ಪ್ರೇಮಿಗಳ (Lovers) ಪಾಲಿಗೆ ದೇವಸ್ಥಾನ(temple) ಅಂದ್ರೆ ಅದು ತಾಜ್ ಮಹಲ್(Taj mahal).. ವಿಶ್ವದ ಏಳು ಅದ್ಭುತಗಳಲ್ಲಿ(7 wonders of the world) ಒಂದಾಗಿರುವ ತಾಜ್ ಮಹಲ್ ಮುಂದೆ ನಿಂತು ಒಂದಲ್ಲ ಒಂದು ಬಾರಿ ತನ್ನ ಪ್ರೀತಿಗೆ ಪ್ರೇಮ(Love) ನಿವೇದನೆಯನ್ನು(Propose) ಮಾಡಬೇಕು ಎಂದು ಪ್ರತಿಯೊಬ್ಬ ಪ್ರೇಮಿ ಕನಸು ಕಂಡಿರುತ್ತಾನೆ..ಪ್ರತಿಯೊಬ್ಬ ಪತಿಯು ತನ್ನ ಹೆಂಡತಿಯೊಂದಿಗೆ ಒಮ್ಮೆಯಾದರೂ ತಾಜ್ ಮಹಲ್ ಗೆ ಹೋಗಬೇಕು ಎಂದು ಬಯಸುತ್ತಾನೆ. ಪ್ರೀತಿಯ ಸಂಕೇತವಾಗಿರುವ ಈ ತಾಜ್ಮಹಲ್ ವೀಕ್ಷಣೆಗೆ ಪ್ರತಿನಿತ್ಯ ಪ್ರಪಂಚದ ಮೂಲೆ ಮೂಲೆಯಿಂದ ಜನರು ಬರುತ್ತಾರೆ. ಹೆಂಡತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ತಾಜ್ಮಹಲ್ ಉಡುಗೊರೆ ತಂದುಕೊಡುತ್ತಾರೆ. ಆದರೆ ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಯ ಮೇಲಿನ ಪ್ರೀತಿಯಿಂದ ತಾಜ್ಮಹಲ್ ಹೋಲುವ ಮಾದರಿಯ ಮನೆಯನ್ನೆ ನಿರ್ಮಿಸಿದ್ದಾನೆ.
ಹೆಂಡತಿಯ ಮೇಲಿನ ಪ್ರೀತಿಗಾಗಿ ನಿರ್ಮಾಣವಾಯಿತು ತಾಜ್ಮಹಲ್ ಮಾದರಿ ಮನೆ
ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ಮಹಲನ್ನು ಮೊಘಲ್ ಚಕ್ರವರ್ತಿಯಾದ ಶಾ ಜಹನನು ತನ್ನ ಪ್ರೀತಿ ಪಾತ್ರ ಮಡದಿ ಮುಮ್ತಾಜ್ ಮಹಲಳ ನೆನಪಿಗಾಗಿ ನಿರ್ಮಿಸಿದನು. ಇದೊಂದು ಗೋರಿಯಾಗಿದ್ದು, ಪ್ರೇಮದ ಅಮರತ್ವವನ್ನು ಸಾರುವ ಸ್ಮಾರಕವು ಭಾರತೀಯ, ಪರ್ಶಿಯನ್ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ಅಪೂರ್ವ ಸಮ್ಮಿಲನದ ಮಾದರಿಯಾಗಿ ನಿಂತಿದೆ.ಇದರ ವಾಸ್ತುಶಿಲ್ಪಕ್ಕೆ ಮರುಳಾಗದವರೇ ಇಲ್ಲ.. ಹೀಗಿರುವಾಗ ಮಧ್ಯಪ್ರದೇಶದಲ್ಲಿ ಪತಿಯೊಬ್ಬ ತನ್ನ ಹೆಂಡತಿಯಾಗಿ ತಾಜ್ ಮಹಲ್ ನಿರ್ಮಿಸುತ್ತಿದ್ದರು ತಾಜ್ ಮಹಲ್ ಮಾದರಿಯ ಮನೆಯನ್ನು ನಿರ್ಮಿಸಿ ಆಶ್ಚರ್ಯ ಮೂಡಿಸಿದ್ದಾರೆ..
ಇದನ್ನೂ ಓದಿ :ಒಂದು ವರ್ಷದ ನಂತರ ಪ್ರವಾಸಿಗರಿಗೆ ರಾತ್ರಿವೇಳೆ ತಾಜ್ಮಹಲ್ ಕಣ್ತುಂಬಿಕೊಳ್ಳೋ ಅವಕಾಶ, ಯಾವಾಗಿನಿಂದ? ಯಾವ ಸಮಯದಲ್ಲಿ ಅನುಮತಿ?
ಮಧ್ಯಪ್ರದೇಶದ ಬುರ್ಹಾನ್ಪುರದ ನಿವಾಸಿಯಾಗಿರುವ ಆನಂದ್ ಚೋಕ್ಸೆ, ಬುರ್ಹಾನ್ಪುರದಲ್ಲಿಯೂ ತಾಜ್ಮಹಲ್ ನಿರ್ಮಾಣವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಯೋಚಿಸುತ್ತಿದ್ದರು.. ಅವರ ಯೋಜನೆಯಂತೆ ತಾಜ್ಮಹಲ್ ಮಾದರಿ ಹೋಲುವ ಮನೆಯನ್ನು ಬುರ್ಹಾನ್ಪುರದಲ್ಲಿ ನಿರ್ಮಿಸಿ ತಮ್ಮ ಹೆಂಡತಿಗೆ ಉಡುಗೊರೆಯಾಗಿ ನೀಡಿದ್ದಾರೆ..
3 ವರ್ಷದಲ್ಲಿ ನಿರ್ಮಾಣವಾಯಿತು ತಾಜ್ ಮಹಲ್ ಮನೆ
ತಾಜ್ ಮಹಲ್ ನ ಪ್ರತಿರೂಪವಾಗಿರುವ ಈ ತಾಜ್ ಮಹಲ್ ಮನೆ ನಿರ್ಮಾಣಕ್ಕೆ ಬರೋಬರಿ ಮೂರು ವರ್ಷಗಳು ತೆಗೆದುಕೊಂಡಿದ್ದು, ನಿರ್ಮಾಣ ಮಾಡುವಾಗ ಹಲವಾರು ರೀತಿಯ ಸವಾಲುಗಳು ಎದುರಾಗಿತ್ತು ಎಂದು ಮನೆ ನಿರ್ಮಿಸಿದ ಎಂಜಿನಿಯರ್ ಹೇಳಿಕೊಂಡಿದ್ದಾರೆ.. ತಾಜ್ ಮಹಲ್ ಮನೆ ತೀರ್ಮಾನಕ್ಕಾಗಿ ಹಲವು ಅಧ್ಯಯನಗಳು ನಡೆದು, ಜವಾದ ತಾಜ್ ಮಹಲನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿದ ಬಳಿಕ ನಿರ್ಮಾಣ ಮಾಡಲು ಎಂಜಿನಿಯರ್ ಮುಂದಾಗಿದ್ದಾರೆ.ಅಲ್ಲದೆ ಮನೆಯೊಳಗಿನ ಕೆತ್ತನೆಗಾಗಿ ಅವರು ಬಂಗಾಳ ಮತ್ತು ಇಂದೋರ್ನ ಕಲಾವಿದರಿಂದ ಸಹಾಯ ಕೂಡ ಪಡೆದುಕೊಳ್ಳಲಾಗಿದೆ.
ಇನ್ನು ಈ ಮನೆಯ ಗುಮ್ಮಟ 29 ಅಡಿ ಎತ್ತರದಲ್ಲಿದೆ. ಇದು ತಾಜ್ ಮಹಲ್ ತರಹದ ಗೋಪುರಗಳನ್ನು ಹೊಂದಿದೆ ಮತ್ತು ಮನೆಯ ನೆಲಹಾಸನ್ನು ರಾಜಸ್ಥಾನದ ಮಕ್ರಾನಾದಿಂದ ಮಾಡಲಾಗಿದೆ. ಮತ್ತು ಈ ಮನೆಯ ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. ಮನೆಯೊಳಗೆ ವಿಶಾಲವಾದ ಹಾಲ್ ಇದ್ದು, ಕೆಳಗೆ 2 ಬೆಡ್ರೂಮ್, ಮೇಲೆ ಎರಡು ಬೆಡ್ ರೂಂಗಳಿವೆ.. ಅಲ್ಲದೇ ಮನೆಯ ಮೇಲಂತಸ್ತಿನಲ್ಲಿ ಗ್ರಂಥಾಲಯ ಹಾಗೂ ಧ್ಯಾನದ ಕೊಠಡಿ ಕೂಡ ಇದೆ..
ಇದನ್ನೂ ಓದಿ :ನೆರೆ ರಾಷ್ಟ್ರದಲ್ಲಿದೆ ಬಡವರ 'ತಾಜ್ ಮಹಲ್'..!
ಅಷ್ಟೇ ಅಲ್ಲದೆ ಮನೆಯ ಒಳಗೂ ಹೊರಗೂ ದೀಪಾಲಂಕಾರ ಮಾಡಿದ್ದು ನಿಜವಾದ ತಾಜ್ ಮಹಲ್ ನಂತೆಯೇ ಈ ಮನೆಯೂ ಸಹ ಕತ್ತಲಲ್ಲಿ ಹೊಳೆಯುತ್ತದೆ. ಒಟ್ಟಾರೆ ಹೆಂಡತಿ ಮೇಲಿನ ಅಗಾಧವಾದ ಪ್ರೀತಿಯನ್ನು ತೋರಿಸಲು ವಸ್ತುಗಳನ್ನು ದುಬಾರಿಯಾಗಿ ಕೊಡುವ ಕಾಲದಲ್ಲಿ, ಅಸಂಖ್ಯಾತ ಪ್ರೇಮಿಗಳ ಪಾಲಿಗೆ ದೇವಾಲಯವಾಗಿರುವ ತಾಜ್ಮಹಲ್ ಮಾದರಿಯ ಮನೆಯನ್ನ ನಿರ್ಮಾಣ ಮಾಡಿ ಅದನ್ನು ತನ್ನ ಹೆಂಡತಿಗೆ ಉಡುಗೊರೆಯಾಗಿ ನೀಡುವ ಮೂಲಕ ಆನಂದ್ ಕೂಡ ಶಹಜಾನ್ ನಂತೆ ತನ್ನ ಹೆಂಡತಿ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ