HOME » NEWS » National-international » MADHYA PRADESH HOSPITAL WRONGLY DECLARES COVID PATIENT DEAD TWICE MAK

ಮಧ್ಯಪ್ರದೇಶ: ಕೋವಿಡ್ ಪೀಡಿತ ವ್ಯಕ್ತಿಯ್ನು ಮೃತ ಎಂದು ಎರಡು ಸಲ ತಪ್ಪಾಗಿ ಘೋಷಿಸಿ ಪೇಚಿಗೆ ಸಿಲುಕಿದ ಆಸ್ಪತ್ರೆ!

ಎರಡನೇ ಬಾರಿಗೆ ರೋಗಿಯ ಕುಟುಂಬವು ಅಂತ್ಯಕ್ರಿಯೆಯ ವಿಧಿಗಳಿಗೆ ಸಿದ್ಧವಾಯಿತು. ಆಗ ಇಲ್ಲ ಇಲ್ಲ ಅವರು ವೆಂಟಿಲೇಟರ್ ಮೇಲೆ ಜೀವಂತವಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

news18-kannada
Updated:April 17, 2021, 4:56 PM IST
ಮಧ್ಯಪ್ರದೇಶ: ಕೋವಿಡ್ ಪೀಡಿತ ವ್ಯಕ್ತಿಯ್ನು ಮೃತ ಎಂದು ಎರಡು ಸಲ ತಪ್ಪಾಗಿ ಘೋಷಿಸಿ ಪೇಚಿಗೆ ಸಿಲುಕಿದ ಆಸ್ಪತ್ರೆ!
ಸಾಂದರ್ಭಿಕ ಚಿತ್ರ.
  • Share this:
ಮಧ್ಯಪ್ರದೇಶ: ಕೊರೋನಾ ಆರಂಭವಾದ ಕಾಲದಿಂದಲೂ ಸೋಂಕು ಪೀಡಿತರು ಮತ್ತು ಮೃತ ರೋಗಿಗಳಿಗೆ ಸಂಬಂಧಿಸಿದಂತೆ ಹಲವಾರು ಗೊಂದಲವಾಗಿರುವ ಸುದ್ದಿಗಳು ಅಲ್ಲಲ್ಲಿ ಭಿತ್ತರವಾಗಿವೆ. ಹಲವರಿ ಈ ಸಂಬಂಧ ಹುಬ್ಬೇರಿಸಿದ್ದೂ ಉಂಟು, ಸರ್ಕಾರ ಮತ್ತು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಕಿಡಿಕಾರಿದ್ದೂ ಉಂಟು. ಆದರೆ, ಈ ಎಲ್ಲಾ ಕೊರೋನಾ ಸುದ್ದಿಗಳಿಗಿಂತಲೂ ಭಿನ್ನವಾದ ಪ್ರಕರಣವೊಂದು ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ 58 ವರ್ಷದ ಕೋವಿಡ್ -19 ರೋಗಿ ಮೃತರಾಗಿದ್ದಾರೆ ಎಂದು ತಪ್ಪಾಗಿ ಘೋಷಿಸಿದ್ದಾರೆ. ಒಂದು ಸಲ ಅಲ್ಲ ಎರಡು ಸಲ ಈ ಪ್ರಮಾದ ನಡೆದಿರುವುದು ವಿಶೇಷ. ಎರಡನೇ ಬಾರಿಗೆ ರೋಗಿಯ ಕುಟುಂಬವು ಅಂತ್ಯಕ್ರಿಯೆಯ ವಿಧಿಗಳಿಗೆ ಸಿದ್ಧವಾಯಿತು. ಆಗ ಇಲ್ಲ ಇಲ್ಲ ಅವರು ವೆಂಟಿಲೇಟರ್ ಮೇಲೆ ಜೀವಂತವಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಕುಟುಂಬಸ್ಥರು ನಿಟ್ಟುಸಿರುವ ಬಿಡುವಂತಾಗಿದೆ. ಗೊಂದಲದಿಂದಲೇ ಇಂತಹ ಘಟನೆ ಸಂಭವಿಸಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಅನುಮಾನದ ಕಾರಣ ಗೋರೆಲಾಲ್ ಕೋರಿಯವರನ್ನು ಗಂಭೀರ ಸ್ಥಿತಿಯಲ್ಲಿ ವಿದಿಶಾ ಅಟಲ್ ಬಿಹಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿದೆ. ಅವರನ್ನು ಬುಧವಾರ ವೆಂಟಿಲೇಟರ್‌ನಲ್ಲಿ ಇರಿಸಲಾಯಿತು.

"ಮರುದಿನ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ನನ್ನನ್ನು ಆಸ್ಪತ್ರೆಗೆ ಕರೆದರು. ನಾನು ತಲುಪಿದ ನಂತರ ಉಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. ನಂತರ ಅವರು ಮತ್ತೆ ಉಸಿರಾಡುತ್ತಿದ್ದಾರೆ ಎಂದು ಆಸ್ಪತ್ರೆಯ ಶುಶ್ರುಕಿ ಮಾಹಿತಿ ನೀಡಿದರು" ಎಂದು ರೋಗಿಯ ಮಗ ಕೈಲಾಶ್ ಕೋರಿ ಹೇಳಿದ್ದಾರೆ. ಆಗ ಆಸ್ಪತ್ರೆಯ ವೈದ್ಯರು ಕುಟುಂಬಕ್ಕೆ ಮಾಹಿತಿ ನೀಡಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎಂದರು. ಕುಟುಂಬವು ಅದೇ ದಿನ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿದೆ.

ಎರಡನೇ ‘ಸಾವು’!

"ಅವರು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಿಧನರಾದರು ಎಂದು ವೈದ್ಯರು ನಮಗೆ ಮಾಹಿತಿ ನೀಡಿದರು. ರಾತ್ರಿ 8.30 ರ ಸುಮಾರಿಗೆ ಅವರು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕೊರೋನಾ ದೃಢಪಟ್ಟ ಕಾರಣ ಈಗಲೇ ನೀವು ಅವರ ಮೃತ ದೇಹವನ್ನು ಪಡೆಯಲಾಗುವುದಿಲ್ಲ ಎಂದು ಅವರು ಹೇಳಿದರು" ಎಂದು ಕೋರಿಯ ಮಗ ಸುದ್ದಿಗಾರರಿಗೆ ತಿಳಿಸಿದರು.

ಶುಕ್ರವಾರ ಬೆಳಿಗ್ಗೆ, ಅವರ ಕುಟುಂಬವು ಶವಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದಾಗ ಆಸ್ಪತ್ರೆಯ ಸಿಬ್ಬಂದಿ ಗೋರೆಲಾಲ್ ಕೋರಿ ಇನ್ನೂ ಜೀವಂತವಾಗಿದ್ದಾರೆ ಎಂದು ತಿಳಿಸಿದರು. ಆದರೆ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ಇನ್ನೂ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ ಎಂದರು’ ಎಂದು ಪುತ್ರ ತಿಳಿಸಿದರು.

"ಅವರು ಎರಡು ಬಾರಿ ಸತ್ತರು ಎಂದು ಘೋಷಿಸಿದರು. ಇದು ಬೇಜವಾಬ್ದಾರಿತನ" ಎಂದು ಕೈಲಾಶ್ ಕೋರಿ ಹೇಳಿದರು. ಆಸ್ಪತ್ರೆಯ ಅಧಿಕಾರಿಗಳು ಇಡೀ ಪ್ರಸಂಗವನ್ನು "ಗೊಂದಲ" ಎಂದು ಹೇಳಿದ್ದಾರೆ.ಇದನ್ನೂ ಓದಿ: HD Kumaraswamy: ಹೆಚ್​.ಡಿ. ಕುಮಾರಸ್ವಾಮಿಗೂ ಕೊರೋನಾ ಸೋಂಕು; ಮಾಜಿ ಸಿಎಂಗೆ ಬೆಡ್ ಇಲ್ಲ ಎಂದ ಮಣಿಪಾಲ್ ಆಸ್ಪತ್ರೆ...!

"ಗೋರೆಲಾಲ್ ಕೋರಿ ವೆಂಟಿಲೇಟರ್‌ನಲ್ಲಿದ್ದರು. ಇದ್ದಕ್ಕಿದ್ದಂತೆ ಅವರ ಹೃದಯ ನಿಂತುಹೋಯಿತು. ಒಬ್ಬ ನರ್ಸ್ ಮೃತರಾಗಿದ್ದಾರೆ ಎಂದು ಘೋಷಿಸಿದರು. ಸಾಮಾನ್ಯವಾಗಿ, ವೈದ್ಯರು ಅಂತಹ ಪ್ರಕರಣಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಇದು 1-2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಮ್ಮ ವೈದ್ಯರು ಅವರನ್ನು ಪುನಶ್ಚೇತನಗೊಳಿಸಿದರು… ಇದೆಲ್ಲವೂ ಗೊಂದಲಕ್ಕೆ ಕಾರಣವಾಯಿತು" ಎಂದು ಆಸ್ಪತ್ರೆಯ ಡೀನ್ ಡಾ.ಸುನೀಲ್ ನಂದೇಶ್ವರ ಹೇಳಿದ್ದಾರೆ.

ಈ ನಡುವೆ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನಿದಿಂದ ದಿನಕ್ಕೆ ಏರುತ್ತಲೇ ಇದೆ. ಸರಾಸರಿಯಾಗಿ ಒಂದು ದಿನಕ್ಕೆ ದೇಶದಾದ್ಯಂತ 1.5 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಕೇಂದ್ರ ಸರ್ಕಾರ ಕೊರೋನಾ ಸೋಂಕಿಗೆ ಲಸಿಕೆ ನೀಡುತ್ತಿರುವ ಬೆನ್ನಿಗೆ ಮತ್ತೊಂದೆಡೆ ಸೋಂಕು ಪೀಡಿತರ ಸಂಖ್ಯೆ ಅಧಿಕವಾಗುತ್ತಿರುವುದು ಸರ್ಕಾರಕ್ಕೂ ತಲೆ ನೋವಾಗಿ ಪರಿಣಮಿಸಿದೆ. ಅಲ್ಲದೆ, ಮಹಾರಾಷ್ಟ್ರ, ಗುಜರಾತ್ ನಲ್ಲಿ ಪರಿಸ್ಥಿತಿ ಕೈಮೀರಿದ್ದು, ಕರ್ನಾಟಕ ಸರ್ಕಾರ ಈಗಾಗಲೆ ನೆರೆಯ ರಾಜ್ಯಗಳ ಸಾರಿಗೆ ಸಂಪರ್ಕವನ್ನು ಕಡಿತಗೊಳಿಸಿದೆ.
Published by: MAshok Kumar
First published: April 17, 2021, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories