ಮಧ್ಯ ಪ್ರದೇಶದಲ್ಲಿ ನಿದ್ದೆ ಮಾಡುವಾಗ ಪತಿಯ ಕೊಲೆ: ಪತ್ನಿಯ ಮೇಲೆ ಪೊಲೀಸರಿಗೆ ಅನುಮಾನ..!

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಘಟನೆ ನಡೆದಾಗ ಪತಿ ಮತ್ತು ಪತ್ನಿ ಇಬ್ಬರೂ ಮನೆಯಲ್ಲಿದ್ದರು. ಜೂನ್ 20 ರಂದು ದಂಪತಿ ವಿವಾಹವಾಗಿದ್ದರು. ಮದುವೆಯಾದ ಬಳಿಕ ತನ್ನ ತಾಯಿಯ ಮನೆಗೆ ಪತ್ನಿ ತೆರಳಿದ್ದಳು. ಅಲ್ಲದೆ, ಘಟನೆಗೂ ಒಂದು ದಿನ ಮೊದಲು ಮಹಿಳೆ ತನ್ನ ಪತಿ ಹಾಗೂ ಮಾವನ ಮನೆಗೆ ವಾಪಸಾಗಿದ್ದಾಳೆ ಎಂದು ವರದಿಗಳು ಹೇಳುತ್ತವೆ.

ಮುಂದೆ ಓದಿ ...
  • Share this:

ಹೊಸದಾಗಿ ಮದುವೆಯಾದ ಪತಿ - ಪತ್ನಿಯರ ನಡುವೆ ಖುಷಿ ಸಹಜವಾಗೇ ಹೆಚ್ಚಿರುತ್ತೆ. ಮಹಿಳೆಯ ತವರು ಮನೆ ಹಾಗೂ ಗಂಡನ ಮನೆಯಲ್ಲೂ ಸಹ ನೆಂಟರಿಷ್ಟರು ತುಂಬಿಕೊಂಡು ಹರಟೆ, ತುಂಟಾಟ ಮಾಡುತ್ತಿರುತ್ತಾರೆ, ಇಬ್ಬರ ಮನೆಯಲ್ಲೂ ಸಂತೋಷ ನೆಲೆಸಿರುತ್ತದೆ. ಆದರೆ, ಇಲ್ಲಿ ಮದುವೆಯಾದ 15 ದಿನಕ್ಕೆ ಪತಿಯ ಕೊಲೆಯಾಗಿದೆ. ಅಲ್ಲದೆ, ಪೊಲೀಸರು ಪತ್ನಿಯ ಮೇಲೇ ಅನುಮಾನ ಪಡುತ್ತಿದ್ದಾರೆ. ಹೌದು, ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಹೊಸದಾಗಿ ಮದುವೆಯಾದ ಪತಿ - ಪತ್ನಿ ಇಬ್ಬರೂ ಜತೆಗೆ ಮಲಗಿದ್ದರು. ಆದರೆ, ಪತ್ನಿ ಎಚ್ಚರಗೊಂಡ ನಂತರ ತನ್ನ  ಗಂಡನ ಮೃತ ದೇಹವನ್ನು ನೋಡಿ ಆಘಾತಗೊಂಡಿದ್ದಾರೆ. ಮೊದಲೇ ಹೇಳಿದಂತೆ, ಇವರು ಕೇವಲ 2 ವಾರಗಳ ಹಿಂದಷ್ಟೇ ಮದುವೆಯಾಗಿದ್ದರು. ಅಲ್ಲದೆ, ಗಂಡ ಕೊಲೆಯಾಗುವ ಒಂದು ದಿನ ಮೊದಲಷ್ಟೇ ಆತನ ಪತ್ನಿ ತನ್ನ ಪತಿಯ ಮನೆಗೆ ವಾಪಸಾಗಿದ್ದರು ಎಂದು ತಿಳಿದುಬಂದಿದೆ. ಜತೆಗೆ, ಕುಟುಂಬದ ಉಳಿದ ಸದಸ್ಯರು ಪವಿತ್ರ ಸ್ನಾನಕ್ಕಾಗಿ ಹೋಶಂಗಾಬಾದ್‌ನ ನರ್ಮದಾ ನದಿಗೆ ಹೋಗಿದ್ದರು ಎಂದು ಮೂಲಗಳು ಮಾಹಿತಿ ನೀಡಿದೆ.


ಮಧ್ಯ ಪ್ರದೇಶದ ವಿದಿಶಾ ನಗರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಮಾಲಿಯಾ ಖೇಡಿ ಗ್ರಾಮದಲ್ಲಿ ವಾಸವಾಗಿದ್ದ ಪತಿಯ ಕೊಲೆಯಾಗಿದೆ. ಇನ್ನು, ಪೊಲೀಸರು ಈ ಬಗ್ಗೆ 22 ವರ್ಷದ ಪತ್ನಿಯನ್ನು ವಿಚಾರಣೆ ನಡೆಸಿದಾಗ ಬೆಳಗ್ಗೆ ಎಚ್ಚರವಾದಾಗ ತನ್ನ ಗಂಡ ಭೀಕರವಾಗಿ ಕೊಲೆಯಾಗಿದ್ದರು. ಆತನ ವಿಕೃತ ದೇಹವನ್ನು ನೋಡಿದೆ ಎಂದು ತಿಳಿಸಿದ್ದಾಳೆ. ಹಾಗೂ, ಈ ಘಟನೆ ಬಗ್ಗೆ ತಕ್ಷಣ ನೆರೆಹೊರೆಯವರಲ್ಲಿ ತಿಳಿಸಿದೆ ಎಂದು ಹೇಳಿದ್ದಾಳೆ.


ಘಟನೆ ನಡೆದಾಗ ಪತಿ ಮತ್ತು ಪತ್ನಿ ಇಬ್ಬರೂ ಮನೆಯಲ್ಲಿದ್ದರು. ಜೂನ್ 20 ರಂದು ದಂಪತಿ ವಿವಾಹವಾಗಿದ್ದರು. ಮದುವೆಯಾದ ಬಳಿಕ ತನ್ನ ತಾಯಿಯ ಮನೆಗೆ ಪತ್ನಿ ತೆರಳಿದ್ದಳು. ಅಲ್ಲದೆ, ಘಟನೆಗೂ ಒಂದು ದಿನ ಮೊದಲು ಮಹಿಳೆ ತನ್ನ ಪತಿ ಹಾಗೂ ಮಾವನ ಮನೆಗೆ ವಾಪಸಾಗಿದ್ದಾಳೆ ಎಂದು ವರದಿಗಳು ಹೇಳುತ್ತವೆ. ಮರುದಿನ ಬೆಳಗ್ಗೆ ಮೃತನ ತಂದೆ ಮೋಹರ್‌ ಪ್ರಜಾಪತಿ ತನ್ನ ಕುಟುಂಬದೊಂದಿಗೆ ನರ್ಮದಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ತೆರಳಿದ್ದರು.


ಇನ್ನು, ಮೃತ ವ್ಯಕ್ತಿ ಸೋನು ಯಾರೊಂದಿಗೂ ದ್ವೇಷ ಸಾಧಿಸುತ್ತಿರಲಿಲ್ಲ ಎಂದು ಆತನ ಸಹೋದರ ಪೊಲೀಸರಿಗೆ ತಿಳಿಸಿದ್ದಾರೆ.  ಪತ್ನಿಯ ಮೇಲೇ ಅನುಮಾನ..!ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಆರ್.ಪಿ.ರಾವತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.  ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.


ಆದರೆ, ಮನೆಯಲ್ಲಿ ದುಷ್ಕರ್ಮಿಗಳು ಬಲವಂತವಾಗಿ ಪ್ರವೇಶಿಸಿರುವ ಯಾವುದೇ ಚಿಹ್ನೆ ಇಲ್ಲದ ಕಾರಣ ಕೊಲೆಯಾದ ವ್ಯಕ್ತಿಯ ಪತ್ನಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರ ಮೂಲಗಳು ವರದಿ ಮಾಡಿವೆ. ಒಟ್ಟಾರೆ, ಪೊಲೀಸರಿಗೆ ಈ ವ್ಯಕ್ತಿಯ ಕೊಲೆಯ ಪ್ರಕರಣ ತಲೆ ಬಿಸಿಯಾಗಿದ್ದು, ಪತ್ನಿಯೇ ಕೊಲೆ ಮಾಡಿದ್ದಾಳಾ ಅಥವಾ ಬೇರೆಯವರ ಸಹಾಯ ಪಡೆದು ಕೊಲೆ ಮಾಡಿಸಿದ್ದಾಳಾ ಅಥವಾ ಬೇರೆ ಯಾರಾದರೂ, ಬರ್ಬರವಾಗಿ ಸೋನು ಅನ್ನು ಮರ್ಡರ್‌ ಮಾಡಿದ್ದಾರಾ ಎನ್ನುವ ಅನುಮಾನ ಮೂಡಿದ್ದು, ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: