ್ವಿ
ಈ ಘಟನೆಗೂ ಮುನ್ನ ಕೂಡ ಮಾಜಿ ಸರಪಂಚ್ ಭನ್ವರ್ ಲಾಲ್ ಅವರ ಕೊಳವೆ ಬಾವಿ ಬಳಿ ಇದೇ ರೀತಿ ಸ್ಪೋಟ ಸಂಭವಿಸಿತ್ತು. ಆದರೆ, ಈ ವೇಳೆ ಅವರು ಸಣ್ಣ ಪುಟ್ಟ ಗಾಯದಿಂದ ಪರಾಗಿದ್ದರು. ಆದರೆ, ಇದೀಗ ಸಾವನ್ನಪ್ಪಿದ್ದು, ಇದು ಉದ್ದೇಶ ಪೂರ್ವಕವಾಗಿ ನಡೆದ ದಾಳಿ ಎಂಬುದು ತಿಳಿದು ತನಿಖೆ ನಡೆಸಲಾಯಿತು ಎಂದು ರತ್ಲಂ ಪೊಲೀಸ್ ಅಧೀಕ್ಷಕ ಗೌರವ್ ತಿವಾರಿ ಹೇಳಿದರು.
ಇದನ್ನು ಓದಿ: Chhattisgarhದಲ್ಲಿ ಮೂರು ಕಣ್ಣಿನ ಕರು ಜನನ; ಶಿವನ ಅವತಾರ ಎಂದ ಜನರು
ಕಾಣೆಯಾದ ಕುಟುಂಬ ಶೋಧಿಸಿದಾಗ ಅಸಲಿ ಸತ್ಯ ಹೊರಗೆ
ಈ ಘಟನೆಯ ನಂತರ ಗ್ರಾಮದಿಂದ ಕಾಣೆಯಾದ ಕುಟುಂಬವನ್ನು ಪೊಲೀಸರು ಪತ್ತೆ ಮಾಡಿದರು. ಈ ವೇಳೆ ಸ್ಪೋಟ ನಡೆಸಿದ ಆರೋಪಿ ಕುಟುಂಬ ಊರು ತೊರೆದಿದ್ದು, ತಿಳಿದು ವಿಚಾರಣೆ ನಡೆಸಲಾಯಿತು. ಈ ವೇಳೆ ವಿಚಾರಣೆ ಸಮಯದಲ್ಲಿ ಆರೋಪಿ ಸ್ಪೋಟಕ ಸ್ಪೋಟಿಸಿದ ಅಪರಾಧವನ್ನು ಒಪ್ಪಿಕೊಂಡನು. ಜೊತೆಗೆ ಇದೇ ವೇಳೆ ತನ್ನ ಹೆಂಡತಿಯ ಸಾಮೂಹಿಕ ಅತ್ಯಾಚಾರದ ಪ್ರತೀಕಾರವನ್ನು ತೆಗೆದುಕೊಳ್ಳುವುದಕ್ಕೆ ಈ ಕೃತ್ಯ ಎಸಗಲಾಗಿದೆ ಎಂಬುದನ್ನು ಬಾಯ್ಬಿಟ್ಟಿದ್ದ.
ಇದನ್ನು ಓದಿ: ಮೂರು ವರ್ಷವಾದರೂ ಸಿಗದ ಮಂಗಳಮುಖಿ ಸುಳಿವು; ಮರ್ಯಾದಾ ಹತ್ಯೆ ಶಂಕೆ?
ಇಂಟರ್ನೆಟ್ ನೀಡಿ ಬಾಂಬ್ ಸ್ಪೋಟ
ಲಾಲ್ ಸಿಂಗ್, ಭವರ್ಲಾಲ್ ಮತ್ತು ದಿನೇಶ್ ಅವರು ತಮ್ಮ ಮನೆಗೆ ನುಗ್ಗಿ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದರು. ಅವರನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಅವರು ಅವನನ್ನು ಥಳಿಸಿದರು. ನಂತರ, ಜೊತೆಗೆ ಈ ವಿಷಯ ತಿಳಿಸಿದಂತೆ ಬೆದರಿಕೆ ಹಾಕಿದರು. ಇದರಿಂದ ಪೊಲೀಸರಿಗೆ ವಿಷಯವನ್ನು ತಿಳಿಸಲಿಲ್ಲ ಆದರೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಇಂಟರ್ನೆಟ್ ನೋಡಿ ಬಾಂಬ್ ತಯಾರಿಸುವುದನ್ನು ಕಲಿತೆ. ಮೊದಲು ಭನ್ವರ್ಲಾಲ್ ಅವರ ಕೊಳವೆ ಬಾವಿಗೆ ಬಾಂಬ್ ಅಳವಡಿಸಲಾಯಿತು. ಆದರೆ, ಸ್ಫೋಟದಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಬದುಕುಳಿದರು. ಬಳಿಕ ಲಾಲ್ ಸಿಂಗ್ ಮೇಲೆ ಹೆಚ್ಚು ಜಿಲೆಟಿನ್ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ